ಹೇಳಿಕೊಳ್ಳದಿರುವ ಈ ಆಸೆಗಳನ್ನ ತನ್ನ ಗೆಳೆಯ ಈಡೇರಿಸಿದರೆ, ಹುಡುಗಿಗೆ ಸಿಕ್ಕಾಪಟ್ಟೆ ಸಂತೋಷವಂತೆ

ಸಾಮಾನ್ಯವಾಗಿ ಹುಡುಗಿಯರಿಗೆ ತನ್ನ ಗೆಳೆಯ ತನ್ನನ್ನು ಮಗುವಿನಂತೆ ಮುದ್ದಾಗಿ ನೋಡಿಕೊಳ್ಳಬೇಕು ಎಂಬ ಆಸೆಯಿರುತ್ತದೆ. ಅದಕ್ಕಾಗಿ ಸದಾ ಹಂಬಲಿಸುತ್ತಲೂ ಇರುತ್ತಾರೆ. ಆದರೆ ಇದನ್ನು ಅರ್ಥಮಾಡಿಕೊಳ್ಳುವಲ್ಲಿ ಹೆಚ್ಚಿನ ಪುರುಷರು ವಿಫಲರಾಗುತ್ತಾರೆ. ಆದ್ದರಿಂದ, ಇಲ್ಲಿ ನಾವು ಹುಡುಗಿಯರು ಇಷ್ಟಪಡುವ ಆದರೆ ಹೇಳಿಕೊಳ್ಳದ ವಿಚಾರಗಳ ಬಗ್ಗೆ ವಿವರಣೆ ನೀಡಿದ್ದೇವೆ. ಇವುಗಳನ್ನು ನೀವು ನಿಮ್ಮ ಹುಡುಗಿಗೆ ಪ್ರಯತ್ನಿಸಿ.

ಹುಡುಗಿಯರು ತಮ್ಮ ಗೆಳೆಯರು ಮಾಡಬೇಕೆಂದು ಬಯಸುವ ಕೆಲವೊಂದು ಚಿಂತನಶೀಲ ಕೆಲಸಗಳನ್ನು ಈ ಕೆಳಗೆ ನೀಡಲಾಗಿದೆ:

ಪರಿಚಯ ಮಾಡಿಸಿ:

ಪರಿಚಯ ಮಾಡಿಸಿ:

ನೀವು ಯಾರನ್ನಾದರೂ ಭೇಟಿಯಾದಾಗ ಅವರನ್ನು ನಿಮ್ಮ ಗೆಳತಿಯೆಂದು ಪರಿಚಯಿಸಿ. ಅದು ಅದ್ಭುತ ಭಾವನೆ ನೀಡುವುದು. ಏಕೆಂದರೆ ನಾಲ್ಕು ಜನರ ಮುಂದೆ ಗರ್ವದಿಂದ ತನ್ನ ಗೆಳತಿ ಎಂದು ಹೇಳಿಕೊಳ್ಳುವ ಹುಡುಗ ನನ್ನವ ಎಂಬ ಭಾವನೆ ಅವರಲ್ಲಿ ಬರುವುದು.

ಕಾಳಜಿ ತೋರಿಸಿ:

ನಿಮ್ಮ ಹುಡುಗಿ ಕೆಲಸದಿಂದ ಮರಳಿ ಮನೆಗೆ ಬಂದಾಗ ಆಕೆಗೆ ಏನಾದರೂ ಎಂದು ಕೇಳಿ. ಇದನ್ನು ಆಕೆ ನಿರೀಕ್ಷೆ ಮಾಡುತ್ತಾಳೆ ಕೂಡ. ಇದು ಅವರಿಗೆ ತನ್ನ ಬಗ್ಗೆ ತನ್ನ ಹುಡುಗ ಎಷ್ಟು ಯೋಚಿಸುತ್ತಾನೆ ಎಂದು ತಿಳಿದುಕೊಳ್ಳಲು ಸಹಾಯವಾಗುವುದು.

