Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಇಂಡೋ-ಚೀನಾ ಯುದ್ಧದಿಂದಾಗಿ ತನ್ನ ನಿಜವಾದ ಪ್ರೀತಿ ಕಳೆದುಕೊಂಡ ರತನ್ ಟಾಟಾ
ಇಡೀ ಭಾರತ ದೇಶದಲ್ಲಿ ದುಃಖದ ಛಾಯೆ, ದೇಶದಕ್ಕೆ ತುಂಬಲಾಗದ ನಷ್ಟ, ರತನ್ ಟಾಟಾ ಎಂಬ ಮೇರು ವ್ಯಕ್ತಿತ್ವ ಇಹಲೋಕದ ಪ್ರಯಾಣ ಮುಗಿಸಿದ್ದಾರೆ. ರತನ್ ಟಾಟಾ ಬಗ್ಗೆ ಹೇಳುವುದಾದರೆ ಅಪ್ಪಟ್ಟ ದೇಶ ಪ್ರೇಮಿ, ದೇಶದ ಆಸ್ತಿ, ತುಂಬಾನೇ ಸರಳ ವ್ಯಕ್ತಿತ್ವ. ಆಗರ್ಭ ಶ್ರೀಮಂತನಾದರೂ ಎಲ್ಲಿಯೂ ಶ್ರೀಮಂತಿಕೆಯ ತೋರ್ಪಡಿಕೆಯಿಲ್ಲ, ಎಲ್ಲಿಯೇ ಆಗಲಿ ಭಾರತೀಯರಿಗೆ ಕಷ್ಟ ಬಂತೆಂದರೆ ಕೂಡಲೇ ಸಹಾಯಕ್ಕೆ ಬರುವ ವ್ಯಕ್ತಿ, ಮೂಕ ಪ್ರಾಣಿಗಳಿಗಾಗಿಯೇ ದೊಡ್ಡ ಆಸ್ಪತ್ರೆ ಕಟ್ಟಿದ ಪ್ರಾಣಿ ಪ್ರಿಯ, ಸ್ನೇಹಮಯಿ, ಅಜಾತಶತ್ರು.... ಹೀಗೆ ಇವರ ಬಗ್ಗೆ ಎಷ್ಟು ಹೇಳಿದರೂ ಸಾಲದು.
ರತನ್ ಟಾಟಾ ವೈಯಕ್ತಿಕ ಬದುಕು ನೋಡುವುದಾದರೆ ಅವರು ಮದುವೆಯಾಗಿಲ್ಲ, ಹಾಗಾದರೆ ಅವರಿಗೆ ಅವರ ಯೌವನದ ಸಮಯದಲ್ಲಿ ಪ್ರೀತಿ-ಪ್ರೇಮ ಅಂತ ಇರಲಿಲ್ಲವೇ ಎಂದರೆ, ಅವರ ಪ್ರೀತಿ ದುರಂತ ಕತೆ, ಇಂಡೋ-ಚೀನಾ ಯುದ್ಧದಲ್ಲಿ ತಮ್ಮ ಪ್ರೀತಿಯನ್ನು ಕಳೆದುಕೊಂಡರು.

ಅವರ ಜೀವನದ ಅತಿ ಸುಂದರ ದಿನಗಳು
ಅವರೇ ಹೇಳಿರುವಂತೆ 'ಕಾಲೇಜು ಬಳಿಕ ನಾನು ಲಾಸ್ ಏಂಜಲೀಸ್‌ನಲ್ಲಿ ಆರ್ಕಿಟೆಕ್ಟ್ ಆಗಿ ಕೆಲಸ ಮಾಡಿದೆ, ಅದು ನನ್ನ ಬದುಕಿನ ಅತ್ಯಂತ ಸುಂದರ ದಿನಗಳಾಗಿತ್ತು, ಅಲ್ಲಿಯ ವಾತಾವರಣ ಸುಂದರವಾಇತ್ತು, ನನ್ನದೇ ಆದ ಕಾರು ಇತ್ತು, ನನ್ನ ಕೆಲಸವನ್ನು ಇಷ್ಟಪಡುತ್ತಿದ್ದೆ, ನನ್ನ ಕನಸಿನ ಹುಡುಗಿಯೂ ಸಿಕ್ಕಿದಳು, ನಾವಿಬ್ಬಿರು ಪ್ರೀತಿಯಲ್ಲಿ ಬಿದ್ದೆವು, ಸ್ವಲ್ಪದರಲ್ಲಿಯೇ ಮದುವೆ ಕೂಡ ಆಗಬೇಕೆಂದು ಬಯಸಿದ್ದೆವು, ಆದರೆ ನಾನು ಸ್ವಲ್ಪ ದಿನ ಭಾರತಕ್ಕೆ ಬಂದು ಇದ್ದು ಹೋಗಲು ತೀರ್ಮಾನಿಸಿದೆ, ಏಕೆಂದರೆ ನನ್ನ ಅಜ್ಜಿಗೆ ತುಂಬಾನೇ ಹುಷಾರಿರಲಿಲ್ಲ, ಅವರನ್ನು ನೋಡಿ ಏಳು ವರ್ಷವಾಗಿತ್ತು.
