Latest Updates
-
ಅಂಗನವಾಡಿ ಊಟದ ಬಗ್ಗೆ ಪೋಷಕರಿಗೆ ಎಚ್ಚರ! ಪೋಷಣ್ ಮಾಹ್ 2026ರ ಹೊಸ ನಿಯಮಗಳು ಮತ್ತು ದೂರು ನೀಡುವುದು ಹೇಗೆ? -
ಇಂದಿನ ಪೆಟ್ರೋಲ್ ದರ: ಬೆಂಗಳೂರಿನಲ್ಲಿ ಬೆಲೆ ಎಷ್ಟು? ಹಣ ಉಳಿಸಲು ಈ ಟಿಪ್ಸ್ ಮಿಸ್ ಮಾಡ್ಬೇಡಿ -
ರಾಷ್ಟ್ರೀಯ ಪೋಷಕಾಂಶ ಸಪ್ತಾಹ: ಕೇವಲ 15 ನಿಮಿಷದಲ್ಲಿ ನಿಮ್ಮ ಬೆಳಗಿನ ದಿನಚರಿಯನ್ನು ರೀಸೆಟ್ ಮಾಡಿ, ದಿನವಿಡೀ ಎನರ್ಜಿ ಪಡೆಯಿರಿ! -
ಭಾರೀ ಮಳೆ ಎಚ್ಚರಿಕೆ: ನಿಮ್ಮ ಮನೆಯ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ 30 ನಿಮಿಷದ ಟಿಪ್ಸ್ ಪಾಲಿಸಿ -
ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ ಎಚ್ಚರಿಕೆ: ಸುಪ್ರೀಂ ಕೋರ್ಟ್ನಲ್ಲಿ ಹೊಸ ತಿರುವು, ನಿಮಗೇನು ಲಾಭ? -
ಆಪಲ್ ಸೆಪ್ಟೆಂಬರ್ 9ರ ಇವೆಂಟ್: ಐಫೋನ್ 18 ಮತ್ತು ಫೋಲ್ಡಬಲ್ ಫೋನ್ ಲಾಂಚ್ ಆಗುತ್ತಾ? -
ಸಂಡೇಸ್ ಆನ್ ಸೈಕಲ್: ಮಳೆಯಲ್ಲಿ ಸೈಕ್ಲಿಂಗ್ ಮಾಡುವಾಗ ಈ 5 ಸುರಕ್ಷತಾ ನಿಯಮಗಳನ್ನು ಪಾಲಿಸಿ! -
ಸುಪ್ರೀಂ ಕೋರ್ಟ್ ಮಹತ್ವದ ಆದೇಶ: ತಾಯಿ ದುಡಿಯುತ್ತಿದ್ದರೂ ಮಕ್ಕಳ ಜೀವನಾಂಶ ಪಾವತಿಸುವುದು ತಂದೆಯ ಕರ್ತವ್ಯ! -
ಡೆಂಗ್ಯೂ ಭೀತಿ: ಕೇವಲ 10 ನಿಮಿಷದಲ್ಲಿ ನಿಮ್ಮ ಮನೆಯಲ್ಲಿ ಸೊಳ್ಳೆಗಳ ಸಂತಾನೋತ್ಪತ್ತಿ ತಡೆಯಿರಿ -
ಹಬ್ಬದ ಸೀಸನ್: ಕಲಬೆರಕೆ ಆಹಾರದಿಂದ ಎಚ್ಚರ! ಮಹಾರಾಷ್ಟ್ರ FDA ಕಠಿಣ ತಪಾಸಣೆ ಆರಂಭ
ಬ್ರೇಕ್‌ಅಪ್‌ಗಳಿಗೆ ಮೊದಲ ಬಾರಿಗೆ ಕಾರಣ ನೀಡಿದ ನಯನತಾರಾ..! ಆಕೆ ಬಾಳಲ್ಲಿ ಆಗಿದ್ದೇನು?
ಕಳೆದೊಂದು ವಾರದಿಂದ ನಟಿ ನಯನತಾರಾ ಸುದ್ದಿಯಲ್ಲಿದ್ದಾರೆ. ತನ್ನ ನಟನೆ ಹಾಗೂ ಸಿನಿಮಾದಿಂದ ಮಾತ್ರವಲ್ಲ ತಮ್ಮ ವೈಯಕ್ತಿಕ ವಿಚಾರದಿಂದಲೂ ಸುದ್ದಿಯಲ್ಲಿದ್ದಾರೆ. ಅವರ ನೆಟ್‌ಫ್ಲಿಕ್ಸ್ ಸಾಕ್ಷ್ಯಚಿತ್ರ ನಯನತಾರಾ ಬಿಯಾಂಡ್ ದಿ ಫೇರಿಟೇಲ್ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ. ಹಾಗೆ ಇದರಿಂದ ನಟ ಧನುಷ್ ಜೊತೆಗಿನ ವಿವಾದ ಕೂಡ ದೊಡ್ಡ ಮಟ್ಟದಲ್ಲಿ ಸುದ್ದಿಯಾಗುತ್ತಿದೆ.
