Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ರೇಮಂಡ್ ಮಾಲಿಕ 11000 ಕೋಟಿ ಜೀವನಾಂಶ ನೀಡಬೇಕೆಂದ ಪತ್ನಿ: ಕರ್ಮ ಬಿಡಲ್ಲ ಎಂದು ಜನರು ಮಾತನಾಡುತ್ತಿರುವುದೇಕೆ?
ಮಾಡಿದುಣ್ಣೋ ಮಹರಾಯ, ತಲೆಗೆ ಹಾಕಿದ ನೀರು ಕಾಲಿಗೆ ಬರಲೇಬೇಕು ಎಂಬ ಗಾದೆ ಮಾತುಗಳು ರೇಮಂಡ್ ಕಂಪನಿ ಮಾಲೀಕ ಗೌತಮ್ ಸಿಂಗನೇಯ ಅವರ ಈಗೀನ ಸ್ಥಿತಿ ಬಗ್ಗೆ ಹೇಳುತ್ತದೆ. ರೇಮಂಡ್ ಬಟ್ಟೆ ಯಾರಿಗೆ ತಾನೆ ಗೊತ್ತಿಲ್ಲ, ರೇಮೆಂಡ್ ಬಟ್ಟೆಗಳೆಂದರೆ ಪ್ರತಿಷ್ಠೆಯ ಸಂಕೇತ.
ಆದ್ದರಿಂದಲೇ ಮದುವೆ, ಬ್ಯುಸ್‌ನೆಸ್ ಮೀಟಿಂಗ್ ಇಂಥ ಕಡೆಗಳಿಗೆ ಹೋಗುವಾಗ ರೇಮಂಡ್ ಬಟ್ಟೆ ಧರಿಸಲು ಇಷ್ಟಪಡುತ್ತಾರೆ. ರೇಮಂಡ್ ಎಂಬ ಕಂಪನಿಯನ್ನು ಕಟ್ಟಿ ಬೆಳೆಸಿರುವುದು ವಿಜಯಪತ್ ಸಿಂಗನೇಯ, ಈಗ ಇವರದ್ದು ಒಂದು ದುರಂತ ನಾಯಕನ/ ತಂದೆಯ ಕತೆ. ಮಗ ತಾನು ಮಾಡಿದ ಕರ್ಮಗಳಿಗೆ ಈಗ ಫಲ ಅನುಭವಿಸುವಂತಾಗಿದೆ. ತಂದೆಯ ಕತೆ ಹೇಳಿದಾಗ ಮಾತ್ರ ಮಗನಿಗೆ ತಕ್ಕ ಶಾಸ್ತಿಯಾಗಿದೆ ಎಂದು ನಿಮಗನಿಸುವುದು.

ರೇಮಂಡ್ ಕಂಪನಿ ಕಟ್ಟಿ ಬೆಳೆಸಿದ ನಾಯಕ ಬೀದಿಗೆ ಬಂದ ಕತೆ
ರೇಮಂಡ್ ಕಂಪನಿಯ ಮಾಲೀಕ ವಿಜಯಪತ್ ಸಿಂಗನೇಯ. ರೇಮಂಡ್ ಎಂಬ ಕಂಪನಿಯನ್ನು ಕಟ್ಟಿ ಬೆಳೆಸಿದ ವ್ಯಕ್ತಿ. ಕೋಟಿಗಟ್ಟಲೆ ಆಸ್ತಿಯನ್ನು ಮಾಡುತ್ತಾರೆ. ಇವರಿಗೆ ಇಬ್ಬರು ಪುತ್ರರರು, ಮೊದಲನೇಯ ಮಗ ಅಪ್ಪನ ಆಸ್ತಿಯಲ್ಲಿ ನನಗೇನೂ ಬೇಡ ಎಂದು ಹೇಳಿ ವಿದೇಶಕ್ಕೆ ಹೋಗುತ್ತಾನೆ, ಎರಡನೇಯ ಮಗ ಅಪ್ಪನ ವ್ಯವಹಾರಗಳಿಗೆ ಸಹಾಯ ಮಾಡುತ್ತಾ ಅಪ್ಪನ ಜೊತೆ ಇರುತ್ತಾನೆ, ಆತನೇ ಗೌತಮ್ ಸಿಂಗನೇಯ. ಅಪ್ಪನಿಗೆ ಮಗನೆಂದರೆ ತುಂಬಾನೇ ಮಮಕಾರ. ತಮ್ಮ ಕಂಪನಿಯ ಜವಾಬ್ದಾರಿಗಳನ್ನು ಮೆಲ್ಲಗೆ ಮಗನಿಗೆ ನೀಡಲಾರಂಭಿಸುತ್ತಾರೆ, ಮಗನು ಅಪ್ಪ ಕಟ್ಟಿದ ಸಾಮ್ರಾಜ್ಯವನ್ನು ಮತ್ತಷ್ಟು ಬೆಳೆಸುತ್ತಾನೆ, ಅಪ್ಪನಿಗೆ ತನ್ನ ಮಗನ ಮೇಲೆ ತುಂಬಾನೇ ನಂಬಿಕೆ ಬರುತ್ತದೆ. ನನ್ನ ಉದ್ಯಮ ನೋಡಿಕೊಳ್ಳಲು ನನ್ನ ಮಗನಿದ್ದಾನೆ, ಇನ್ನು ನಾನು ಆರಾಮವಾಗಿ ಜೀವನ ಕಳೆಯಬೇಕೆಂದು ಬಯಸಿ ಎಲ್ಲಾ ಆಸ್ತಿಯನ್ನು ಮಗನಿಗೆ ಬರೆದುಕೊಡುತ್ತಾರೆ, ಅಲ್ಲಿ ರೇಮಂಡ್ ಎಂಬ ಸಾಮ್ರಾಜ್ಯ ಕಟ್ಟಿದ ವ್ಯಕ್ತಿಯ ಅಧಪತನ ಶುರುವಾಗುವುದು..
ಅಪ್ಪನನ್ನು ಬೀದಿ ತಳ್ಳಿದ ಮಗ
ಅಪ್ಪ ಯಾವಾಗ ತನ್ನೆಲ್ಲಾ ಆಸ್ತಿಯನ್ನು ಮಗನಿಗೆ ಬರೆದು ಕೊಡುತ್ತಾರೋ ಅಲ್ಲಿಂದ ಮಗ ತನ್ನ ನಿಜ ಮುಖ ತೋರಿಸಲಾರಂಭಿಸುತ್ತಾನೆ. ಅಪ್ಪನ ಎಲ್ಲಾ ಆಸ್ತಿ ಪಡೆಯುವ ಮಗ, ಅಪ್ಪನಿಗೆ ಏನನ್ನೂ ಕೊಡದೆ ಬೀದಿಗೆ ತಳ್ಳಿ ಬಿಡುತ್ತಾನೆ. ಕೋಟಿಗಳ ಒಡೆಯ ಎಲ್ಲವನ್ನೂ ಕಳೆದುಕೊಂಡಾಗ, ಅದರಲ್ಲೂ ಮಗನಿಂದಲೇ ಮೋಸ ಹೋದಾಗ ಹೇಗಾಗಬೇಡ?
ಪೋಷಕರಿಗೆ ಅತ್ಯಂತ ಮುಖ್ಯವಾದ ಟಿಪ್ಸ್ ನೀಡಿದ ವಿಜಯಪತ್
ಪೋಷಕರು ಮಕ್ಕಳಿಗೆ ಎಲ್ಲವನ್ನು ನೀಡುವುದಕ್ಕಿಂತ ಮುಂಚೆ ತುಂಬಾ ಎಚ್ಚರವಹಿಸಬೇಕು. ವಿಲ್ ಬರೆದಿಡಿ, ನಿಮ್ಮ ನಂತರ ಮಕ್ಕಳಿಗೆ ಆಸ್ತಿ ಹೋಗುವಂತೆ ಇರಲಿ, ಮೊದಲೇ ಎಲ್ಲಾ ಆಸ್ತಿ ನೀಡಬೇಡಿ ಎಂಬುವುದಾಗಿ ಹೇಳಿದ್ದಾರೆ.
