Latest Updates
-
ಫಾದರ್ಸ್ ಡೇ: ಅಪ್ಪನ ಜೊತೆಗಿನ ಮೌನ ಮುರಿಯಲು ಮತ್ತು ಸಂಬಂಧ ಗಟ್ಟಿಗೊಳಿಸಲು ಇಲ್ಲಿದೆ ಸರಳ ಟಿಪ್ಸ್ -
ಮುಂಬೈ ಜನರೇ ಎಚ್ಚರ! ಜೂನ್ 18-19ರಂದು ಭಾರಿ ಹೈ-ಟೈಡ್ ಭೀತಿ: ಪ್ರವಾಹದಿಂದ ಪಾರಾಗಲು ಈ ಮುನ್ನೆಚ್ಚರಿಕೆ ಮರೆಯದಿರಿ -
ಮಳೆಗಾಲದ ಎಚ್ಚರಿಕೆ: ಟೈಫಾಯಿಡ್ ಮತ್ತು ಸೋಂಕಿನಿಂದ ಪಾರಾಗಲು ನಿಮ್ಮ ಆಹಾರ ಕ್ರಮ ಹೀಗಿರಲಿ -
ಯುಜಿಸಿ ನೆಟ್ 2026 ಪ್ರವೇಶ ಪತ್ರ ಬಿಡುಗಡೆ: ಪರೀಕ್ಷಾ ಕೇಂದ್ರಕ್ಕೆ ತೆರಳುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಸಿಡಿಲು-ಮಳೆಯ ಎಚ್ಚರಿಕೆ: ಹೊರಗೆ ಹೋಗುವ ಸಾಹಸ ಬೇಡ, ಮನೆಯಲ್ಲೇ ಫಿಟ್ ಆಗಿರಲು ಈ ಟಿಪ್ಸ್ ಫಾಲೋ ಮಾಡಿ! -
ನೀಟ್ ಮರುಪರೀಕ್ಷೆ: ಅಡ್ಮಿಟ್ ಕಾರ್ಡ್ ಬಿಡುಗಡೆ, ಪರೀಕ್ಷೆಗೆ ಹೋಗುವ ಮುನ್ನ ವಿದ್ಯಾರ್ಥಿಗಳು ಮತ್ತು ಪೋಷಕರು ತಪ್ಪದೇ ಮಾಡಬೇಕಾದ ಕೆಲಸಗಳಿವು! -
ಮಳೆಗಾಲದ ಅಬ್ಬರಕ್ಕೆ ನಿಮ್ಮ ಮನೆ ಸಿದ್ಧವೇ? ಸೋರಿಕೆ ಮತ್ತು ಹಾನಿ ತಪ್ಪಿಸಲು ಈ ಸರಳ ಟಿಪ್ಸ್ ಪಾಲಿಸಿ -
ಸುಡುವ ಬಿಸಿಲಿಗೆ ಹವಾಮಾನ ಇಲಾಖೆ ಎಚ್ಚರಿಕೆ: ದೇಹ ತಂಪಾಗಿಡಲು ಈ ಪಾನೀಯಗಳೇ ರಾಮಬಾಣ! -
ಲಕ್ನೋದಲ್ಲಿ ಭಾರತ-ಅಫ್ಘಾನಿಸ್ತಾನ ಹೈ-ವೋಲ್ಟೇಜ್ ಕದನ: ಪಂದ್ಯದ ಮಜಾ ಸವಿಯಲು ಈ ಟಿಪ್ಸ್ ಮಿಸ್ ಮಾಡ್ಬೇಡಿ! -
ಮಳೆಗಾಲದ ಯೋಗ ದಿನಾಚರಣೆ: ಮೈದಾನದಲ್ಲಿ ಯೋಗ ಮಾಡಲು ಸಿದ್ಧರಿದ್ದೀರಾ? ಇಲ್ಲಿದೆ ಅಗತ್ಯ ಮುನ್ನೆಚ್ಚರಿಕೆಗಳು!
ಈ 6 ವಿಚಾರಗಳನ್ನು ಸಂಗಾತಿಗಾಗಿ ಅಪ್ಪಿ-ತಪ್ಪಿಯೂ ಬಿಟ್ಟು ಕೊಡಬೇಡಿ!
