Latest Updates
-
ದೆಹಲಿ ಮದುವೆ ಸೀಸನ್: ಮಳೆ ಮತ್ತು ಬಿರುಗಾಳಿಯಿಂದ ನಿಮ್ಮ ಸಂಭ್ರಮವನ್ನು ಕಾಪಾಡಿಕೊಳ್ಳುವುದು ಹೇಗೆ? -
ಬಿಸಿಗಾಳಿ-ಮಳೆ ಎಚ್ಚರಿಕೆ: ನಿಮ್ಮ ಮನೆ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ ಟಿಪ್ಸ್ ಫಾಲೋ ಮಾಡಿ! -
ಬಿಸಿಗಾಳಿಯ ಆರ್ಭಟಕ್ಕೆ ಸುಸ್ತಾಗಿದ್ದೀರಾ? ಈ ಆಹಾರ ಕ್ರಮ ಪಾಲಿಸಿದರೆ ಬಿಸಿಲು ನಿಮ್ಮನ್ನೇನೂ ಮಾಡಲ್ಲ! -
ಕಾನ್ 2026: ರೆಡ್ ಕಾರ್ಪೆಟ್ ಮೇಲೆ ಭಾರತೀಯರ ಅಬ್ಬರ, ಈ ಬಾರಿ ಫ್ಯಾಷನ್ ಲೋಕವೇ ದಂಗು! -
ಪ್ರಧಾನಿ ಮೋದಿ ಭೇಟಿಯ ನಂತರ ಟ್ರೆಂಡಿಂಗ್: ಕೇವಲ 15 ನಿಮಿಷದಲ್ಲಿ ನಿಮ್ಮ ದಿನವನ್ನು ಬದಲಾಯಿಸುವ ಮ್ಯಾಜಿಕ್ ಯೋಗ ಟಿಪ್ಸ್! -
ಮದರ್ಸ್ ಡೇ 2026: ಅಮ್ಮ ಮತ್ತು ಅತ್ತೆಯ ನಡುವೆ ಸಿಲುಕಿದ್ದೀರಾ? ಈ ಟ್ರಿಕ್ಸ್ ಫಾಲೋ ಮಾಡಿ! -
ಬಿರುಗಾಳಿ ಅಪ್ಪಳಿಸುವ ಮುನ್ನ ಎಚ್ಚರ: ನಿಮ್ಮ ಮನೆಯನ್ನು ಸುರಕ್ಷಿತವಾಗಿಡಲು ಈ ಕೆಲಸಗಳನ್ನು ಇಂದೇ ಮಾಡಿ! -
ಬಿಸಿಗಾಳಿಯ ಆರ್ಭಟಕ್ಕೆ ಸುಸ್ತಾಗಿದ್ದೀರಾ? ದೇಹವನ್ನು ತಂಪಾಗಿಡಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಮದರ್ಸ್ ಡೇ 2026: ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿರೋ ಈ ವಿಶೇಷ ಟ್ರೆಂಡ್ಸ್ ನೀವು ಮಿಸ್ ಮಾಡ್ಬೇಡಿ! -
ಬಿಸಿಲ ಝಳದಲ್ಲಿ ವರ್ಕೌಟ್ ಮಾಡ್ತಿದ್ದೀರಾ? ಹೀಟ್ವೇವ್ನಿಂದ ಪಾರಾಗಲು ಈ ಸಣ್ಣ ಬದಲಾವಣೆ ಸಾಕು!
ಆತನ ವೈವಾಹಿಕ ಜೀವನ ಸುಖಕರವಾಗಿಲ್ಲ ಎಂದು ಹೇಳುವ ಸೂಚನೆಗಳಿವು
ಮದುವೆಯಾಗುವುದು ಒಂದು ಸುಂದರವಾದ ಭಾವನೆ ಎಂಬುದರಲ್ಲಿ ಯಾವುದೇ ಸಂದೇಹವಿಲ್ಲ. ಮದುವೆ ಬಳಿಕದ ಜೀವನದ ಬಗ್ಗೆ ಉತ್ಸಾಹ ಜೊತೆಗೆ ಭಯ ಎರಡೂ ಇರುವುದು. ಏಕೆಂದರೆ ಪ್ರತಿಯೊಬ್ಬರೂ ತಮ್ಮ ವೈವಾಹಿಕ ಜೀವನದ ಕುರಿತು ಸಾಕಷ್ಟು ಕನಸುಗಳನ್ನ, ಕೆಲವೊಂದು ಪ್ಲಾನ್ ಗಳನ್ನ ಹಾಕಿಕೊಂಡಿರುತ್ತಾರೆ. ಅದರಂತೆ ನಡೆದರೆ ಸಮಸ್ಯೆಯಿಲ್ಲ. ಆದರೆ ನಿರೀಕ್ಷೆಯ ಮಟ್ಟವನ್ನು ತಲುಪದಿದ್ದರೆ ದಂಪತಿಗಳಲ್ಲಿ ಅತೃಪ್ತಿಯ ಭಾವನೆ ಮೂಡುವುದು.
ಇಲ್ಲಿ ನಾವು ಪರುಷನೊಬ್ಬ ವಿವಾಹದಿಂದ ಅತೃಪ್ತನಾಗಿದ್ದಾನೆ ಎಂದು ಸೂಚಿಸುವ ಲಕ್ಷಣಗಳನ್ನು ವಿವರಿಸಿದ್ದೇವೆ:

