For Quick Alerts
ALLOW NOTIFICATIONS  
For Daily Alerts

ಮೊದಲ ವೆಡ್ಡಿಂಗ್ ಆನಿವರ್ಸಿರಿ ಹೀಗೆ ಆಚರಿಸಿದರೆ, ಲೈಫ್ ಲಾಂಗ್ ನೆನಪಿರುತ್ತೆ

|

ಪ್ರತಿಯೊಬ್ಬ ದಂಪತಿಗೂ ತಮ್ಮ ಮೊದಲ ಮದುವೆ ವಾರ್ಷಿಕೋತ್ಸವ ಸ್ಪೆಷಲ್ ಆಗಿರುತ್ತದೆ. ಮೂರು ಗಂಟಿನ ಮೂಲಕ ಒಂದಾಗಿ ಬಾಳಲು ಆರಂಭವಾಗಿ ಒಂದು ವರ್ಷವಾಗಿರುತ್ತದೆ. ಈ ದಿನವನ್ನು ಸ್ಪೆಷಲ್ ಆಗಿ, ಸದಾ ಕಾಲ ನೆನಪಿಡುವಂತೆ ಆಚರಣೆ ಮಾಡಬೇಕು ಎಂಬ ಆಸೆ ಹೆಚ್ಚಿನವರದ್ದಾಗಿರುತ್ತದೆ. ಕೆಲವು ದಂಪತಿಗಳು ಈ ದಿನವನ್ನು ಇಡೀ ಕುಟುಂಬದ ಜೊತೆ ಸಂಭ್ರಮಿಸಿದರೆ, ಇನ್ನೂ ಕೆಲವರಿಗೆ ಗಂಡ-ಹೆಂಡತಿ ಇಬ್ಬರೇ ಪ್ರತ್ಯೇಕವಾಗಿ ಆಚರಿಸಿ, ಮತ್ತಷ್ಟು ಭಾಂಧವ್ಯ ಗಟ್ಟಿ ಮಾಡಿಕೊಳ್ಳುತ್ತಾರೆ. ನೀವೇನಾದರೂ, ಎರಡನೇ ಗುಂಪಿಗೆ ಸೇರುವವರಾಗಿದ್ದರೆ, ನಾವಿಂದು, ನಿಮ್ಮ ವಾರ್ಷಿಕೋತ್ಸವವನ್ನು ಸೂಪರ್ ಸ್ಪೆಷಲ್ ಮಾಡಲು ಕೆಲವೊಂದು ಐಡಿಯಾಗಳನ್ನು ನೀಡಲಿದ್ದೇವೆ.

ನಿಮ್ಮ ಮದುವೆ ವಾರ್ಷಿಕೋತ್ಸವವನ್ನು ವಿಶೇಷವಾಗಿಸಲು 5 ಮಾರ್ಗಗಳನ್ನು ಈ ಕೆಳಗೆ ನೀಡಲಾಗಿದೆ:

ವಾರ್ಷಿಕೋತ್ಸವದಂದು, ಫೋಟೋ ತೆಗೆಸಿಕೊಳ್ಳಿ:

ವಾರ್ಷಿಕೋತ್ಸವದಂದು, ಫೋಟೋ ತೆಗೆಸಿಕೊಳ್ಳಿ:

ನಿಮ್ಮ ಮೊದಲ ವಾರ್ಷಿಕೋತ್ಸವದ ದಿನದಂದು, ಕೆಲವು ಸೂಪರ್ ರೋಮ್ಯಾಂಟಿಕ್ ಅನಿವರ್ಸರಿ ಪೋಟೋಗಳನ್ನು ಕ್ಲಿಕ್ ಮಾಡಿ. ಇದು ನಿಮ್ಮ ಮೊದಲ ವಾರ್ಷಿಕೋತ್ಸವವನ್ನು ನೆನಪಿಟ್ಟುಕೊಳ್ಳಲು ಉತ್ತಮ ಮಾರ್ಗವಾಗಿದೆ. ಕಾಲ ಕಳೆದು, ಹಿಂತಿರುಗಿ ನೋಡಲು ಪ್ರತಿ ಚಿಕ್ಕ ಕ್ಷಣವನ್ನು ವಿಶೇಷವಾಗಿಸಿಕೊಳ್ಳಬೇಕು. ನಿಮ್ಮ ಸಂಗಾತಿಯೊಂದಿಗೆ ಫೋಟೋ ಕ್ಲಿಕ್ ಮಾಡುವುದರ ಮೂಲಕ ದಿನವನ್ನು ಸೂಪರ್ ಸ್ಪೆಷಲ್ ಆಗಿ ಮಾಡಿ. ಇದಕ್ಕಾಗಿ ಸ್ಟುಡಿಯೋಗೆ ಹೋಗಿ ವೃತ್ತಿಪರವಾಗಿ ಕ್ಲಿಕ್ ಮಾಡುವ ಅಗತ್ಯವಿಲ್ಲ. ನೀವೇ ಕ್ಲಿಕ್ ಮಾಡಿಕೊಂಡು, ಆನಂದಿಸಿ.

ಒಟ್ಟಿಗೆ ಸೇರಿ ಅಡುಗೆ ಮಾಡಿ:

ಒಟ್ಟಿಗೆ ಸೇರಿ ಅಡುಗೆ ಮಾಡಿ:

ನಿಮ್ಮ ಮೊದಲ ವಾರ್ಷಿಕೋತ್ಸವದ ದಿನವನ್ನು ವಿಶೇಷವಾಗಿಸಲು, ನಿಮ್ಮ ಸಂಗಾತಿಯೊಂದಿಗೆ ಸೇರಿ ಅಡುಗೆ ಮಾಡಬಹುದು. ನಿಮ್ಮ ನೆಚ್ಚಿನ ಭಕ್ಷ್ಯಗಳನ್ನು ಒಟ್ಟಿಗೆ ತಯಾರಿಸಿ, ಇಬ್ಬರೂ ಸೇರಿ ಊಟವನ್ನು ಆನಂದಿಸಿ. ಇದು ಉತ್ತಮ ನೆನಪುಗಳನ್ನು ಸೃಷ್ಟಿಸುವುದು ಖಚಿತ. ಆದರೆ, ನಿಮ್ಮ ಸಂಗಾತಿಗೆ ಇಷ್ಟವಾದ ಸಿಹಿಭಕ್ಷ್ಯವನ್ನು ತಯಾರಿಸಲು ಮರೆಯಬೇಡಿ. ಈ ಸಣ್ಣ ಸಣ್ಣ ಕ್ಷಣಗಳೇ ಮುಂದೆ ಅಗಾಧ ಖುಷಿಯನ್ನು ನೀಡುವಂತದ್ದು, ಇವೆಲ್ಲಾ ಮರೆಯಲಾಗದ ನೆನಪುಗಳು.

ದೇವಾಲಯಕ್ಕೆ ಭೇಟಿ ನೀಡಿ:

ದೇವಾಲಯಕ್ಕೆ ಭೇಟಿ ನೀಡಿ:

ನೀವು ಹೆಚ್ಚು ಆಧ್ಯಾತ್ಮಿಕ ದಂಪತಿಗಳಾಗಿದ್ದರೆ, ದೇವಾಲಯಕ್ಕೆ ಭೇಟಿ ನೀಡಬಹುದು . ದೇವಸ್ಥಾನಕ್ಕೆ ಭೇಟಿ ನೀಡುವುದರಿಂದ ಶಾಂತತೆ ಮತ್ತು ಪ್ರಶಾಂತತೆ ಮೂಡುತ್ತದೆ. ಧಾರ್ಮಿಕ ತಾಣಕ್ಕೆ ಭೇಟಿ ನೀಡುವುದೆಂದರೆ ಕೇವಲ ಪ್ರಾರ್ಥನೆ ಮಾಡುವುದಲ್ಲ, ಅದು ನಿಮ್ಮ ಸಂಗಾತಿಯೊಂದಿಗೆ ಆಧ್ಯಾತ್ಮಿಕತೆಯನ್ನು ಅನುಭವಿಸುವುದು. ಜೀವನವು ಸಾಕಷ್ಟು ವಿಚಲಿತ ಮತ್ತು ಗೊಂದಲಮಯವಾಗಿರುವಾಗ ಇಂತಹ ಜಾಗಗಳಿಗೆ ಭೇಟಿ ನೀಡಿದಾಗ ಮನಸ್ಸು ಹಗುರಾಗುವುದು. ನಿಮ್ಮ ಮೊದಲ ವಾರ್ಷಿಕೋತ್ಸವವು ನೀವು ಮತ್ತು ನಿಮ್ಮ ಸಂಗಾತಿ ಶಾಂತತೆಯ ಸಂತೋಷವನ್ನು ಕಂಡುಕೊಳ್ಳುವ ಸಮಯವಾಗಿರಲಿ.

