Latest Updates
-
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್!
Mothers Day Special Story:ನಾನು ಹೆತ್ತ ಮಗಳಲ್ಲ ಎಂಬ ಸತ್ಯ ಅವಳಿಗೆ ತಿಳಿದಾಗ....
ಮಗಳು ಫೋನ್ ಮಾಡಿ ಅಮ್ಮಾ ನಾನು ಬರ್ತಾ ಇದ್ದೀನಿ ಎಂದಾಗ ಒಂದು ಕಡೆ ಮನಸ್ಸಿಗೆ ತುಂಬಾನೇ ಕಸಿವಿಸಿ, ಏಕೆಂದರೆ ಇಷ್ಟು ದಿನ ಬಚ್ಚಿಟ್ಟಿದ್ದ ಸತ್ಯ ಮಗಳಿಗೆ ಗೊತ್ತಾಗಿರಬಹುದೇ ಎಂಬ ಅಂಜಿಕೆ, ಆದರೆ ಕೇಳುವಂತಿಲ್ಲ... ಅಯ್ಯೋ ಸತ್ಯ ಗೊತ್ತಾಗಿರಬಹುದೇ? ಆದರೂ ನನ್ನಲ್ಲಿ ಏಕೆ ಕೇಳಿಲ್ಲ, ಎಲ್ಲಾ ಗೊತ್ತಾದರೆ ಅವಳಿಗೆ ಆ ಸತ್ಯ ಸಹಿಸಿಕೊಳ್ಳಲು ಸಾಧ್ಯವೇ? ಈ ಆಲೋಚನೆಯಿಂದಲೇ ಭಾಮಾ ಅವರ ತಲೆ ಸಿಡಿಯುತ್ತಿತ್ತು....

ಕೂತರೆ ಚಟಪಡಿಕೆ, ನಿಂತರೆ ಚಡಪಡಿಕೆ, ಹೃದಯನೇ ನಿಂತು ಹೋಗುವಷ್ಟು ಜೋರಾಗಿ ಹೃದಯದ ಬಡಿತ... ಪತಿಯತ್ತ ನೋಡುತ್ತಾರೆ, ಅವರ ಕಣ್ಣುಗಳಲ್ಲಿ ಆತಂಕವಿದ್ದರೂ ಏಕೆ ಅಷ್ಟು ಒದ್ದಾಡುತ್ತೀಯ? ಒಂದಲ್ಲ ಒಂದು ದಿನ ನಾವೇ ಅವಳಿಗೆ ಸತ್ಯ ಗೊತ್ತಾಗಲೇಬೇಕು ಎಂದು ನಾವೆಂದುಕೊಂಡಿದ್ವಿ ಅಲ್ವಾ? ನೋಡುವ ಅವಳು ಏನು ಹೇಳುತ್ತಾಳೆ, ಅಷ್ಟಕ್ಕೂ ನಾವೇನೂ ತಪ್ಪು ಮಾಡಿಲ್ಲ, ಅವಳಿಗೆ ಒಂದು ಬದುಕು ಕೊಟ್ಟಿದ್ದೇವೆ, ನಮ್ಮಿಂದ ಆಗಿದ್ದೂ ಎಲ್ಲಾ ಮಾಡಿದ್ದೇವೆ, ಮತ್ಯಾಕೆ ಚಿಂತೆ ಮಾಡುತ್ತೀಯ? ಅಂತ ಪತ್ನಿಯನ್ನು ಸಮಧಾನ ಮಾಡುವ ಪ್ರಯತ್ನ ಮಾಡುತ್ತಾರೆ ಜಯರಾಂ.
