Latest Updates
-
ಕೋಮಾದಲ್ಲಿದ್ದ ಹರೀಶ್ ರಾಣಾ ದಯಾಮರಣಕ್ಕೆ ಸುಪ್ರೀಂ ಒಪ್ಪಿಗೆ: ಈ ಕೇಸ್ ಬಗ್ಗೆ ನಿಮಗೆ ಗೊತ್ತಾ? -
ಪಂಜಾಬಿ ಸ್ಟೈಲ್ ಮಲೈ ಲಸ್ಸಿ! ಈ ರೀತಿ ಮಾಡಿ ಗಟ್ಟಿ ಕೆನೆಯ ಢಾಬಾ ಸ್ಟೈಲ್ ಲಸ್ಸಿ.. ಬಿಸಿಲ ತಾಪಕ್ಕೆ ಬೆಸ್ಟ್ ಕೂಲ್ ಡ್ರಿಂಕ್ -
ಮಾರ್ಚ್ ಅಂತ್ಯದಲ್ಲಿ ಗಜಕೇಸರಿ ಯೋಗ: ಈ ಮೂರು ರಾಶಿಯ ಜನರಿಗೆ ಒಲಿಯಲಿದೆ ಅದೃಷ್ಟ! -
ನಾಟಿ ಸ್ಟೈಲ್ನಲ್ಲಿ ಸೋಯಾ ಚಾಪ್ಸ್ ಮಾಡಿ: ಚಪಾತಿ, ಅನ್ನ, ಮುದ್ದೆ ಎಲ್ಲದ್ದಕ್ಕೂ ಬೆಸ್ಟ್! -
ತಣ್ಣೀರು ಬೇಕಾ? ಮಡಕೆ ಕೊಳ್ಳುವಾಗ ಈ ತಪ್ಪು ಮಾಡಬೇಡಿ.. ಸಮಸ್ಯೆ ಗ್ಯಾರಂಟಿ!! ಹೇಗೆ ಆಯ್ಕೆ ಮಾಡಬೇಕು? -
ನಿಮ್ಮ ಮನೆಯ ಗಡಿಯಾರ ತಪ್ಪಾದ ದಿಕ್ಕಿನಲ್ಲಿ ಇಡಲಾಗಿದ್ಯಾ? ಈ ಸಣ್ಣ ತಪ್ಪು ದೊಡ್ಡ ಸಮಸ್ಯೆ ತರಬಹುದು! -
ಶುಗರ್ ಇದ್ದರೂ ಯುಗಾದಿಗೆ ಗುಜಿಯಾ ತಿನ್ನಬಹುದು! ಸಕ್ಕರೆ ಬೇಡ.. ರುಚಿ ಅದ್ಭುತ.. ಹೆಲ್ತ್ 100ಕ್ಕೆ 100 ಸೇಫ್! -
ದೇಹ ತಂಪಾಗಿಸಲು, ತೂಕ ಇಳಿಸಲು ಈ ಬಾರ್ಲಿ ಜ್ಯೂಸ್ ಮಾಡಿ! 5 ನಿಮಿಷದೊಳಗೆ ಸಿದ್ದ! -
ರಾಹು-ಕೇತು ಸಂಯೋಗದಿಂದ ಕಾಳಸರ್ಪ ಯೋಗ: ಈ ಎಲ್ಲಾ ರಾಶಿಯವರಿಗೆ ಅದೃಷ್ಟದ ಸಮಯ! -
ಸಂಕಷ್ಟಗಳು ದೂರ, ಐಶ್ವರ್ಯ ಹತ್ತಿರ! ಕೇತು ಸಂಚಾರದಿಂದ ಇವರ ಜೀವನವೇ ಬಂಗಾರ.. ಯಾರಿಗೆ ರಾಜಯೋಗ?
ಆತ ನಿಮಗೆ ಮೂರು ಗಂಟು ಹಾಕಲು ಸಿದ್ಧನಿದ್ದಾನೆ ಎನ್ನುವ ಸೂಚನೆಗಳಿವು
ಪ್ರೀತಿಯಲ್ಲಿ, ನಂಬಿಕೆ, ಪರಿಚಿತತೆ ಮಾತ್ರವಲ್ಲ, ಜಗಳ, ವಾದ, ಮನಸ್ತಾಪಗಳು ಸಾಮಾನ್ಯವಾಗಿರುತ್ತವೆ. ಆದರೆ, ಇವೆಲ್ಲವನ್ನೂ ಮೆಟ್ಟಿ ಸಾಗಿ, ಮದುವೆ ಎನ್ನುವ ಬಂಧದ ತನಕ ಬರುವವರು ಕೆಲವೇ ಜನ. ಆದರೆ, ಸಂಬಂಧದಲ್ಲಿದ್ದರು ಅಥವಾ ಸ್ನೇಹಿತರಾದವರು ಮುಂದೊಂದು ದಿನ ಮದುವೆ ತನಕ ತಲುಪಬಹುದು ಎಂಬುದು ಅವರ ನಡವಳಿಕೆಯಿಂದ ತಿಳಿದುಕೊಳ್ಳಬಹುದು.
ಪುರುಷರು ಸಾಮಾನ್ಯವಾಗಿ ತಾವು ರೋಮ್ಯಾಂಟಿಕ್ ಎಂದು ಹೇಳಿಕೊಳ್ಳದಿದ್ದರೂ ಸಹ, ಅವರ ನಡವಳಿಕೆಯಿಂದ ಎಲ್ಲವನ್ನೂ ಅರಿತುಕೊಳ್ಳಬಹುದು. ಅವರು ಒಂದು ಬಾರಿ ಆಕೆ ನನ್ನವಳು ಎಂದು ನಿರ್ಧರಿಸಿ ಬಿಟ್ಟರೆ, ಮುಗಿಯಿತು. ಆಕೆಗೆ ಬೆನ್ನುಲುಬಾಗಿ ಸದಾ ನಿಂತು, ಮಡದಿಯಾಗುವ ಕನಸು ಕಾಣುತ್ತಿರುತ್ತಾನೆ. ಅಂತಹ ಪುರುಷರ ನಡವಳಿಕೆ ಹೇಗಿರುತ್ತೆ ಎಂಬುದನ್ನು ಇಲ್ಲಿ ನೋಡೋಣ.
ಆತ ನಿಮಗೆ ತಾಳಿ ಕಟ್ಟುವ ಎಲ್ಲಾ ಲಕ್ಷಣಗಳಿವೆ ಎನ್ನುವುದನ್ನು ಸಾರುವ ಸೂಚನೆಗಳಾವುವು ಎಂಬುದನ್ನು ಈ ಕೆಳಗೆ ನೀಡಲಾಗಿದೆ:

