Latest Updates
-
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್ -
ಡೇಟಿಂಗ್ ಆಪ್ಗಳಲ್ಲಿ ಹನಿ ಟ್ರ್ಯಾಪ್: ಮೊದಲ ಭೇಟಿಯಲ್ಲೇ ಹಣ ಕಳೆದುಕೊಳ್ಳದಿರಲು ಈ ಸುರಕ್ಷತಾ ಟಿಪ್ಸ್ ಪಾಲಿಸಿ -
ಉತ್ತರಾಖಂಡದಲ್ಲಿ ಭಾರಿ ಮಳೆ: IMD ರೆಡ್ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಪ್ರಾಣ ರಕ್ಷಣೆಗೆ ಈ ಮುನ್ನೆಚ್ಚರಿಕೆಗಳು ಕಡ್ಡಾಯ! -
ಎಚ್ಚರಿಕೆ! ಪ್ಯಾಕೆಟ್ ಆಹಾರದ ಮೇಲೆ 'ರೆಡ್ ಹೆಕ್ಸಾಗನ್': ನಿಮ್ಮ ಆರೋಗ್ಯಕ್ಕೆ ಅಪಾಯವಿದೆಯೇ? -
ದೆಹಲಿಯಲ್ಲಿ 'ಭಜನ್ ಕ್ಲಬ್ಬಿಂಗ್' ಹವಾ: ಮೋದಿಯವರೇ ಫಿದಾ, ಯುವಕರ ಹೊಸ ಕ್ರೇಜ್ಗೆ ಕಾರಣವೇನು? -
ವಿಶ್ವ ಹೃದಯ ದಿನಕ್ಕೆ ರೆಡಿಯಾಗಿ: 20 ನಿಮಿಷದ ಈ ಸಿಂಪಲ್ ವರ್ಕೌಟ್ ನಿಮ್ಮ ಸ್ಟ್ಯಾಮಿನಾ ಹೆಚ್ಚಿಸುತ್ತೆ!
ರಾಜ್ ನಿಡಿಮೋರು ಜೊತೆ ಸಪ್ತಪದಿ ತುಳಿದ ನಟಿ ಸಮಂತಾ! ಈ ನಿರ್ದೇಶಕ ಯಾರು ಗೊತ್ತಾ?
ತೆಲುಗು ನಟಿ ಸಮಂತಾ ರುತ್ ಪ್ರಭು ಮೊದಲ ವಿವಾಹ ಮುರಿದು ಬಿದಿತ್ತು, ನಟ ನಾಗಚೈತನ್ಯ ಜೊತೆಗಿನ ಸಂಬಂಧದಿಂದ ಅವರು ವಿಚ್ಛೇದನ ಪಡೆದಿದ್ದರು. ಆದ್ರೆ ಈಗ ದಿಢೀರ್ 2ನೇ ವಿವಾಹವಾಗುವ ಮೂಲಕ ಅಚ್ಚರಿ ಮೂಡಿಸಿದ್ದಾರೆ. ತಮಿಳಿನಾಡಿನ ಕೊಯಮತ್ತೂರಿನ ಈಶಾ ಯೋಗ ಕೇಂದ್ರದ ಒಳಗಿನ ಲಿಂಗ್ ಭೈರವಿ ದೇವಸ್ಥಾನದಲ್ಲಿ ಬೆಳಗಿನ ಜಾವ ಸರಳ ವಿವಾಹವಾಗಿದ್ದಾರೆ ಎಂದು ವರದಿಯಾಗಿದೆ.
ಈ ವಿವಾಹ ಸಮಾರಂಭ ಕುರಿತಾಗಿ ಖುದ್ದು ನಟಿ ಸಮಂತಾ ತಮ್ಮ ಇನ್ಸ್‌ಸ್ಟಾಗ್ರಾಮ್ ಖಾತೆಯಲ್ಲಿ ದಿನಾಂಕದ ಜೊತೆಗೆ ಮಾಹಿತಿ ಹಾಗೂ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ನಿರ್ದೇಶಕ ರಾಜ್ ನಿಡಿಮೋರು ಅವರೊಂದಿಗೆ ಇಂದು ಸಪ್ತಪದಿ ತುಳಿದಿದ್ದಾರೆ. ವಿವಾಹಕ್ಕಾಗಿ ಭಾನುವಾರ ಸಂಜೆಯೇ ಅವರು ಕೊಯಮತ್ತೂರಿಗೆ ಆಗಮಿಸಿದರು.

