Latest Updates
-
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ
ಗಂಡ-ಹೆಂಡತಿ ಪ್ರತ್ಯೇಕವಾಗಿದ್ದು ವಿಚ್ಛೇದನ ಪಡೆಯದಿದ್ದರೆ ಇಷ್ಟೆಲ್ಲಾ ಸಮಸ್ಯೆಗಳಿವೆ
ಕೆಲವೊಂದು ದಂಪತಿ ಇಬ್ಬರು ಜೊತೆಯಾಗಿ ಬಾಳಲು ಸಾಧ್ಯವೇ ಇಲ್ಲ ಎಂದು ಪ್ರತ್ಯೇಕ ವಾಸವಿರುತ್ತಾರೆ. ಅವರ ನಡುವೆ ಗಂಡ-ಹೆಂಡತಿ ಎಂಬ ಯಾವ ಬಾಂಧವ್ಯವೂ ಇರುವುದಿಲ್ಲ, ಹೆಸರಿಗಷ್ಟೇ ಗಂಡ-ಹೆಂಡತಿಯಾಗಿರುತ್ತಾರೆ, ಅವಳ ಪಾಡಾಯ್ತು ಅಂತ ಅವಳಿದ್ದರೆ ಇವನ ಪಾಡಾಯ್ತು ಅಂತ ಇವನು ಇರುತ್ತಾನೆ, ಆದರೆ ವಿಚ್ಛೇದನ ಪಡೆದಿರುವುದಿಲ್ಲ.

ಇಬ್ಬರು ಬೇರೆಯಾಗಲು ಬಯಸಿದ ಮೇಲೆ ವಿಚ್ಛೇದನ ಪಡೆಯುವುದು ಒಳ್ಳೆಯದು. ಆದರೆ ಮುಂದೆ ಸರಿಹೋಗಬಹುದು ಎಂಬ ಆಲೋಚನೆಯಲ್ಲಿ ಕೆಲವರು ವಿಚ್ಛೇದನ ಪಡೆಯಲು ಬಯಸುವುದಿಲ್ಲ, ಇನ್ನು ಕೆಲವರು ನಾವು ವಿಚ್ಛೇದನೆ ಪಡೆದರೆ ಮಕ್ಕಳಿಗೆ ನೋವಾಗುವುದು ಎಂದು ಪಡೆದಿರುವುದಿಲ್ಲ, ಇನ್ನೂ ಕೆಲವರು ಇಬ್ಬರು ಬೇರೆ-ಬೇರೆ ತಾನೆ ಇದ್ದೀವಿ, ವಿಚ್ಛೇದನ ಅಂತ ಓಡಾಡುವ ಅಗ್ಯತವೇನಿದೆ ಎಂದು ವಿಚ್ಛೇದನ ಪಡೆಯದೆ ಇರಬಹುದು. ಆದರೆ ಇಬ್ಬರಿಗೆ ಹೊಂದಿಕೊಂಡು ಹೋಗಲು ಕಷ್ಟವಾಗುತ್ತಿದೆ, ಇಬ್ಬರು ಜೊತೆಯಾಗಿ ಬದುಕಲು ಸಾಧ್ಯನೇ ಇಲ್ಲ ಎಂದಾದರೆ ಪ್ರತ್ಯೇಕವಾಗಿ ಬದುಕುವ ಬದಲಿಗೆ ವಿಚ್ಛೇದನ ಪಡೆಯುವುದು ಒಳ್ಳೆಯ ಆಯ್ಕೆಯಾಗಿರುತ್ತದೆ. ಏಕೆ ಎಂದು ಹೇಳುವುದಾದರೆ:
ಗಂಡ-ಹೆಂಡತಿ ಎಂಬ ಯಾವ ಅಧಿಕಾರವೂ ಇರಲ್ಲ
ಹಾಗೆಯೇ ಪ್ರತ್ಯೇಕವಾಗಿದ್ದರೆ ಅದೊಂದು ದೊಡ್ಡ ತಲೆನೋವೇ... ಇಬ್ಬರು ಪ್ರತ್ಯೇಕವಾಗಿದ್ದು ನಂತರ ಅವರಲ್ಲಿ ಒಬ್ಬರಿಗೆ ಹುಷಾರಿಲ್ಲದೆ ಯಾರೂ ನೋಡುವುರಿಲ್ಲದ ಪರಿಸ್ಥಿತಿ ಬಂದರೆ ಹೆಂಡತಿ-ಮಕ್ಕಳಿದ್ದು ಆತನನ್ನು ನೋಡಿಕೊಳ್ಳುತ್ತಿಲ್ಲ ಎಂದು ಹೇಳುತ್ತಾರೆ, ಅದೇ ಹೆಂಡತಿಗೆ ಹುಷಾರಿಲ್ಲದೆ ಅವಳನ್ನು ನೋಡಲು ಯಾರೂ ದಿಕ್ಕಿಲ್ಲದಿದ್ದರೆ ಗಂಡನಾದವನಿಗೆ ಈ ಸಮಯದಲ್ಲಾದರೂ ಸ್ವಲ್ಪ ಸಹಾಯ ಮಾಡಬಾರದೇ ಎಂದು ಹೇಳುತ್ತಾರೆ. ಈ ರೀತಿಯ ಎಷ್ಟೋ ಪ್ರಕರಣಗಳು ನಮ್ಮ ಕಣ್ಮುಂದೆ ನಡೆಯುತ್ತಿರುತ್ತದೆ. ಇನ್ನು ಕೆಲವರು ಚೆನ್ನಾಗಿದ್ದಾಗ ಮನೆ,ಮಕ್ಕಳನ್ನು ಬಿಟ್ಟು ತಮ್ಮ ಪಾಡಿಗೆ ತಾವು ಹಾಯಾಗಿ ಇರುತ್ತಾರೆ, ನಂತರ ಮನೆ-ಮಕ್ಕಳು ಅಂತ ಬರುತ್ತಾರೆ. ಅನಿವಾರ್ಯವಾಗಿ ಅವರನ್ನು ನೋಡಿಕೊಳ್ಳಬೇಕಾದ ಪರಿಸ್ಥಿತಿ ಬರಬಹುದು. ಅದೇ ಸರಿಬರದೆ ಪ್ರತ್ಯೇಕವಾಗಿದ್ದರೆ ಡಿವೋರ್ಸ್ ಕೊಟ್ಟು ಸಂಬಂಧ ಕಡಿದುಕೊಳ್ಳುವುದೇ ಲೇಸು.
