Latest Updates
-
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು!
ಸಂಬಂಧದಲ್ಲಿ ಈ ಲಕ್ಷಣಗಳು ಕಂಡು ಬಂದರೆ ಅದರಿಂದ ಹೊರನಡೆಯುವುದೇ ಒಳ್ಳೆಯದು
ಸಂಬಂಧಗಳು ಕೊನೆಯವರೆಗೂ ಇರಬೇಕು. ನಾವು ಪ್ರೀತಿಸಿದವರ ಜೊತೆಗೆ ನೂರೂ ಕಾಲ ಸುಖವಾಗಿ ಬಾಳಬೇಕು ಎಂಬ ಆಸೆ ಖಂಡಿತ ಪ್ರತಿಯೊಬ್ಬರಿಗೂ ಇದ್ದೇ ಇರುತ್ತೆ ಅಲ್ವಾ? ಆದರೆ ಎಲ್ಲವೂ ನಾವಂದುಕೊಂಡ ಹಾಗೆ ಆಗುವ ಹಾಗಿದ್ರೆ ಆ ದೇವರು ಯಾಕೆ ಬೇಕಿತ್ತು ಹೇಳಿ. ಸಂಬಂಧ ಎಂದ ಮೇಲೆ ಅದ್ರಲ್ಲಿ ದುಃಖ, ಮನಸ್ಥಾಪಗಳಾಗೋದು ಕಾಮನ್.
ಆದರೆ ಆ ಸಂಬಂಧವೇ ನಮಗೆ ಬೇಡ ಅನ್ನುವಷ್ಟರ ಮಟ್ಟಿಗೆ ನಾವು ನೊಂದು ಹೋದ್ರೆ ಅಂತಹ ಸಂಬಂಧಗಳ ಜೊತೆಗೆ ಇದ್ದೂ ಕೂಡ ಪ್ರಯೋಜನವಿಲ್ಲದಂತಾಗುತ್ತದೆ. ನಿಮ್ಮ ಸಂಬಂಧದಲ್ಲಿ ನಿಮಗೆ ಇಂತಹ ಲಕ್ಷಣಗಳು ಕಂಡು ಬಂದರೆ ಖಂಡಿತ ಅಂತಹ ಸಂಬಂಧದಿಂದ ಹೊರ ಬನ್ನಿ. ಹಾಗಾದ್ರೆ ಸಂಬಂಧದಿಂದ ಹೊರ ಬರಲೇಬೇಕೆಂದು ತೋರಿಸುವ ಲಕ್ಷಣಗಳು ಯಾವುದು ಅನ್ನೋದನ್ನು ತಿಳಿಯೋಣ.

1. ನಿಮಗೆ ಗೌರವ ನೀಡದೇ ಇರುವುದು
ಸಂಬಂಧದಲ್ಲಿ ಗೌರವವೇ ಒಂದು ಗಟ್ಟಿಯಾದ ಅಡಿಪಾಯ. ಸಂಬಂಧದಲ್ಲಿ ಇಬ್ಬರ ಅಭಿಪ್ರಾಯಗಳಿಗೆ, ನಿರ್ಧಾರಗಳಿಗೆ ಮತ್ತು ಗುರಿಗಳಿಗೆ ಗೌರವ ನೀಡಲೇಬೇಕು. ಆಗ ಮಾತ್ರ ಸಂಬಂಧ ಗಟ್ಟಿಯಾಗಿರೋದಕ್ಕೆ ಸಾಧ್ಯ. ಯಾವಾಗ ಸಂಗಾತಿಯ ಅಭಿಪ್ರಾಯ, ನಿರ್ಧಾರ, ಹಾಗೂ ಗುರಿಗಳಿಗೆ ಬೆಲೆ ಇರುವುದಿಲ್ಲವೋ ಆ ಸಂಬಂಧದಲ್ಲಿ ಒಂದು ಕ್ಷಣ ನೀವಿದ್ದರೂ ನಿಮಗೆ ಅಪಾಯ. ಕೂಡಲೇ ಅಂತಹ ಸಂಬಂಧದಿಂದ ಹೊರ ಬಂದರೆ ಚಂದ.
