Latest Updates
-
ಹುಷಾರ್.. ಈ ರಾಶಿಗಳಿಗೆ ಶನಿಯಿಂದ ಸಂಕಷ್ಟ ಶುರು! ಶನಿಯ ಕೆಂಗಣ್ಣಿನಿಂದ ತಪ್ಪಿಸಿಕೊಳ್ಳೋದು ಹೇಗೆ? -
ಕಡಲ ತೀರದಲ್ಲಿ ಮತ್ತೆ ಕಾಣಿಸಿಕೊಂಡ ಡೂಮ್ಸ್ಡೇ ಫಿಶ್: ಮತ್ತೇನು ದುರಂತ ಕಾದಿದೆ? -
ಮಾರ್ಚ್ 13ರಿಂದ ಶನಿ ಅಸ್ತಮ: 40 ದಿನಗಳ ಕಾಲ ಈ ರಾಶಿಯವರಿಗೆ ಶನಿ ಪ್ರಭಾವ ಇಳಿಕೆ! ಅದೃಷ್ಟದ ದಿನ! -
ದಪ್ಪ ಆಗಿದ್ದೀರಾ? ತೂಕ ಇಳಿಸಬೇಕಾ? ಈ ಗಂಜಿ 1 ಕಪ್ ಕುಡಿಯಿರಿ.. ಡಬಲ್ ಸ್ಪೀಡ್ನಲ್ಲಿ ಸಣ್ಣ ಆಗ್ತೀರಾ!! -
ಬೇಸಿಗೆಯಲ್ಲಿ ದೇಹ ತಂಪಾಗಿಟ್ಟು ದಣಿವು ನೀಗಿಸುವ ನವಣೆ ಮೊಸರನ್ನ: ಸುಲಭವಾಗಿ ಮಾಡುವ ವಿಧಾನವಿದು! -
ಫ್ರಿಜ್ನಲ್ಲಿ ಇಟ್ಟ ಆಹಾರ ಬೇಗ ಕೆಡುತ್ತಿದ್ಯಾ? ಈ 5 ಮ್ಯಾಜಿಕ್ ಟ್ರಿಕ್ಸ್ ಬಳಸಿ.. ಫ್ರೆಶ್ ಆಗಿಡಿ! -
ಸೋಲೋ ಡೇಟ್ ಟ್ರೆಂಡ್: ಒಂಟಿಯಾಗಿ ಸಮಯ ಕಳೆಯೋದು ಎಷ್ಟು ಉತ್ತಮ ಗೊತ್ತಾ? -
ಜಸ್ಟ್ ನೀರು ಸೇರಿಸಿ.. ಈ ಅದ್ಭುತ ರುಚಿಯ ಚಟ್ನಿ ರೆಡಿ! ಮಿಕ್ಸಿ ಬಳಸದೆ ಮಾಡೋದು ಹೇಗೆ? -
ಮಾರ್ಚ್ನಲ್ಲಿ ಬುಧ ಉದಯ: 4 ರಾಶಿಯವರಿಗೆ ಅಡ್ಡಿಗಳಿಂದ ವಿಮುಕ್ತಿ, ಅದೃಷ್ಟದ ಸಮಯ! -
ಶುಕ್ರ, ಶನಿ & ಸೂರ್ಯ ಸಂಗಮ: ಮೀನ ರಾಶಿಯಲ್ಲಿ ತ್ರಿಗ್ರಹ ಯೋಗ.. ಈ 5 ರಾಶಿಗಳಿಗೆ ಬಂಪರ್ ಲಾಟರಿ! ಯಾರಿಗೆ ಲಾಭ, ನಷ್ಟ?
'ಎಲ್ಲವನ್ನೂ ಎಲ್ಲರಿಗೂ ಹೇಳಬೇಡಿ': ಬದುಕಿನಲ್ಲಿ ಯಶಸ್ಸಿಗೆ 9 ನಿಯಮಗಳು!
