Latest Updates
-
ಹಾಲುಣಿಸುವ ತಾಯಂದಿರೇ ಗಮನಿಸಿ: ಬೆನ್ನು ಮತ್ತು ಕುತ್ತಿಗೆ ನೋವು ಮರೆಯಾಗಲು ಈ 8 ನಿಮಿಷದ ವ್ಯಾಯಾಮ ಸಾಕು! -
ಐಟಿಆರ್ ಗಡುವು ಮಿಸ್ ಆಯ್ತಾ? ದಂಡ ತಪ್ಪಿಸಲು ಈಗಲೇ ಈ ಕೆಲಸ ಮಾಡಿ, ಆರ್ಥಿಕ ನಷ್ಟದಿಂದ ಪಾರಾಗಿ! -
ಕರ್ನಾಟಕದಲ್ಲಿ ಭಾರಿ ಮಳೆ: ನಿಮ್ಮ ಮನೆ ಮತ್ತು ಕುಟುಂಬವನ್ನು ಸುರಕ್ಷಿತವಾಗಿಡಲು ಇಂದೇ ಈ ಕೆಲಸ ಮಾಡಿ! -
ಪೀನಟ್ ಬಟರ್ನಲ್ಲಿ ವಿಷಕಾರಿ ಶಿಲೀಂಧ್ರ? ನಿಮ್ಮ ಆರೋಗ್ಯ ಕಾಪಾಡಲು ಈ ವಿಷಯಗಳನ್ನು ಮರೆಯದಿರಿ -
ಫ್ರೆಂಡ್ಶಿಪ್ ಡೇ: ಕೊನೆಯ ನಿಮಿಷದಲ್ಲಿ ಸ್ನೇಹಿತರಿಗೆ ನೀಡಲು 499 ರೂ. ಒಳಗಿನ ಬೆಸ್ಟ್ ಗಿಫ್ಟ್ ಐಡಿಯಾಗಳು! -
CWG 2026: ಗಂಟೆಗಟ್ಟಲೆ ಟಿವಿ ಮುಂದೆ ಕುಳಿತು ಪಂದ್ಯ ನೋಡುವಿರಾ? ಈ 8 ನಿಮಿಷದ ವರ್ಕೌಟ್ ಮಿಸ್ ಮಾಡ್ಬೇಡಿ! -
ಶ್ರಾವಣ ಮಾಸದ ಉಪವಾಸ: ದಂಪತಿಗಳೇ, ಹಬ್ಬದ ಆಚರಣೆಯಲ್ಲಿ ಗೊಂದಲ ಬೇಡ, ಈ ಟಿಪ್ಸ್ ಫಾಲೋ ಮಾಡಿ! -
ಬೆಂಗಳೂರಿನಲ್ಲಿ ಹೊಸ ನಿಯಮ: ಆಗಸ್ಟ್ 15ರೊಳಗೆ ನಿಮ್ಮ ಮನೆ ಸ್ವಚ್ಛಗೊಳಿಸದಿದ್ದರೆ ಬೀಳಲಿದೆ ಭಾರಿ ದಂಡ! -
ಎನರ್ಜಿ ಡ್ರಿಂಕ್ಸ್ ಪ್ರಿಯರೇ ಎಚ್ಚರ! FSSAI ಹೊಸ ನಿಯಮದ ಹಿಂದಿನ ಅಸಲಿ ಸತ್ಯವೇನು? -
ಭಾರತದ ಆಕಾಶದಲ್ಲಿ ಬೆಂಕಿಯ ಉಂಡೆಗಳ ಸಂಭ್ರಮ: ಈ ಅದ್ಭುತ ಉಲ್ಕಾಪಾತವನ್ನು ಮಿಸ್ ಮಾಡ್ಬೇಡಿ!
ಸ್ವಂತ ಅಣ್ಣನಿಲ್ಲ ಎಂಬ ಚಿಂತೆಯೇ ಇಲ್ಲ, ಏಕೆಂದರೆ ನನಗಿದ್ದಾನೆ 'A Brother from Another Mother'
ನನಗೆ ಸ್ವಂತ ಅಣ್ಣ ಇಲ್ಲದಿದ್ದರೂ,ನನ್ನ ಸ್ವಂತ ಅಣ್ಣನಷ್ಟೇ ಪ್ರೀತಿಸುವ ಇಬ್ಬರು ಅಣ್ಣಂದಿರಿದ್ದಾರೆ. ಸಣ್ಣವಳಿದ್ದಾಗಿನಿಂದ ಅವರೊಂದಿಗೆ ಅಷ್ಟು ಒಟ್ಟಿಗೆ ಇದ್ದವಳಲ್ಲ.ಊರಿಗೆಂದು ಬಂದಾಗ ಮಾತ್ರ ಅವರೊಂದಿಗೆ ನನ್ನ ಮಾತುಕತೆ,ಆದರೂ ಆ ಸ್ವಲ್ಪ ಸಮಯದಲ್ಲೇ ಗಲಾಟೆ, ಕೀಟಲೆ,ಕೋಪ ಎಲ್ಲ ನಡೆಯುತ್ತಿದ್ದವು.

