Latest Updates
-
ಮದರ್ಸ್ ಡೇ 2026: ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿರೋ ಈ ವಿಶೇಷ ಟ್ರೆಂಡ್ಸ್ ನೀವು ಮಿಸ್ ಮಾಡ್ಬೇಡಿ! -
ಬಿಸಿಲ ಝಳದಲ್ಲಿ ವರ್ಕೌಟ್ ಮಾಡ್ತಿದ್ದೀರಾ? ಹೀಟ್ವೇವ್ನಿಂದ ಪಾರಾಗಲು ಈ ಸಣ್ಣ ಬದಲಾವಣೆ ಸಾಕು! -
ತಾಯಂದಿರ ದಿನದ ಗೊಂದಲವೇ? ಅಮ್ಮ ಮತ್ತು ಅತ್ತೆ ಇಬ್ಬರನ್ನೂ ಖುಷಿಪಡಿಸಲು ಇಲ್ಲಿದೆ ಬೆಸ್ಟ್ ಪ್ಲಾನ್! -
ಅಮೆಜಾನ್ ಸೇಲ್ ಶುರು: ನಿಮ್ಮ ಬಾಲ್ಕನಿಯನ್ನು ಸುಂದರ ತೋಟವನ್ನಾಗಿಸಲು ಮಿಸ್ ಮಾಡ್ಬೇಡಿ ಈ ಬೆಸ್ಟ್ ಡೀಲ್ಸ್! -
ಬಿಸಿಲ ಧಗೆಯಿಂದ ಸುಸ್ತಾಗಿದ್ದೀರಾ? ದೇಹವನ್ನು ತಂಪಾಗಿಡಲು ಈ ಪಾನೀಯಗಳೇ ಮದ್ದು! -
ಅಮ್ಮನಿಗೆ ಕೊನೆಯ ನಿಮಿಷದಲ್ಲಿ ಗಿಫ್ಟ್ ಕೊಡಬೇಕಾ? ಈ ಟ್ರಿಕ್ಸ್ ಫಾಲೋ ಮಾಡಿ, ಅಮ್ಮನ ಮುಖದಲ್ಲಿ ನಗು ಮೂಡಿಸಿ! -
ಬಿಸಿಗಾಳಿಯ ಎಚ್ಚರಿಕೆ: ಮಧ್ಯಾಹ್ನ ವರ್ಕೌಟ್ ಮಾಡ್ತಿದ್ದೀರಾ? ಈ ತಪ್ಪು ನಿಮ್ಮ ಆರೋಗ್ಯಕ್ಕೆ ಕುತ್ತು ತರಬಹುದು! -
ಬಿಸಿಗಾಳಿಯ ನಡುವೆ ಮದುವೆ ಸಂಭ್ರಮ: ಅತಿಥಿಗಳ ಸುರಕ್ಷತೆಗಾಗಿ ನೀವು ಮಾಡಲೇಬೇಕಾದ ಬದಲಾವಣೆಗಳಿವು! -
ಬಿಸಿಗಾಳಿಯ ಅಬ್ಬರ ಶುರು: ನಿಮ್ಮ ಮನೆ ತಂಪಾಗಿರಲು ಮತ್ತು ಗಿಡಗಳನ್ನು ಉಳಿಸಲು ಈ ಸೀಕ್ರೆಟ್ ಟಿಪ್ಸ್ ಮಿಸ್ ಮಾಡ್ಬೇಡಿ! -
ಸುಡುವ ಬಿಸಿಲಿಗೆ ಸುಸ್ತಾಗಿದ್ದೀರಾ? ದೇಹವನ್ನು ತಂಪಾಗಿಡಲು ಈ ಆಹಾರ ಕ್ರಮ ಪಾಲಿಸಿ!
ವ್ಯಾಲೆಂಟೈನ್ ಡೇ ವೀಕ್ 2022: ಈ 4 ರಾಶಿಯ ಪ್ರೇಮಿಗಳು/ದಂಪತಿಗಳಿಗೆ ಸಮಸ್ಯೆಗಳಾಗಬಹುದು, ಎಚ್ಚರದಿಂದಿರಿ
ರೋಸ್ ಡೇ ಮೂಲಕ ಪ್ರೇಮಿಗಳ ವಾರ ಆರಂಭವಾಗಿ, ನಂತರ ಪ್ರಪೋಸ್ ಡೇ, ಚಾಕೊಲೇಟ್ ಡೇ, ಟೆಡ್ಡಿ ಡೇ, ಪ್ರಾಮಿಸ್ ಡೇ, ಹಗ್ ಡೇ, ಕಿಸ್ ಡೇ ಮತ್ತು ವ್ಯಾಲೆಂಟೈನ್ಸ್ ಡೇ ಮೂಲಕ ತೆರೆಬೀಳಲಿದೆ. ಪ್ರೇಮಿಗಳಿಗೆ ಈ ವಾರ ವಿಶೇಷವೆಂದು ಪರಿಗಣಿಸಲಾಗಿದ್ದು, ಈ ಸಮಯದಲ್ಲಿ, ಪರಸ್ಪರ ತಮ್ಮ ಪ್ರೀತಿಯನ್ನು ಬಹಿರಂಗವಾಗಿ ವ್ಯಕ್ತಪಡಿಸುವುದನ್ನು ಕಾಣಬಹುದು. ಜ್ಯೋತಿಷ್ಯಶಾಸ್ತ್ರದ ಪ್ರಕಾರ, ಈ ಪ್ರೇಮಿಗಳ ದಿನ ಅನೇಕ ರಾಶಿಚಕ್ರ ಚಿಹ್ನೆಗಳ ಪ್ರೀತಿಪಾತ್ರರಿಗೆ ವಿಶೇಷವಾಗಿರುತ್ತದೆ, ಆದರೆ ಕೆಲವು ರಾಶಿಚಕ್ರ ಚಿಹ್ನೆಗಳಿಗೆ ಈ ವಾರವು ಪ್ರೇಮ ಸಂಬಂಧಗಳ ವಿಷಯದಲ್ಲಿ ತೊಂದರೆದಾಯಕವಾಗಿರಬಹುದು. ಆ ರಾಶಿಗಳಾವುವು ಇಲ್ಲಿ ನೋಡೋಣ.
ವ್ಯಾಲೆಂಟೈನ್ಸ್ ವೀಕ್ 2022: ಈ 4 ರಾಶಿಚಕ್ರದ ಪ್ರೇಮಿಗಳು/ದಂಪತಿಗಳು ಸಮಸ್ಯೆಗಳನ್ನು ಎದುರಿಸಬಹುದು, ಅವುಗಳಾವುವು ಈ ಕೆಳಗೆ ನೀಡಲಾಗಿದೆ:

