Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಸುಬ್ರತಾ ರಾಯ್: 259,900 ಕೋಟಿ ಸಂಪಾದಿಸಿಕೊಟ್ಟ ತಂದೆಯ ಅಂತಿಮ ದರ್ಶನಕ್ಕೆ ಪುತ್ರರಿಬ್ಬರು ಬರಲೇ ಇಲ್ಲ!
ಸುಬ್ರತಾ ರಾಯ್... ಈ ಹೆಸರು ಬಹುತೇಕರು ಕೇಳಿರುತ್ತೀರಿ, ಇವರ ಹೆಸರು ಕೇಳಿಲ್ಲ ಎಂದರೆ ಸಹರಾ ಗ್ರೂಪ್ ಹೆಸರನ್ನು ಖಂಡಿತ ಹೇಳಿರುತ್ತೀರಿ, ಏಕೆಂದರೆ ಕ್ರಿಕೆಟ್ ಆಟಗಾರರ ಜರ್ಸಿ ಮೇಲೆ ಸಹರಾ ಎಂದು ಬರೆದಿರುವುದನ್ನು ಓದಿರುತ್ತೀರಿ. ಸುಮಾರು 259,900 ಕೋಟಿಯ ಆಸ್ಥಿ, 30,970 ಎಕರೆ ಭೂಮಿ ಅದಲ್ಲದೆ ಇನ್ನೂ ಹಲವಾರು ಕೋಟಿಗಳನ್ನು ಹೊಂದಿರುವ ಒಡೆಯ. ಇಂಥ ದೊಡ್ಡ ಉದ್ಯಮಿ ಸಾವನ್ನಪ್ಪಿದ ಸುದ್ದಿ ಕೇಳಿ ಗಣ್ಯಾತಿಗಣ್ಯರು ಸಂತಾಪ ಸೂಚಿಸಿದರು, ಬಾಲಿವುಡ್ ಸೆಲೆಬ್ರಿಟಿಗಳು ಸಂತಾಪ ಸೂಚಿಸಿದರು, ಆದರೆ ಅವರಿಬ್ಬರ ಗಂಡು ಮಕ್ಕಳು ಮಾತ್ರ ತಂದೆಯ ಅಂತ್ಯ ಸಂಸ್ಕಾರಕ್ಕೆ ಬರಲೇ ಇಲ್ಲ....

ನಮ್ಮಲ್ಲಿ ಒಂದು ಮಾತು ಹೇಳುತ್ತಾರೆ ಎಷ್ಟು ಕೋಟಿ ಇದ್ದರೇನು ಹೋಗುವಾಗ ಯಾರೂ ತಗೊಂಡು ಹೋಗುವುದಿಲ್ಲ, ನಾವು ಹೋಗುವಾಗ ಎಷ್ಟು ಜನ ಮರಗುತ್ತಾರೆ, ಅದುವೇ ನಾವು ಮಾಡಿದ ನಿಜವಾದ ಸಂಪಾದನೆ ಎಂದು. ಆದರೆ ಇವರ ವಿಷಯದಲ್ಲಿ ಹೆತ್ತ ಮಕ್ಕಳೇ ಅಪ್ಪನ ಅಂತ್ಯ ಸಂಸ್ಕಾರಕ್ಕೆ ಬರಲಿಲ್ಲ. ಸುಬ್ರತಾ ರಾಯ್ ಪತ್ನಿ ಸ್ವಪ್ನರಾಯ್ ಮಕ್ಕಳಿಗೆ ಅನಿವಾರ್ಯ ಕಾರಣದಿಂದಾಗಿ ಬರಲ ಸಾಧ್ಯವಾಗಿಲ್ಲ ಎಂದು ಹೇಳಿದ್ದರು.