ತನ್ನ ಹೆಂಡತಿಯ ತೊರೆಯುವ ಬಗ್ಗೆ ಆಗಾಗ ಹಾಸ್ಯ ಮಾಡುತ್ತಾನೆ:
ಕೆಲವೊಮ್ಮೆ ಕಾಮಿಡಿಯಲ್ಲೂ ಸತ್ಯವಿರುವುದು. ಕೆಲವರು ನೇರವಾಗಿ ಹೇಳಲಾಗದ್ದನ್ನು ಹಾಸ್ಯದ ಮುಖಾಂತರ ನಗುನಗುತ್ತಲೇ ಹೇಳಿ ಬಿಡುತ್ತಾರೆ. ವ್ಯಕ್ತಿಯೊಬ್ಬ ತನ್ನ ಹೆಂಡತಿಯನ್ನು ತೊರೆಯುವ ಬಗ್ಗೆ ಆಗಾಗ ತಮಾಷೆ ಮಾಡುತ್ತಿದ್ದರೆ, ಆತನ ಒಳ ಮನಸ್ಸಿನಲ್ಲಿ ಆಕೆಯ ಕುರಿತ ಅತೃಪ್ತ ಭಾವನೆಯಿದೆ, ವೈವಾಹಿಕ ಜೀವನ ಸಾಕಾಗಿದೆ ಎಂದು ಸೂಚಿಸಬಹುದು.

ತನ್ನ ಹೆಂಡತಿಯಿಂದು ದೂರವಿರಲು ನೆಪ ಹೇಳುತ್ತಾನೆ:
ವೈವಾಹಿಕ ಜೀವನ ಖುಷಿಯಾಗಿದ್ದರೆ, ಹೆಂಡತಿಯ ಜೊತೆ ಕಾಲಕಳೆಯಲು ನೆಪ ಹುಡುಕಬೇಕು. ಅದು ಬಿಟ್ಟು ಹೊರಹೋಗಲು ಪತಿ ನೆಪ ಹುಡುಕುತ್ತಾನೆಂದರೆ ಆತನಿಗೆ ಅತೃಪ್ತಿ ಕಾಡುತ್ತಿದೆ ಎಂದರ್ಥ. ಇಂತಹ ವ್ಯಕ್ತಿ ಕೆಲಸದಲ್ಲಿ ಹೆಚ್ಚು ಸಮಯ ಕಳೆಯುತ್ತಾನೆ ಅಥವಾ ಮನೆಯಿಂದ ದೂರವಿರಲು ಹೊಸ ಕಾರಣಗಳನ್ನು ಕಂಡುಕೊಳ್ಳುತ್ತಾನೆ. ವಾರಾಂತ್ಯದಲ್ಲಿ ಸಹ, ಅವನು ತನ್ನ ಹೆಂಡತಿಯೊಂದಿಗೆ ಸಮಯ ಕಳೆಯುವುದನ್ನು ತಪ್ಪಿಸಲು ಕೆಲವು ಕಾರಣಗಳನ್ನು ಹುಡುಕುತ್ತಾನೆ.

ಸಿಂಗಲ್ ಆಗಿರೋ ಹುಡುಗರಿಗೆ ಮದುವೆಯಾಗಬೇಡಿ ಎಂದು ಪದೇಪದೇ ಹೇಳುತ್ತಾನೆ:
ಈ ರೀತಿ ತನ್ನ ಸ್ನೇಹಿತರಿಗೆ ಹೇಳುವ ವ್ಯಕ್ತಿಯು ಮದುವೆಯಾಗಿ ತಾನು ತಪ್ಪು ಮಾಡಿದೆ ಎಂದು ಪರೋಕ್ಷವಾಗಿ ಒಪ್ಪಿಕೊಳ್ಳುತ್ತಿರುವುದಂತೂ ಸತ್ಯ. ಒಂದು ವೇಳೆ ಅದರರ್ಥ ಹಾಗಲ್ಲದಿದ್ದರೆ, ಎಂದಿಗೂ ಮದುವೆಯಾಗಬಾರದು ಎಂದು ಇತರರಿಗೆ ಹೇಳುವ ಯಾವುದೇ ಅವಶ್ಯಕತೆಯಿಲ್ಲ.