ಮಿಥುನ:
ಈ ವಾರದ ಆರಂಭದಲ್ಲಿ, ನಿಮ್ಮ ಸಂಗಾತಿಯೊಂದಿಗೆ ನೀವು ಜಗಳವಾಡಬಹುದು. ಮೂರನೇ ವ್ಯಕ್ತಿಯಿಂದ ಸಂಘರ್ಷದ ಪರಿಸ್ಥಿತಿ ಬರಬಹುದು. ಜೊತೆಗೆ ಈ ಕೋಪದಲ್ಲಿ, ನೀವು ತಪ್ಪು ನಿರ್ಧಾರ ತೆಗೆದುಕೊಳ್ಳಬಹುದು. ಮಾನಸಿಕ ನೆಮ್ಮದಿಗೆ ಭಂಗ ಬರುವ ಸಾಧ್ಯತೆ ಇದೆ. ಈ ಸಮಯದಲ್ಲಿ ಒಬ್ಬರನ್ನೊಬ್ಬರು ನಂಬುವ ಮೂಲಕ ನಿಮ್ಮ ಸಂಬಂಧವನ್ನು ಬಲಪಡಿಸಲು ಸಲಹೆ ನೀಡಲಾಗುತ್ತದೆ. ಇನ್ನೊಬ್ಬರ ಮಾತಿಗೆ ಎದುರಾಡದೇ, ಪರಸ್ಪರರ ದೃಷ್ಟಿಕೋನವನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸಿ.

