Latest Updates
-
ಬಿಸಿಗಾಳಿಯ ಅಬ್ಬರ: ಸುಡುವ ಬಿಸಿಲಿನಲ್ಲಿ ಆರೋಗ್ಯ ಮತ್ತು ಫಿಟ್ನೆಸ್ ಕಾಪಾಡಿಕೊಳ್ಳುವುದು ಹೇಗೆ? -
ದೆಹಲಿ ಬಿಸಿಲಿನಲ್ಲಿ ಮದುವೆ ಸಂಭ್ರಮ: ಹೀಟ್ವೇವ್ ನಡುವೆ ನಿಮ್ಮ ಮದುವೆ ಪ್ಲಾನ್ ಬದಲಾಯಿಸುವುದು ಹೇಗೆ? -
ಬೇಸಿಗೆ ಬಿಸಿಲಿಗೆ ಮನೆ ತಂಪಾಗಿಡಲು ಈ ಟಿಪ್ಸ್ ಫಾಲೋ ಮಾಡಿ -
ಹೀಟ್ವೇವ್ ಎಚ್ಚರಿಕೆ: ಸುಡುವ ಬಿಸಿಲಿಗೆ ನಿಮ್ಮ ದೇಹ ತಂಪಾಗಿಸುವುದು ಹೇಗೆ? -
ಬಿಸಿಲ ಬೇಗೆಯಿಂದ ಪಾರಾಗಲು ಈ ಸ್ಮಾರ್ಟ್ ಟಿಪ್ಸ್ ಮಿಸ್ ಮಾಡ್ಬೇಡಿ -
ತೀವ್ರ ಶಾಖದ ಅಲೆ: ಬಿಸಿಲಿನಲ್ಲಿ ವ್ಯಾಯಾಮ ಮಾಡುವ ಮುನ್ನ ಎಚ್ಚರ! -
ಅಕ್ಷಯ ತೃತೀಯ ಮದುವೆ: ಬಾಲ್ಯ ವಿವಾಹ ತಡೆಯಲು ನೀವೇನು ಮಾಡಬೇಕು? -
ಬಾಲ್ಕನಿ ಗಿಡಗಳು ಒಣಗುತ್ತಿವೆಯೇ? ಈ ಟಿಪ್ಸ್ ಪಾಲಿಸಿ! -
ಬಿಸಿಲಿನ ಬೇಗೆಯಿಂದ ಪಾರಾಗಲು ಈ ಆಹಾರಗಳೇ ನಿಮ್ಮ ರಕ್ಷಕ -
ಅಕ್ಷಯ ತೃತೀಯ 2026: ಈ ಹೊಸ ಟ್ರೆಂಡ್ಸ್ ಮಿಸ್ ಮಾಡ್ಬೇಡಿ!
ಈ ವಯಸ್ಸಿನಲ್ಲಿ ವಿವಾಹವಾದರೆ, ವಿಚ್ಛೇದನ ಸಮಸ್ಯೆ ಉದ್ಭವಿಸುವುದು ಬಲು ಅಪರೂಪ
ಮದುವೆ ಎಂಬುದು ಗಂಡು-ಹೆಣ್ಣಿನ ಅತೀ ಮುಖ್ಯವಾದ ಹಂತ. ಇಲ್ಲಿಂದ ಎಲ್ಲವೂ ಬದಲಾಗುತ್ತದೆ, ಗಂಡ-ಹೆಂಡತಿಗೆ ಹೊಸ ಹೊಸ ಜವಾಬ್ದಾರಿ ಹುಟ್ಟಿಕೊಳ್ಳುತ್ತವೆ. ಆದರೆ ಆ ಜವಾಬ್ದಾರಿಗಳನ್ನು ನಿಭಾಯಿಸುವ ಶಕ್ತಿ ಇಬ್ಬರಲ್ಲೂ ಇರಬೇಕು. ಆ ಶಕ್ತಿ ಬರಬೇಕಾದರೆ ಗಂಡು-ಹೆಣ್ಣು ಸರಿಯಾದ ವಯಸ್ಸಿನಲ್ಲಿ ಮದುವೆಯಾಗಬೇಕು. ಆಗ ಮಾತ್ರ ಇಬ್ಬರ ನಡುವೆ ಹೊಂದಾಣಿಕೆ ಮೂಡಿ, ಒಬ್ಬರನ್ನೋಬ್ಬರು ಹೆಚ್ಚು ಅರ್ಥ ಮಾಡಿಕೊಳ್ಳಲು ಸಹಾಯವಾಗುವುದು.