ಪ್ರತಿಯೊಬ್ಬರ ದಾಂಪತ್ಯದಲ್ಲೂ ಸಿಹಿಯೇ ತುಂಬಿಕೊಂಡಿರಬೇಕೆಂದೇನಿಲ್ಲ. ಒಂದು ದಾಂಪತ್ಯ ಎಂದ ಮೇಲೆ ಅದರಲ್ಲಿ ಸುಖ-ದುಃಖ ಸಾಮಾನ್ಯವಾಗಿ ಇದ್ದೇ ಇರುತ್ತದೆ. ಅನೇಕ ಬಾರಿ ದಾಂಪತ್ಯದಲ್ಲಿ ಮನಸ್ಥಾಪ ಹೆಚ್ಚಾಗಬಾರದು ಅನ್ನೋ ಕಾರಣಕ್ಕೆ ನಾವು ಎಷ್ಟೋ ಕಾಂಪ್ರಮೈಸ್ ಗಳನ್ನು ಮಾಡಿಕೊಂಡಿರುತ್ತೇವೆ.
ಕೆಲವೊಂದು ವಿಚಾರಗಳಲ್ಲಿ ನಾವು ತಪ್ಪು ಮಾಡದಿದ್ದರೂ ಸುಮ್ಮನಿರುತ್ತೇವೆ. ಕಾರಣ ದಾಂಪತ್ಯದ ಬಂಧವನ್ನು ಕಡಿದುಕೊಂಡು ದೂರ ಹೋಗೋದಕ್ಕೆ ನಮಗೆ ಇಷ್ಟ ಇರೋದಿಲ್ಲ. ಆದರೆ ನಿಮಗೆ ನಿಮ್ಮ ಸಂಗಾತಿಯ ಮೇಲೆ ಎಷ್ಟೇ ಪ್ರೀತಿ ಇದ್ದರೂ ಕೂಡ ಈ ವಿಚಾರಗಳಲ್ಲಿ ಸುತಾರಾಂ ತ್ಯಾಗ ಮಾಡಲೇಬಾರದಂತೆ. ಅಷ್ಟಕ್ಕು ಆ 6 ವಿಚಾರಗಳು ಯಾವುದು ಅನ್ನೋದನ್ನು ತಿಳಿಯೋಣ.

1. ಸ್ವಾಭಿಮಾನಕ್ಕೆ ಧಕ್ಕೆಯಾಗದಂತೆ ನೋಡಿಕೊಳ್ಳಿ
ಹೊರಗಿನವರ ಜೊತೆಗಾಗಿಲಿ ಅಥವಾ ನಿಮ್ಮ ಸಂಗಾತಿಯ ಜೊತೆಗಾಗಲಿ ಯಾವುದೇ ಕಾರಣಕ್ಕೂ ನಿಮ್ಮ ಸ್ವಾಭಿಮಾನಕ್ಕೆ ಧಕ್ಕೆಯಾಗದಂತೆ ನೋಡಿಕೊಳ್ಳಿ. ನಿಮ್ಮ ಸಂಗಾತಿಯು ನಿಮಗೆ ಗೌರವ ಕೊಡದೆ ನಿಮ್ಮನ್ನು ಕೀಳಾಗಿ ಕಾಣುತ್ತಿದ್ದರೆ ಅದನ್ನು ಸಹಿಸಬೇಡಿ. ಯಾವತ್ತೂ ನಿಮ್ಮ ಆತ್ಮ ಗೌರವಕ್ಕೆ ಧಕ್ಕೆಯಾಗಬಾರದು. ಅದನ್ನು ತಲೆಯಲ್ಲಿ ಇಟ್ಟುಕೊಳ್ಳಿ. ಯಾವಾಗ ಒಬ್ಬರನ್ನೊಬ್ಬರು ಅರ್ಥ ಮಾಡಿಕೊಳ್ಳುತ್ತಾರೆ ಆಗ ಪರಸ್ಪರ ಗೌರವ ಹಾಗೂ ಪ್ರೋತ್ಸಾಹ ಹೆಚ್ಚಾಗುತ್ತದೆ.
