Latest Updates
-
ಪುರಿ ರಥಯಾತ್ರೆ 2026: ಭಕ್ತರೇ ಎಚ್ಚರ! ಸುಗಮ ದರ್ಶನಕ್ಕೆ ಇಲ್ಲಿವೆ ಪ್ರಮುಖ ಟಿಪ್ಸ್ -
ಭಾರತ-ಇಂಗ್ಲೆಂಡ್ ಪಂದ್ಯ ವೀಕ್ಷಿಸುವಾಗ ಬೆನ್ನು ನೋವು ಕಾಡುತ್ತಿದೆಯೇ? ಈ 8 ನಿಮಿಷದ ವ್ಯಾಯಾಮ ಟ್ರೈ ಮಾಡಿ! -
ಮದುವೆ ಸಂಭ್ರಮಕ್ಕೆ ಸಿದ್ಧರಾಗಿದ್ದೀರಾ? ಮಳೆಗಾಲದ ಮದುವೆಗೆ ಈ 5 ಟಿಪ್ಸ್ ಮರೆಯದಿರಿ! -
ಬೆಲೆ ಏರಿಕೆಯ ಬಿಸಿ: ಜೂನ್ CPI ವರದಿ ಮತ್ತು ನಿಮ್ಮ ಕಿಚನ್ ಬಜೆಟ್ ಉಳಿಸುವ ಸ್ಮಾರ್ಟ್ ಟಿಪ್ಸ್ -
ಸ್ವಿಗ್ಗಿ ಇನ್ಸ್ಟಾಮಾರ್ಟ್ ಗ್ರಾಹಕರಿಗೆ ಎಚ್ಚರಿಕೆ: ಹಾಲು, ಮೊಟ್ಟೆ ಖರೀದಿಸುವಾಗ ಈ ತಪ್ಪು ಮಾಡಬೇಡಿ! -
4-0 ಸೋಲಿನ ಆಘಾತದಲ್ಲಿ ಭಾರತೀಯ ಫ್ಯಾನ್ಸ್: ಏಕದಿನ ಸರಣಿಗೆ ಕಮ್ಬ್ಯಾಕ್ ಸಾಧ್ಯವೇ? ಇಲ್ಲಿದೆ ಪಂದ್ಯಗಳ ವೇಳಾಪಟ್ಟಿ ಮತ್ತು ಹೆಲ್ತ್ ಟಿಪ್ಸ್! -
ಮಾಸಿಕ ಶಿವರಾತ್ರಿ ಉಪವಾಸ: ಸುಸ್ತಾಗದಂತೆ ಇರಲು 6 ನಿಮಿಷದ ಸರಳ ವ್ಯಾಯಾಮ ಮತ್ತು ಟಿಪ್ಸ್ -
ಮನೆಯವರ ವಿರೋಧದ ನಡುವೆ ಮದುವೆ: ಅಲಹಾಬಾದ್ ಹೈಕೋರ್ಟ್ನಿಂದ ಜೋಡಿಗಳಿಗೆ ಸಿಕ್ಕಿತು ಭರ್ಜರಿ ರಕ್ಷಣೆ! -
ಮಳೆ ನಂತರ ದೆಹಲಿ-ಎನ್ಸಿಆರ್ನಲ್ಲಿ ಶುದ್ಧ ಗಾಳಿ: ನಿಮ್ಮ ಮನೆಯನ್ನು ಫ್ರೆಶ್ ಆಗಿಡಲು ಈ ಸರಳ ಟಿಪ್ಸ್ ಪಾಲಿಸಿ! -
