Latest Updates
-
ತೆಲಂಗಾಣದಲ್ಲಿ ಭಾರಿ ಮಳೆ: ಮಳೆಯಲ್ಲಿ ವಾಕಿಂಗ್ ಹೋಗುವ ಮುನ್ನ ಈ ಸುರಕ್ಷತಾ ಟಿಪ್ಸ್ ಮರೆಯದಿರಿ -
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು?
ಮೂವರು ಗಂಡು ಮಕ್ಕಳಿದ್ದರೂ ಕೊನೆಗಾಲದಲ್ಲಿ ಮಕ್ಕಳಿಗೆ ಭಾರವಾಗದಿರಲು ಆತ್ಮಹತ್ಯೆ ಮಾಡಿದ ವೃದ್ಧ ದಂಪತಿ!
ತೆಲಂಗಾಣದಲ್ಲಿ ಮನಕಲಕುವ ಘಟನೆಯೊಂದು ನಡೆದಿದೆ. ಒಂದೆರಡು ಮಕ್ಕಳಲ್ಲ ನಾಲ್ಕು ಮಕ್ಕಳಿಗೆ ಹೆತ್ತು ಬೆಳೆಸಿ ಅವರಿಗೆ ಶಿಕ್ಷಣ ಕೊಡಿಸಿ ನಾಲ್ಕು ಮಕ್ಕಳಿಗೆ ಆಸ್ತಿ ಭಾಗ ಮಾಡಿಕೊಟ್ಟು, ಮೊಮ್ಮಕ್ಕಳು ಆಡಿಸಿಕೊಂಡು ಖುಷಿಯಿಂದ ಇರುತ್ತಾರೆ ಎಂದುಕೊಳ್ಳುವಾಗ ಇಬ್ಬರು ಆತ್ಮಹತ್ಯೆ ಮಾಡಿಕೊಂಡು ಎಲ್ಲರಿಗೆ ಶಾಕ್ ನೀಡಿದ್ದಾರೆ, ಈ ಸುದ್ದಿ ನಿರ್ಲಕ್ಷ್ಯ ಮಾಡುವಂಥದ್ದೇ ಅಲ್ಲ, ಏಕೆಂದರೆ ಇಂದಿನ ವಾಸ್ತವ ಈ ಹಿರಿ ಜೀವಗಳ ಸಾವು, ಹಾಗಾಗಿ ಈ ಸುದ್ದಿ ತುಂಬಾನೇ ಗಮನ ಸೆಳೆದಿದೆ.

ಈ ಘಟನೆ ನಡೆದಿರುವುದು ತೆಲಂಗಾಣದ ಮಾನುಗುರ್ ಮಂಡಲ್ ಜಿಲ್ಲೆಯ, ಪಗಿದಾರು ಗ್ರಾಮದಲ್ಲಿ ನಡೆದಿದೆ. ಈ ದಂಪತಿಗೆ ಮೂವರು ಗಂಡು ಮಕ್ಕಳು, ಒಬ್ಬಳು ಮಗಳು, ಎಲ್ಲಾ ಮಕ್ಕಳನ್ನು ತುಂಬಾ ಚೆನ್ನಾಗಿ ಸಾಕಿದ್ದರು, ಅಂಥವರಿಗೆ ಜೀವನದ ಕೊನೆಯ ಘಟ್ಟದಲ್ಲಿ ಇಂಥದ್ದೊಂದು ನಿರ್ಧಾರ ಬರಲು ಮಕ್ಕಳ ನಿರ್ಲಕ್ಷ್ಯವೇ ಕಾರಣವಾಯ್ತೇ ಎಂಬ ಪ್ರಶ್ನೆ ಮೂಡಿದೆ.