ಅಲ್ಲಾರೀ... ಅವಳು ಸತ್ಯ ಗೊತ್ತಾಗಿ ನಮ್ಮಿಂದ ದೂರಾದರೆ? ಎಂದು ಕಣ್ಣಿನಲ್ಲಿ ನೀರು ತುಂಬಿ ಕೇಳಿದಾಗ ಹಕ್ಕಿ ಮರಿ ರೆಕ್ಕೆ ಬಲಿತ ಮೇಲೆ ಹಾರಲೇಬೇಕು ಕಣೆ ಎಂದು ಹೇಳಿದಾಗ... ನನಗಿಲ್ಲಿ ಜೀವ ಹೋಗ್ತಾ ಇದೆ, ನಿಮಗೆ ವೇದಾಂತ ಅಂತ ಹೇಳಿ ಕೋಪ ಮಾಡಿಕೊಂಡರು. ಭಾಮಾ ಅವರ ಚಡಪಡಿಕೆಗೆ ಕಾರಣವಿತ್ತು ಇಷ್ಟು ದಿನ ಬಚ್ಚಿಟ್ಟಿದ್ದ ಸತ್ಯವೊಂದು ಮಗಳಿಗೆ ಗೊತ್ತಾಗಿತ್ತು, ಅಂದ್ರೆ ಮಗಳು ನಾವು ಹೆತ್ತ ಮಗಳಲ್ಲ ಎಂಬ ಸತ್ಯ ಅವಳಿಗೆ ಗೊತ್ತಾಗಿದೆ... ಓದಿ ವಿದೇಶಕ್ಕೆ ಹಾರಿದ ಮಗಳು ಸಿಂಚನ ಅಮ್ಮಾ ಇನ್ನು 6 ತಿಂಗಳು ಇಂಡಿಯಾಕ್ಕೆ ಬರಲ್ಲ ಎಂದು ಹೇಳಿದ ಮಗಳು ಈ ವಾರ ಬರ್ತಾ ಇದ್ದಾಳೆ ಎಂದ ಮೇಲೆ ಅವಳಿಗೆ ಸತ್ಯ ಗೊತ್ತಾಗಿ ನಮ್ಮಲ್ಲಿ ತನ್ನ ನಿಜವಾದ ತಂದೆ-ತಾಯಿ ಯಾರು ಎಂದು ಕೇಳಲು ಬರುತ್ತಿರಬಹುದೇ? ಈ ಆಲೋಚನೆಯಿಂದಲೇ ಅವರ ತಲೆ ಸಿಡಿದು ಹೋಗ್ತಾ ಇತ್ತು..
ಭಯ, ಆತಂಕದಿಂದಲೇ ಮಗಳನ್ನು ಸ್ವೀಕರಿಸಲು ಏರ್‌ಪೋರ್ಟ್‌ಗೆ ಬರುತ್ತಾರೆ, ಅಮ್ಮ-ಅಪ್ಪನ ನೋಡಿದ ಸಿಂಚನ ಖುಷಿಯಿಂದ ಕೈ ಬೀಸುತ್ತಾಳೆ, ಓಡೋಡಿ ಬಂದು ಅಮ್ಮ-ಅಪ್ಪನ ಅಪ್ಪಿ ಮುತ್ತಿಕ್ಕುತ್ತಾಳೆ, ಹಾಗಾದರೆ ಇವಳಿಗೆ ವಿಷಯ ಗೊತ್ತಾಗಿದೆ ಎಂಬುವುದು ಸುಳ್ಳೇ? ಎಂಬ ಸಂಶಯ ಮೂಡುತ್ತದೆ. ಮಗಳನ್ನು ಬಿಗಿಯಾಗಿ ಅಪ್ಪಿಕೊಳ್ಳುತ್ತಾರೆ... ಅಮ್ಮಾ ಇಲ್ಲೇ ನಿಂತರೆ ಸಾಕಾ ಬನ್ನಿ... ಬನ್ನಿ ಕೈ ರುಚಿ ತಿಂದು ಎಷ್ಟು ದಿನಗಳಾಯ್ತು ಎಂದು ಸಿಂಚನ ಹೇಳಿದಾಗ ಮಗಳ ಮುಖವನ್ನು ದಿಟ್ಟಿಸಿ ನೋಡುತ್ತಾರೆ, ಆ ಕಣ್ಣುಗಳು ತುಂಬಿ ಬಂದಿರುತ್ತದೆ, ಆದರೆ ಅದನ್ನು ಸಿಂಚನ ತಕ್ಷಣ ಒರೆಸಿ... ನಾನು ಬಂದಾಯ್ತಾಲ್ಲ ಇನ್ನು ಸ್ವಲ್ಪ ದಿನ ನಿಮ್ಮ ಜೊತೆ ಇದ್ದೇ ಹೋಗುವುದು ಎಂದು ಹೇಳುತ್ತಾಳೆ. ಮಗಳ ಕೈಯನ್ನು ಬಿಗಿಯಾಗಿ ಹಿಡಿಯುತ್ತಾರೆ ಭಾಮಾ... ಅಯ್ಯೋ ಅಮ್ಮ... ನಾನು ನಿನ್ನ ಬಿಟ್ಟು ಓಡಿ ಹೋಗಲ್ಲ ಬಾ ಮನೆಗೆ ಹೋಗುವ ಎಂದು ಹೇಳುತ್ತಾಳೆ ಸಿಂಚನ.