ನನಗೂ ಒಬ್ಬ ಅಣ್ಣ ಇರಬೇಕಿತ್ತು,ನಾನು ಹೇಳಿದ್ದನ್ನೆಲ್ಲ ಕೊಡಿಸುತ್ತಿದ್ದ ಎನ್ನುವ ನನ್ನ ಮಾತಿಗೆ ಈಗ ಪೂರ್ಣ ವಿರಾಮ ಇಟ್ಟಿದ್ದೇನೆ. ಸಣ್ಣವಳಿದ್ದಾಗಿನಿಂದ ನಾನು ಅಷ್ಟು ಇವರೊಂದಿಗೆ ಬೆರೆಯದಿದ್ದರೂ ಈಗ ಅವರೊಂದಿಗೆ ಸಮಯ ಕಳೆಯುವುದೇ ನನಗೆ ಖುಷಿಯ ವಿಚಾರ.ನಾವು ಸಣ್ಣವರಿದ್ದಾಗ ಆಡಿದ ಆಟಗಳಾದ ಲಗೋರಿ, ಕ್ರಿಕೆಟ್ ಹಾಗೂ ಇತರೆ ಆಟಗಳನ್ನು ಈಗಲೂ ಆಡುತ್ತಿದ್ದೇವೆ ಎನ್ನುವುದೇ ನನಗೆ ಖುಷಿ.
ದೊಡ್ಡವರಾಗುತ್ತಾ ಹೋದ ಹಾಗೆ ಸಂಬಂಧಗಳನ್ನು ಮರೆಯುತ್ತೇವೆ ಎಂದು ಎಷ್ಟೋ ಜನ ಹೇಳುತ್ತಾರೆ,ಆದರೆ ನಮಗೆ ಆ ಚಿಂತೆ ಇಲ್ಲ ನಾವು ಸಣ್ಣವರಿದ್ದಾಗ ಹೇಗಿದ್ದೆವು ಇನ್ನೂ ಹಾಗೆ ಇದ್ದೇವೆ. ಈ 'ತ್ರಿ' ವರ್ಷದಿಂದ ನನಗೆ ಹತ್ತಿರವಾದವರೆ ನನ್ನ ಅಣ್ಣಂದಿರಾದ ತ್ರಿಭುವನ್ ಹಾಗೂ ತ್ರಿಲೋಚನ್.ನಾನು ಏನೇ ತಪ್ಪು ಮಾಡಿದರೂ ಕ್ಷಮಿಸಿ, ನನಗೆ ಬುದ್ಧಿ ಹೇಳಿದವರು.ನಾನು ಕೋಪ ಮಾಡಿಕೊಂಡರು ಕ್ಷಣಮಾತ್ರದಲ್ಲಿ ಅದನ್ನು ಮಾಯ ಮಾಡಿ ಮತ್ತೆ ನನ್ನ ನಗಿಸುವವರು.ನಾನು ಕೇಳಿದಾಗಲೆಲ್ಲ,ಕೇಳಿದಾಗ ಅಂತ ಅಲ್ಲ ಕೇಳದಿದ್ದರೂ ನನಗೆ ಬೇಕಾದ ಚಾಕಲೇಟ್,ಐಸ್ ಕ್ರೀಮ್ ತಂದು ಕೊಡುವವರು. ಅದೇನೋ ಗೊತ್ತಿಲ್ಲ ಅವರೊಂದಿಗೆ ಇರುವಾಗ ನಾನು ಸಣ್ಣ ಮಗುವಂತೆ ಆಗಿಬಿಟ್ಟಿರುತ್ತೇನೆ.ನನ್ನ ಮುಖದಲ್ಲಿ ಖುಷಿ ಅಥವಾ ಎಂಜಾಯ್ಮೆಂಟ್ ಇದ್ದರೆ ಅದಕ್ಕೆ ಮುಖ್ಯ ಕಾರಣ ಇವರೇ ಎಂದು ಹೇಳಬಹುದು ಹಾಗಾಗಿ ಈ ನನ್ನ ಅಣ್ಣಂದಿರಿಗೆ ರಕ್ಷಾಬಂಧನದ ಶುಭಾಶಯಗಳು.