ಮುಂದೆ ನಿಮ್ಮ ಗಳಿಕೆಯಲ್ಲಿ ಪಾಲು ಕೇಳಲು ಬರಬಹುದು
ನಿಮ್ಮ ಹತ್ರ ಏನೂ ಇಲ್ಲದಿದ್ದಾಗ ದೂರಾದವರು ನೀವು ಕಷ್ಟಪಟ್ಟು ದುಡಿದು ಒಂದು ಹಂತಕ್ಕೆ ಬಂದಾಗ ಬಂದು ನನಗೆ ಆಸ್ತಿಯಲ್ಲಿ ಪಾಲು ನೀಡು ಎಂದು ಕೇಳಬಹುದು. ಅಥವಾ ಮಕ್ಕಳ ಮೇಲೆ ನನಗೆ ಹಕ್ಕಿದೆ ಅಂತೆಲ್ಲಾ ಹೇಳಿ ಬರಬಹುದು, ಯಾವುದೋ ಕಾರಣ ಹೇಳಿ ಮನೆಗೆ ಬಂದು ಜಗಳ ಮಾಡುವುದು ಈ ರೀತಿ ಒಂದಲ್ಲಾ ಒಂದು ರೀತಿ ತಲೆನೀವಾಗುತ್ತಾರೆ, ಅದೇ ವಿಚ್ಛೇದನ ಪಡೆದಿದ್ದರೆ ಅವರಿಗೂ ನಿಮಗೂ ಸಂಬಂಧವಿಲ್ಲದ ಕಾರಣ ನೆಮ್ಮದಿ ಇರುತ್ತದೆ.
ಮಕ್ಕಳ ಮೇಲೆ ಹಕ್ಕು ಚಲಾಯಿಸುವುದು
ಮಕ್ಕಳನ್ನು ಸಂಪೂರ್ಣವಾಗಿ ನೋಡಿಕೊಳ್ಳಲು ಅವರಿಗೆ ಸಾಧ್ಯವಿಲ್ಲ, ಆದರೆ ಅವರಿಗೆ ಮಕ್ಕಳ ಮೇಲಿನ ಹಕ್ಕು ಬೇಕು. ನನ್ನ ಮಕ್ಕಳು, ನನಗೆ ಮಕ್ಕಳು ಬೇಕು ಎಂದೆಲ್ಲಾ ರಂಪ ಮಾಡುತ್ತಾರೆ. ಅದೇ ವಿಚ್ಛೇದನ ಎಂಬುವುದು ನಡೆದರೆ ಕೋರ್ಟ್ ಮಕ್ಕಳು ಯಾರ ಬಳಿ ಇರಬೇಕು, ಮಕ್ಕಳ ಖರ್ಚಿಗೆ ಎಷ್ಟು ದುಡ್ಡು ಕೊಡಬೇಕು ಹೀಗೆ ಎಲ್ಲಾ ರೀತಿಯಲ್ಲಿ ಕಾನೂನಿನ ಚೌಕಟ್ಟಿನ ಒಳಗಡೆ ತೀರ್ಪು ಸಿಗುವುದರಿಂದ ದೊಡ್ಡ ಸಮಸ್ಯೆ ಉಂಟಾಗುವುದಿಲ್ಲ. ಅಲ್ಲದೆ ಮೊದಲೇ ಅಪ್ಪ-ಅಮ್ಮನ ಜಟಾಪಟಿಯಿಂದ ಬೇಸತ್ತ ಮಕ್ಕಳು ಮತ್ತಷ್ಟು ರೋಸಿ ಹೋಗುವುದು ತಪ್ಪುತ್ತೆ. ಕೋರ್ಟ್ ತೀರ್ಮಾನದಂತೆ ಮಕ್ಕಳು ತಮಗೆ ಇಷ್ಟಬಂದವರ ಜಿತೆ ಬದುಕಬೇಕು.
ಈ ಎಲ್ಲಾ ಕಾರಣದಿಂದ ಇಬ್ಬರು ಜೊತೆಗೆ ಬಾಳಲು ಸಾಧ್ಯವಿಲ್ಲ ಎಂದು ಭಾವಿಸಿ ಪ್ರತ್ಯೇಕವಾಗಿ ಕೆಲವು ವರ್ಷಗಳಿಂದ ಬದುಕುತ್ತಿದ್ದರೆ ವಿಚ್ಛೇದನ ತೆಗೆದುಕೊಳ್ಳುವುದೇ ಒಳ್ಳೆಯದು.



Click it and Unblock the Notifications