ಕೆಟ್ಟ ಸಮಯದಲ್ಲಿ ಒಬ್ಬರನ್ನೊಬ್ಬರು ನಿರ್ವಹಿಸುವುದು:
ಸಾಕಷ್ಟು ಸಮಯ ಜೊತೆಗೆ ಕಳೆದ ನಂತರ, ಪರಸ್ಪರರ ಸಮಸ್ಯೆಗಳನ್ನು ಅರ್ಥಮಾಡಿಕೊಳ್ಳವುದು ಸುಲಭವಾಗುತ್ತದೆ. ಪರಸ್ಪರರ ಸೀಕ್ರೆಟ್‌ಗಳನ್ನು ಒಪ್ಪಿಕೊಂಡು ಮುಂದುವರಿಯುವುದು ಸಂಬಂಧಕ್ಕೆ ಮುಖ್ಯ. ನಿಮ್ಮ ಒಳ್ಳೆ ಹಾಗೂ ಮುಖ್ಯವಾಗಿ ಕೆಟ್ಟ ಗುಣಗಳನ್ನು ಒಳಗೊಂಡಂತೆ ಎಲ್ಲವನ್ನು ಸ್ವೀಕರಿಸಲು ಅವನು ಸಿದ್ಧನಾಗಿದ್ದರೆ, ಆಗಲೇ ಅವನು ನಿಮ್ಮನ್ನು ತನ್ನ ಹೆಂಡತಿಯೆಂದು ಪರಿಗಣಿಸಿದ್ದಾನೆ.

ಹಣಕಾಸಿನ ವಿಚಾರಕ್ಕೆ ಬೆಂಬಲ:
ಹಣಕಾಸಿನ ಸ್ಥಿರತೆ ಮತ್ತು ನಿರ್ವಹಣೆಯು ವೈವಾಹಿಕ ಜೀವನದ ಒಂದು ದೊಡ್ಡ ಭಾಗವಾಗಿದ್ದು, ಇಬ್ಬರೂ ಸಹ ಒಟ್ಟಿಗೆ ಇರಬೇಕಾಗುತ್ತದೆ. ನಿಮ್ಮ ಹುಡುಗ, ನಿಮ್ಮ ವೃತ್ತಿ ಆಯ್ಕೆಗಳಿಗೆ ತುಂಬಾ ಬೆಂಬಲ ನೀಡುತ್ತಿದ್ದರೆ, ಹಣಕಾಸಿನ ಆದಾಯ ಮತ್ತು ವಿಷಯಗಳಲ್ಲಿ ನಿಮ್ಮನ್ನು ಬೆಂಬಲಿಸುತ್ತಿದ್ದರೆ, ಇದು ನಿಮ್ಮೊಂದಿಗೆ ಸುರಕ್ಷಿತ ಭವಿಷ್ಯಕ್ಕಾಗಿ ನೆಲೆಗೊಳ್ಳಲು ಸಿದ್ಧವಾಗಿದ್ದಾನೆ ಎಂಬುದನ್ನು ಸೂಚಿಸುತ್ತದೆ.