ಸಿಂಹ:
ಈ ರಾಶಿಯ ಸ್ಥಳೀಯರು ತಮ್ಮ ಸಂಗಾತಿಗೆ ತಮ್ಮ ಪ್ರೀತಿಯನ್ನು ಬಹಿರಂಗವಾಗಿ ವ್ಯಕ್ತಪಡಿಸಬೇಕಾಗುತ್ತದೆ. ಸಮಯವನ್ನು ನೀಡದ ಕಾರಣ, ನಿಮ್ಮ ಸಂಗಾತಿಯೊಂದಿಗೆ ನೀವು ಜಗಳವಾಡಬಹುದು. ಕೆಲವು ವಿಷಯಗಳಲ್ಲಿ ಗಂಭೀರ ಸಂಘರ್ಷದ ಸಾಧ್ಯತೆಯೂ ಇದೆ. ಆದ್ದರಿಂದ, ನಿಮ್ಮನ್ನು ಶಾಂತವಾಗಿರಿಸಿಕೊಳ್ಳುವುದು ಮತ್ತು ನಿಮ್ಮ ಸಂಗಾತಿಗೆ ಗರಿಷ್ಠ ಸಮಯವನ್ನು ನೀಡುವುದು ಉತ್ತಮ. ಅವರ ಅಗತ್ಯಗಳನ್ನು ಅರ್ಥಮಾಡಿಕೊಳ್ಳಿ.

ಕನ್ಯಾ:
ಈ ವಾರ ವಿವಾಹಿತ ದಂಪತಿಗಳಿಗೆ ಒತ್ತಡದಿಂದ ಕೂಡಿರುತ್ತದೆ. ಕೆಲವು ವಿಷಯಗಳಲ್ಲಿ ಗಂಭೀರ ಸಂಘರ್ಷದ ಸಾಧ್ಯತೆ ಇದೆ. ನಿಮ್ಮ ಕೋಪವನ್ನು ನೀವು ನಿಯಂತ್ರಿಸಬೇಕು, ಇಲ್ಲದಿದ್ದರೆ ವಿಷಯಗಳು ಬಹಳ ಕೆಟ್ಟದ್ದಾಗಬಹುದು. ಸಂಬಂಧ ಮುರಿದು ಬೀಳುವ ಸಾಧ್ಯತೆಯೂ ಇದೆ. ಅವಿವಾಹಿತರ ಪ್ರೇಮ ಜೀವನಕ್ಕೂ ಈ ವಾರ ಒತ್ತಡ ಇರಲಿದೆ.

ಧನು:
ನಿಮ್ಮ ಪ್ರೇಮ ಜೀವನದಲ್ಲಿ ಯಾರಾದರೂ ಬಿರುಕು ಮೂಡಿಸಲು ಪ್ರಯತ್ನಿಸಬಹುದು. ಬೇರೆಯವರ ಅಭಿಪ್ರಾಯಕ್ಕೆ ಕಿವಿಗೊಡದಿರುವುದು ಉತ್ತಮ. ನಿಮ್ಮ ಸಂಗಾತಿಯಲ್ಲಿ ನಂಬಿಕೆ ಇರಲಿ. ಸಂಗಾತಿಯನ್ನು ಬಿಟ್ಟು ಮೂರನೆಯರ ಮಾತಿಗೆ ಮರುಳಾಗಬೇಡಿ. ನಿಮ್ಮ ಹೃದಯದಲ್ಲಿರುವ ಎಲ್ಲವನ್ನೂ ನಿಮ್ಮ ಸಂಗಾತಿಗೆ ಮುಕ್ತವಾಗಿ ಹೇಳಿ. ಇಲ್ಲವಾದಲ್ಲಿ ಸಮಸ್ಯೆಯಾಗುವ ಸಾಧ್ಯತೆಯಿದೆ.



Click it and Unblock the Notifications