ಡೇಟಿಂಗ್ ಮಾಡುತ್ತಿದ್ದ ಸ್ಥಳಕ್ಕೆ ಮರು ಭೇಟಿ ನೀಡಿ:

ಡೇಟಿಂಗ್ ಮಾಡುತ್ತಿದ್ದ ಸ್ಥಳಕ್ಕೆ ಮರು ಭೇಟಿ ನೀಡಿ:

ನೀವು ಮೊದಲು ಭೇಟಿಯಾದ ಸ್ಥಳ ಅಥವಾ ನಿಮ್ಮ ಮೊದಲ ಡೇಟ್‌ ನಂದು ನೀವು ಹೋದ ಸ್ಥಳಕ್ಕೆ ಮರುಭೇಟಿ ನೀಡುವುದು ಕೆಲವು ಹಳೆಯ ನೆನಪುಗಳನ್ನು ಮೆಲುಕು ಹಾಕಲು ಉತ್ತಮ ಮಾರ್ಗವಾಗಿದೆ. ಹಳೆಯ ನೆನಪುಗಳನ್ನು ನೆನಪಿಸಿಕೊಳ್ಳುವುದರಿಂದ ದಂಪತಿಗಳಲ್ಲಿ ಪ್ರೀತಿ ಮತ್ತು ವಾತ್ಸಲ್ಯದ ಬಂಧವನ್ನು ಗಾಢವಾಗಿಸಲು ಸಹಾಯ ಮಾಡುತ್ತದೆ. ನಿಮ್ಮಿಬ್ಬರಿಗೂ ಹತ್ತಿರವಾಗಿರುವ ಈ ವಿಶೇಷ ಸ್ಥಳದಲ್ಲಿ ನಿಮ್ಮ ಸಂಗಾತಿಗೆ ಸರ್ಪೈಸ್ ನೀಡಬಹುದು. ನಿಮ್ಮ ವಾರ್ಷಿಕೋತ್ಸವವನ್ನು ಆಚರಿಸಲು ಉತ್ತಮ ಮಾರ್ಗವಾಗಿದೆ.

ವೈನ್ ಜೊತೆ ಆಚರಿಸಿ:

ವೈನ್ ಜೊತೆ ಆಚರಿಸಿ:

ವೆಡ್ಡಿಂಗ್ ಆನಿವರ್ಸರಿಯನ್ನು ಸ್ವಲ್ಪ ಕ್ಲಾಸಿಕ್ ರೀತಿಯಲ್ಲಿ ಆಚರಿಸಲು ಬಯಸಿದರೆ, ಈ ವೈನ್ ಪಾರ್ಟಿ ಉತ್ತಮ ಆಯ್ಕೆ. ಮನೆಯಲ್ಲಿ ವೈನ್ ಇಲ್ಲದಿದ್ದರೆ ಆಚರಣೆಗಳು ಪೂರ್ಣಗೊಳ್ಳುವುದಿಲ್ಲ. ಆದ್ದರಿಂದ ಇಬ್ಬರೂ ಸೇರಿ ವೈನ್ ಪಾರ್ಟಿ ನಡೆಸುತ್ತಾ ಕಾಲ ಕಳೆಯಬಹುದು.

English summary

Ways To Make Your First Anniversary Special in Kannada

Here we talking about Ways To Make Your First Anniversary Special in Kannada, read on
Story first published: Saturday, March 5, 2022, 18:17 [IST]
X
Desktop Bottom Promotion