Latest Updates
-
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ!
ನವವಿವಾಹಿತರು ಈ ತಪ್ಪುಗಳನ್ನು ಮಾಡಲೇಬೇಡಿ
ಒಂದು ಮದುವೆಯಿಂದ ಹಲವಾರು ಬದಲಾವಣೆಗಳಾಗುವುದು ಸಹಜ. ವಿಭಿನ್ನ ವ್ಯಕ್ತಿತ್ವದ ಇಬ್ಬರ ನಡುವೆ ವೈವಾಹಿಕ ಬಂಧ ಬೆಸೆದಾಗ, ಅಲ್ಲಿ ನಾನಾ ಹೊಂದಾಣಿಕೆಗಳ ಅವಶ್ಯಕತೆ ಬಂದೇ ಬರುತ್ತದೆ. ಅವುಗಳಿಗೆಲ್ಲಾ ಹೊಂದಿಕೊಳ್ಳಲು ಸಮಯ ಹಿಡಿಯುವುದು ಖಂಡಿತ. ಆದರೆ, ಮದುವೆಯಾದ ಹೊಸತರಲ್ಲಿ ದಂಪತಿಗಳ ಜೀವನದಲ್ಲಿ ಸವಾಲುಗಳು ಎದುರಾಗುವುದು. ಕಾಲಕಳೆದಂತೆ, ಅವುಗಳನ್ನು ಒಟ್ಟಿಗೆ ಎದುರಿಸಿ, ಮುನ್ನಡೆದರೂ, ಆರಂಭದಲ್ಲಿ ನಿಭಾಯಿಸುವುದು ಮುಖ್ಯ. ಅಂತಹ ಸವಾಲುಗಳಾವುವು? ಯಾವ ತಪ್ಪುಗಳನ್ನು ನವವಿವಾಹಿತರು ಮಾಡಲೇಬಾರದು ಎಂಬುದನ್ನು ಈ ಲೇಖನದಲ್ಲಿ ನೋಡೋಣ.
ನವವಿವಾಹಿತರು ಮಾಡುವ ಸಾಮಾನ್ಯ ತಪ್ಪುಗಳಾವುವು ಎಂಬುದನ್ನು ಈ ಕೆಳಗೆ ನೀಡಲಾಗಿದೆ:

ಗಡಿಗಳನ್ನು ನಿರ್ಮಿಸದಿರುವುದು:
ನಿಮ್ಮ ವೈಯಕ್ತಿಕ ಗಡಿಗಳು ನಾವು ಹೇಳಲಿರುವ ಗಡಿಗಳಿಗಿಂತ ಭಿನ್ನವಾಗಿವೆ. ನಾವು ಹೇಳಹೊರಟಿರುವುದು ಸ್ನೇಹಿತರು ಮತ್ತು ಕುಟುಂಬದೊಂದಿಗೆ ರೇಖೆಯ ಬಗ್ಗೆ. ಇಲ್ಲಿಯವರೆಗ 'ನಾನು ಮತ್ತು ನನ್ನದು' ಎಂಬ ಭಾವನೆ ಈಗ 'ನಾವು ಮತ್ತು ನಮ್ಮದು' ಎಂದು ಬದಲಾಗುವುದು. ನಿಮ್ಮ ರಜಾದಿನಗಳನ್ನು ನಿಮ್ಮ ಕುಟುಂಬದೊಂದಿಗೆ ಕಳೆಯುಬೇಕೋ ಅಥವಾ ನೀವಿಬ್ಬರೇ ಕಳೆಯುತ್ತೀರೋ ಎಂಬುದನ್ನು ನೀವಿಬ್ಬರೂ ಸೇರಿ ನಿರ್ಧರಿಸಬೇಕೇ ಹೊರತು, ಮೂರನೇ ವ್ಯಕ್ತಿಗೆ ನಿರ್ಧರಿಸಲು ಬಿಡಬೇಡಿ. ನಿಮ್ಮ ಕುಟುಂಬ ಮತ್ತು ಸ್ನೇಹಿತರ ಅಭಿಪ್ರಾಯಗಳನ್ನು ಕೇಳುವುದನ್ನು ಬಿಡಿ, ಅವರ ನಡುವೆ ಸಣ್ಣ ಗೆರೆ ಎಳೆದುಕೊಳ್ಳಿ.

