Latest Updates
-
IND vs NZ 2nd ODI: ಪಂದ್ಯದ ದಿನ ಬೆಳಿಗ್ಗೆ ಫ್ರೆಶ್ ಆಗಿರಲು ಈ ಸಿಂಪಲ್ ಟಿಪ್ಸ್ ಫಾಲೋ ಮಾಡಿ! -
ಎನ್ಆರ್ಐಗಳೇ ಎಚ್ಚರ! ವಿದೇಶಿ ವಿಚ್ಛೇದನ ಭಾರತದಲ್ಲಿ ಸಿಂಧುವಲ್ಲ: ದ್ವಿವಿವಾಹದ ಅಪಾಯ ತಪ್ಪಿಸಿಕೊಳ್ಳುವುದು ಹೇಗೆ? -
ದೀಪಾವಳಿ ಸಿಹಿ ಕೊಳ್ಳುವ ಮುನ್ನ ಎಚ್ಚರ! ಕಲಬರಕೆ ಪತ್ತೆ ಹಚ್ಚುವುದು ಹೇಗೆ? -
IND vs NZ 1st ODI: ಈಡನ್ ಪಾರ್ಕ್ನಲ್ಲಿ ಸಿಕ್ಸರ್ಗಳ ಸುರಿಮಳೆ, ಫ್ಯಾಂಟಸಿ ಟೀಮ್ಗೆ ಯಾರನ್ನು ಆರಿಸಬೇಕು? -
ದೆಹಲಿ-ಎನ್ಸಿಆರ್ನಲ್ಲಿ ತೀವ್ರ ವಾಯು ಮಾಲಿನ್ಯ: ನಿಮ್ಮ ಶ್ವಾಸಕೋಶವನ್ನು ರಕ್ಷಿಸಿಕೊಳ್ಳಲು ಇಲ್ಲಿದೆ ತ್ವರಿತ ಗೈಡ್ -
ದೆಹಲಿ ಮಾಲಿನ್ಯದ ಹೊಡೆತ: ಶ್ವಾಸಕೋಶದ ಆರೋಗ್ಯ ಕಾಪಾಡಲು ಇಂದೇ ನಿಮ್ಮ ಆಹಾರದಲ್ಲಿ ಈ ಬದಲಾವಣೆ ಮಾಡಿ! -
ಧನ್ತೇರಸ್ ಶಾಪಿಂಗ್: ಬಂಗಾರ ಖರೀದಿಸುವ ಮುನ್ನ ಈ 5 ವಿಷಯ ಮರೆಯದಿರಿ, ಇಲ್ಲವಾದರೆ ಮೋಸ ಹೋಗ್ತೀರಾ! -
ಮುರಸು ಚಂಡಮಾರುತದ ಅಬ್ಬರ: ಮಳೆಯಲ್ಲಿ ವರ್ಕೌಟ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ದೀಪಾವಳಿ ಹಬ್ಬದ ಸಂಭ್ರಮದಲ್ಲಿ ದಂಪತಿಗಳ ಜಗಳ ತಪ್ಪಿಸಲು ಈ 7 ಮೈಕ್ರೋ-ಅಭ್ಯಾಸಗಳು ಮರೆಯದಿರಿ! -
ಮೊಟ್ಟೆ ಬೆಲೆ ಏರಿಕೆ: ಬಜೆಟ್ನಲ್ಲಿ ಪ್ರೋಟೀನ್ ಪಡೆಯಲು ಈ ಆಹಾರಗಳೇ ಬೆಸ್ಟ್!
ದಂಪತಿಗಳಿಬ್ಬರು ಆಗಾಗ್ಗೆ ಜಗಳ ಆಡ್ತೀರಾ? ಇಲ್ಲಿವೆ ಅದ್ಬುತ ಸಲಹೆಗಳು ..!
ಸಂಬಂಧದಲ್ಲಿ ಜಗಳ, ವಾದಗಳು ಸಾಮಾನ್ಯ. ಆದರೆ, ಅದೇ ನಡೆಯುತ್ತಿದ್ದರೆ, ಆ ಪ್ರೀತಿಗೆ ಅರ್ಥವಿರುವುದಿಲ್ಲ. ಕೆಲ ಪ್ರೇಮಿಗಳು ಅಥವಾ ದಂಪತಿಗಳು ಸಣ್ಣ ವಿಚಾರಕ್ಕೂ ಜಗಳವಾಡುವುದನ್ನು ಕಂಡಿರುತ್ತೀರಿ. ಇದರಿಂದ, ಅವರ ನಡುವಿನ ಭಾಂಧವ್ಯ ಹಾಗೂ ಸಂತೋಷಕ್ಕೆ ಧಕ್ಕೆ ಉಂಟಾಗುವುದಂತೂ ಸುಳ್ಳಲ್ಲ. ಅದಕ್ಕಾಗಿ ನಾವಿಂದು, ಇಡೀ ದಿನ ಜಗಳವಾಡುವುದನ್ನು ನಿಲ್ಲಿಸಲು ಏನು ಮಾಡಬೇಕು ಎಂಬುದನ್ನು ವಿವರಿಸಿದ್ದೇವೆ. ಈ ಸಲಹೆಗಳಿಂದ ಅವರು ತಮ್ಮ ನಡುವಿನ ಘರ್ಷಣೆಯನ್ನು ಕಡಿಮೆ ಮಾಡಬಹುದು.
ಹೆಚ್ಚು ಜಗಳವಾಡುವ ದಂಪತಿಗಳಿಗೆ, ಅದನ್ನ ಕಡಿಮೆ ಮಾಡಲು ಕೆಲವು ಸಲಹೆಗಳನ್ನು ಈ ಕೆಳಗೆ ನೀಡಲಾಗಿದೆ:

ಮೆಸೇಜ್ ಮೂಲಕ ಜಗಳವಾಡುವುದು ನಿಲ್ಲಿಸಿ:
ನೀವು ಕೋಪ ಮಾಡಿಕೊಂಡು ನಿಮ್ಮ ಸಂಗಾತಿಯಿಂದ ದೂರಹೋದಾಗ ಮೆಸೇಜ್ ಮೊರೆಹೋಗುವುದು ಸಾಮಾನ್ಯ. ಆದಾಗ್ಯೂ, ನಿಮ್ಮ ಸಂಗಾತಿಯನ್ನು ಅವಮಾನಿಸುವ ಸಂದೇಶಗಳನ್ನು ಕಳುಹಿಸುವುದು ಸರಿಯಲ್ಲ. ಈ ಮೂಲಕ ಜಗಳ ಮತ್ತಷ್ಟು ಹೆಚ್ಚಾಗುವುದು, ತೀವ್ರ ಸ್ವರೂಪ ಪಡೆದುಕೊಳ್ಳುವುದು. ಮೆಸೇಜ್ ಬದಲಾಗಿ, ವಿಷಯಗಳನ್ನು ಮಾತನಾಡಲು ವೈಯಕ್ತಿಕವಾಗಿ ಭೇಟಿ ಮಾಡಿ, ನೇರವಾಗಿ ಮಾತನಾಡಿ ಪರಿಹರಿಸಿಕೊಳ್ಳಿ.

ಬೈಗುಳದ ಸುರಿಮಳೆ ಸುರಿಸುವ ಮೊದಲು, ಅರೆಕ್ಷಣ ಯೋಚಿಸಿ:
ಯಾರಾದರೂ ನಿಮಗೆ ಅನ್ಯಾಯ ಮಾಡಿದ್ದಾರೆಂದು ನಿಮಗೆ ಅನಿಸಿದಾಗ ಅವರೊಂದಿಗೆ ಘೋರವಾದ ಪದಗಳ ಯುದ್ಧ ಮಾಡುವುದು ಆಹ್ಲಾದಕರವಾಗಿರುತ್ತದೆ. ಆದರೆ ನಾವು ಹೇಳುವ ಕೆಲವು ಪದಗಳನ್ನು ಹಿಂತೆಗೆದುಕೊಳ್ಳಲು ಸಾಧ್ಯವಿಲ್ಲ. ಮಾತು ಆಡಿದರೇ ಹೋಯಿತು ಎಂಬ ಮಾತೇ ಇದೆ. ಇವು ನಿಮ್ಮ ಸಂಬಂಧಕ್ಕೆ ಸರಿಪಡಿಸಲಾಗದ ಹಾನಿ ಉಂಟುಮಾಡಬಹುದು. ಆದ್ದರಿಂದ, ನಿಮ್ಮ ತಲೆಯಲ್ಲಿರುವ ವಾಕ್ಯವನ್ನು ಹೇಳುವ ಮುನ್ನ ಕೆಲವು ಸೆಕೆಂಡುಗಳಾದರೂ ಯೋಚಿಸಿ.