ಪ್ರಸ್ತುತ ಇರುವ ಆಧುನಿಕ ಜಗತ್ತಿನಲ್ಲಿ, ಹೊಂದಾಣಿಕೆ ಎಂಬುದು ಮರೆಯಾಗಿರುವ ಈ ಕಾಲದಲ್ಲಿ ವಯಸ್ಸು ತುಂಬಾ ಪರಿಣಾಮ ಬೀರುವುದು. ಸರಿಯಾದ ವಯಸ್ಸಿಗೆ ವಿವಾಹವಾಗದಿದ್ದರೆ, ಮುಂದೆ ಅದು ವಿಚ್ಛೇಧನಕ್ಕೆ ದಾರಿಯಾಗಬಹುದು. ಹಾಗಾದರೆ ಗಂಡು-ಹೆಣ್ಣು ಮದುವೆಯಾಗಲು ಸರಿಯಾದ ವಯಸ್ಸೆಷ್ಟು ಎಂಬುದನ್ನು ಇಲ್ಲಿ ನೋಡೋಣ.
ವಿಚ್ಛೇದನ ಸಮಸ್ಯೆ ಉದ್ಭವಿಸದೇ ಇರಲು ಯಾವ ವಯಸ್ಸಿಗೆ ಗಂಡು-ಹೆಣ್ಣು ವಿವಾಹವಾಗಬೇಕು ಎಂಬುದನ್ನು ಈ ಕೆಳಗೆ ನೀಡಲಾಗಿದೆ:

ಮದುವೆಯ ಮೇಲೆ ಪ್ರಭಾವ ಬೀರುವ ಅಂಶಗಳು:
ಆರೋಗ್ಯಕರ ಮದುವೆ ಎಂದರೆ ಗಂಡ-ಹೆಂಡತಿಯ ನಡುವೆ ಯಾವುದೇ ಭಿನ್ನಾಭಿಪ್ರಾಯ ಇರುವುದಿಲ್ಲ ಎಂದಲ್ಲ; ಬದಲಾಗಿ, ಇದು ವಿಚ್ಛೇದನದ ಸಂಭವನೀಯತೆಯಿಲ್ಲದ ಮದುವೆಯನ್ನು ಸೂಚಿಸುತ್ತದೆ. ಕೆಲವು ತಜ್ಞರ ಪ್ರಕಾರ, ಮದುವೆಗೆ ಮುಂಚಿನ ಮಾನಸಿಕ ಆರೋಗ್ಯ, ವಯಸ್ಸು, ಶಿಕ್ಷಣದ ಮಟ್ಟ ಮತ್ತು ಆರ್ಥಿಕ ಸ್ಥಿತಿಗಳು ಹೆಚ್ಚಿನ ವಿವಾಹಗಳ ಮೇಲೆ ಪ್ರಭಾವ ಬೀರುವ ಕೆಲವು ಅಂಶಗಳಾಗಿವೆ.
ವಿಂಡ್ಸರ್ ವಿಶ್ವವಿದ್ಯಾನಿಲಯವು ಪ್ರಕಟಿಸಿದ ಸಂಶೋಧನಾ ಅಧ್ಯಯನದ ಪ್ರಕಾರ, ಯಶಸ್ವಿ ವಿವಾಹವು ಮಾನಸಿಕ ಅಸ್ವಸ್ಥತೆಯ ಸಾಧ್ಯತೆಗಳಾದ ಖಿನ್ನತೆ ಮತ್ತು ಮದ್ಯಪಾನ ಸೇವನೆಯನ್ನು ಕಡಿಮೆ ಮಾಡುತ್ತದೆ. ಅಂದರೆ ಮದುವೆಗೂ ಮುಂಚಿನ ಮಾನಸಿಕ ಆರೋಗ್ಯ ಕೆಟ್ಟಿದ್ದು, ಮದುವೆಯಾದ ಮೇಲೆ ಸಂಗಾತಿಯ ಪ್ರೋತ್ಸಾಹ, ಪ್ರೀತಿಯಿಂದ ಅದು ಸರಿಯಾಗಬಹುದು. ಇದರಿಂದ ಮಧ್ಯಪಾನದಂತಹ ಅಭ್ಯಾಸಗಳು ಕಡಿಮೆಯಾಗಬಹುದು. ಆದರೆ ವೈವಾಹಿಕ ಜೀವನ ಸರಿಯಾಗಿಲ್ಲದಿದ್ದರೆ, ಈ ದುರಭ್ಯಾಸ ದುಪ್ಪಟ್ಟಾಗುವ ಸಂಭವವಿದೆ, ಅದು ಗಂಡಿರಲಿ ಅಥವಾ ಹೆಣ್ಣಿರಲಿ.