ಇನ್ನು ಕೇವಲ 30ರಿಂದ 40 ಜನರ ಸಮ್ಮುಖದಲ್ಲಿ ಅವರ ವಿವಾಹ ಮುಗಿದಿದೆ ಎನ್ನಲಾಗಿದೆ. ಕುಟುಂಬ ಸದಸ್ಯರು ಹಾಗೆ ಕೆಲವೇ ಕೆಲವು ಆಪ್ತರ ಸಮ್ಮುಖದಲ್ಲಿ ಇಬ್ಬರ ಮದುವೆಯು ಸರಳವಾಗಿ ಮುಗಿದಿದೆ. ಸಮಂತಾ ನಿರ್ದೇಶಕ ರಾಜ್ ನಿಡಿಮೋರು 2024ರಿಂದಲೂ ಡೇಟಿಂಗ್‌ನಲ್ಲಿದ್ದರು ಎಂದು ತಿಳಿದುಬಂದಿದೆ. ಸದ್ಯ ಅಂತಿಮವಾಗಿ ಈಗ ಇಬ್ಬರು ವಿವಾಹವಾಗಿದ್ದಾರೆ.
2021ರಲ್ಲಿ ನಟ ನಾಗ ಚೈತನ್ಯ ಅವರಿಂದ ನಟಿ ವಿಚ್ಛೇದನ ಪಡೆದಿದ್ದರು, ಇಬ್ಬರ ನಡುವೆ ಅನ್ಯೋನ್ಯತೆ ಇಲ್ಲ ಎಂಬ ಕಾರಣ ನೀಡಿ ವಿಚ್ಛೇದನ ಪಡೆದಿದ್ದರು. ಇದಾದ ಬಳಿಕ ನಿರ್ದೇಶಕ ನಿಡಿಮೋರು ಜೊತೆಗೆ ಕಾಣಿಸಿಕೊಳ್ಳುತ್ತಿದ್ದರು. ಇಬ್ಬರ ನಡುವೆ ಡೇಟಿಂಗ್ ನಡೆಯುತ್ತಿದೆ ಎಂಬ ಸುದ್ದಿಗಳು ಹರಿದಾಡುತ್ತಿದ್ದವು. ಆದ್ರೆ ಎಲ್ಲಿಯೂ ಇಬ್ಬರು ಮದುವೆಯಾಗುವ ಕುರಿತಾಗಿ ಹೇಳಿಕೊಂಡಿರಲಿಲ್ಲ.
ಯಾರು ಈ ನಿರ್ದೇಶಕ ರಾಜ್ ನಿಡಿಮೋರು?
ರಾಜ್ ನಿಡಿಮೋರು ಬಾಲಿವುಡ್ ಸೇರಿ ಹಲವು ಸಿನಿಮಾಗಳ ನಿರ್ದೇಶನ ಮಾಡಿದ್ದಾರೆ. ಮನೋಜ್ ಬಾಜಪಾಯಿ ನಟನೆಯ ಫ್ಯಾಮಿಲಿ ಮ್ಯಾನ್ ವೆಬ್ ಸೀರಿಸ್‌ನ ನಿರ್ದೇಶಕರಲ್ಲಿ ರಾಜ್ ಕೂಡ ಒಬ್ಬರು. ಹಾಗೆ ಒಂದಿಷ್ಟು ಸಿನಿಮಾಗಳಲ್ಲಿಯೂ ಅವರು ಕೆಲಸ ಮಾಡಿದ್ದಾರೆ. ಅಲ್ಲದೆ ಅವರಿಗೂ ಈ ಮೊದಲು ವಿವಾಹವಾಗಿ ವಿಚ್ಛೇದನ ಸಹ ಪಡೆದಿದ್ದಾರೆ.
