Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಮಗನ ಆರೋಗ್ಯಕ್ಕಾಗಿ ಚಾಮುಂಡಿ ಬೆಟ್ಟದಲ್ಲಿ ಉರುಳು ಸೇವೆ ಮಾಡಿದ ತಂದೆ: ಇದನ್ನು ನೋಡಿದರೆ ಕರಗದ ಕಲ್ಲು ಮನಸ್ಸುಗಳೇ ಇಲ್ಲ
ದೇವರು ಎಲ್ಲಾ ಕಡೆ ಇರಲ್ಲ ಅಂತ ಅಪ್ಪ-ಅಮ್ಮನ ನೀಡಿದ ಎಂಬ ಮಾತು ಈ ವೀಡಿಯೋ ನೋಡಿದಾಗ ಸತ್ಯ ಅನಿಸದೆ ಇರಲ್ಲ. ಅಪ್ಪ-ಅಮ್ಮ ತಮಗೆ ಎಷ್ಟೇ ಕಷ್ಟವಾಗಲಿ ಮಕ್ಕಳಿಗೆ ಏನೂ ಆಗಬಾರದು ಎಂದು ಬಯಸುತ್ತಾರೆ.
ಅಪ್ಪ-ಅಮ್ಮ ಮಕ್ಕಳಿಗಾಗಿ ಎಷ್ಟು ತ್ಯಾಗ ಮಾಡುತ್ತಾರೆ ಎಂಬುವುದು ನಮಗೆ ಮಕ್ಕಳಾದಾಗ ಮಾತ್ರ ತಿಳಿಯುತ್ತದೆ. ಎಷ್ಟೋ ರಾತ್ರಿಗಳಲ್ಲಿ ನಿದ್ದೆಯಿಲ್ಲದೆ ಮಕ್ಕಳನ್ನು ಜೋಪಾನ ಮಾಡಿರುತ್ತಾರೆ. ಅವರು ಜ್ವರದಿಂದ ಬಳಲುವಾಗ ಇಡೀ ರಾತ್ರಿ ಕಣ್ರೆಪ್ಪೆ ಮುಚ್ಚದೆ ಮಕ್ಕಳನ್ನು ನೋಡಿಕೊಳ್ಳುತ್ತಾರೆ.

ಕಷ್ಟಪಟ್ಟು ದುಡಿದು ಮಕ್ಕಳನ್ನು ಓದಿಸುತ್ತಾರೆ, ಅವರಿಗೆ ಅವರು ಬಯಸಿದ ಆಹಾರ ನೀಡಲು ಕಷ್ಟಪಟ್ಟು ಶ್ರಮಿಸುತ್ತಾರೆ. ಇಷ್ಟೆಲ್ಲಾ ಕಷ್ಟ ಪಡುವ ಅಮ್ಮ-ಅಪ್ಪ ನಮ್ಮ ವಯಸ್ಸು ಕಾಲದಲ್ಲಿ ಮಕ್ಕಳು ಬಲವಾಗಿರುತ್ತಾರೆ ನಾವು ನೆಮ್ಮದಿಯಿಂದ ಇರಬಹುದು ಎಂದು ಬಯಸುತ್ತಾರೆ.
ಆದರೆ ಈ ವಯಸ್ಸಾದ ಅಪ್ಪ-ಅಮ್ಮನಿಗೆ ಈ ಇಳಿ ವಯಸ್ಸಿನಲ್ಲಿ ಮಗನ ಚಿಂತೆ ಕಾಡಿದೆ, ಮಗ ಕಾಯಿಲೆ ಬಿದ್ದು ಮಲಗಿದ್ದಲ್ಲಿಯೇ ಆಗಿದ್ದಾನೆ. ಅಪ್ಪ-ಅಮ್ಮ ಮಗನಿಗೆ ಚಿಕಿತ್ಸೆ ಕೊಡಿಸಿ ನೋಡುತ್ತಾರೆ, ಬಯಸಿದ ಫಲ ಸಿಗದೇ ಇದ್ದಾಗ ಚಾಮುಂಡೇಶ್ವರಿ ತಾಯಿ ಬಳಿ ಉರುಳು ಸೇವೆ ಮಾಡಿ ಬೇಡಿಕೊಳ್ಳುತ್ತಿರುವ ವೀಡಿಯೋ ಎಂಥವರ ಕಣ್ಣನ್ನೂ ಒದ್ದೆಗೊಳಿಸುತ್ತದೆ.
ಈ ವೀಡಿಯೋವನ್ನು askmysore ಇನ್‌ಸ್ಟಾ ಸಾಮಾಜಿಕ ತಾಣದಲ್ಲಿ ಹಂಚಿಕೊಂಡಿದ್ದು ಆ ವೃದ್ಧ ದಂಪತಿ ನೋಡುವಾಗ ಅಯ್ಯೋ ಅನಿಸದೆ ಇರಲ್ಲ. ಚಾಮುಂಡೇಶ್ವರಿ ಅವರ ಮಗನನ್ನು ಬೇಗ ಹುಷಾರಿ ಮಾಡಲಿ ದೇವರೇ ಎಂದು ಅದನ್ನು ನೋಡಿದವರು ಬೇಡಿಕೊಳ್ಳುತ್ತಾರೆ, ಹಾಗಿದೆ ಆ ವೀಡಿಯೋ..... ಈ ವೃದ್ಧ ದಂಪತಿಯನ್ನು ಚೆನ್ನಾಗಿಡುವಂತೆ ಆ ಮಗನನ್ನು ಹುಷಾರು ಮಾಡಲಿ ಎಂದು ಜನರು ಕಮೆಂಟ್ ಮಾಡುತ್ತಿದ್ದಾರೆ.
