Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಆಂಧ್ರದಲ್ಲಿ ಮನೆಯೊಳಗಡೆಯೇ ಮೃತ ಪತಿಗೆ ಬೆಂಕಿಯಿಟ್ಟ ಪತ್ನಿ: ಮಕ್ಕಳಿಬ್ಬರು ಡಾಕ್ಟರ್, ಆದರೂ ಆಕೆ ಅನಾಥೆ!
ಆಂಧ್ರಪ್ರದೇಶದಲ್ಲಿ ಇತ್ತೀಚೆಗೆ ನಡೆದ ಒಂದು ಘಟನೆ ನೋಡಿದಾಗ ಈ ಸಮಾಜ ಎತ್ತ ಸಾಗುತ್ತಿದೆ ಎಂಬ ಆತಂಕ ಮೂಡಿಸುವಂತಿದೆ. ಆಂಧ್ರಪ್ರದೇಶದ ಕುರ್ನೂಲ್ ಎಂಬ ಜಿಲ್ಲೆಯಲ್ಲಿ ನಡೆದಂಥ ಘಟನೆ. ಇಬ್ಬರು ವೃದ್ಧ ದಂಪತಿ ವಾಸಿಸುತ್ತಿರುವ ಮನೆಯದು. ಮಕ್ಕಳಿಬ್ಬರು ದೊಡ್ಡ ಹುದ್ದೆಯಲ್ಲಿರುತ್ತಾರೆ.
ಒಬ್ಬರು ವೈದ್ಯರು, ಮತ್ತೊಬ್ಬರು ಕೆನಡಾದಲ್ಲಿ ಡಾಕ್ಟರ್, ಲಕ್ಷಗಟ್ಟಲೆ ಸಂಬಳ ದುಡಿಯುವಂಥ ಮಕ್ಕಳು. ಮಕ್ಕಳು ಇಷ್ಟು ದೊಡ್ಡ ಹುದ್ದೆಯಲ್ಲಿರುವಾಗ ಆ ತಂದೆ-ತಾಯಿಯನ್ನು ಆ ಮಕ್ಕಳು ಅದೆಷ್ಟು ಚೆನ್ನಾಗಿ ನೋಡಿಕೊಳ್ಳುತ್ತಿರಬಹುದು ಎಂದು ನೀವೆಂದುಕೊಂಡಿದ್ದರೆ ಆ ತಾಯಿ ಮಾಡಿದ ಕೆಲಸ ನೋಡಿದರೆ ಛೀ.. ಎಂಥ ಮಕ್ಕಳಿದ್ದಾರಪ್ಪಾ ಎಂದನಿಸದೆ ಇರಲ್ಲ.

ಆ ತಾಯಿ ಹೆಸರು ಲಲಿತಾ, ಗಂಡನ ಹೆಸರು ಹರಿಕೃಷ್ಣಾ ಪ್ರಸಾದ್ (60). ಇವರು ಪಟ್ಟಿಕೊಂಡ ಟೌನ್‌ನ ಚಿಂತಕಯಲ ಬೀದಿಯ ನಿವಾಸಿಗಳು. ಒಂದು ದಿನ ಜನ ನೋಡುತ್ತಾರೆ. ಆ ದಂಪತಿ ಇರುವ ಮನೆಯೊಳಗಡೆಯಿಂದ ದಟ್ಟ ಹೊಗೆ ಬರುತ್ತಿರುತ್ತದೆ, ಅದನ್ನು ನೋಡಿದವರೊಬ್ಬರು ಪೊಲೀಸರಿಗೆ ಫೋನ್ ಮಾಡುತ್ತಾರೆ, ಪೋಲಿಸರು ಬಂದು ನೋಡಿದಾಗ ಹರಿಕೃಷ್ಣಾ ಅವರ ದೇಹ ಮನೆಯೊಳಗಡೆಯೇ ಉರಿಯುತ್ತಿರುತ್ತದೆ, ಅವರ ಪತ್ನಿ ಲಲಿತಾ ಮನೆಯೊಳಗಡೆಯೇ ಪತಿಯ ಪಾರ್ಥೀವ ಶರೀರಕ್ಕೆ ಮುಕ್ತಿ ನೀಡಲು ರಟ್‌ಗಳನ್ನು ತಂದು ಹಾಕಿ ಬೆಂಕಿ ನೀಡಿರುತ್ತಾರೆ.