ಫೋನ್ ದೂರವಿಡಿ:

ಫೋನ್ ದೂರವಿಡಿ:

ಇಬ್ಬರೂ ಒಟ್ಟಿಗೆ ಗುಣಮಟ್ಟದ ಸಮಯವನ್ನು ಕಳೆಯುತ್ತಿರುವಾಗ ನಿಮ್ಮ ಫೋನ್ ಅನ್ನು ದೂರವಿಡಿ. ಹೀಗೆ ಮಾಡಿದಾಗ ಆಕೆಯ ಮೇಲೆ ನೀವು ಹೆಚ್ಚು ಗಮನ ಹರಿಸುತ್ತೀರಿ ಎಂಬ ಭಾವನೆ ಆಕೆಗೆ ಬರುವುದು. ಜೊತೆಗೆ ಉತ್ತಮ ಸಮಯವನ್ನೂ ಕಳೆಯಬಹುದು.

ಉಡುಗೊರೆ ಕಡ್ಡಾಯ:

ಆಗಾಗ ಉಡುಗೊರೆಗಳನ್ನು ನೀಡುವುದು ಆಕೆಯ ಮುಖದಲ್ಲಿ ಸಂತೋಷ ತರುವ ಮತ್ತೊಂದು ಸಂಗತಿ. ಆಕೆಗೆ ಸಣ್ಣ-ಪುಟ್ಟ ಉಡುಗೊರೆಗಳನ್ನು ನೀಡುತ್ತಿರಿ. ಅದು ಹೂವುಗಳು ಅಥವಾ ಚಾಕೊಲೇಟ್ ಗಳಾಗಿರಲಿ, ನೀವು ಪ್ರೀತಿಯಿಂದ ಕೊಡುವ ಎನನ್ನಾದರೂ ಆಕೆ ಇಷ್ಟಪಡುತ್ತಾಳೆ.

ಧನ್ಯವಾದ ಹೇಳಿ:

ಧನ್ಯವಾದ ಹೇಳಿ:

ಸಂಬಂಧದಲ್ಲಿ ಕ್ಷಮೆ ಹಾಗೂ ಧನ್ಯವಾದ ಅನೇಕ ಬಾರಿ ಮಹತ್ತರ ಪಾತ್ರ ವಹಿಸುವುದು. ನಿಮಗಾಗಿ ಆಕೆ ಕಷ್ಟ ಪಟ್ಟು ಯಾವುದೋ ಅಡುಗೆ ತಯಾರಿಸಿದ್ದರೆ ಅಥವಾ ಹ್ಯಾಂಡ್ ಮೇಲೆ ಉಡುಗೊರೆ ತಯಾರಿಸಿದ್ದರೆ ಆಕೆಗೊಂದು ಥ್ಯಾಂಕ್ಯೂ ಹೇಳಿ. ಇದು ಅವಳಿಗೆ ಸಾರ್ಥಕ ಭಾವನೆ ತರುತ್ತದೆ.

ಪ್ರೈವೆಸಿ ನೀಡಿ:

ನೀವು ಆಕೆಯನ್ನು ಪ್ರೀತಿಸುತ್ತಿದ್ದೀರಾ ಎಂಬ ಮಾತ್ರಕ್ಕೆ ಆಕೆ ನಿಮಗೆ ಸೇರಿದವಳು ಎಂಬ ಭಾವನೆ ಬೇಡ. ಆಕೆಯ ಇಷ್ಟ-ಕಷ್ಟಗಳನ್ನು ಅವಳಿಗೆ ಈಡೇರಿಸಕೊಳ್ಳಲು ಜಾಗ ನೀಡಿ. ಅವಳ ಬದುಕನ್ನು ಆಕೆಗೆ ಜೀವಿಸಲು ಬಿಡಿ. ಇದು ಆಕೆಗೆ ನಿಮ್ಮ ಮೇಲೆ ಪ್ರೀತಿಯಿಲ್ಲ ಎಂದರ್ಥವಲ್ಲ.