ಸಂಗಾತಿ ತಪ್ಪುಗಳನ್ನು ಮಾಡಬಹುದು ಎಂಬುದನ್ನ ಒಪ್ಪಿಕೊಳ್ಳಿ:
ಮದುವೆಯ ನಂತರ ನಿಮ್ಮ ಸಂಗಾತಿ ಯಾವುದೇ ತಪ್ಪುಗಳನ್ನು ಮಾಡಬಾರದು ಎಂದು ಯೋಚಿಸುವುದು ಮತ್ತು ನಿರೀಕ್ಷಿಸುವುದು ತಪ್ಪು ಮತ್ತು ಅನ್ಯಾಯ. ನಿಮ್ಮಿಬ್ಬರಿಗೂ ಜೀವನದ ಸನ್ನಿವೇಶ ಬದಲಾಗಿದೆ. ಆದ್ದರಿದ ನೀವಿಬ್ಬರೂ ಕಾಲಕ್ಕೆ ತಕ್ಕಂತೆ ಬೆಳೆಯುತ್ತೀರಿ ಮತ್ತು ಬದಲಾಗುತ್ತೀರಿ ಏಕೆಂದರೆ ನೀವು ಮನುಷ್ಯರು, ಬದಲಾವಣೆ ಜಗದ ನಿಯಮ. ತಪ್ಪುಗಳಿಗೆ ಅವಕಾಶ ನೀಡಿ ಮತ್ತು ಒಟ್ಟಿಗೆ ಕಲಿಯಿರಿ.

ಸ್ನೇಹಿತರು ಮತ್ತು ವೈಯಕ್ತಿಕ ಕುಟುಂಬಗಳನ್ನು ಮರೆಯಬೇಡಿ:
ಹೌದು, ನೀವು ರೇಖೆಯನ್ನು ಎಳೆಯಬೇಕು ಆದರೆ ನಿಮ್ಮ ಸ್ನೇಹಿತರು ಮತ್ತು ಕುಟುಂಬವನ್ನು ಸಂಪೂರ್ಣವಾಗಿ ಮರೆತುಬಿಡಿ ಎಂದು ಅರ್ಥವಲ್ಲ. ಸ್ನೇಹಿತರೊಂದಿಗೆ ಹ್ಯಾಂಗ್ ಔಟ್ ಮಾಡುವ ದಿನಗಳನ್ನು ಹೊಂದಿರಬೇಕು, ಹುಡುಗಿಯರ ದಿನ ಅಥವಾ ಹುಡುಗರ ಡೇ ಔಟ್, ಗೇಮಿಂಗ್ ದಿನ, ಅಥವಾ ಕಾರ್ಡ್ ನೈಟ್ ಅಥವಾ ಚಲನಚಿತ್ರ ಇತ್ಯಾದಿಗಳಿಗಾಗಿ ಸ್ನೇಹಿತರನ್ನು ಕರೆಯುತ್ತಿರಬೇಕು. ನಿಮ್ಮ ಸಂಗಾತಿಯನ್ನು ಅದೇ ರೀತಿ ಮಾಡಲು ಪ್ರೋತ್ಸಾಹಿಸಿ, ಅವಳ ಸ್ನೇಹಿತರನ್ನು ಕರೆಯಿರಿ. ಇಲ್ಲದೇ ಇದ್ದರೆ, ಉಸಿರುಗಟ್ಟುವ ಭಾವನೆ ಮೂಡುತ್ತದೆ.