ಮಗನನ್ನು ಬಿಡಲಿಲ್ಲ ಕರ್ಮ
ನಾವು ಮಾಡಿದ ಕರ್ಮ ನಮ್ಮನ್ನು ಬಿಡುವುದಿಲ್ಲ ಎಂದು ಹೇಳುವುದು ಸುಮ್ಮನ್ನಲ್ಲ, ಅಷ್ಟೊಂದು ಕೋಟಿ ಆಸ್ತಿ ತನ್ನದಾಗಿಸಿದ, ಅಪ್ಪನಿಗೆ ಒಂದಿಷ್ಟೂ ಏನೂ ಕೊಡದೆ ಎಲ್ಲವನ್ನು ನಾನೇ ಅನುಭವಿಸುತ್ತೇನೆ ಎಂದು ಅಹಂಕಾರದಿಂದ ಮೆರೆದಾಡಿದ, ಆದರೆ ಕರ್ಮ ಅವನನ್ನು ಬಿಡಲಿಲ್ಲ. ಇಂದು ಹೆಂಡತಿ-ಮಕ್ಕಳು ಅವನಿಂದ ದೂರಾಗಿದ್ದಾರೆ. ಪತ್ನಿ ನವಾಜ್ ಮೋದಿ ವಿಚ್ಛೇದನ ಪಡೆದಿರುವುದು ಮಾತ್ರವಲ್ಲ 11,000 ಕೋಟಿ ಜೀವನಾಂಶ ಕೇಳಿದ್ದಾರೆ.
ಒಟ್ಟು ಆಸ್ತಿಯ ಶೇ. 75ರಷ್ಟು ಷೇರು ಕೇಳುತ್ತಿರುವ ಪತ್ನಿ
ಗಂಡನಿಂದ ದೂರಾದ ಪತ್ನಿ ರೇಮಂಡ್ ಗ್ರೂಪ್‌ನ ಶೇ. 75ರಷ್ಟು ಆಸ್ತಿ ನನ್ನ ಹೆಸರಿಗೆ ಬರಬೇಕು, ಆ ಆಸ್ತಿ ಮಕ್ಕಳಿಗೆ ಸೇರಬೇಕು, ಹಾಗಾಗಿ 11000 ಕೋಟಿ ನೀಡಬೇಕೆಂದು ಕೇಳುತ್ತಿದ್ದಾರೆ.
ವಿಲ್ ಬರೆಯುವುದಾಗಿ ಹೇಳಿದ ಗೌತಮ್
ತಾನು ತನ್ನ ತಂದೆಗೆ ಮಾಡಿದ ದ್ರೋಹ ಗೊತ್ತಿರುವುದರಿಂದ ಅದರಂತೆ ನನಗೆ ಆದರೆ ಎಂದು ಭಯಗೊಂಡಿರುವ ಗೌತಮ್ ತನ್ನ ಆಸ್ತಿಯು ತನ್ನ ನಂತರ ಮಕ್ಕಳಿಗೆ ಬರುವುದಾಗಿ ವಿಲ್ ಬರೆಯುವುದಾಗಿ ಹೇಳಿದ್ದಾರೆ, ಆದರೆ ಪತ್ನಿ ಅದಕ್ಕೆ ಒಪ್ಪುತ್ತಿಲ್ಲ.
ತನ್ನ ತಂದೆಯನ್ನು ಚೆನ್ನಾಗಿ ನೋಡಿಕೊಳ್ಳುತ್ತಿರುವ ಗೌತಮ್ ಪತ್ನಿ
ಗೌತಮ್ ಆಸ್ತಿಯನ್ನು ಪಡೆದು ತನ್ನ ತಂದೆಯನ್ನು ಹೊರಹಾಕಿದ, ಆದರೆ ಆತನ ಪತ್ನಿ ತಮ್ಮ ತಂದೆಯನ್ನು ತುಂಬಾನೇ ಚೆನ್ನಾಗಿ ನೋಡಿಕೊಳ್ಳುತ್ತಿದ್ದಾರೆ.