ಅವರ ಮೊದಲ ಪತ್ನಿ ಶ್ಯಾಮಲಿ ಅವರಿಂದ 2022ರಲ್ಲಿ ವಿಚ್ಛೇದನ ಪಡೆದ ಬಳಿಕ ಸಮಂತಾ ಅವರ ಜೊತೆಗೆ ಆಗಾಗ ಕಾಣಿಸಿಕೊಳ್ಳುತ್ತಿದ್ದರು. ಸದ್ಯ ಈಗ ಮಾಜಿ ಪತಿಯ ಮತ್ತೊಂದು ವಿವಾಹ ಸುದ್ದಿ ತಿಳಿದ ಬಳಿಕ ತಮ್ಮ ಇನ್ಸ್‌ಸ್ಟಾಗ್ರಾಮ್ ಖಾತೆಯಲ್ಲಿ ಪೋಸ್ಟ್‌ವೊಂದನ್ನು ಹಂಚಿಕೊಂಡಿದ್ದಾರೆ. 'ಹತಾಶ ಜನರು ಹತಾಶೆಯ ಕೆಲಸಗಳನ್ನು ಮಾಡುತ್ತಾರೆ' ಎಂದು ಬರೆದ ಪೋಸ್ಟ್ ಅನ್ನು ಹಂಚಿಕೊಂಡಿದ್ದಾರೆ.
ತಿರುಪತಿ ಮೂಲದ ರಾಜ್ ನಿಡಿಮೋರು, '99', 'ಶೋರ್ ಇನ್ ದಿ ಸಿಟಿ', 'ಸಿನಿಮಾ ಬಂಡಿ', 'ಅನ್‌ಪಾಸ್ಡ್' ಮತ್ತು 'ದಿ ಫ್ಯಾಮಿಲಿ ಮ್ಯಾನ್', 'ಫರ್ಜಿ' ಮತ್ತು 'ಸಿಟಾಡೆಲ್: ಹನಿ ಬನ್ನಿ' ನಂತಹ ಯಶಸ್ವಿ ಸರಣಿಗಳಲ್ಲಿ ನಟಿಸಿ, ಅವರಿಗೆ ಪ್ರಶಂಸೆ ಗಳಿಸಿಕೊಟ್ಟರು.
2024 ರಲ್ಲಿ ಸಮಂತಾ ಸಾಮಾಜಿಕ ಮಾಧ್ಯಮದಲ್ಲಿ ರಾಜ್ ನಿಡಿಮೋರು ಅವರೊಂದಿಗಿನ ಚಿತ್ರಗಳನ್ನು ಹಂಚಿಕೊಂಡಿದ್ದರು. ಫೆಬ್ರವರಿಯಲ್ಲಿ ನಡೆದಿದ್ದ ವಿಶ್ವ ಪಿಕಲ್‌ಬಾಲ್ ಲೀಗ್ ಪಂದ್ಯಾವಳಿಯಲ್ಲಿ ಇಬ್ಬರೂ ಒಟ್ಟಿಗೆ ಕಾಣಿಸಿಕೊಂಡಿದ್ದರು. ಹಾಗೆ ಸಮಂತಾ ಅವರಿಬ್ಬರ ನಡುವಿನ ಮಾತುಕತೆಯ ಫೋಟೋವೊಂದನ್ನು ಹಂಚಿಕೊಂಡಿದ್ದರು. ಅಲ್ಲಿಂದ ಇಬ್ಬರ ನಡುವೆ ಡೇಟಿಂಗ್ ನಡೆಯುತ್ತಿದೆ ಎಂಬ ಸುದ್ದಿ ಹರಡಿತ್ತು. ಆದ್ರೆ ಮದುವೆ ಕುರಿತಾಗಿ ಯಾವುದೇ ಸುದ್ದಿ ಹರಿದಾಡಿರಲಿಲ್ಲ. 'ದಿ ಫ್ಯಾಮಿಲಿ ಮ್ಯಾನ್ 2' ಮತ್ತು 'ಸಿಟಾಡೆಲ್: ಹನಿ ಬನ್ನಿ' ನಂತಹ ಸರಣಿಗಳಲ್ಲಿ ಒಟ್ಟಿಗೆ ಕೆಲಸ ಮಾಡಿದ್ದರಿಂದ ಇಬ್ಬರ ನಡುವಿನ ನಿಕಟತೆ ಮತ್ತಷ್ಟು ಹೆಚ್ಚಾಗಿತ್ತು.



Click it and Unblock the Notifications