ಯೋಗಿನಿ ಏಕಾದಶಿ: ಮಧುಮೇಹಿಗಳು ಉಪವಾಸ ಮಾಡುವಾಗ ಈ ಆರೋಗ್ಯ ಟಿಪ್ಸ್ ಮರೆಯದಿರಿ!
ಈ ರಾಶಿಯ ಸಂಗಾತಿ ಸಿಕ್ಕರೆ ಜಗಳ ಬಲು ದೂರ
ನಮ್ಮ ಸ್ವಭಾವಕ್ಕೂ ನಮ್ಮ ರಾಶಿಗೂ ಸಂಬಂಧವಿದೆಯೇ ಎಂದು ಜ್ಯೋತಿಷ್ಯ ಪ್ರಕಾರ ಹೇಳುವುದಾದರೆ ಇದೆ ಎಂದು ಹೇಳಬಹುದು. ಒಂದೊಂದು ರಾಶಿಯಲ್ಲಿ ಹುಟ್ಟುದವರಲ್ಲಿ ಕೆಲವೊಂದು ನಿರ್ದಿಷ್ಟವಾದ ಗುಣಗಳನ್ನು ಕಾಣಬಹುದು.
ಕೆಲವರಿಗೆ ಬೇಗನೆ ಕೋಪ ಬರುತ್ತದೆ, ಕೆಲವರಲ್ಲಿ ನಾಯಕತ್ವದ ಗುಣವಿರುತ್ತದೆ, ಇನ್ನು ಕೆಲವರು ಎಲ್ಲರೊಂದಿಗೆ ಹೊಂದಿಕೊಂಡು ಹೋಗುವ ಗುಣವನ್ನು ಹೊಂದಿರುತ್ತಾರೆ, ಮತ್ತೆ ಕೆಲವರನ್ನು ನೋಡಿದರೆ ಸದಾ ಕಲ ಕೆರೆದು ಜಗಳಕ್ಕೆ ಬರುತ್ತಾರೆ.
ಗುಣಗಳಲ್ಲಿ ಪ್ರತಿಯೊಬ್ಬ ಮನುಷ್ಯ ಭಿನ್ನವಾಗಿರುತ್ತದೆ, ಆದರೆ ಕೆಲವೊಂದು ಗುಣಗಳಲ್ಲಿ ಸಾಮ್ಯತೆ ಇರುತ್ತದೆ, ಗುಣಕ್ಕೂ ರಾಶಿಗೂ ಸಂಬಂಧವಿದೆ. ನಾವಿಲ್ಲಿ ಅತೀ ಕಡಿಮೆ ಜಗಳ ಮಾಡುವ ರಾಶಿಯವರ ಬಗ್ಗೆ ಹೇಳಿದ್ದೇವೆ. ಈ ರಾಶಿಯವರನ್ನು ನೀವು ಗಮನಿಸಿ ಬೇಕಾದರೆ ಜಗಳಕ್ಕೆ ಬರುವುದು ಬಲು ಅಪರೂಪ, ತಮ್ಮ ಶಕ್ತಿಯನ್ನು ಸುಮ್ಮನೆ ಜಗಳದಲ್ಲಿ ಏಕೆ ವೇಸ್ಟ್ ಮಾಡಬೇಕು ಎಂದು ಭಾವಿಸುವವರು, ಬನ್ನಿ ಯಾವೆಲ್ಲಾ ರಾಶಿಯವರಲ್ಲಿ ಆ ಗುಣವಿದೆ ಎಂದು ನೋಡೋಣ:

ಧನು ರಾಶಿ
ಈ ರಾಶಿಯವರು ತಮಗೆ ಬೇಕಾಗಿದ್ದನ್ನು ಪಡೆಯಲು ಸದಾ ಹೋರಾಡುತ್ತಾರೆ. ಆದರೆ ಸಂಗಾತಿ ವಿಷಯಕ್ಕೆ ಬಂದಾಗ ಬೇಗ ಕೋಪಗೊಳ್ಳುವುದಿಲ್ಲ, ಜಗಳ ಮಾಡುವುದಿಲ್ಲ. ಕೆಲವೊಂದು ವಿಷಯಗಳಿಗೆ ಕೋಪ ಬರುವುದು ಮನುಷ್ಯ ಸಹಜ ಗುಣ ತಾನೆ, ಇವರೂ ಕೂಡ ಅಷ್ಟೇ ಕೋಪಗೊಂಡರೂ ಬೇಗನೆ ತಣ್ಣಗಾಗುತ್ತಾರೆ, ತಾವೇ ಏನಾದರೂ ಜೋಕ್ ಹೇಳಿ ಸಂಗಾತಿಯನ್ನು ನಗಿಸಲು ಪ್ರಯತ್ನಿಸುತ್ತಾರೆ.

ಮೀನ ರಾಶಿ
ಇವರು ಒಂಥರಾ ಕೂಲ್ ಸ್ವಭಾವದರು, ಸದಾ ಕನಸ್ಸಿನ ಲೋಕದಲ್ಲಿ ಇರುತ್ತರೆ, ತುಂಬಾ ರೊಮ್ಯಾಂಟಿಕ್ ಆಗಿರುತ್ತಾರೆ ಅಲ್ಲದೆ ಜಗಳ ಇಂಥ ಪರಿಸ್ಥಿತಿಯನ್ನು ನಿಭಾಯಿಸಲು ಕೂಡ ತಿಳಿಯುವುದಿಲ್ಲ. ಸಂಗಾತಿಯನ್ನು ಟೀಕೆ ಮಾಡುವುದರಲ್ಲಿ ಎತ್ತಿದ ಕೈ, ಆದರೆ ಸಂಗಾತಿ ಜೊತೆಗೆ ಇವರೇ ರಾಜಿ ಮಾಡಿಕೊಳ್ಳುತ್ತಾರೆ.

ಕನ್ಯಾ ರಾಶಿ
ಕನ್ಯಾ ರಾಶಿಯವರು ಆದಷ್ಟು ಜಗಳ ತಡೆಗಟ್ಟಲು ಪ್ರಯತ್ನಿಸುತ್ತಾರೆ, ಏಕೆಂದರೆ ಅಂಥ ಪರಿಸ್ಥಿತಿ ಉಂಟಾದರೆ ತಾಳ್ಮೆ ತುಂಬಾ ಕಡಿಮೆ ಎಂಬುವುದು ಅವರಿಗೇ ಗೊತ್ತಿದೆ. ಅವರು ತಮ್ಮ ಭಾವನೆಗಳನ್ನು ಹೇಳಿಕೊಳ್ಳಲು ಅಷ್ಟು ಸಮರ್ಥರಲ್ಲ, ಆದ್ದರಿಂದ ಜಗಳವಾದರೆ ಮತ್ತಷ್ಟು ಮಾನಸಿಕ ಒತ್ತಡಕ್ಕೆ ಒಳಗಾಗುತ್ತಾರೆ. ಆದ್ದರಿಂದ ತಮ್ಮ ಕೋಪವನ್ನು ಆದಷ್ಟು ನಿಯಂತ್ರಿಸಲು ಪ್ರಯತ್ನಿಸುತ್ತಾರೆ.

ತುಲಾ ರಾಶಿ
ತುಲಾ ರಾಶಿಯವರು ಯಾವಾಗಲೂ ಶಾಂತಿ ಪ್ರಿಯರು. ಈ ರಾಶಿಯವರಿಗೆ ಪರಿಸ್ಥಿತಿ ನಿಭಾಯಿಸಲು ಗೊತ್ತಿರುತ್ತದೆ, ಏನಾದರೂ ತರ್ಕ ಬಂದರೆ ಪರಿಸ್ಥಿತಿ ತಣ್ಣಗಾಗುವವರಿಗೆ ವಾದ ಮಾಡಲು ಹೋಗುವುದಿಲ್ಲ. ಸಂಗಾತಿ ಜೊತೆ ತರ್ಕ ಮಾಡಿ ಜಗಳವಾಗುವುದನ್ನು ಆದಷ್ಟು ತಪ್ಪಿಸಲು ಪ್ರಯತ್ನಿಸುತ್ತಾರೆ.

ಮಕರ ರಾಶಿ
ಮಕರ ರಾಶಿಯವರಿಗೆ ಚಿಕ್ಕ-ಪುಟ್ಟ ಕೋಪ ಸಂಗಾತಿ ಮೇಲೆ ಬಂದರೂ ಅದನ್ನು ಪ್ರಕಟಿಸಲು ಹೋಗುವುದಿಲ್ಲ. ಒಂದು ವೇಳೆ ಇಬ್ಬರಲ್ಲಿ ಏನಾದರೂ ವೈಮನಸ್ಸು ಮೂಡಿದರೂ ಇವರು ಏಕೆ ಜಗಳವಾಯಿತು ಎಮದು ಚಿಂತಿಸುವ ಬದಲು ಜಗಳ ಹೇಗೆ ಮುಕ್ತಾಯ ಮಾಡೋಣ ಎಂದು ಯೋಚಿಸುತ್ತಾರೆ, ಅಲ್ಲದೆ ಅದು ಮತ್ತೆ ಮರುಕಳಿಸದಂತೆ ಎಚ್ಚರಿಕೆವಹಿಸುತ್ತಾರೆ.
ಈ ರಾಶಿಯವರಲ್ಲಿ ಈ ಗುಣಗಳಿರುತ್ತದೆ ಎಂದು ನೀವು ಕೂಡ ಒಪ್ಪುವಿರಿ ಅಲ್ಲವೇ?



Click it and Unblock the Notifications