2. ವೈಯಕ್ತಿಕ ಗುರಿ ಮತ್ತು ಆಕಾಂಕ್ಷೆಗಳನ್ನು ಬಿಟ್ಟು ಕೊಡಬೇಡಿ
ಸಂಬಂಧದಲ್ಲಿ ಕೆಲವೊಂದು ಸಲ ಅನೇಕ ವಿಚಾರಗಳಿಗೆ ನಾವು ಕಾಂಪ್ರಮೈಸ್ ಮಾಡಿಕೊಳ್ಳಬೇಕಾಗುತ್ತದೆ. ನಮ್ಮ ಸಂಗಾತಿಗಾಗಿ ನಾವು ನಮ್ಮ ಆಸೆಯನ್ನು ಬಿಟ್ಟು ಕೊಡುತ್ತೇವೆ. ಮನಸ್ಸಿಗೆ ಕೊಂಚ ನೋವಾದರೂ ಕೂಡ ಅದನ್ನು ಸಹಿಸಿಕೊಳ್ಳುತ್ತೇವೆ. ಆದರೆ ಯಾವುದೇ ಕಾರಣಕ್ಕೂ ನಿಮ್ಮ ಸಂಗಾತಿಗೆ ಇಷ್ಟ ಇಲ್ಲ ಎಂದು ನಿಮ್ಮ ಜೀವನದ ಪರಮೋಚ್ಛ ಗುರಿಯನ್ನು ಬಿಟ್ಟು ಕೊಡಬೇಡಿ. ಒಂದು ವೇಳೆ ನೀವು ಸಂಗಾತಿಗಾಗಿ ಗುರಿಯನ್ನು ಬಿಟ್ಟು ಕೊಟ್ಟರೆ ನೀವು ನಿಮಗೆ ಮೋಸ ಮಾಡಿಕೊಂಡಂತೆ.
3. ಸ್ವಾತಂತ್ರ ಮತ್ತು ಪ್ರತ್ಯೇಕತೆ
ಸಂಗಾತಿಗಾಗಿ ನಿಮ್ಮ ಸ್ವಾತಂತ್ರವನ್ನು ಬಿಟ್ಟು ಕೊಡುವ ತಪ್ಪು ಮಾಡದಿರಿ. ನಿಮಗೆ ನಿಮ್ಮದೇ ಆದ ಆಸಕ್ತಿ, ಹವ್ಯಾಸ ಇದ್ದಿರಬಹುದು. ಸಂಗಾತಿಗಾಗಿ ಅದನ್ನೆಲ್ಲಾ ತ್ಯಾಗ ಮಾಡುತ್ತೇನೆ ಅನ್ನೋದು ನೀವು ಮಾಡುವ ತಪ್ಪು. ಇದನ್ನೆಲ್ಲಾ ತ್ಯಾಗ ಮಾಡಿ ಕೂತರೆ ನಿಮ್ಮತನವನ್ನೇ ನೀವು ಕಳೆದುಕೊಂಡಂತೆ. ಸಂಬಂಧದಲ್ಲಿ ಅಥವಾ ಎಲ್ಲೇ ಆಗಲಿ ನಿಮ್ಮ ಸ್ವಾತಂತ್ರವನ್ನು ಕಳೆದುಕೊಳ್ಳಬೇಡಿ. ಯಾಕಂದ್ರೆ ನಿಮ್ಮ ಬದುಕಿಗೆ ಅರ್ಥ ಇಲ್ಲದ ರೀತಿಯಲ್ಲಿ ಆಗಿ ಬಿಡುತ್ತದೆ.
4. ಮೌಲ್ಯಗಳು ಮತ್ತು ನಂಬಿಕೆಗಳನ್ನು ಬಿಡಬೇಡಿ
ನಿಮ್ಮಲ್ಲಿರುವ ಮೌಲ್ಯಗಳು ಮತ್ತು ನಂಬಿಕೆಗಳು ನಿಮ್ಮ ವ್ಯಕ್ತಿತ್ವವನ್ನು ರೂಪಿಸುತ್ತವೆ. ನಿಮ್ಮ ವ್ಯಕ್ತಿತ್ವ ಅಥವಾ ನಂಬಿಕೆಗಳು ನಿಮ್ಮ ಸಂಗಾತಿಗೆ ಇಷ್ಟ ಆಗದೇ ಇರಬಹುದು. ಆಗ ಅವರು ಅದನ್ನು ಬದಲಾಯಿಸೋದಕ್ಕೆ ಹೇಳುತ್ತಾರೆ. ಅವರ ಮಾತನ್ನು ಕೇಳಿ ಒಂದು ವೇಳೆ ನಿಮ್ಮ ವ್ಯಕ್ತಿತ್ವವನ್ನು ಬದಲಾಯಿಸಿಕೊಂಡರೆ ನಿಮ್ಮ ಬದುಕಿಗೆ ಅರ್ಥವಿಲ್ಲದ ಹಾಗಾಗುತ್ತದೆ.
