Latest Updates
-
ಸುಪ್ರೀಂ ಕೋರ್ಟ್ ಲೋಕ್ ಅದಾಲತ್ ದಿನ 2: ನಿಮ್ಮ ಪ್ರಕರಣ ಇತ್ಯರ್ಥವಾಗಲು ಈ ದಾಖಲೆಗಳು ಕಡ್ಡಾಯ! -
ರಕ್ಷಾ ಬಂಧನ 2026: ಹಬ್ಬದ ಸಂಭ್ರಮಕ್ಕೆ ಬಜೆಟ್ ಮತ್ತು ಪ್ಲಾನಿಂಗ್ ಹೀಗಿರಲಿ! -
ಮಳೆಗಾಲದಲ್ಲಿ ಬೆಂಗಳೂರಿನ ಮನೆ ಮತ್ತು ಬಾಲ್ಕನಿ ರಕ್ಷಣೆ: 40 ನಿಮಿಷದ ಸಿಂಪಲ್ ಚೆಕ್ಲಿಸ್ಟ್ -
ಬೆಂಗಳೂರಿನಲ್ಲಿ 2 ದಿನ ಭಾರಿ ಪವರ್ ಕಟ್: ಈ 70 ಪ್ರದೇಶಗಳಲ್ಲಿ ಕರೆಂಟ್ ಇರಲ್ಲ, ಮುನ್ನೆಚ್ಚರಿಕೆ ವಹಿಸಿ! -
ಈರುಳ್ಳಿ ಬೆಲೆ ಏರಿಕೆ ಬಿಸಿ: ₹800ರಲ್ಲಿ ವಾರಪೂರ್ತಿ ಪ್ರೋಟೀನ್ ಯುಕ್ತ ಆರೋಗ್ಯಕರ ಊಟದ ಪ್ಲಾನ್! -
ಹಬ್ಬದ ಸಿಹಿ ತಯಾರಿಗೆ ಸಕ್ಕರೆ ಬೆಲೆ ಬಿಸಿ: ಜೇಬಿಗೆ ಹೊರೆಯಾಗದಂತೆ ಸಂಭ್ರಮಿಸುವುದು ಹೇಗೆ? -
LPG e-KYC ಗಡುವು: ನಾಳೆಯೇ ಕೊನೆಯ ದಿನ, ನಿಮ್ಮ ಗ್ಯಾಸ್ ಸಂಪರ್ಕ ಕಡಿತವಾಗದಂತೆ ತಡೆಯುವುದು ಹೇಗೆ? -
BWF ಸೆಮಿಫೈನಲ್ ವೀಕ್ಷಿಸುವಾಗ ಮೈಕೈ ನೋವೇ? 8 ನಿಮಿಷದ ಈ ಸಿಂಪಲ್ ವ್ಯಾಯಾಮ ಮಾಡಿ! -
ಸುಪ್ರೀಂ ಕೋರ್ಟ್ ವಿಶೇಷ ಲೋಕ್ ಅದಾಲತ್: ವಿಚ್ಛೇದನ, ಕಸ್ಟಡಿ ಸಮಸ್ಯೆಗಳಿಗೆ ಇಲ್ಲಿದೆ ಸುಲಭ ಪರಿಹಾರ! -
ಅಪಾರ್ಟ್ಮೆಂಟ್ನಲ್ಲಿ ಪರಿಸರ ಸ್ನೇಹಿ ಗಣೇಶ ಹಬ್ಬ: ದಂಡ ತಪ್ಪಿಸಿ, ಸುಲಭವಾಗಿ ವಿಸರ್ಜನೆ ಮಾಡುವುದು ಹೇಗೆ?
ಹುಡುಗನಿಗೆ ನಡೆದಾಡಲು ಸಾಧ್ಯವಿಲ್ಲ, ಖುಷಿ ಖುಷಿಯಿಂದ ವೀಡಿಯೋ ಕಾಲ್ ನಿಶ್ಚಿತಾರ್ಥ ಮಾಡಿಕೊಂಡ ಹುಡುಗಿ
ಎಲ್ಲಾ ಕಡೆ ಅಂಬಾನಿ ಮಗನ ಮದುವೆ ಸದ್ದು ಮಾಡುತ್ತಿರುವಾಗ ತಮಿಳಿನ ನಟರೊಬ್ಬರ ಮಗನ ನಿಶ್ಚಿತಾರ್ಥ ಕೂಡ ಗಮನ ಸೆಳೆಯುತ್ತಿದೆ, ಈ ನಿಶ್ಚಿತಾರ್ಥ ವಿಭಿನ್ನ ಕಾರಣಕ್ಕೆ ಗಮನ ಸೆಳೆಯುತ್ತಿದೆ. ಯಾವ ನಟನ ಮಗನ ನಿಶ್ಚಿತಾರ್ಥವದು, ಏಕೆ ಈ ಮದುವೆ ತುಂಬಾನೇ ಗಮನ ಸೆಳೆದಿದೆ ಎಂದು ನೋಡೋಣ ಬನ್ನಿ.

ತಮಿಳು ಸಿನಿಮಾ ನೋಡುವವರಿಗೆ ನಟ ನೆಪೋಲಿಯನ್ ಗೊತ್ತಿರಬಹುದು. ತಂದೆಯಾಗಿ, ಅಣ್ಣನಾಗಿ, ಖಳನಟನಾಗಿ ಹೀಗೆ ಅನೇಕ ಪೋಷಕ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ, ಇವರ ಮೊದಲ ಮಗ ಧನುಷ್. ಈತನಿಗೆ ಮದುವೆಯೇ ಆಗುವುದಿಲ್ಲ ಎಂದು ತುಂಬಾ ಜನ ಭಾವಿಸಿದ್ದರು, ಧನುಷ್ ತುಂಬಾ ಸಮಯ ಬದುಕಲ್ಲ ಎಂದು ವೈದ್ಯರ ಹೇಳಿದ್ದರು. ನಾವು ಎಷ್ಟೋ ಕತೆಗಳಲ್ಲಿ ಅಮ್ಮನ ಪ್ರೀತಿ ಬಗ್ಗೆ ಕೇಳುತ್ತೇವೆ, ಆದರೆ ನೆಪೋಲಿಯನ್ ತನ್ನ ಮಗನಿಗಾಗಿ ತನ್ನ ವೃತ್ತಿ ಕಡೆ ಗಮನ ಹರಿಸುವುದನ್ನು ನಿಲ್ಲಿಸಿದರು, ಏನೇ ಆಗಲಿ ನನ್ನ ಮಗನನ್ನು ಒಂದು ನೆಲೆಗೆ ತಲುಪಿಸುತ್ತೇನೆ ಎಂದು ಪಣ ತೊಟ್ಟಿದ್ದರು, ಇದೀಗ ಅವರು ತಾವು ಕನಸು ಕಂಡಂತೆ ಒಳ್ಳೆಯ ಬದುಕು ಕಟ್ಟಿಕೊಡುವಲ್ಲಿ ಯಶಸ್ವಿಯಾಗಿದ್ದಾರೆ ನೆಪೋಲಿಯನ್.
ನೆಪೋಲಿಯನ್ ಮಗ ದನುಷ್ ವಿಶೇಷ ಚೇತನ
ಧನುಷ್‌ಗೆ ಎದ್ದು ಓಡಾಡಲು ಸಾಧ್ಯವಿಲ್ಲ, ಎಲ್ಲಿಗೆ ಹೋಗಬೇಕೆಂದರೂ ವಿಶೇಷ ಚೇರ್‌ನಲ್ಲಿಯೇ ಓಡಾಡುತ್ತಾರೆ, ಅವರ ಕಾಲುಗಳಿಗೆ ಬಲವಿಲ್ಲ, ಹೀಗಾಗಿ ಎದ್ದು ನಿಲ್ಲಲು ಕೂಡ ಸಾಧ್ಯವಿಲ್ಲ, ಹೀಗಾಗಿ ಧನುಷ್ ಅನ್ನು ಯಾವ ಹೆಣ್ಣು ಒಪ್ಪುವುದಿಲ್ಲ ಎಂದೇ ಕೆಲವರು ಅಂದುಕೊಂಡಿದ್ದರು, ಆದರೆ ಅಕ್ಷಯ ಎಂಬ ಹೆಣ್ಮಗಳು ಮನಃಪೂರ್ತಿ ಧನುಷ್‌ರನ್ನು ಮೆಚ್ಚಿ ಕೊಂಡು ಅವರ ಬಾಳ ಸಂಗಾತಿಯಾಗಲು ಮುಂದೆ ಬಂದಿದ್ದಾರೆ. ಇವರ ನಿಶ್ಚಿತಾರ್ಥ ವೀಡಿಯೋ ಕಾಲ್ ಮೂಲಕ ನಡೆದಿದೆ. ಏಕೆಂದರೆ ಧನುಷ್ ಅಮೆರಿಕದಲ್ಲಿದ್ದು ಭಾರತಕ್ಕೆ ಕರೆದುಕೊಂಡು ಬರುವುದು ಕಷ್ಟವಾಗಿರುವುದರಿಂದ ವೀಡಿಯೋ ಕಾಲ್ ಮೂಲಕ ನಿಶ್ಚಿತಾರ್ಥ ಮಾಡಲಾಗಿದೆ. ನಿಶ್ಚಿತಾರ್ಥ ಸಮಾರಂಭದಲ್ಲಿ ನೆಪೋಲಿಯನ್, ಅವರ ಪತ್ನಿ ಭಾಗಿಯಾಗಿದ್ದರು. ಅವರ ಭಾವಿ ಸೊಸೆ ಕೂಡ ತುಂಬಾನೇ ಖುಷಿ ಖಷಿಯಾಗಿ ಇರುವುದನ್ನು ಕಾಣಬಹುದು.