2. ಸಂಗಾತಿಯಿಂದ ನಿಂದನೆಗೆ ಒಳಗಾಗುತ್ತಿದ್ದರೆ
ಕೆಲವೊಂದು ಸಲ ಸಂಬಂಧದಲ್ಲಿ ಏನಾಗುತ್ತೆ ಎಂದರೆ ಒಬ್ಬರು ತಮ್ಮ ಪ್ರಾಬಲ್ಯವನ್ನು ಮೆರೆಯೋದಕ್ಕೆ ಶುರು ಮಾಡುತ್ತಾರೆ. ಅವರು ತಮ್ಮ ಸಂಗಾತಿಗೆ ಮಾನಸಿಕವಾಗಿ, ದೈಹಿಕವಾಗಿ ಹಿಂಸೆ ನೀಡುತ್ತಾರೆ. ಅವರು ಆಡುವ ನಿಂದನೆಯ ಮಾತುಗಳಿಂದ ಸಂಗಾತಿಯನ್ನು ಖಿನ್ನತೆಗೆ ತಳ್ಳಿ ಬಿಡುತ್ತಾರೆ. ಅವರಲ್ಲಿರುವ ಆತ್ಮ ವಿಶ್ವಾಸವನ್ನು ಕುಗ್ಗಿಸಿ ಬಿಡುತ್ತದೆ. ನಿಮ್ಮ ಸಂಬಂಧದಲ್ಲೂ ಈ ರೀತಿ ಆಗುತ್ತಿದ್ದರೆ ಕೂಡಲೇ ಅಂತ ಸಂಬಂಧವನ್ನು ಮುರಿದುಕೊಳ್ಳುವುದು ಒಳ್ಳೆಯದು.
3. ಸಂಗಾತಿಯಿಂದ ಮೋಸ ಆದಾಗ
ಕೆಲವೊಂದು ಸಲ ಸಂಬಂಧದಲ್ಲಿ ಇದ್ದವರು ಅಥವಾ ಮದುವೆಯಾಗಿದ್ದರೂ ಕೂಡ ಪರರ ಜೊತೆಗೆ ಸಂಬಂಧ ಇಟ್ಟುಕೊಳ್ಳುತ್ತಾರೆ. ಒಂದು ವೇಳೆ ಆ ವಿಚಾರ ಸಂಗಾತಿಗೆ ತಿಳಿದರೂ ಕೂಡಾ ಅವರು ಅದನ್ನು ಲೆಕ್ಕಿಸೋದೇ ಇಲ್ಲ. ಪಾಪ ಪ್ರಜ್ಞೆಯೂ ಅವರನ್ನೂ ಕಾಡೋದಿಲ್ಲ. ತಮ್ಮ ಅನೈತಿಕ ಸಂಬಂಧವನ್ನು ಹಾಗೆಯೇ ಮುಂದುವರಿಸುತ್ತಾರೆ. ಆಗ ಅಲ್ಲಿಂದ ನೀವು ಹೊರ ನಡೆದರೆ ಉತ್ತಮ.
4. ಸಂಗಾತಿಯು ಜವಾಬ್ದಾರಿಗಳನ್ನು ತೆಗೆದುಕೊಳ್ಳದಿರುವಾಗ
ಸಂಬಂಧ ಎಂದರೆ ಇಬ್ಬರೂ ಕೂಡ ಸಮನಾಗಿ ಜವಾಬ್ದಾರಿಗಳನ್ನು ಹಂಚಿಕೊಳ್ಳಬೇಕು. ಮನೆ ಕೆಲಸ ಆಗಿರಬಹುದು, ಆರ್ಥಿಕ ಜವಾಬ್ದಾರಿಗಳು ಹೀಗೆ ಏನೇ ಇದ್ದರೂ ಇಬ್ಬರಿಗೂ ಸಮ ಪಾಲಿರಬೇಕು. ಆದರೆ ನಿಮ್ಮ ಸಂಗಾತಿ ಈ ಜವಾಬ್ದಾರಿಗಳನ್ನು ತೆಗೆದುಕೊಳ್ಳಲು ಇಷ್ಟವಿಲ್ಲದೇ, ಎಲ್ಲವನ್ನೂ ನಿಮ್ಮ ಮೇಲೆ ಹೊರಿಸುತ್ತಿದ್ದರೆ ಅವರು ನಿಮ್ಮನ್ನು ಕಡೆಗಣಿಸುತ್ತಿದ್ದಾರೆ. ಹಾಗೂ ಅವರಿಗೆ ನಿಮ್ಮಲ್ಲಿ ಆಸಕ್ತಿ ಇಲ್ಲ ಎಂದರ್ಥ. ಅಂತಹ ಸಂಬಂಧದಿಂದ ಹೊರ ಬನ್ನಿ.