ಜೀವನದಲ್ಲಿ ಕೆಲವೊಂದು ವಿಚಾರಗಳನ್ನು ಯಾರೊಂದಿಗೂ ಹಂಚಿಕೊಳ್ಳಬಾರದಂತೆ. ಜೀವನದಲ್ಲಿ ಯಶಸ್ಸುಗಳಿಸಬೇಕಾದರೆ ಕೆಲವು ನಿಯಮ ಪಾಲಿಸಿ ಎಂದು ಹೇಳಲಾಗುತ್ತದೆ. ಅದ್ರಲ್ಲೂ ಕೆಲವೊಂದು ವಿಚಾರಗಳು ಆನ್‌ಲೈನ್‌ನಲ್ಲೂ ವೈರಲ್ ಆಗುತ್ತದೆ. ಜೀವನದಲ್ಲಿ ಮುಂದುಬರಬೇಕು? ಜೀವನದಲ್ಲಿ ಯಶಸ್ಸು ಗಳಿಸಲು ಕೆಲವು ಟಿಪ್ಸ್ ಫಾಲೋ ಮಾಡಿ.
ಸಾಮಾಜಿಕ ಜಾಲತಾಣದಲ್ಲಿ ಜೀವನದಲ್ಲಿ ಯಶಸ್ಸು ಗಳಿಸಲು 9 ನಿಯಮ ಪಾಲಿಸಿ ಎಂದು ಪೋಸ್ಟ್ ಹಾಕಿರುವುದು ಪೋಸ್ಟ್ ವೈರಲ್ ಆಗಿದೆ. ಇದನ್ನು ಅರ್ಥಮಾಡಿಕೊಳ್ಳಲು ನನಗೆ 9 ವರ್ಷಗಳು ಬೇಕಾಯಿತು, ನಾನು ಅದನ್ನು 3 ನಿಮಿಷಗಳಲ್ಲಿ ನಿಮಗೆ ಕಲಿಸುತ್ತೇನೆ" ಎಂದು ಬರೆದುಕೊಂಡಿರುವ ಪೋಸ್ಟ್ ವೈರಲ್ ಆಗಿದೆ.

ಹಾಗಾದ್ರೆ ಯಾವುದು ಈ 9 ನಿಯಮಗಳು. ಆ 9 ನಿಯಮಗಳೇನು?
ನಿಮ್ಮ ಗೌಪ್ಯತೆಯನ್ನು ಕಾಪಾಡಿಕೊಳ್ಳಿ: ನಿಮ್ಮ ಕುರಿತು ಎಲ್ಲಾ ಮಾಹಿತಿ ಎಲ್ಲರೊಂದಿಗೆ ಹಂಚಿಕೊಳ್ಳಬೇಡಿ. ಕುಟುಂಬದೊಂದಿಗೆ ಸಹ, ಗೌಪ್ಯತೆಯ ಮಟ್ಟವನ್ನು ಕಾಪಾಡಿಕೊಳ್ಳುವುದು ಬಹಳ ಮುಖ್ಯ. ಇದು ನಿಮ್ಮ ವೈಯಕ್ತಿಕ ಗಡಿಗಳನ್ನು ರಕ್ಷಿಸಲು ಮತ್ತು ನಿಮ್ಮ ಜೀವನದ ಕೆಲವು ಅಂಶಗಳನ್ನು ಪವಿತ್ರವಾಗಿರಿಸಲು ಸಹಾಯ ಮಾಡುತ್ತದೆ. ಏಕೆಂದರೆ ನಿಮ್ಮ ವೈಯಕ್ತಿಕ ಮಾಹಿತಿ ಎನ್ನುವುದು ನಿಮಗೆ ಮಾತ್ರ ತಿಳಿದಿರಬೇಕಂತೆ. ಈ ವಿಚಾರ ಮನೆಯಲ್ಲೂ ಹೇಳಬಾರದಂತೆ.