ವಯಸ್ಸಿಗೂ, ಮದುವೆಗೂ ಇರುವ ಸಂಬಂಧ:
ಹೌದು, ವಯಸ್ಸೆಂಬುದು ನಮ್ಮ ಬುದ್ಧಿ ಹಾಗೂ ವ್ಯಕ್ತಿತ್ವ ರೂಪಿಸಿಕೊಳ್ಳುವ ಹೆಜ್ಜೆಯಾಗಿದೆ. ವಯಸ್ಸಾದಂತೆ, ನಮಗೆ ಯಾವುದು ಸರಿ, ಯಾವುದು ತಪ್ಪು ಎಂಬುದು ಸರಿಯಾಗಿ ಅರ್ಥವಾಗುತ್ತದೆ. ಏನೂ ಅರಿಯದ ವಯಸ್ಸಿಗೆ ಮದುವೆಯಾಗಿ ಸಮಸ್ಯೆ ಅನುಭವಿಸಿರುವ ಅದೆಷ್ಟೋ ಉದಾಹರಣೆಗಳು ನಮ್ಮ ಮುಂದಿದೆ. ಹೆಚ್ಚಿನ ಲವ್ ಮ್ಯಾರೇಜ್ ಗಳು ಮುರಿದು ಬೀಳುವುದಕ್ಕೆ ಇದು ಒಂದು ಕಾರಣ. ಏಕೆಂದರೆ ಹದಿಹರೆಯದ ವಯಸ್ಸಿನಲ್ಲಿ ಪ್ರೀತಿಗೆ ಬಿದ್ದು, ಎಲ್ಲರನ್ನು ತೊರೆದು ವಿವಾಹವಾಗುತ್ತಾರೆ. ಆದರೆ ಸಮಯ ಕಳೆದಂತೆ ನಿಜ ಜೀವನದ ಅರಿವಾಗುವುದು. ಆದ್ದರಿಂದ ಸರಿಯಾದ ವಯಸ್ಸಿಗೆ ವಿವಾಹವಾದರೆ ಇಂತಹ ಸಮಸ್ಯೆಗಳನ್ನು ದೂರಮಾಡಬಹುದು.

ಮದುವೆಗೆ ಸರಿಯಾದ ವಯಸ್ಸೆಷ್ಟು?:
ಮದುವೆಯ ಯಶಸ್ಸು ಹಾಗೂ ಸೋಲಿಗೆ ಗಂಡು-ಹೆಣ್ಣಿನ ವಯಸ್ಸು ಕೂಡ ಒಂದು ಪ್ರಮುಖ ಅಂಶವಾಗಿದೆ. ಈಗಿನ ಸನ್ನಿವೇಶಕ್ಕೆ ಗಂಡು ಹೆಣ್ಣಿನ ವಯಸ್ಸು, 25-32 ವರ್ಷಗಳ ನಡುವೆ ಇದ್ದರೆ ಉತ್ತಮ. ಈ ವಯಸ್ಸಿನ ನಡುವೆ ಮದುವೆಯಾದರೆ, ಆ ವಿವಾಹ ಸೋಲುವುದು ಅಥವಾ ವಿಚ್ಛೇದನದ ವರೆಗೆ ಹೋಗುವುದು ತೀರಾ ಕಡಿಮೆ.