ನಾನು ಯುಎಸ್‌ಗೆ ಹೋಗಿ ಆಕೆಯ ಪೋಷಕರಿಗೆ ನಾವಿಬ್ಬರು ಮದುವೆಯಾಗಿ ಭಾರತಕ್ಕೆ ಹೋಗೋಣ ಎಂದು ಆಕೆಯ ಪೋಷಕರಿಗೆ ಬಳಿ ಕೇಳಿದೆ, ಆದರೆ ಅಷ್ಟರಲ್ಲಿ ಬಾರತ-ಚೀನಾ ಯದ್ಧ ನಡೆಯುತ್ತಿತ್ತು, ಆಕೆಯ ಪೋಷಕರು ಆಕೆಯನ್ನು ನನ್ನೊಂದಿಗೆ ಕಳುಹಿಸಲು ಅವರು ಒಪ್ಪಲಿಲ್ಲ' ಎಂದು ಹೇಳಿದರು. ಹೀಗೆ ಅವರ ಪ್ರೀತಿ ಅಲ್ಲಿಗೆ ಕೊನೆಯಾಯ್ತು.
ಇದಾದ ಬಳಿಕ ಅವರು ಬಾಲಿವುಡ್ ನಟಿ ಸಿಮಿ ಗೇರೇವಾಲ್ ಜೊತೆ ಪ್ರೀತಿ ಚಿಗುರಿತು
ಇವರಿಬ್ಬರು ಪರಸ್ಪರ ಪ್ರೀತಿಸುತ್ತಿದ್ದರು, ಇಬ್ಬರು ಮದುವೆಯಾಗುವ ಬಗ್ಗೆ ಆಲೋಚಿಸುತ್ತಾರೆ, ಆದರೆ ಮದುವೆಯಾಗಲ್ಲ, ಇಬ್ಬರು ಸ್ನೇಹಿತರಾಗಿ ಉಳಿದುಕೊಳ್ಳುತ್ತಾರೆ.
ರತನ್ ಟಾಟಾ ಅವರ ಕುರಿತ ಮತ್ತಷ್ಟು ಮಾಹಿತಿ
ತಂದೆ-ತಾಯಿಯ ವಿಚ್ಛೇದನ ಅವರ ಬದುಕಿನಲ್ಲಿ ಪ್ರಭಾವ ಬೀರಿತು
ಅವರು' ನನ್ನ ಬಾಲ್ಯ ತುಂಬಾನೇ ಚೆನ್ಆಗಿತ್ತು, ಆದರೆ ತಂದೆ-ತಾಯಿ ವಿಚ್ಛೇದನವಾದಾಗ ಅದರ ಪರಿಣಾಮ ನನ್ನ ಮತ್ತು ಸಹೋದರ ಮೇಲೆ ಬೀರಿತು, ನಮ್ಮ ಅಜ್ಜಿ ನಮ್ಮನ್ನು ಬೆಳೆಸಿದರು. ತಾಯ ಬೇರೆ ಮದುವೆಯಾದಾಗ ಇದರ ಬಗ್ಗೆ ಶಾಲೆಯಲ್ಲಿ ಹುಡುಗುರು ನಮ್ಮನ್ನು ಚುಡಾಯಿಸುತ್ತಿದ್ದರು. ಆದರೆ ನಮ್ಮಜ್ಜಿ ನಮ್ಮನ್ನು ಸಮಧಾನ ಮಾಡುತ್ತಿದ್ದರು, ಅವರು ಬೆಳೆಸಿದ ರೀತಿ ನಮ್ಮನ್ನು ಈಗ ಎಂಥದ್ದೇ ಪರಿಸ್ಥಿತಿ ಬರಲಿ ಎದುರಿಸಲು ಕಲಿಸಿದೆ' ಎಂದು ಹೇಳಿದ್ದರು. ಬಹುಶಃ ರತನ್ ಟಾಟಾ ಮದುವೆಯಾಗದೆ ಉಳಿಯಲು ತಂದೆ-ತಾಯಿಯ ವಿಚ್ಚೇದನ ಅವರ ಮೇಲೆ ಬೀರಿದೆ ಕೆಟ್ಟ ಪ್ರಭಾವ ಕೂಡ ಒಂದು ಕಾರಣವಾಗಿರಬಹುದು.
ರತನ್ ಟಾಟಾ ಸಮಸ್ತ ಭಾರತೀಯರ ಪ್ರೀತಿ ಗಳಿಸಿದ್ದಾರೆ
ರತನ್ ಟಾಟಾ ಎಂದರೆ ಇಡೀ ಭಾರತೀಯರಿಗೆ ಗೌರವ, ಅವರು ಉದ್ಯಿ ಎಂಬ ಕಾರಣಕ್ಕಲ್ಲ, ಸಮಾಜಕ್ಕೆ ಅವರು ನೀಡಿರುವ ಕೊಡುಗೆಯಿಂದಾಗಿ ಎಲ್ಲರ ಪ್ರೀತಿಯ ರತನ್ ಟಾಟಾ ಆಗಿದ್ದಾರೆ. ಹೋಗಿ ಬನ್ನಿ ರತನ್ ಟಾಟಾ... ಮತ್ತೊಮ್ಮೆ ಹುಟ್ಟಿ ಬನ್ನಿ, ಭಾರತಕ್ಕೆ ನಿಮ್ಮಂಥವರ ಅವಶ್ಯಕತೆಯಿದೆ....



Click it and Unblock the Notifications