ಸಾಯುವ ಮುನ್ನ ಮೂವರು ಗಂಡು ಮಕ್ಕಳ ಮನೆಯಲ್ಲಿ ಸ್ವಲ್ಪ-ಸ್ವಲ್ಪ ದಿನವಿದ್ದರು
ಆ ವೃದ್ಧೆಗೆ ಮಧುಮೆಹದ ಕಾಯಿಲೆ ಇತ್ತು, ಇದರ ಜೊತೆಗೆ ಇತರ ಆರೋಗ್ಯ ಸಮಸ್ಯೆಗಳು ಕೂಡ ಇತ್ತು, ತಮ್ಮ ಕೆಲಸ ತಾವು ಮಾಡಿಕೊಳ್ಳುವುದು ಕಷ್ಟವಾಗಿತ್ತು, ಹಾಗಾಗಿ ಕೆಲವು ದಿನ ಒಂದು ಮಗನ ಮನೆಯಲ್ಲಿ, ಇನ್ನು ಸ್ವಲ್ಪ ದಿನ ಮತ್ತೊಬ್ಬ ಮಗನ ಮನೆಯಲ್ಲಿ ಅಂತ ಮೂವರು ಗಂಡು ಮಕ್ಕಳ ಮನೆಯಲ್ಲಿ ನಿಂತಿದ್ದಾರೆ. ನಂತರ ಮನೆಗೆ ಬಂದವರು ಯಾರಿಗೂ ನಾವು ಭಾರವಾಗಿರಬಾರದು ಎಂದು ಪತಿಗೆ ಹೇಳುತ್ತಾರೆ, ಪತಿಗೂ ಅದು ಸರಿ ಅನಿಸುತ್ತಿದೆ, ನಮ್ಮಿಬ್ಬರಿಗೆ ನಾವಿಬ್ಬರೇ ಇರುವುದು ಎಂಬ ಸತ್ಯ ಅವರಿಗೆ ಗೊತ್ತಾಗಿರಬೇಕು, ಹಾಗಾಗಿ ಅಂಥದ್ದೊಂದು ಕಠಿಣ ನಿರ್ಧಾರಕ್ಕೆ ಬಂದಿದ್ದಾರೆ.
ಮಕ್ಕಳ ಮನೆಗೆ ಹೋದಾಗ ಮಕ್ಕಳು ನಡೆಸಿಕೊಂಡ ರೀತಿಯಿಂದ ಪೋಷಕರಿಗೆ ಬೇಸರವಾಯ್ತೇ?
ಬರಿ ಆ ಮಕ್ಕಳ ಕತೆಯಲ್ಲ, ಬಹುತೇಕ ಮಕ್ಕಳಿಗೆ ವಯಸ್ಸಾದ ಅಪ್ಪ-ಅಮ್ಮ ಭಾರವಾಗುತ್ತಾರೆ, ಅವರನ್ನು ನೋಡಿಕೊಳ್ಳುವುದು ತುಂಬಾ ಕಷ್ಟ ಎಂದು ಭಾವಿಸುತ್ತಾರೆ. ಮಕ್ಕಳ ವರ್ತನೆಯಿಂದ ಅಪ್ಪ-ಅಮ್ಮನಿಗು ತುಂಬಾನೇ ನೋವಾಗುತ್ತಿದೆ, ಇವರು ಹುಷಾರಿಲ್ಲದಿದ್ದಾಗ ಮೂರು ಮಕ್ಕಳ ಮನೆಗೆ ಹೋದಾಗ ಅವರು ಹೆಗೆ ನಡೆದುಕೊಂಡಿದ್ದಾರೋ ಗೊತ್ತಿಲ್ಲ, ಅದರೆ ವೃದ್ಧ ದಂಪತಿಗೆ ನಾವು ಮಕ್ಕಳಿಗೆ ಭಾರವಾಗಿರಬಹುದು ಎಂದು ಅನಿಸುವಂಥಾಗಿದೆ ಎಂಬುವುದಂತೂ ನಿಜ, ಹಾಗಾಗಿ ಇಂತ ಕಠಿಣ ನಿರ್ಧಾರಕ್ಕೆ ಬಂದಿದ್ದಾರೆ.