ವೈಯಕ್ತಿಕ ನಿರ್ಧಾರಗಳ ಚರ್ಚಿಸಬೇಡಿ: ನೀವು ತೆಗೆದುಕೊಂಡಿರುವ ವೈಯಕ್ತಿಕ ನಿರ್ಧಾರಗಳ ಬೇರೆಯವರೊಂದಿಗೆ ಚರ್ಚಿಸಬಾರದಂತೆ. ನಿಮ್ಮ ವೈಯಕ್ತಿಕ ಕೆಲಸಗಳಿಗಾಗಿ ತೆಗೆದುಕೊಂಡು ನಿರ್ಧಾರಗಳ ಕುರಿತು ಬೇರೆಯವರೊಂದಿಗೆ ಚರ್ಚಿಸಬಾರದು. ಏಕೆಂದರೆ ಬೇರೆಯವರು ಇದನ್ನು ಪ್ರೋತ್ಸಾಹಿಸುವ ಬದಲು ಇದರ ವಿರುದ್ಧ ಮಾತನಾಡಬಹುದು.
ಇತರರ ಅಭಿಪ್ರಾಯಗಳನ್ನು ನಿರ್ಲಕ್ಷಿಸಿ: ಇತರರು ನಿಮ್ಮ ಬಗ್ಗೆ ಏನು ಯೋಚಿಸುತ್ತಾರೆ ಎಂಬುದರ ಕುರಿತು ಚಿಂತಿಸುವುದು ಸಮಯ ವ್ಯರ್ಥ. ನೀವು ನಂಬುವಷ್ಟು ಜನರು ನಿಮ್ಮ ಬಗ್ಗೆ ಕಾಳಜಿ ವಹಿಸುವುದಿಲ್ಲ ಮತ್ತು ಅವರ ಅಭಿಪ್ರಾಯಗಳು ನಿಮ್ಮ ಸ್ವಾಭಿಮಾನವನ್ನು ನಿರ್ದೇಶಿಸಬಾರದು.
ಆರೋಗ್ಯಕ್ಕೆ ಆದ್ಯತೆ ನೀಡಿ: ನಿಮ್ಮ ಆರೋಗ್ಯವೇ ನಿಮಗೆ ಸಂಪತ್ತು. ಆರೋಗ್ಯವೇ ಭಾಗ್ಯ ಎಂಬುದು ನೀವು ಅರಿತುಕೊಳ್ಳಬೇಕು. ನಾವು ವೃತ್ತಿ ಮತ್ತು ಯಶಸ್ಸನ್ನು ಬೆನ್ನಟ್ಟುತ್ತಿರುವಾಗ, ನಾವು ಸಾಮಾನ್ಯವಾಗಿ ನಮ್ಮ ಯೋಗಕ್ಷೇಮವನ್ನು ನಿರ್ಲಕ್ಷಿಸುತ್ತೇವೆ. ಉತ್ತಮ ಆರೋಗ್ಯವಿಲ್ಲದೆ, ಇತರ ಗುರಿಗಳನ್ನು ಸಾಧಿಸುವುದು ಹೆಚ್ಚು ಕಷ್ಟಕರವಾಗುತ್ತದೆ ಎಂಬುದನ್ನು ನೆನಪಿಟ್ಟುಕೊಳ್ಳುವುದು ಮುಖ್ಯ.
ಅದೃಷ್ಟವನ್ನು ನಂಬಬೇಡಿ : ನೀವು ಜೀವನದಲ್ಲಿ ಯಶಸ್ವಿಯಾಗಬೇಕಾದರೆ ನಿಮ್ಮ ಅದೃಷ್ಟವನ್ನು ನಂಬಬೇಡಿ. ಅದೃಷ್ಟ ಎಂಬುದು ಯಾವಾಗಲು ನಿಮ್ಮ ಪರವಾಗಿರುವುದಿಲ್ಲ. ಆದರೆ ಶ್ರಮದ ಮೇಲೆ ನಂಬಿಕೆ ಇಡಬೇಕು. ಜೊತೆಗೆ ನಿಮ್ಮ ಗುರಿಗಳ ಸಾಧಿಸುವವರೆಗೂ ಶ್ರಮ ಬಿಡಬಾರದು.