ಮೃತದೇಹ ಶೇ. 90ರಷ್ಟು ಸುಟ್ಟು ಹೋಗಿತ್ತು. ಪೊಲೀಸರು ಲಲಿತಮ್ಮ ಬಳಿ ಹೀಗ್ಯಾಕೆ ಮಾಡಿದ್ದೀರಿ ಎಂದು ಕೇಳಿದಾಗ.. ನನ್ನ ಸಹಾಯಕ್ಕೆ ಯಾರೂ ಇಲ್ಲ ಹೀಗಾಗಿ ಈ ರೀತಿ ಮಾಡಬೇಕಾಯಿತು ಎಂದು ಹೇಳುತ್ತಾರೆ..... ಎರಡು ಮಕ್ಕಳು ಈ ಸಮಾಜದಲ್ಲಿ ದೊಡ್ಡ ಪದವಿಯಲ್ಲಿದ್ದು ಲಕ್ಷುರಿ ಬದುಕು ನಡೆಸುತ್ತಿರುವಾಗ ಈ ಬಡ ಜೀವಕ್ಕೆ ನನಗೆ ಸಹಾಯ ಮಾಡಲು ಯಾರೂ ಇಲ್ಲ ಎಂದು ಹೇಳಿದರು ಎಂದರೆ ಮಕ್ಕಳಿದ್ದರೂ ಆ ತಾಯಿಗೆ ಅದೆಷ್ಟು ಅನಾಥ ಭಾವ ಕಾಡಿರಬಹುದು ಊಹಿಸಿ.
2016ರಲ್ಲಿ ಹರಿಕೃಷ್ಣ ಅವರಿಗೆ ಮೊದಲ ಬಾರಿ ಹೃದಯಾಘಾತ ಸಂಭವಿಸಿತ್ತು, ಅದಾದ ಬಳಿಕ ಚೇತರಿಸಿಕೊಂಡರು ಸಂಪೂರ್ಣವಾಗಿ ಚೇತರಿಸಿಕೊಂಡಿರಲಿಲ್ಲ, ಬೆಡ್‌ನಲ್ಲಿಯೇ ಇದ್ದರು. ಪತ್ನಿ ಗಂಡ ಮೆಡಿಕಲ್ ಶಾಪ್ ನಡೆಸುತ್ತಿದ್ದರು. ಗಂಡ-ಹೆಂಡತಿಯ ಕಷ್ಟ-ಸುಖ ಕೇಳಲು ಮಕ್ಕಳು ಬರುತ್ತಿರಲಿಲ್ಲ. ಒಂದು ವರದಿಯ ಪ್ರಕಾರ ಮಕ್ಕಳಿಬ್ಬರ ನಡುವೆ ಇವರ ಆಸ್ತಿಗಾಗಿ ಕಿತ್ತಾಟ ನಡೆಯುತ್ತಿತ್ತು.
ಪತಿ ತೀರಿಹೋದರು ಎಂದು ಗೊತ್ತಾದರೆ ಇಬ್ಬರು ನಡುವೆ ಆಸ್ತಿ ವಿಷಯಕ್ಕೆ ಕಿತ್ತಾಟ ಬರಬಹುದು ಎಂದು ಗೊತ್ತಿದ್ದ ಲಲಿತಮ್ಮ ಯಾರಿಗೂ ಗೊತ್ತಾಗದಂತೆ ಗಂಡನ ದೇಹವನ್ನು ಸುಟ್ಟು ಹಾಕಲು ಪ್ರಯತ್ನಿಸಿದ್ದಾರೆ. ಮಕ್ಕಳಿದ್ದು ಅದರಲ್ಲೂ ಅಷ್ಟೊಂದು ದೊಡ್ಡ ಹುದ್ದೆಗೆ ಮಕ್ಕಳನ್ನು ಬೆಳೆಸಿ ಅವರಿಂದ ತಂದೆ-ತಾಯಿಗೆ ಸಿಕ್ಕಿರುವ ಪ್ರತಿಫಲ ಎಂಥದ್ದು ಯೋಚಿಸಿ...