ಅಲ್ಬರ್ಟಾ ವಿಶ್ವವಿದ್ಯಾನಿಲಯದ ತಜ್ಞರು ತಡವಾಗಿ ಮದುವೆಯಾಗುವ ಜನರಿಗಿಂತ ಬೇಗ ಮದುವೆಯಾಗುವ ವ್ಯಕ್ತಿಗಳು ಖಿನ್ನತೆಗೆ ಒಳಗಾಗುವ ಸಾಧ್ಯತೆಗಳಿವೆ ಎಂದು ಹೇಳುತ್ತಾರೆ. ಈ ನಿರ್ದಿಷ್ಟ ವಯಸ್ಸಿನಲ್ಲಿ ಮದುವೆ ಆಗುವುದು ಮುಖ್ಯ ಎಂಬುದನ್ನು ಒತ್ತಿ ಹೇಳುತ್ತದೆ.

25ಕ್ಕಿಂತ ಮೊದಲು ವಿವಾಹವಾದರೆ ಏನಾಗಬಹುದು?:
ಸಮಾಜಶಾಸ್ತ್ರಜ್ಞರು ಮತ್ತು ಮನಶ್ಶಾಸ್ತ್ರಜ್ಞರು, ವರ್ಷಗಳ ಕಾಲ ಸಂಶೋಧನೆ ಮತ್ತು ವ್ಯಾಪಕವಾದ ದತ್ತಾಂಶ ವಿಶ್ಲೇಷಣೆಯ ನಂತರ ನೀಡಿರುವ ಮಾಹಿತಿ ಪ್ರಕಾರ, ಇಪ್ಪತ್ತರ ಮಧ್ಯದಲ್ಲಿ ಮದುವೆಯಾದರೆ, ಅವರು ಸಂಗಾತಿಯನ್ನು ತಿರಸ್ಕರಿಸುವ ಸಾಧ್ಯತೆಯಿದೆ. ಇದಕ್ಕೆ ಕಾರಣ, 25 ವರ್ಷಕ್ಕಿಂತ ಮುಂಚೆ ವ್ಯಕ್ತಿಯ ವ್ಯಕ್ತಿತ್ವ ಸರಿಯಾಗಿ ರೂಪುಗೊಂಡಿರುವುದಿಲ್ಲ, ಇದರರ್ಥ ವ್ಯಕ್ತಿತ್ವವು 25 ವರ್ಷ ವಯಸ್ಸಿನವರೆಗೂ ವಿಕಸನಗೊಳ್ಳುತ್ತಿದೆ. ಆದ್ದರಿಂದ ಆ ವಯಸ್ಸು ದಾಟಿದ ಮೇಲೆ ಮದುವೆಯಾಗುವುದು ಉತ್ತಮ.

32ರ ನಂತರ ವಿವಾಹವಾದರೆ ಏನಾಗುವುದು?:
32 ವರ್ಷಗಳ ನಂತರ ಮದುವೆಯಾಗುವ ಜನರು, ಹಣಕಾಸಿನ ಪ್ರೇರಣೆಗಳ ಹೊರತಾಗಿ ಬೇರೆ ಕಾರಣಗಳಿಗಾಗಿ ಮದುವೆಯಾಗುತ್ತಾರೆ. ಹಣಕಾಸು ಸ್ಥಿತಿ ಇಬ್ಬರನ್ನೂ ಚೆನ್ನಾಗಿದ್ದು, ಅವರಲ್ಲಿ, ವ್ಯಕ್ತಿತ್ವ ಸಂಘರ್ಷ ಉಂಟಾಗಬಹುದು. ಈ ವಯಸ್ಸು ದಾಟಿದ ಮೇಲೆ ಮದುವೆ, ಸಂಗಾತಿ ಮೇಲಿನ ಆಸಕ್ತಿ ಸ್ವಲ್ಪ ಕಡಿಮೆಯಾಗುತ್ತಾ ಸಾಗುತ್ತದೆ. ಈ ಸಂದರ್ಭದಲ್ಲಿ ವಿವಾಹವಾದರೆ, ಕೊನೆಗೆ ಅದು ವಿಚ್ಛೇದನಕ್ಕೆ ಕಾರಣವಾಗಬಹುದು. ಆದ್ದರಿಂದ 25-32 ವರ್ಷಗಳ ನಡುವೆ ನಡೆದ ವಿವಾಹವು ವಿಚ್ಛೇದನದಲ್ಲಿ ಕೊನೆಗೊಳ್ಳುವ ಸಾಧ್ಯತೆ ಕಡಿಮೆಯಾಗಿದೆ.



Click it and Unblock the Notifications