ಆದರೆ ಅವರು ತಮ್ಮ ಸಂಬಂಧಗಳಲ್ಲಿ ಒಂದಿಷ್ಟು ನೋವುಗಳು, ವಿಚ್ಚೇದನ ಕುರಿತಂತೆ ಇದೇ ಮೊದಲ ಬಾರಿಗೆ ಮನಬಿಚ್ಚಿ ಮಾತನಾಡಿದ್ದಾರೆ. ನಯನತಾರಾ ತನ್ನ ಹಿಂದಿನ ಸಂಬಂಧಗಳು, ಅವರು ಅನುಭವಿಸಿದ ವೈಯಕ್ತಿಕ ಹೋರಾಟಗಳು ಮತ್ತು ಅವರು ತಮ್ಮ ವೃತ್ತಿಪರ ಪ್ರಯಾಣವನ್ನು ಹೇಗೆ ರೂಪಿಸಿದರು ಎಂಬ ಕುರಿತಂತೆ ವಿವರಣೆ ನೀಡಿದ್ದು, ಯಾಕಾಗಿ ನನ್ನ ಸಂಬಂಧಗಳು ಬಹುಬೇಗ ಹಾಳಾದವು ಎಂಬುದನ್ನು ಕೂಡ ಅವರು ವಿವರಿಸಿದ್ದಾರೆ.

ನನ್ನ ಮೊದಲ ಸಂಬಂಧವು ಸಂಪೂರ್ಣವಾಗಿ ನಂಬಿಕೆಯ ಮೇಲೆ ಆಧಾರಿತವಾಗಿದೆ, ಇನ್ನೊಬ್ಬ ವ್ಯಕ್ತಿಯು ನಿನ್ನನ್ನು ಪ್ರೀತಿಸುತ್ತಿದ್ದಾನೆ ಎಂಬ ನಂಬಿಕೆ" ಎಂದು ಅವರು ಬಹಿರಂಗಪಡಿಸುತ್ತಾರೆ. ಅವರು ಮೊದಲು ನಿರ್ಮಾಪಕ ನಟ ಸಿಲಂಬರಸನ್ ಜೊತೆಗಿನ ಸಂಬಂಧದ ಕುರಿತು ವಿವರಿಸಿದ್ದಾರೆ. ಇಬ್ಬರ ನಡುವಿನ ಒಂದು ಫೋಟೋ ಬೇರಾಗಲು ಕಾರಣವಾಗಿತ್ತು.
ಇಬ್ಬರು ಕಿಸ್ ಮಾಡುತ್ತಿದ್ದ ಫೋಟೋ ಒಂದು ಹರಿದಾಡಿದ ಬೆನ್ನಲ್ಲೇ ಇಬ್ಬರ ಸಂಬಂಧ ಅಲ್ಲಿಂದ ಹಾಳಾಗಿತ್ತು. ಆದ್ರೆ ಅವರಿಬ್ಬರು ಮದುವೆಯ ವರೆಗೆ ಮುಂದುವರೆದಿರಲಿಲ್ಲ. ಇದಾದ ಬಳಿಕ ನಯನತಾರಾ ನಟ ಪ್ರಭುದೇವ ಜೊತೆಗೆ ಕಾಣಿಸಿಕೊಂಡರು. ಹಾಗೆ ಇಬ್ಬರು ಮದುವೆ ಆಗುತ್ತಾರೆ ಎಂಬ ಸುದ್ದಿಯೂ ಹರಿಡದಾಡಿತ್ತು. ಆದ್ರೆ ಇಬ್ಬರ ನಡುವೆ ಒಂದಿಷ್ಟು ವೈಮನಸ್ಸು ಇತ್ತಂತೆ. ಸಿನಿಮಾ ಬಿಡುವಂತೆ ಪ್ರಭುದೇವ ಹೇಳಿದ್ದಕ್ಕೆ ಸಂಬಂಧ ಮುರಿದುಕೊಂಡಿದ್ದೆ ಎಂದು ನಯನತಾರಾ ಹೇಳಿದ್ದಾರೆ. ಸಿನಿಮಾ ತೊರೆಯಲು ಮೊದಲು ಹೇಳಿದ್ದ ವ್ಯಕ್ತಿ ಅವರೇ ಎಂದು ಪ್ರಭುದೇವ ಕುರಿತು ನಟಿ ಹೇಳಿಕೊಂಡಿದ್ದಾರೆ. ಹಾಗೆ ಇಬ್ಬರು ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದರಿಂದ ಪ್ರಭುದೇವ ಹಾಗೂ ಅವರ ಪತ್ನಿ ನಡುವ ವಿಚ್ಛೇದನಕ್ಕೆ ಕಾರಣವಾಗಿತ್ತು ಎಂಬ ಮಾತುಗಳು ಸಹ ಹರಿದಾಡಿದ್ದವು.