5. ಭಾವನಾತ್ಮಕ ಯೋಗಕ್ಷೇಮ
ಸಂಬಂಧದಲ್ಲಿ ಒಬ್ಬರ ಭಾವನೆಗಳಿಗೆ ಮತ್ತೊಬ್ಬರು ಬೆಲೆ ನೀಡುವುದು ತುಂಬಾನೇ ಮುಖ್ಯವಾಗುತ್ತದೆ. ಆಗ ಮಾತ್ರ ನಮ್ಮ ಮಾನಸಿಕ ಆರೋಗ್ಯ ಚೆನ್ನಾಗಿರೋದಕ್ಕೆ ಸಾಧ್ಯ. ನಿಮ್ಮ ಖುಷಿ ಹಾಗೂ ದುಃಖದ ಕ್ಷಣಗಳಲ್ಲಿ ಖಂಡಿತ ನೀವು ನಿಮ್ಮ ಭಾವನೆಯನ್ನು ವ್ಯಕ್ತ ಪಡಿಸಲೇಬೇಕು. ಸಂಗಾತಿಗೆ ಇಷ್ಟವಿಲ್ಲ ಎಂದು ಎಲ್ಲವನ್ನೂ ನಿಯಂತ್ರಿಸಿ ಕೂರೋದಕ್ಕೆ ನೀವು ಯಂತ್ರವಲ್ಲ. ಮಾನಸಿಕ ಆರೋಗ್ಯ ಉತ್ತಮವಾಗಿರಲು ಇವೆಲ್ಲವನ್ನೂ ಹಂಚಿಕೊಳ್ಳುವುದು ಮುಖ್ಯ ಆಗುತ್ತದೆ.
6. ವೈಯಕ್ತಿಕ ಗಡಿಗಳನ್ನು ನಿಯಂತ್ರಿಸಿಕೊಳ್ಳಿ
ಪ್ರತಿಯೊಬ್ಬ ವ್ಯಕ್ತಿಗೂ ವೈಯಕ್ತಿಕ ಗಡಿ ಅನ್ನೋದು ಇದ್ದೇ ಇರುತ್ತದೆ. ಅಲ್ಲಿಗೆ ಸಂಗಾತಿಗೂ ಪ್ರವೇಶ ಇರೋದಿಲ್ಲ. ಆದರೆ ಸಂಗಾತಿ ನಿಮ್ಮ ವೈಯಕ್ತಿಕ ಜೀವನದಲ್ಲಿ ಪದೇ ಪದೇ ಮೂಗು ತೂರಿಸುತ್ತಿದ್ದು ಅದು ನಿಮಗೆ ಇಷ್ಟವಾಗದೇ ಹೋದರೆ ಖಂಡಿತ ಅದನ್ನು ಸಹಿಸುತ್ತಾ ಕೂರಬೇಡಿ. ಸಂಗಾತಿಯಾಗಲಿ ಯಾರೇ ಆಗಲಿ ತಪ್ಪಿದಾಗ ಧ್ವನಿ ಎತ್ತಿ ಮಾತನಾಡಿ.
ಈ ವಿಚಾರಗಳ ಬಗ್ಗೆ ಗಂಭೀರವಾಗಿ ಯೋಚಿಸಿ. ಸಂಗಾತಿ ಅನ್ನೋ ಕಾರಣಕ್ಕೆ ತ್ಯಾಗ ಮಾಡೋದಕ್ಕೆ ಹೋಗಬೇಡಿ. ಮುಖ್ಯವಾಗಿ ನಿಮ್ಮ ಸ್ವಾತಂತ್ರ, ನಿಮ್ಮತನವನ್ನು ಬಿಟ್ಟು ಕೊಡಲೇಬೇಡಿ.



Click it and Unblock the Notifications