ಹುಟ್ಟಿಸಿದ ಅಪ್ಪ, ನಮಗೆಲ್ಲಾ ಎಲ್ಲಾ ನೀಡಿದ ಅಪ್ಪ ಇನ್ನಿಲ್ಲ ಎಂದು ತಿಳಿದಾಗ ಆ ಅಪ್ಪನಿಗಿಂತ ಅನಿವಾರ್ಯ ಕಾರಣ ಮಕ್ಕಳಿಗೆ ಏನಿರಲಿದೆ, ಅವರಂತೂ ನಮ್ಮಂತೆ ಸಾಮಾನ್ಯ ವ್ಯಕ್ತಿಗಳಲ್ಲ, ಬೇರೆಯವರ ಕೈಕೆಳಗೆ ಕೆಲಸ ಮಾಡುವವರೂ ಅಲ್ಲ, ಆದರೂ ಅವರಿಗೆ ತಂದೆಯ ಅಂತ್ಯ ಸಂಸ್ಕಾರಕ್ಕೆ ಬರಲು ಸಾಧ್ಯವಾಗಿಲ್ಲ , ಈ ಬದುಕು ಎಷ್ಟೊಂದು ವಿಚಿತ್ರ ಅಲ್ವಾ? ತಂದೆ-ಮಕ್ಕಳ ನಡುವೆ ಏನು ಸಮಸ್ಯೆಯಿದೆಯೋ ಗೊತ್ತಿಲ್ಲ, ಆದರೆ ತಂದೆಯ ಅಂತ್ಯ ಸಂಸ್ಕಾರಕ್ಕೂ ಬಾರದಿದ್ದ ಮೇಲೆ ಸುಬ್ರತಾರಾಯ್ ಅಷ್ಟೆಲ್ಲಾ ಸಂಪಾದನೆ ಮಾಡಿ, ಮಕ್ಕಳಿಗೆ ಅಷ್ಟೆಲ್ಲಾ ಮಾಡಿ ಏನು ಪ್ರಯೋಜನ ಎಂದು ಜನರು ಮಾತನಾಡಿಕೊಳ್ಳುತ್ತಿದ್ದಾರೆ.
ಮೊಮ್ಮಗನಿಂದ ಅಂತ್ಯಸಂಸ್ಕಾರ
ಸುಬ್ರತಾ ರಾಯ್ ಅಂತ್ಯಸಂಸ್ಕಾರವನ್ನು ಮೊಮ್ಮಗ 16 ವರ್ಷದ ಹಿಮಾನಕ್ ರಾಯ್ (ಕಿರಿಯ ಮಗನ ಮೊದಲ ಮಗ) ನೆರವೇರಿಸಿದ. ಸಹರಾ ಗ್ರೂಪ್‌ನ ಸಂಸ್ಥಾಪಕನ ಶವವನ್ನು ಮಕ್ಕಳ ಬರುವಿಗಾಗಿ ಕಾಯ್ದು 2 ದಿನ ಇಡಲಾಗಿತ್ತು. ನಂತರ ಲಂಡನ್‌ನಿಂದ ಬಂದ ಮೊಮ್ಮಗನಿಂದ ಅಂತ್ಯಾಸಂಸ್ಕಾರದ ಕಾರ್ಯವಿಧಾನಗಳನ್ನ ನೆರವೇರಿಸಲಾಯಿತು.