ಸಂಬಳ ಮತ್ತು ಸಂಬಂಧ: ನಿಮ್ಮ ಕೆಲಸಕ್ಕೆ ನೀವು ಪಡೆಯುತ್ತಿರುವ ಸಂಬಂಳ ಹಾಗೂ ನಿಮ್ಮ ವೈಯಕ್ತಿಕ ಸಂಬಂಧಗಳ ಕುರಿತು ಇತರರಿಗೆ ತಿಳಿಸಬಾರದಂತೆ. ಏಕೆಂದರೆ ನಿಮ್ಮ ಸಂಬಂಧ ಇತತರೊಂದಿಗೆ ಹೇಗಿದೆ ಎಂಬುದನ್ನು ಎಲ್ಲೆರೊಂದಿಗೆ ವಿವರಿಸಬಾರದಂತೆ.
ಬೇರೆಯವರ ಅನುಮತಿ ಪಡೆಯಬೇಡಿ: ನಿಮ್ಮ ಕೆಲಸಕ್ಕೆ ಬೇರೆ ಅವರ ಅನುಮತಿ ಪಡೆಯುವುದನ್ನು ನಿಲ್ಲಿಸಬೇಕಂತೆ. ಅಂದರೆ ಇಲ್ಲಿ ನೀವು ಯಾವುದಾದರು ಕೆಲಸ ಮಾಡುವಾಗ ಬೇರೆಯವರು ಅನುಮತಿ ಕೇಳುವುದು ಅವರ ನಿರ್ಧಾರ ಏನು ಎಂಬುದನ್ನು ಕೇಳುವ ಯತ್ನವನ್ನೂ ಮಾಡಬಾರದಂತೆ.
ನಿಮ್ಮ ಮನಸ್ಸಿನ ಮೇಲೆ ನಿಯಂತ್ರಣವಿರಲಿ: ನೀವು ಪ್ರಬಲ ವ್ಯಕ್ತಿಯಾಗಲು ಬಯಸಿದರೆ, ನಿಮ್ಮ ಮನಸ್ಸನ್ನು ನೀವು ನಿಯಂತ್ರಿಸಬೇಕು. ಶಿಸ್ತು ಮತ್ತು ಮಾನಸಿಕ ಶಕ್ತಿಯು ಸವಾಲುಗಳನ್ನು ಜಯಿಸಲು ಮತ್ತು ನಿಮ್ಮ ಗುರಿಗಳನ್ನು ಸಾಧಿಸಲು ಪ್ರಮುಖವಾಗಿದೆ.
ಸಂಪತ್ತಿನ ಹಿಂದೆ ಬೀಳಿ ಮಹಿಳೆ ಹಿಂದಲ್ಲ: ನೀವು ಜೀನವದಲ್ಲಿ ಯಶಸ್ವಿಯಾಗಬೇಕಾದರೆ ಸಂಪತ್ತಿನ ಹಿಂದೆ ಹೋಗಬೇಕಂತೆ. ಮಹಿಳೆಯ ಹಿಂದೆ ಹೋಗಬಾರದು ಎಂದು ಈ ಪೋಸ್ಟ್‌ನಲ್ಲಿ ಹೇಳಲಾಗಿದೆ. ಸಂಪತ್ತು ನಿಮಗೆ ಆರ್ಥಿಕ ಸ್ಥಿರತೆ, ಜೀವನ ನಿರ್ವಹಣೆಗೆ ದಾರಿಯಾಗಲಿದೆಯಂತೆ.



Click it and Unblock the Notifications