ತಾಯಿ-ತಂದೆ ಋಣ ತೀರಿಸಲು ಸಾಧ್ಯವಿಲ್ಲ
ತಂದೆ-ತಾಯಿ ಋಣ ತೀರಿಸಲು ಯಾವ ಮಕ್ಕಳಿಗೂ ಸಾಧ್ಯವಿಲ್ಲ. ಮಕ್ಕಳನ್ನು ಹುಟ್ಟಿಸಿ ಅವರನ್ನು ಒಂದು ಹಂತಕ ತರುವಲ್ಲಿ ಆ ತಂದೆ ತಾಯಿ ಅಷ್ಟೊಂದು ಕಷ್ಟಪಟ್ಟಿರುತ್ತಾರೆ, ಮಕ್ಕಳೇ ಅವರ ಪಾಲಿನ ದೊಡ್ಡ ಆಸ್ತಿಯಾಗಿರುವುದರಿಂದ ಕಣ್ಣನ್ನು ಕಣ್ರೆಪ್ಪೆ ಕಾಪಾಡುವಷ್ಟು ಜೋಪಾನ ಮಾಡುತ್ತಾರೆ. ಅದರಲ್ಲಿಯೂ ಸ್ವಲ್ಪ ಬಡ ದಂಪತಿಯಾದರೆ ಅವರಿಗೆ ಮಕ್ಕಳನ್ನು ಸಾಕಿ ದೊಡ್ಡದು ಮಾಡುವುದು ಅಷ್ಟು ಸುಲಭವಲ್ಲ, ತಮ್ಮ ಹೊಟ್ಟೆ ಕಟ್ಟಿ ಮಕ್ಕಳ ಹಿಟ್ಟೆ ತುಂಬಿಸುತ್ತಾರೆ. ಅಂಥ ಮಕ್ಕಳಿಗೆ ಏನಾದರೂ ಆದರೆ ಪೋಷಕರಿಗೆ ಸಹಿಸಲು ಸಾಧ್ಯವಾಗುವುದಿಲ್ಲ.
ಮಕ್ಕಳು ಪೋಷಕರನ್ನು ಎಷ್ಟು ಚೆನ್ನಾಗಿ ನೋಡಿಕೊಳ್ಳುತ್ತಾರೆ ಅಷ್ಟು ಬೆಳೆಯುತ್ತಾರೆ
ಕೆಲ ಮಕ್ಕಳಿಗೆ ವಯಸ್ಸಾದ ಪೋಷಕರು ಭಾರ ಅನಿಸಲಾರಂಭಿಸುತ್ತದೆ, ಹಾಗಾಗಿ ಅವರನ್ನು ಬೀದಿಗೆ ತಳ್ಳುತ್ತಾರೆ, ಕೆಲವರು ಅನಾಥಾಶ್ರಮಕ್ಕೆ ಸೇರಿಸುತ್ತಾರೆ. ಇಷ್ಟು ವರ್ಷ ತಮ್ಮೆಲ್ಲಾ ಶಕ್ತಿಯನ್ನು ಮಕ್ಕಳಿಗಾಗಿ ಹಾಕಿದ ಪೋಷಕರು ಕಣ್ಣೀರಿನಲ್ಲಿ ಕೈ ತೊಳೆಯುವಂತಾಗುವುದು, ಇಂಥ ವೀಡಿಯೋ ನೋಡಿದರೆ ಖಂಡಿತ ಅಂಥ ಮಕ್ಕಳಿಗೆ ಪಶ್ಚತಾಪವಾಗುವುದು, ಮಕ್ಕಳ ಕಣ್ತೆರಿಸುವಂತಿದೆ ಈ ವೃದ್ಧ ದಂಪತಿ ಮಾಡುವ ಕಾರ್ಯ.
ತಂದೆ ಪ್ರೀತಿ ಎಷ್ಟೋ ಬಾರೊ ಗೊತ್ತಾಗುವುದೇ ಇಲ್ಲ
ಎಷ್ಟೋ ಸಮಯದಲ್ಲಿ ತಂದೆ ಪ್ರೀತಿ ಗೊತ್ತಾಗುವುದೇ ಇಲ್ಲ, ಅವರು ಕಲ್ಲು ಮನಸ್ಸಿನವರು ಎಂದು ಭಾವಿಸುತ್ತೇವೆ, ಆದರೆ ತಂದೆಯ ಪ್ರೀತಿ ಕೂಡ ತಾಯಿಯಷ್ಟೇ ಆಳವಾಗಿ ಇರುತ್ತದೆ. ತಂದೆ ಪ್ರೀತಿ ಗೊತ್ತಾಗುವುದು ಇಂಥ ಕೆಲ ಸಂದರ್ಭದಲ್ಲಿ ಮಾತ್ರ, ಅಪ್ಪ ಎಂದರೆ ಆಕಾಶ, ಅಮ್ಮ ಎಂದರೆ ಭೂಮಿ, ಈ ಎರಡೂ ನಮ್ಮ ರಕ್ಷಣೆ ಮಾಡುತ್ತದೆ. ತಂದೆ-ತಾಯಿಯನ್ನು ಅವರ ಕೊನೆಯವರೆಗೂ ಚೆನ್ನಾಗಿ ನೋಡಿಕೊಳ್ಳುವ ಮಕ್ಕಳೇ ಜೀವನದಲ್ಲಿ ಖುಷಿ ಕಾಣಲು ಸಾಧ್ಯ.



Click it and Unblock the Notifications