ಭಾಮಾ-ಜಯರಾಂಗೆ ಮದುವೆಯಾಗಿ 8 ವರ್ಷ ಕಳೆದರೂ ಮಕ್ಕಳಾಗಿರಲಿಲ್ಲ, ಆವಾಗ ಯಾರೋ ಆಸ್ಪತ್ರೆಯಲ್ಲಿ ಯಾರೋ ಆಗಷ್ಟೇ ಮಗುವನ್ನು ಬಿಟ್ಟು ಹೋದ ವಿಷಯವನ್ನು ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದ ಅವರ ಸಂಬಂಧಿ ಹೇಳಿದ್ದೇ ತಡ ಗಂಡ-ಹೆಂಡತಿ ಓಡೋಡಿ ಹೋಗಿ ಆ ಮಗುವನ್ನು ತರುತ್ತಾನೆ... ಆಗಷ್ಟೇ ಜನಿಸಿದ ಮಗುವಿಗೆ ತಂದೆ-ತಾಯಿಯಾಗುತ್ತಾರೆ.... ಅಲ್ಲಿಂದ ಬೇರೆ ಊರಿಗೆ ಹೋಗುತ್ತಾರೆ, ಆ ಊರಿನಲ್ಲಿ ಯಾರಿಗೂ ಸಿಂಚನ ಅವರ ಮಗಳಲ್ಲ ಎಂಬುವುದು ಗೊತ್ತೇ ಇರಲ್ಲ, ಸಂಬಂಧಿಕರೂ ಕೂಡ ಆ ಕುರಿತು ಮಗುವಿಗೆ ಹೇಳಲ್ಲ... ಸಿಂಚನ ಅಪ್ಪ-ಅಮ್ಮನ ಮುದ್ದಿನ ಮಗಳಾಗಿ ಓದಿ ವಿದೇಶದಲ್ಲಿ ಕೆಲಸಕ್ಕೆ ಸೇರುತ್ತಾಳೆ. ಒಮ್ಮೆ ಚಿಕ್ಕ ಹುಡುಗಿಯಾಗಿದ್ದಾಗ ಅಮ್ಮಾ ನಾನು ನಿನ್ನ ಮಗಳು ಅಲ್ವಂತೆ ಅಂತ ಅಂದಾಗ ... ಇವರು ಹೌದು ನಿನ್ನ ಎತ್ತಿಕೊಂಡು ಬಂದು ಸಾಕಿದ್ದು ಕೋಪದಿಂದ ಹೇಳಿದಾಗ ಅವಳು ಸ್ವಾರಿ ಅಮ್ಮಾ ಅಂದಿದ್ದವಳು ಮತ್ತೆಂದೂ ಆ ಕುರಿತು ಕೇಳಿರಲಿಲ್ಲ. ಆದರೆ ಇತ್ತೀಚೆಗೆ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದ ಆ ಸಂಬಂಧಿಯ ಮಗಳು ಫೋನ್ ಮಾಡಿ.. ಆಂಟಿ ಸಿಂಚನ ನಮ್ಮ ಅಮ್ಮನಿಗೆ ಫೋನ್ ಮಾಡಿ ನಾನು ನನ್ನ ಅಪ್ಪ-ಅಮ್ಮನಿಗೆ ಆಸ್ಪತ್ರೆಯಿಂದ ಸಿಕ್ಕಿದ್ದಾ ಎಂದು ಕೇಳಿದಳು ಎಂದಾಗ ಅಂತ ಭೂಮಿಯೇ ಕುಸಿದಂತಾಯ್ತು. ಆದರೆ ಈಗ ನೋಡಿದರೆ ಸಿಂಚನ ತುಂಬಾ ಆರಾಮವಾಗಿ ಇದ್ದಾಳೆ.