ಪ್ರೀತಿಗೆ ಪ್ರೀತಿಸುವ ಮನಸ್ಸು ಮುಖ್ಯ ಎಂದು ಸಾಬೀತು ಮಾಡಿದೆ ಈ ಜೋಡಿ
ಧನುಷ್‌ಗೆ ಎದ್ದು ಓಡಾಡಲು ಸಾಧ್ಯವಿಲ್ಲ ಎಂಬುವುದು ಗೊತ್ತಿರುವ ಈ ಹೆಣ್ಮಗಳ ಅವರ ಬಾಳ ಸಂಗಾತಿಯಾಗಿ ಧನುಷ್ ಕೈ ಹಿಡಿಯಲಯ ಮನಸಾರೆ ಒಪ್ಪುಕೊಂಡಿದ್ದಾರೆ. ಈಕೆಯ ಒಳ್ಳೆಯ ಮನಸ್ಸಿಗೆ ಅವರ ವೈವಾಹಿಕ ಜೀವನ ತುಂಬಾನೇ ಚೆನ್ನಾಗಿರಲಿದೆ ಎಂಬುವುದೇ ಜನರ ಆರೈಕೆ.
ಹೀಗೆ ಮದುವೆಯಾಗಿರುವ ಎಷ್ಟೋ ಜೋಡಿಗಳು ತುಂಬಾನೇ ಚೆನ್ನಾಗಿ ಬದುಕುತ್ತಿದ್ದಾರೆ
ವಿಶೇಷ ಚೇತನ ಹುಡುಗಿಯರನ್ನು ಕೈ ಹಿಡಿದ ಹುಡುಗರು, ವಿಶೇಷ ಚೇತನ ಹುಡುಗನನ್ನು ಕೈ ಹಿಡಿದಿರುವ ಹುಡುಗಿಯರು ನಮ್ಮ ನಡುವೆ ಇದ್ದಾರೆ, ಹಾಗಾಗಿ ಈ ಜೋಡಿಗೆ ಹಣ ನೋಡಿ ಮದುವೆಯಾಗುತ್ತಿದ್ದಾರೆ ಎಂದೆಲ್ಲಾ ಕಮೆಂಟ್ ಮಾಡುವ ಮುನ್ನ ಅವರ ಪ್ರೀತಿಯ ಆಳವನ್ನು ಗಮನಿಸಿ.
ಅನಂತ್ ಅಂಬಾನಿ ಹಾಗೂ ರಾಧಿಕಾ ಮರ್ಚೆಂಟ್ ಪ್ರೀತಿ ತಿಳಿಯದವರು ಕಮೆಂಟ್ ಮಾಡುತ್ತಿದ್ದಾರೆ
ಅನಂತ್ ಈಗ ದಪ್ಪಗಿದ್ದಾರೆ, ಆದರೆ ಒಂದು ಸಮಯದಲ್ಲಿ ತೆಳ್ಳಗಾಗಿ ತುಂಬಾನೇ ಹ್ಯಾಂಡ್ಸಮ್ ಆಗಿದ್ದರು, ಅದಕ್ಕಿಂತ ಮೊದಲು ತುಂಬಾನೇ ಮೈ ತೂಕ ಹೊಂದಿದ್ದರು, ಈ ಎಲ್ಲಾ ಸಮಯದಲ್ಲಿಯೂ ರಾಧಿಕಾ ಅವರನ್ನು ಪ್ರೀತಿಸುತ್ತಿದ್ದರು. ಪ್ರೀವೆಡ್ಡಿಂಗ್‌ಗೆ ಹೋಲಿಕೆ ಮಾಡಿದರೆ ಅನಂತ್ ಅಂಬಾನಿ ಈಗ ಸಾಕಷ್ಟು ಮೈ ತೂಕ ಕಡಿಮೆ ಮಾಡಿಕೊಂಡಿದ್ದಾರೆ.
ಒಬ್ಬರ ದೇಹದಾಕಾರ ನೋಡಿ ಆಡಿಕೊಳ್ಳುವುದನ್ನು ನಿಲ್ಲಿಸಬೇಕು, ನಮ್ಮ ಕೈ ಬೆರಳಿನಲ್ಲಿರುವ ಐದು ಬೆರಳುಗಳನ್ನು ಒಂದೇ ರೀತಿ ಹೇಗೆ ಸಾಧ್ಯವಿಲ್ಲವೂ ಈ ಸಮಾಜದಲ್ಲಿ ಎಲ್ಲರೂ ಒಂದೇ ರೀತಿ ಇರಲು ಸಾಧ್ಯವಿಲ್ಲ, ಆದರೆ ಎಲ್ಲರಿಗೂ ಒಳ್ಳೆಯ ರೀತಿಯಲ್ಲಿ ಬದುಕುವ ಅರ್ಥ ಹಕ್ಕಿದೆ.
ಒಂದು ಸುಂದರ ದಾಂಪತ್ಯಕ್ಕೆ ಬೇಕಿರುವುದು ದೇಹದ ಸೌಂದರ್ಯವಲ್ಲ ಒಳ್ಳೆಯ ಮನಸ್ಸು, ಹೊಂದಾಣಿಕೆ ಹಾಗೂ ಅಗಾಧ ಪ್ರೀತಿಯಷ್ಟೇ....



Click it and Unblock the Notifications