ಬಿ.ಶರಣ್ಯ ಜೈನ್
ತೃತೀಯ ಪತ್ರಿಕೋದ್ಯಮ
ಎಸ್.ಡಿ.ಎಂ ಕಾಲೇಜು ಉಜಿರೆ
ನನ್ನ ಬದುಕಿನಲ್ಲಿ ದೇವರು ಕೊಟ್ಟ ಈ ಸಹೋದರರು ಇರುವಾಗ ನನಗ್ಯಾವ ಚಿಂತೆ
ನನಗೆ ಒಬ್ಬ ಒಡಹುಟ್ಟಿದ ಅಣ್ಣನೋ, ತಮ್ಮನೋ ಇರಬೇಕಿತ್ತು ಎಂದು ಯಾವುತ್ತೂ ಅನಿಸಿದ್ದಿಲ್ಲ. ಹೆಣ್ಮಕ್ಕಳಿಗೆ ಅಣ್ಣ ಎಂಬ ಸಂಬಂಧದ ಮೌಲ್ಯ ಅರಿಯುವುದು ಕಷ್ಟದ ಸಂದರ್ಭದಲ್ಲಿ, ಹಾಗಂತ ನನಗೆ ಕಷ್ಟನೇ ಬಂದಿರಲಿಲ್ಲ ಎಂದಲ್ಲ ಆದರೆ ಆ ದೇವರು ಎ ಬ್ರದರ್ ಫ್ರಂ ಅನದರ್ ಮದರ್ ಕಳುಹಿಸಿಕೊಡುತ್ತಿದ್ದ, ನನ್ನ ಬದುಕಿನಲ್ಲಿ ಒಡಹುಟ್ಟಿದ ಸಹೋದರರು ಇದ್ದರೆ ಮಾಡುವ ಅಷ್ಟೂ ಕರ್ತವ್ಯೂ ಅವರು ಮಾಡಿದ್ದಾರೆ, ಹಾಗಾಗಿ ಈ ಸಹೋದರರಿಗೆ ಹಾಗೂ ಅವರನ್ನು ನನ್ನ ಬದುಕಿನಲ್ಲಿ ಕೊಟ್ಟ ದೇವರಿಗೆ ಕೃತಜ್ಞತೆಗಳು.
ನಮ್ಮ ಅಪ್ಪ-ಅಮ್ಮನಿಗೆ ನಾವು ಮೂವರು ಹೆಣ್ಮಕ್ಕಳು, ನಾಬನು ಒಂಭತ್ತನೇ ತರಗತಿಯಲ್ಲಿದ್ದೆ ಆವಾಗ ನಮ್ಮ ತಂದೆಗೆ ಪಾರ್ಶ್ವವಾಯು ಉಂಟಾಗಿ ಹಾಸಿಗೆ ಹಿಡಿಯುತ್ತಾರೆ, ಮಲಗಿದ್ದಲ್ಲಿಯೇ ಎಲ್ಲವೂ, ಈ ಸಂದರ್ಭದಲ್ಲಿ ಒಂದು ಗಂಡು ಮಗು ಇದ್ದಿದ್ದರೆ ಅಪ್ಪನ ಜೊತೆ ಇರ್ತಿದ್ದ ಎಂದು ಅನಿಸದಂತೆ ನೋಡಿಕೊಂಡರು ಪಕ್ಕದ ಮನೆಯ ಸಂತೋಷಣ್ಣ, ಆಸ್ಪತ್ರೆಯಲ್ಲಿಯೇ ಅವರ ಜೊತೆ ನಿಂತು ಅವರ ಆರೈಕೆ ಮಾಡಿದರು. ಇದಕ್ಕೆ ಅವರಿಗೆ ಎಷ್ಟು ಕೃತಜ್ಞತೆ ಹೇಳಿದರೂ ಸಾಲದು, ನಂತರ ಅಣ್ಣನ ಸ್ಥಾನ ತುಂಬಿದವರು ಭಾವ, ಒಬ್ಬ ಅನ್ಣ ಇದ್ದಿದ್ದರೆ ಎಷ್ಟೊಂದು ಜವಾಬ್ದಾರಿ ತೆಗೆದುಕೊಳ್ಳುತ್ತಿದ್ದೆನೋ ಅಷ್ಟು ಅವರು ವಹಿಸಿಕೊಂಡಿದ್ದಕ್ಕೆ ಸ್ವಂತ ಅಣ್ಣ ಇರಲೇಬೇಕೆಂದು ಅನಿಸಲೇ ಇಲ್ಲ, ನಂತರ ನನ್ನ ಬದುಕಿನಲ್ಲಿ ಕಸಿನ್ಸ್ ಪಾತ್ರ ಕೂಡ ತುಂಬಾ ದೊಡ್ಡದಿದೆ.
ನನಗೆ ಒಂದು ಕಷ್ಟ ಅಂತ ಬರಲಿ ಒಡಹುಟ್ಟಿದ ಸಹೋದರರಂತೆಯೇ ಬಂದು ನಿಲ್ಲುವವರು ನನ್ನ ಕಸಿನ್ಸ್, ಹೀಗಾಗಿ ನನಗೆ ಇದುವರೆಗೆ ನನ್ನ ಸ್ವಂತ ಅಣ್ಣ ಇರಬೇಕೆಂದು ಅನಿಸಲೇ ಇಲ್ಲ, ನನ್ನ ಬದುಕಿನಲ್ಲಿ ಸ್ವಂತ ಸಹೋದರರ ಸ್ಥಾನ ತುಂಬಿರುವ ಎಲ್ಲರಿಗೂ ರಕ್ಷಾ ಬಂಧನದ ಶುಭಾಶಯಗಳು....
ಮಂಜು



Click it and Unblock the Notifications