ಮಕ್ಕಳ ಪ್ರೀತಿ, ಅವರ ಆರೈಕೆ ಸಿಕ್ಕಿದ್ದರೆ ಲಲಿತಮ್ಮ ತಮ್ಮ ಪತಿಯನ್ನು ಮನೆಯೊಳಗಡೆ ಸುಡುವ ಪರಿಸ್ಥಿತಿ ಬರುತ್ತಿರಲಿಲ್ಲ. ಈಗ ಆ ತಾಯಿಗೆ ತಲೆ ಸರಿಯಿಲ್ಲ ಎಂಬ ಪಟ್ಟವನ್ನು ಕೂಡ ಕಟ್ಟಲಾಗಿದೆ, ಒಬ್ಬ ಮಾನಸಿಕ ಅಸ್ವಸ್ಥತೆ ಒಂದು ಮೆಡಿಕಲ್ ಶಾಪ್ ನಡೆಸಲು ಸಾಧ್ಯವೇ? ಇಲ್ಲಿ ಮಕ್ಕಳ ನಿರ್ಲಕ್ಷ್ಯ ಎದ್ದು ಕಾಣುತ್ತಿಲ್ಲವೇ, ಇಬ್ಬರು ಮಕ್ಕಳು ವೈದ್ಯರಾಗಿದ್ದು ಅನಾಥರಂತೆ ಸಾಯಬೇಕಾಗಿರುವುದರಿಂದ ಆ ತಾಯಿ ಹೃದಯ ಎಷ್ಟು ನೊಂದುಕೊಂಡಿರಬೇಡ?
ಮಕ್ಕಳು... ಮಕ್ಕಳು ಎಂದು ಪೋಷಕರು ತಮ್ಮೆಲ್ಲಾ ಆಸೆ, ಕನಸುಗಳನ್ನು ಬದಿಗೊತ್ತಿ, ತಮ್ಮ ಬೆವರು ಸುರಿಸಿದ ಅಷ್ಟೂ ಸಂಪತ್ತನ್ನು ಮಕ್ಕಳ ಮೇಲೆ ಸುರಿಯುತ್ತಾರೆ. ಮಕ್ಕಳು ಚೆನ್ನಾಗಿ ಓದಿ ಒಳ್ಳೆಯ ಹುದ್ದೆಯಲ್ಲಿ ಸೇರುವಂತಾದರೆ ಸಾಕಪ್ಪಾ ಎಂಬ ಆಸೆಯಿಂದ ಮಕ್ಕಳು ಇಷ್ಟಪಟ್ಟಿದ್ದೆಲ್ಲಾ ಕೊಡಿಸುತ್ತಾರೆ. ಅವರು ಬೆಳೆದು ದೊಡ್ಡವರಾದ ಪೋಷಕರು ಮಾಡಿಟ್ಟ ಆಸ್ತಿ ಬೇಕು, ಆದರೆ ಪೋಷಕರು ಬೇಡ, ನೀವು ವೃದ್ಧಾಶ್ರಮಕ್ಕೆ ಹೋಗಿ ಅಲ್ಲಿದ್ದವರ ಕತೆ ಕೇಳಿದರೆ ಅಲ್ಲಿ ಯಾರ ಮಕ್ಕಳು ದಿನಗೂಲಿಗಳಾಗಿರುವುದಿಲ್ಲ, ಕೈ ತುಂಬಾ ಸಂಬಳ ಪಡೆಯುತ್ತಿರುತ್ತಾರೆ, ವಿದೇಶದಲ್ಲಿ ನೆಲೆಸಿರುತ್ತಾರೆ, ಬೇಕಾದಷ್ಟು ಆಸ್ತಿ ಇರುತ್ತದೆ, ಆದರೆ ಪೋಷಕರು ಮಾತ್ರ ಅವರಿಗೆ ಭಾರವಾಗಿರುತ್ತದೆ... ಏನಾಗಿದೆ ಈ ಸಮಾಜಕ್ಕೆ?



Click it and Unblock the Notifications