ಇದಾದ ಬಳಿಕ ನಯನತಾರಾ ಸುಮಾರು 2 ವರ್ಷಗಳಿಗೂ ಹೆಚ್ಚು ಕಾಲ ಒಂಟಿಯಾಗಿದ್ದರು. ನನ್ನ ಜೀವನ ಇಲ್ಲಿದೆ ಮುಗಿದು ಹೋಗಿತ್ತು ಎಂದು ಭಾವಿಸಿದೆ. ನಾನೆಂದು ಮತ್ತೆ ಮತ್ತೊಬ್ಬರ ಸುಲಭವಾಗಿ ನಂಬುವುದಿಲ್ಲ ಎಂದುಕೊಂಡಿದ್ದೆ ಎಂಬುದಾಗಿ ಅವರು ಹೇಳಿಕೊಂಡಿದ್ದಾರೆ.
ಇದಾದ ಬಳಿಕ ಅವರು ವಿಘ್ನೇಶ್ ಶಿವನ್ ಎಂಬುವವರನ್ನು ವಿವಾಹವಾಗಿದ್ದಾರೆ. ತಮಿಳು ಚಿತ್ರರಂಗದಲ್ಲಿ ತೊಡಗಿಸಿಕೊಂಡಿರುವ ಬಹುಮುಖ ಪ್ರತಿಭೆ ಎನ್ನಬಹುದು, ಶಿವನ್ ನಟ, ನಿರ್ದೇಶಕ, ನಿರ್ಮಾಪಕ, ಗಾಯಕರಾಗಿ ಮತ್ತು ಗೀತರಚನೆಕಾರರಾಗಿ ಗುರುತಿಸಿಕೊಂಡಿದ್ದಾರೆ. ಸಿನಿಮಾ ಚಿತ್ರೀಕರಣದ ಸಮಯದಲ್ಲಿಯೇ ಇಬ್ಬರ ನಡುವೆ ಪ್ರೇಮಾಂಕುರವಾಗಿ ಪ್ರೀತಿಯಾಗಿ ಬಳಿಕ ಮದುವೆಯಾದರಂತೆ.
ಈಗ ನಯನತಾರಾ ತಮ್ಮ ಸಂಬಂಧದಲ್ಲಿ ಈ ರೀತಿ ಒಡಕು ಮೂಡಲು ಏನೆಲ್ಲಾ ಕಾರಣವಾಯಿತು ಎಂದು ಬಹಿರಂಗಪಡಿಸಿದ್ದಾರೆ. ನಾನು ಪ್ರತಿಯೊಂದು ಸಂಬಂಧದಿಂದ ಹೊರಬಂದಾಗಲು ಪ್ರಶ್ನೆಗಳ ಎದುರಿಸಿದ್ದೆ. ನನ್ನದೇ ತಪ್ಪು ಎನ್ನುವಂತೆ ಬಿಂಬಿಸಿದ್ದರು. ನಾನು ನನ್ನ ಹಿಂದಿನದನ್ನು ಬಹಿರಂಗವಾಗಿ ತಿಳಿಸದ ಕಾರಣ, ಜನರು ತಮ್ಮದೇ ಆದ ಕಥೆಗಳನ್ನು ಬರೆಯಲು ಪ್ರಾರಂಭಿಸಿದರು. ಅವರು ಕೆಟ್ಟದ್ದನ್ನು ಊಹಿಸಲು ಪ್ರಾರಂಭಿಸಿದರು. ಆದ್ರೆ ಪುರುಷರಿಗೆ ಯಾವ ಪ್ರಶ್ನೆಯೂ ಕೇಳಲಿಲ್ಲ. ಅವರದ್ದು ಏನು ತಪ್ಪಿಲ್ಲ ಎನ್ನುವಂತೆ ಬಿಂಬಿಸಿದ್ದರು ಎಂದು ನಟಿ ಹೇಳಿಕೊಂಡಿದ್ದಾರೆ.
ಸದ್ಯ ಈಗ ನಯನತಾರಾ ಹಾಗೂ ನಟ ಧನುಷ್ ನಡುವೆ ಸಿನಿಮಾ ದೃಶ್ಯ ಒಂದರ ಬಳಕೆಗೆ ಸಂಬಂಧಿಸಿದ್ದಂತೆ ಒಡಕು ಮೂಡಿದೆ. ನಟಿ ವಿರುದ್ಧ ಧನುಷ್ ಬರೋಬ್ಬರಿ 10 ಕೋಟಿ ರೂಪಾಯಿ ಲೀಗಲ್ ನೋಟಿಸ್ ಜಾರಿ ಮಾಡಿದ್ದಾರೆ.



Click it and Unblock the Notifications