ಹೆಗಲಾಗಿ:

ಹೆಗಲಾಗಿ:

ನಿಮ್ಮ ಹುಡುಗಿ ಬೇಸರವಾದಾಗ ಆಕೆಗೆ ಯಾವುದಾದರೂ ಹೆಗಲು ಬೇಕು ಎಂದು ಬಯಸುತ್ತಾಳೆ, ಅದು ಆಕೆ ಪ್ರೀತಿಸುವ ಹುಡುಗನಾಗಿದ್ದರೆ ಇನ್ನೂ ಚಂದ, ಅದಕ್ಕಾಗಿ ಅವಳು ಕೇಳವು ಮುನ್ನವೇ ನೋವನ್ನು ಅರಿತು ಹೆಗಲು ನೀಡಿ, ತಬ್ಬಿಕೊಂಡು ಸಾಂತ್ವನ ಹೇಳಿ.

ಸಹಾಯ ಮಾಡಿ:

ಮನೆಕೆಲಸಗಳಿಗೆ ಸಹಾಯ ಮಾಡುವುದರಿಂದ ನಿಮ್ಮ ಹುಡುಗಿಯ ಮನದಲ್ಲಿ ದೊಡ್ಡ ಸ್ಥಾನವನ್ನೇ ಪಡೆಯಬಹುದು. ಏಕೆಂದರೆ ಆಕೆಗೆ ಮುಂದೆ ಹೊರೆಯಾಗುವುದು ಇದೇ ಮನೆಕೆಲಸ. ಇಬ್ಬರೂ ಹಂಚಿಕೊಂಡು ಈ ಕೆಲಸ ಮಾಡಿದರೆ, ಮುಂದೆ ಜೀವನದ ಭಾರವನ್ನು ಇಬ್ಬರೂ ಸೇರಿ ಹೊರುವುದು ಕಷ್ಟವಾಗುವುದಿಲ್ಲ ಎಂಬ ನಂಬಿಕೆ ಹುಟ್ಟುವುದು.

ಸಣ್ಣ ತುಂಟತನ :

ಸಣ್ಣ ತುಂಟತನ :

ನಿಮ್ಮ ಕಣ್ಣುಗಳಿಗೆ ಬೀಳುವ ಆ ಕೂದಲನ್ನು ಕಿವಿಯ ಹಿಂದೆ ಸರಿಸುವುದು. ಇದನ್ನ ಸಾಮಾನ್ಯವಾಗಿ ಸಿನಿಮಾದಲ್ಲಿ ನೋಡಿರುತ್ತೇವೆ. ಆದರೆ ನಿಜಜೀವನದಲ್ಲೂ ಇದು ಉತ್ತಮವಾಗಿ ಕಾರ್ಯನಿರ್ವಹಿಸುವುದು. ಇದರಿಂದ ನಾಚಿಕೆ, ಸಲುಗೆ ಜೊತೆಗೆ ಕಣ್ಣಿನ ಸಂಪರ್ಕ ಆಗುವುದು.

ಗೌರವ:

ಕಾರಿನ ಬಾಗಿಲು ತೆರೆಯಿರಿ. ಅರೇ ಪ್ರತಿದಿನ ಪ್ರಯಾಣ ಮಾಡುವಾಗ ಇದರ ಅವಶ್ಯಕತೆ ಇದೆಯೇ ಎಂಬ ಸಂಶಯ ಉಂಟಾಗುವುದು. ಆದರೆ ಆಕೆ ನಿಮ್ಮೊಡನೆ ಹೊರಟಾಗ ನೀವೇ ಕಾರಿನ ಬಾಗಿಲು ತೆರೆದು ಕೂರಿಸಿದರೆ, ಆಕೆಯ ಮನಸ್ಸಲ್ಲಿ ಸ್ಪೆಷಲ್ ಫೀಲ್ ಬರುವುರಲ್ಲಿ ಎರಡು ಮಾತಿಲ್ಲ.

English summary

Thoughtful Things Girls Want Their Boyfriends to Start Doing in Kannada

Here we talking about Thoughtful things girls want their boyfriends to start doing in kannada, read on
Story first published: Monday, July 5, 2021, 21:00 [IST]
X
Desktop Bottom Promotion