ಕೆಲವೊಮ್ಮೆ ವಾದವನ್ನು ತಪ್ಪಿಸಲು ಮಲಗುವುದೇ ಒಳಿತು:
ನೀವು ಎಂದಿಗೂ ಕೋಪದಲ್ಲಿ ನಿದ್ದೆ ಮಾಡಬಾರದು, ನಿಮ್ಮ ಸಂಗಾತಿಯೊಂದಿಗೆ ವಿಷಯವನ್ನು ಸರಿಪಡಿಸಿಕೊಂಡು ಮಲಗಬೇಕು ಎಂದು ಹೇಳುವುದನ್ನು ಕೇಳಿರುತ್ತೀರಿ. ಆದಾಗ್ಯೂ, ಜಗಳದ ಸಮಯದಲ್ಲಿ ಅದು ತಣ್ಣಗಾಗಲು ಮಲಗುವುದು ಅಥವಾ ದೂರ ಹೋಗುವುದು ಸಂಪೂರ್ಣವಾಗಿ ಸರಿಯಾದ ನಿರ್ಧಾರ. ಹೀಗೆ ಮಾಡುವುದರಿಂದ, ನಿಮ್ಮ ಸಂಗಾತಿಯನ್ನು ನೋಯಿಸಬಹುದಾದ ಮಾತುಗಳಿಂದ ನಿಮ್ಮನ್ನು ತಡೆಯಬಹುದು. ಕೆಲವೊಮ್ಮೆ ಮರುದಿನ ಎದ್ದಾಗ ನಿಮಗೆ ಹೊಸ ದೃಷ್ಟಿಕೋನವನ್ನು ನೀಡುತ್ತದೆ ಏಕೆಂದರೆ ಕೋಪವು ಕಡಿಮೆಯಾಗಿರುತ್ತದೆ.

ನಿಮ್ಮ ಭಾವನೆಗಳನ್ನು ವಿವರಿಸಲು ಪ್ರಯತ್ನಿಸಿ, ನಿಮ್ಮ ಸಂಗಾತಿಗೆ ಮನಸ್ಸನ್ನು ಓದಲಾಗುವುದಿಲ್ಲ:
ನಿಮ್ಮ ಸಮಸ್ಯೆಯನ್ನು ಪರಿಹರಿಸಲು ಉತ್ತಮ ಮಾರ್ಗವೆಂದರೆ ಅದು ನಿಮ್ಮನ್ನು ಏಕೆ ಕಾಡುತ್ತಿದೆ ಎಂಬುದನ್ನು ವಿವರಿಸುವುದು. ನಿಮ್ಮ ಸಂಗಾತಿಯು ನಿಮ್ಮನ್ನು ತುಂಬಾ ಪ್ರೀತಿಸುತ್ತಿದ್ದರೂ ಸಹ, ಅವರು ನಿಮ್ಮ ಮನಸ್ಸಿನ ಆಂತರಿಕ ಕಾರ್ಯಗಳು ಮತ್ತು ನಿಮ್ಮ ಭಾವನೆಗಳ ಬಗ್ಗೆ ತಿಳಿದಿರುವುದಿಲ್ಲ. ಅವುಗಳನ್ನು ಎಚ್ಚರಿಕೆಯಿಂದ ತಿಳಿಸಲು ಮತ್ತು ಅರ್ಥ ಮಾಡಿಸಲು ಪದಗಳನ್ನು ಬಳಸಿ.



Click it and Unblock the Notifications