ಇವರ ಸಾವಿನ ನಂತರ ಅವರ ಮಕ್ಕಳ ನಡವಳಿಕೆ ಬಗ್ಗೆ ಸಾಮಾಜಿಕ ತಾಣದಲ್ಲಿ ದೊಡ್ಡ ಚರ್ಚೆಯೇ ನಡೆಯುತ್ತಿದೆ, ಮಕ್ಕಳು ಇಂದು ಲಕ್ಷುರಿ ಬದುಕು ಬಾಳುತ್ತಿರುವುದು ತಂದೆಯಿಂದಾಗಿ, ಇಬ್ಬರು ಮಕ್ಕಳಜು ವಿದೇಶದಲ್ಲಿ ಹೋಗಿ ನೆಲೆಸಿದ್ದಾರೆ, ಸಹರಾ ಗ್ರೂಪ್‌ನೊಂದಿಗೆ ಸಂಬಂಧ ಹೊಂದಿದ್ದಾರೆ, ಆದರೆ ಸಹಾರ ಗ್ರೂಪ್ ಎಂಬ ಬೃಹತ್ ಉದ್ಯಮವನ್ನು ಕಟ್ಟಿ ಬೆಳೆಸಿಕೊಟ್ಟ ತಂದೆಗೆ ಕೊನೆಯ ಗುಡ್‌ಬೈ ಹೇಳಲು ಮಕ್ಕಳಿಗೆ ಸಮಯವಿರಲಿಲ್ಲ, ಇದುವೇ ಬದುಕಿನ ಕಠೋರ ಸತ್ಯ ಅಲ್ಲವೇ ಸ್ನೇಹಿತರೇ?
ಮಕ್ಕಳಿಗಾಗಿ ಆಸ್ತಿ ಮಾಡುವ ಬದಲಿಗೆ ಮಕ್ಕಳನ್ನೇ ಆಸ್ತಿಯನ್ನಾಗಿ ಮಾಡಿ
ಪೋಷಕರು ಮಕ್ಕಳಿಗೆ ಆಸ್ತಿ ಮಾಡಿಕೊಡುವಲ್ಲಿ ಬ್ಯುಸಿಯಾಗುತ್ತಾರೆ. ಚಿಕ್ಕ ಪ್ರಾಯದಲ್ಲಿ ಸಿಗಬೇಕಾಗಿರುವ ಪ್ರೀತಿ, ಸ್ನೇಹ, ಪೋಷಕರು ಅವರ ಜೊತೆಗೆ ಕಲೆಯುವ ಸಮಯ ಯಾವುದೂ ಸಿಕ್ಕಿರುವುದಿಲ್ಲ, ಇದರಿಂದ ಅಂಥ ಮಕ್ಕಳಿಗೆ ಅಪ್ಪ-ಅಮ್ಮನ ಪ್ರೀತಿಯನ್ನು ಹಣದ ಮೂಲಕವೇ ನೋಡುತ್ತಾರೆ ವಿನಃ ಅಲ್ಲಿ ಬಾಂಧವ್ಯ ಗಟ್ಟಿ ಇರುವುದಿಲ್ಲ, ಹಾಗಾಗಿ ಮಕ್ಕಳಿಗೆ ಪೋಷಕರ ಮಹತ್ವ ಅರಿಯದೆ ಹೋಗುವುದು, ಅದ್ದರಿಂದ ಮಕ್ಕಳಿಗೆ ಹಣ ಮಾಡುವುದೇನೋ ಸರಿ ಜೊತೆಗೆ ಅವರಿಗೆ ಪ್ರೀತಿಯನ್ನು ನೀಡಬೇಕು. ಆವಾಗ ಅವರಿಗೆ ಬಾಂಧವ್ಯದ ಮೌಲ್ಯ ಗೊತ್ತಾಗುತ್ತೆ. ಇಂದು ಅನಾಥ ಆಶ್ರಮದಲ್ಲಿ ಇರುವವರಲ್ಲಿ ಬಹುತೇಕ ಮಕ್ಕಳು ವಿದೇಶದಲ್ಲಿ ದೊಡ್ಡ-ದೊಡ್ಡ ಹುದ್ದೆಯಲ್ಲಿರುತ್ತಾರೆ, ಆದರೆ ಪೋಷಕರನ್ನು ನೋಡಲು ಸಾಧ್ಯವಿರಲ್ಲ, ಹಾಗಾಗಿ ಅನಾಥ ಆಶ್ರಮದಲ್ಲಿ ಸೇರಿಸಿರುತ್ತಾರೆ.



Click it and Unblock the Notifications