5. ನಿಮಗೆ ಅವರೊಂದಿಗೆ ಭವಿಷ್ಯವಿಲ್ಲವೆಂದು ಸ್ಪಷ್ಟವಾದಾಗ
ಸಂಗಾತಿ ನಿಮ್ಮನ್ನು ನಿಜವಾಗಿಯೂ ಪ್ರೀತಿಸುವವರಾದರೆ ಅವರು ನಿಮ್ಮ ಜೊತೆಗೆ ಭವಿಷ್ಯದ ಕನಸು ಕಾಣುತ್ತಾರೆ. ನಿಮ್ಮ ಕನಸುಗಳಿಗೆ ಸೇತುವೆಯಾಗೋದಕ್ಕೆ ಬಯಸುತ್ತಾರೆ. ಅವರ ಗುರಿಯನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತಾರೆ. ನಿಮ್ಮ ಗುರಿಯನ್ನು ಅವರ ಗುರಿಯೆಂದುಕೊಳ್ಳುತ್ತಾರೆ. ಆದರೆ ಯಾವಾಗ ನಿಮ್ಮ ಸಂಗಾಂತಿ ನಿಮ್ಮಲ್ಲಿ ಆಸಕ್ತಿಯನ್ನು ಕಳೆದುಕೊಂಡಿರುತ್ತಾರೋ, ನಿಮ್ಮ ಇಷ್ಟ- ಕಷ್ಟಗಳ ಬಗ್ಗೆ ಕಾಳಜಿ ಮಾಡುವುದಿಲ್ಲವೋ ಅಂತಹ ಸಂಬಂಧ ಉಳಿಸಿಕೊಳ್ಳಬೇಕಾ ಅನ್ನೋದನ್ನು ನೀವು ಯೋಚಿಸಬೇಕು.
6. ನೀವೊಬ್ಬರೇ ರಾಜಿ ಹಾಗೂ ತ್ಯಾಗ ಮಾಡುತ್ತಿದ್ದರೆ
ಸಂಬಂಧ ಉಳಿಯಬೇಕಾದರೆ ಅಲ್ಲಿ ಇಬ್ಬರೂ ತ್ಯಾಗ ಮಾಡಲೇಬೇಕು. ಚಿಕ್ಕ ಚಿಕ್ಕ ವಿಚಾರಗಳಿಗೆ ತ್ಯಾಗ ಮಾಡೋದು, ಸರಿದೂಗಿಸಿಕೊಂಡು ಹೋಗುವುದು ಸಂಬಂಧದಲ್ಲಿ ಕಾಮನ್. ಆದರೆ ಪ್ರತಿ ಸಾರಿ ನೀವೆ ತ್ಯಾಗ ಮಾಡಬೇಕು, ಎಲ್ಲದಕ್ಕೂ ನೀವೇ ರಾಜಿ ಮಾಡಿಕೊಳ್ಳಬೇಕಾದ ಪರಿಸ್ಥಿತಿ ಬಂದರೆ ಆ ಸಂಬಂಧದಲ್ಲಿ ನೀವು ಮುಂದುವರಿಯೋದಕ್ಕೆ ಯಾವುದೇ ಅರ್ಥವಿಲ್ಲ.
7. ಸಂಗಾತಿಗೆ ಭಾವನಾತ್ಮಕ ಪ್ರಬುದ್ಧತೆ ಇಲ್ಲದಿರುವಾಗ
ಸಂಬಂಧ ಎಂಬ ಮೇಲೆ ಇಬ್ಬರೂ ಕೂಡ ಪ್ರಬುದ್ಧತೆಯಿಂದಲೇ ಆಲೋಚನೆ ಮಾಡಬೇಕು. ಒಂದು ವೇಳೆ ನಿಮ್ಮ ಸಂಗಾತಿ ನಿಮ್ಮ ಭಾವನೆಗಳನ್ನು ಅರ್ಥ ಮಾಡಿಕೊಳ್ಳದೇ ಇದ್ದರೆ, ಅವರಲ್ಲಿ ಪ್ರಬುದ್ಧ ಆಲೋಚನೆಗಳು ಇಲ್ಲದಿದ್ದರೆ, ಇಬ್ಬರ ನಡುವಿನ ಜಗಳಗಳು ತೀವ್ರ ಸ್ವರೂಪಕ್ಕೆ ತಿರುಗುವ ಸಾಧ್ಯತೆ ಇದೆ. ಇಂತಹ ವ್ಯಕ್ತಿಗಳಿಗೆ ನೀವು ಎಷ್ಟು ಹೇಳಿದರೂ ಅದನ್ನು ಅವರು ಅರ್ಥ ಮಾಡಿಕೊಳ್ಳೋದಿಲ್ಲ. ಇಂತಹ ಸಂಬಂಧಗಳು ನಿಮಗೆ ಬೇಡ.
ಒಟ್ಟಿನಲ್ಲಿ ನಾವು ಒಂದು ಸಂಬಂಧದಲ್ಲಿ ಉಳಿಯಬೇಕಾದರೆ ಆ ಸಂಬಂಧದ ಬಗ್ಗೆ ಸೂಕ್ಷ್ಮವಾಗಿ ಆಲೋಚನೆ ಮಾಡುವುದು ತುಂಬಾನೇ ಮುಖ್ಯ. ನಾವೇನಾದರೂ ಕೊಂಚ ಎಡವಿದ್ರೂ ಕೂಡ ನಮ್ಮ ಭವಿಷ್ಯವೇ ಬಲಿಯಾಗಬಹುದು.



Click it and Unblock the Notifications