ಮಕ್ಕಳಾದ ಮೇಲೆ ಎಷ್ಟೆಲ್ಲಾ ತ್ಯಾಗ ಮಾಡುತ್ತಾರೆ ಪೋಷಕರು, ಆದರೆ ವಯಸ್ಸಾದ ಮೇಲೆ ಮಕ್ಕಳಿಗೆ ಭಾರವಾದರೆ
ತಂದೆ-ತಾಯಿಯನ್ನು ಭಾರವೆಂದು ಭಾವಿಸುವ ಮಕ್ಕಳಿಗೆ ಮದುವೆಯಾಗಿ ಮಕ್ಕಳಾಗಿರುತ್ತದೆ, ಆ ಮಕ್ಕಳಿಗಾಗಿ ತುಂಬಾನೇ ಕಷ್ಟಪಡುತ್ತಿರುತ್ತಾರೆ, ಒಳ್ಳೆಯ ಮನೆಕಟ್ಟಬೇಕು ಎಂಬೆಲ್ಲಾ ಆಸೆ ಇರುತ್ತದೆ, ಮಕ್ಕಳಿಗೆ ಒಂದು ಚಿಕ್ಕ ಜ್ವರ ಬಂದರೂ ಚಡಪಡಿಸುತ್ತೇವೆ, ನಮ್ಮ ಪೋಷಕರೂ ಇದೇ ರೀತಿ ಕಷ್ಟಪಟ್ಟಿರುತ್ತಾರೆ ಅಲ್ವಾ? ಇಂದು ನಾವು ಮಕ್ಕಳು ಮಕ್ಕಳು ಅಂತ ಕಣ್ಣಲ್ಲಿ ಕಣ್ಣಿಟ್ಟು ಸಾಕಿದ ಮಕ್ಕಲು ಬೆಳೆದು ದೊಡ್ಡವರಾದ ಮೇಲೆ ಅಪ್ಪ-ಅಮ್ಮನನ್ನು ಭಾರವೆಂದು ಭಾವಿಸಿದರೆ ಒಂದು ಕ್ಷಣ ಯೋಚಿಸಿ.... ಯಾವ ತಂದೆ-ತಾಯಿಯೂ ತಮ್ಮ ವೃದ್ಧ್ಯಾಪದಲ್ಲಿ ಕಣ್ಣೀರು ಹಾಕುವ ಪರಿಸ್ಥಿತಿ ಬರಲ್ಲ.
ಪೋಷಕರು ವಯಸ್ಸಾದಾಗ ಅವರ ವರ್ತನೆಗಳು ನಿಮಗೆ ಇಷ್ಟವಾಗದೆ ಹೋಗಬಹುದು, ನಿಮ್ಮ ಮಕ್ಕಳ ವರ್ತನೆ ಇಷ್ಟವಾಗದಿದ್ದರೂ ಆ ಕ್ಷಣ ಬೈಯ್ದು ನಂತರ ಪ್ರೀತಿಯಿಂದ ಮುದ್ದು ಮಾಡುತ್ತೀರಿ ತಾನೆ, ವಯಸ್ಸಾಗುತ್ತಿದ್ದಂತೆ ಪೋಷಕರು ಕೂಡ ಮಕ್ಕಳಂತೆ ಅವರು ಮಾಡುವುದು ಎಲ್ಲವೂ ನಿಮಗೆ ಇಷ್ಟವಾಗ ಬೇಕಾಗಿಲ್ಲ, ಆದರೆ ಅವರಿಗೆ ನಿಮ್ಮ ಮೇಲಿರುವ ಪ್ರೀತಿ, ಭರವಸೆ ಮಾತ್ರ ನಿರ್ಲಕ್ಷ್ಯ ಮಾಡಬೇಡಿ.



Click it and Unblock the Notifications