ಬಾತ್‌ರೂಮ್ ಹಂಚಿಕೆ:
ನೀವು ಒಟ್ಟಿಗೆ ಇರುವ ಕಾರಣ ಇದು ಸಣ್ಣ ವಿಷಯದಂತೆ ಕಾಣಿಸಬಹುದು, ಆದರೆ, ಮುಂದೆ ಇದೇ ಸಮಸ್ಯೆ ಉಂಟು ಮಾಡಬಹುದು. ಅದೇಗೆ ಅಂದರೆ, ನೀವು ಟೂತ್‌ಪೇಸ್ಟ್ ಅನ್ನು ಹಂಚಿಕೊಳ್ಳುತ್ತೀರಿ, ನಿಮ್ಮಲ್ಲಿ ಯಾರಾದರೂ ಪೇಸ್ಟ್‌ನ ಕ್ಯಾಪ್ ಹಾಕಲು ಮರೆತು, ಅದು ಒಣಗಿದರೆ, ನಿಮ್ಮಲ್ಲಿ ಒಬ್ಬರು ನಿಜವಾಗಿಯೂ ಉದ್ರೇಕಗೊಳ್ಳುತ್ತಾರೆ. ಕೆಲವೊಮ್ಮೆ ಹಂಚಿಕೆಯು ಉತ್ತಮವಾಗಿರುತ್ತದೆ ಆದರೆ, ಇಬ್ಬರೂ ಒಂದೇ ಉತ್ಪನ್ನಗಳನ್ನು ಬಳಸಿದರೆ, ಅದರಲ್ಲಿ ಒಬ್ಬರು ಹೆಚ್ಚು, ಇನ್ನೊಬ್ಬರು ಕಡಿಮೆ ಉತ್ಪನ್ನ ಬಳಸಿ ಬಹಳ ಬೇಗನೇ ಖಾಲಿಯಾದರೆ, ಆಗ ಜಗಳಗಳು ಉಟಾಗುತ್ತವೆ. ಆದ್ದರಿಂದ ನೀವಿಬ್ಬರೂ ಜಾಗರೂಕರಾಗಿರುವುದು ಉತ್ತಮ ಅಥವಾ ಇಬ್ಬರು ಪ್ರತ್ಯೇಕವಾದ ಕ್ರೀಮ್‌ಗಳು ಮತ್ತು ಶಾಂಪೂಗಳನ್ನು ಬಳಸಿ.

ಮನೆಯ ಅಲಂಕಾರ ವಿಲೀನಗೊಳಿಸದೇ ಇರುವುದು:
ನಮ್ಮ ಮನೆಯಲ್ಲಿ ನಾವಷ್ಟೇ ಇದ್ದಾಗ, ಅದನ್ನು ವ್ಯವಸ್ಥೆಗೊಳಿಸುವ ಮತ್ತು ಅಲಂಕರಿಸಲು ನಮ್ಮದೇ ಆದ ಶೈಲಿಯನ್ನು ಹೊಂದಿರುತ್ತೇವೆ. ಆದರೆ ಇನ್ನೊಬ್ಬರು ಬಂದಾಗ, ಸಾಮಾನ್ಯ ನೆಲೆಯಲ್ಲಿ ಪುನಃ ಅಲಂಕರಿಸುವುದು ಅದನ್ನು ಮುಖ್ಯವಾಗಿದೆ. ಏಕೆಂದರೆ ಸ್ವಂತ ಮನೆಯನ್ನು ಬಿಟ್ಟು ಬಂದಿರುತ್ತಾನೆ, ಹೊಸ ಮನೆಯಲ್ಲಿ ತನ್ನ ಮನೆ ಅನಿಸಲು ಅವರ ಇಚ್ಛೆಯಂತೆ ಬದಲಾಯಿಸಲು ಅವಕಾಶ ಮಾಡಿಕೊಡಿ. ಅದು ಕುಶನ್ ಕವರ್‌ಗಳು, ಕರ್ಟನ್‌ಗಳು ಅಥವಾ ವಾಲ್ ಪೇಂಟಿಂಗ್‌ಗಳು, ಇತ್ಯಾದಿಗಳ ರೂಪದಲ್ಲಾದರೂ ಸರಿ. ಆದ್ದರಿಂದ ನಿಮ್ಮ ಕೊಠಡಿ ಅಥವಾ ಮನೆಯನ್ನು ಒಟ್ಟಿಗೆ ನವೀಕರಿಸಿ.



Click it and Unblock the Notifications