ಹೆಂಡತಿಯ ಬಗ್ಗೆ ಸದಾ ದೂರುತ್ತಾನೆ:
ವೈವಾಹಿಕ ಜೀವನದದಲ್ಲಿ ಸಂತೋಷವಿಲ್ಲದ ಗಂಡಸರು ಹೆಂಡತಿ ಮಾಡುವ ಪ್ರತಿ ವಿಚಾರಕ್ಕೂ ದೂರುತ್ತಾರೆ. ಹೆಂಡತಿಯ ಅಭ್ಯಾಸ, ಅವಳ ಅಡುಗೆ, ಅವಳ ಕಾರ್ಯನಿರತ ವೇಳಾಪಟ್ಟಿ ಅಥವಾ ಅವಳ ಗೊರಕೆಯಾಗಿರಲಿ, ತಮ್ಮ ಹೆಂಡತಿಯರು ಗೊತ್ತಿದ್ದು ಅಥವಾ ಅರಿವಿಲ್ಲದೆ ಮಾಡುವ ಎಲ್ಲಾ ವಿಚಾರಕ್ಕೂ ದೂರುತ್ತಾರೆ.

ತನ್ನ ಹಣ ಮತ್ತು ವೃತ್ತಿಜೀವನವನ್ನು ಎಲ್ಲರಿಗೂ ಪರಿಚಯಿಸುತ್ತಾರೆ ಆದರೆ ಅವನ ಹೆಂಡತಿಯನ್ನಲ್ಲ:
ಪುರುಷರು ತಮ್ಮ ಜೀವನವನ್ನು ಅದ್ಭುತವಾಗಿಸುವ ವಿಷಯಗಳ ಬಗ್ಗೆ ಹೇಳಿಕೊಳ್ಳಲು ಮತ್ತು ಹೆಮ್ಮೆ ಪಡಲು ಇಷ್ಟಪಡುತ್ತಾರೆ. ಒಂದು ವೇಳೆ ಹೆಂಡತಿ ಆತನ ಜೀವನದಲ್ಲಿ ಮುಖ್ಯವಾಗಿದ್ದರೆ ಅವಳ ಬಗ್ಗೆಯೂ ಹೇಳಿಕೊಳ್ಳುತ್ತಿದ್ದ. ಆದರೆ ಅತೃಪ್ತ ಪುರುಷ ತನ್ನ ವೃತ್ತಿಜೀವನ, ಹಣದ ಬಗ್ಗೆ ಮಾತ್ರ ಎಲ್ಲರ ಬಳಿ ಹೇಳುತ್ತಾನೆ, ಗರ್ವಪಡುತ್ತಾನೆ. ಹೆಂಡತಿಯ ಬಗ್ಗೆ ಎಂದಿಗೂ ಮಾತೆತ್ತುವುದಿಲ್ಲ.

ಮೊದಲಿದ್ದ ಉತ್ಸಾಹ ಇರುವುದಿಲ್ಲ:
ನೀವು ಅತೃಪ್ತಿಕರ ದಾಂಪತ್ಯದಲ್ಲಿದ್ದಾಗ, ಮೊದಲಿದ್ದ ಉತ್ಸಾಹವನ್ನು ಕಳೆದುಕೊಳ್ಳುತ್ತೀರಿ. ಅಲ್ಲದೆ, ನೀವು ಆ ವ್ಯಕ್ತಿಯನ್ನು ದೀರ್ಘಕಾಲದಿಂದ ತಿಳಿದಿದ್ದರೆ, ಅವರ ವರ್ತನೆ ಅಥವಾ ನಡವಳಿಕೆಗಳಲ್ಲಿನ ಬದಲಾವಣೆಗಳನ್ನು ಗುರುತಿಸುವುದು ನಿಮಗೆ ತುಂಬಾ ಸುಲಭ. ತನ್ನ ಹೆಂಡತಿಯ ಜೊತೆ ಸಹಜವಾಗಿರದೇ ಮೌನಕ್ಕೆ ಶರಣಾಗುತ್ತಾನೆ.



Click it and Unblock the Notifications