ಯಾವುದೇ ನಂಬಿಕೆಯ ಸಮಸ್ಯೆಗಳಿಲ್ಲದೇ ಇರುವುದು:
ನಂಬಿಕೆಯು ಬಲವಾಗಿ ನಿಲ್ಲಬೇಕಾದ ಸಂಬಂಧದ ಮುಖ್ಯ ಅಡಿಪಾಯಗಳಲ್ಲಿ ಒಂದಾಗಿದ್ದು, ಇದು ಕಡಿಮೆಯಾದರೆ, ನಿಮ್ಮ ಸಂಬಂಧಕ್ಕೆ ಅಪಾಯವಾಗುವ ಸಂಭವವಿದೆ. ಆದರೆ ಆತ ನಿಮ್ಮನ್ನು ಸಂಪೂರ್ಣವಾಗಿ ನಂಬಿದ್ದರೆ, ಯಾವುದೇ ಅಡೆತಡೆಗಳು ನಿಮ್ಮ ಹಾದಿಯನ್ನು ನಿರ್ಬಂಧಿಸಲು ಬಿಡದಿದ್ದರೆ, ಅವನು ನಿಮ್ಮೊಂದಿಗೆ ಹೆಜ್ಜೆ ಹಾಕಲು ಸಿದ್ಧನಾಗಿದ್ದಾನೆ ಎಂಬುದಕ್ಕೆ ಇದು ಖಚಿತವಾದ ಸಂಕೇತವಾಗಿದೆ.

ಜಗಳಗಳ ಪರಿಹಾರಕ್ಕೆ ಮುಂದಾಗುವುದು:
ವಾದಗಳು ಮತ್ತು ಜಗಳಗಳು ಸಂಬಂಧದಲ್ಲಿ ಸಾಮಾನ್ಯ. ಆದರೆ ಅದನ್ನು ಹೇಗೆ ನಿರ್ವಹಿಸುತ್ತೇವೆ ಎಂಬುದರ ಮೇಲೆ ಸಂಬಂಧದ ಭವಿಷ್ಯ ನಿಂತಿದೆ. ಜಗಳದ ಬಳಿಕ ಇಬ್ಬರೂ ಕೂತು ಮಾತನಾಡಿ, ಪರಿಹರಿಸಿಕೊಳ್ಳುವುದು ಮುಖ್ಯ. ಆದ್ದರಿಂದ ನಿಮ್ಮ ಹುಡುಗ ಜಗಳವಾದ ಮೇಲೆ ಅದನ್ನು ಸರಿಪಡಿಸಲು ಮುಂದೆ ಬರುತ್ತಿದ್ದರೆ, ಆತನಿಗೆ ನಿಮ್ಮ ಜೊತೆ ಬದುಕುವ ಆಸೆ ಇದೆ, ನಿಮ್ಮ ಬಗ್ಗೆ ಆತ ಗಂಭೀರವಾಗಿದ್ದಾನೆ ಎಂದರ್ಥ. ಇಲ್ಲವಾದಲ್ಲಿ ಆತ ಜಗಳ ಸರಿಪಡಿಸಲು ಮುಂದಾಗುವುದೇ ಇಲ್ಲ.

ಸಾಧಾರಣವಾಗಿ ಭವಿಷ್ಯದ ಬಗ್ಗೆ ತಮಾಷೆ:
ನಿಮ್ಮ ಭವಿಷ್ಯದ ಬಗ್ಗೆ ಸಾಂದರ್ಭಿಕ ಹಾಸ್ಯಗಳನ್ನು ಮಾಡುವುದು ಸಾಮಾನ್ಯ. ಆದರೆ ಸಾಂದರ್ಭಿಕ ಹಾಸ್ಯಗಳಲ್ಲಿ, ಗಂಭೀರತೆ ಇದ್ದರೆ, ತನ್ನ ಜೀವನವನ್ನು ನಿಮ್ಮೊಂದಿಗೆ ಕಳೆಯುವುದರ ಬಗ್ಗೆ ತಮಾಷೆ ಮಾಡಲು ಬಯಸಿದರೆ, ಭವಿಷ್ಯದಲ್ಲಿ ಅವನು ಗಂಟು ಕಟ್ಟುವ ಸುಳಿವುಗಳನ್ನು ಬಿಡುವ ಹೆಚ್ಚಿನ ಅವಕಾಶಗಳಿವೆ.



Click it and Unblock the Notifications