ಕೌಟುಂಬಿಕ ದೌರ್ಜನ್ಯದ ಕೇಸ್ ಹಾಕಿರುವ ಪತ್ನಿ
ಗೌತಮ್ ಸಿಂಗನೇಯ ನನಗೆ ಒದ್ದಿದ್ದಾರೆ, ನನ್ನ ಮಗಳಿಗೆ ಹೊಡೆಯಲು ಮುಂದಾಗಿದ್ದಾರೆ ಎಮದು ಹೇಳಿದ್ದಾರೆ.
ಜಗಳಕ್ಕೆ ಕಾರಣವೇನು ಎಂದು ಗೌತಮ್ ಪತ್ನಿ ಹೇಳಿದ್ದೇನು ಗೊತ್ತಾ?
ನಾನು ಬಾತ್‌ರೂಂ ಬಳಕೆ ಮಾಡುತ್ತಿದ್ದಾಗ ಅದೇ ಬಾತ್‌ರೂಂ ಆತ ಬಳಕೆ ಮಾಡಲು ಬಂದ, ನಮ್ಮ ಬೆಡ್‌ರೂಂ ಅಟ್ಯಾಚ್ ಆಗಿ ಮತ್ತೆರಡು ಬಾತ್ ರೂಂ ಇತ್ತು, ಆದರೆ ಆತ ನಮ್ಮನ್ನು ಕಂಟ್ರೋಲ್ ಮಾಡಬೇಕೆಂದು ನಮ್ಮ ಮೇಲೆ ದಬ್ಬಾಳಿಕೆ ಮಾಡುತ್ತಿದ್ದ, ಯಾವಾಗ ಅತುಲ್ಯಾ ಮಫ್ತಾಲ್ ( ಪತ್ನಿಗೆ ಹಿಂಸೆ ನೀಡಿ ರೋಡ್‌ಗೆ ತಳ್ಳಿದ ಉದ್ಯಮಿ) ನನ್ನ ರೋಲ್‌ಮಾಡಲು ಎಂದು ಹೇಳುತ್ತಿದ್ದ ಎಂಬುವುದಾಗಿ ಹೇಳಿದ್ದಾರೆ.
ಅಷ್ಟು ಕೋಟಿ ಸಂಪಾದಿಸಿದ ತಂದೆಯನ್ನು ಹೊರ ಹಾಕಿದ ಸುದ್ದಿ ಹೊರ ಬಂದ ಮೇಲೆ ಜನರು ಗೌತಮ್ ಸಿಂಗನೇಯವನ್ನು ತುಂಬಾನೇ ಟೀಕೆ ಮಾಡಿದ್ದರು, ಆದರೆ ಆತ ಹಣಬಲದಿಂದ ಮರೆಯುತ್ತಲೇ ಇದ್ದ. ಹೆಂಡತಿಗೆ ದೌರ್ಜನ್ಯ ನೀಡುವಾಗಲೂ ನನಗೆ ಹಣವಿದೆ, ನನ್ನನ್ನು ಏನೂ ಮಾಡೋಕೆ ಆಗಲ್ಲ ಎಂದು ಹೇಳುತ್ತಿದ್ದ ಎಂದು ಅವರ ಅವರ ಪತ್ನಿ ನವಾಜ ಹೇಳಿದ್ದಾರೆ. ಆದರೆ ನವಾಜ ಸಹಾಯಕ್ಕೆ ಅಂಬಾನಿ ಕುಟುಂಬ ನಿಂತಿದೆ, ಹೀಗಾಗಿ ಪೊಲೀಸ್ ಕೇಸ್ ಆಯ್ತು ಎಂಬುವುದಾಗಿ ಅವರು ಹೇಳಿದ್ದಾರೆ. ತಂದೆಯ ಕಣ್ಣೀರಿನ ಶಾಪ ಆತನಿಗೆ ತಟ್ಟಿತು ಎಂದು ಜನ ಮಾತನಾಡಿಕೊಳ್ಳುತ್ತಿದ್ದಾರೆ...
ಇವರ ಜೀವನ ನಿಜವಾಗಲೂ ಒಂದು ಪಾಠವೇ ಸರಿ ಅಲ್ಲವೇ?



Click it and Unblock the Notifications