ಮನೆಗೆ ಬಂದು, ನನಗೆ ಸುಸ್ತಾಗಿದೆ ಅಂತ ಸ್ವಲ್ಪ ತಿಂದು ತನ್ನ ಕೋಣೆಗೆ ಮಲಗಲು ಹೋಗುತ್ತಾಳೆ... ಮಾರನೇಯ ದಿನ ಮೇ ತಿಂಗಳ ಎರಡನೇ ಭಾನುವಾರ, ಅಂದ್ರೆ ಅಮ್ಮಂದಿರ ದಿನ.. ಪ್ರತೀವರ್ಷ ಈ ದಿನ ಸಿಂಚನ ಅಮ್ಮನಿಗೆ ಅಮ್ಮಂದಿರ ದಿನ ಶುಭಾಶಯ ಹೇಳುತ್ತಿದ್ದಳು. ಭಾನುವಾರ ಭಾಮಾ ಕಣ್ತೆರೆದು ನೋಡಿದರೆ ಮನೆಯ ಹಾಲ್ ಫುಲ್ ಡೆಕೋರೇಷನ್.. ಅಲ್ಲಿ ಅಪ್ಪ-ಅಮ್ಮನ ಜೊತೆ ನಗುತ್ತಾ ನಿಂತಿರುವ ಸಿಂಚನಾ ಫೋಟೋ ಗೋಡೆಯನ್ನು ಅಲಂಕರಿಸಿತ್ತು... ಟೇಬಲ್ ಮೇಲೆ ದೊಡ್ಡ ಕೇಕ್.. ಅದರಲ್ಲ ಹ್ಯಾಪಿ ಮದರ್ಸ್ ಡೇ ಅಂತ ಬರೆದಿತ್ತು. ಸಿಂಚನ ಭಾಮಾ ಅವರನ್ನು ನೋಡಿ ಓಡಿ ಬಂದು ಅಪ್ಪಿಕೊಂಡು ನನ್ನ ಯಶೋಧೆಗೆ ಅಮ್ಮಂದಿರ ದಿನದ ಶುಭಾಶಯಗಳು ಅಂತಾಳೆ... ಇವರು ತಡಬಡಿಸಿ ಏನೆಂದೆ ಅಂತ ಕೇಳುತ್ತಾರೆ... ಹೌದಮ್ಮ ನನ್ನ ಹೆತ್ತ ದೇವಕ್ಕಿ ನೀನಲ್ಲ, ಆದರೆ ನನ್ನ ಸಾಕಿದ ಯಶೋಧೆ ನೀನೆಂಬ ಸತ್ಯ ನನಗೆ ಗೊತ್ತು, ಹೆತ್ತ ಮಾತ್ರಕ್ಕೆ ಯಾರೂ ತಾಯಿಯಾಗಲ್ಲ, ನಿನ್ನ ಹೊಟ್ಟೆಯಲ್ಲಿ ಜನಿಸಿಲ್ಲ ಅಷ್ಟೇ, ಆದರೆ ನಿನ್ನ ಉಸಿರಿನಲ್ಲಿ ಬದುಕಿದ್ದೇನೆ, ಯೂ ಆರ್ ಮೈ ಸ್ವೀಟ್ ಅಮ್ಮಾ... ನೀನು ನನ್ನ ಅಮ್ಮಾ ಎಂಬುವುದೇ ನನ್ನ ಹೆಮ್ಮೆ.. ಯಾವತ್ತಿಗೂ ನಿನ್ನ ಮಗಳಾಗಿಯೇ ಇರುತ್ತೇನೆ ನನ್ನ ಮುದ್ದು ಅಮ್ಮಾ ಎಂದು ಮುತ್ತಿಕ್ಕಿದ್ದಾಗ ಭಾಮಾರವರಿಗೆ ತನ್ನ ಮಗಳು ಇಂದು ಸಂಪೂರ್ಣ ನನ್ನ ಮಗಳಾದ ಸಂತೋಷ...



Click it and Unblock the Notifications
