Latest Updates
-
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ!
ಹುಡುಗಿಯರೇ ಸಂಬಂಧದಲ್ಲಿ ಈ ತಪ್ಪುಗಳನ್ನು ಮಾಡಬೇಡಿ
ನೀವು ಒಬ್ಬರ ಪ್ರೀತಿಯಲ್ಲು ಬಿದ್ದಿದ್ದೀರಿ ಅಥವಾ ಯಾರೋ ಹುಡುಗನ ಪ್ರೀತಿಯನ್ನು ಒಪ್ಪಿಕೊಂಡಿದ್ದೀರಿ ಎಂಬ ಮಾತ್ರಕ್ಕೆ ಆತ ನಿಮ್ಮ ಸೊತ್ತು ಎಂದು ಹೆಚ್ಚಿನ ಹುಡುಗಿಯರು ಆಡುವುದುಂಟು. ಆದರೆ ಇದು ಸರಿಯಲ್ಲ. ಆತ ನಿಮ್ಮನ್ನು ಪ್ರೀತಿಸುತ್ತಿರಬಹುದು, ನಿಮಗೋಸ್ಕರ ಏನು ಬೇಕಾದರೂ ಮಾಡಲೂಬಹುದು, ಆದರೆ ಅದೇ ಕೆಲಸವಲ್ಲ ಆತನಿಗೆ. ಈ ತರ ನೀವು ಆಡ್ತಾ ಇದೀರಾ ಅಂದ್ರೆ ನೀವು ಕ್ಲಿಂಗಿ ಗರ್ಲ್ ಫ್ರೆಂಡ್ ಎಂದರ್ಥ.
ಈ ರೀತಿಯ ಕಿರಿಕಿರಿ ಗುಣಕ್ಕೆ ಬೇರೆ ಬೇರೆ ಕಾರಣಗಳಿದ್ದರೂ ಮುಖ್ಯವಾಗಿ ಹೊಟ್ಟೆಕಿಚ್ಚು, ಅಭದ್ರತೆ, ಕೀಳರಿಮೆ ಮತ್ತು ಅತಿ ಅವಲಂಬನೆ ಕಾರಣವಾಗಿರುತ್ತದೆ. ಒಮ್ಮೊಮ್ಮೆ ಪ್ರಬುದ್ಧತೆಯ ಕೊರತೆಯೂ ಇರಬಹುದು ಅಥವಾ ಯಾವುದೋ ಮರೆಯಲಾಗದ ಅಹಿತಕರ ಘಟನೆಯೂ ಕಾರಣವಾಗಿರಬಹುದು. ಅವುಗಳನ್ನು ಅರಿತು, ಕೆಲವೊಂದು 'ಬೇಡ'ಗಳನ್ನು ಅಭ್ಯಾಸ ಮಾಡಿಕೊಳ್ಳುವುದರಿಂದ ನಿಮ್ಮ ಸಂಗಾತಿಗೆ ಕಿರಿಕಿರಿಯಾಗದಂತೆ ನೋಡಿಕೊಳ್ಳಬಹುದು. ಅದನ್ನು ಈ ಕೆಳಗೆ ನೀಡಲಾಗಿದೆ.
ಕ್ಲಿಂಗಿ ಸಂಗಾತಿಯಾಗದಿರಲು ಕೆಲವೊಂದು ಸಲಹೆಗಳು ಇಲ್ಲಿವೆ.

ಯಾವಾಗಲೂ ಬೆನ್ನು ಹತ್ತಿದ ಬೇತಾಳವಾಗಬೇಡಿ:
ನಿಮ್ಮ ಸಂಗಾತಿಗೆ ನಿಮ್ಮನ್ನು ಪ್ರೀತಿಸುವುದರ ಜೊತೆಗೆ ಬೇರೆ ಕೆಲಸವೂ ಇರುತ್ತದೆ. ಅದನ್ನು ಬಿಟ್ಟು ನೀವು ಮೆಸೇಜ್, ಕಾಲ್ ಮಾಡಿದಾಗಲೆಲ್ಲಾಅವರು ರಿಪ್ಲೈ ಮಾಡ್ತಾ ಕೂತರೆ, ಅವರ ಕೆಲಸ ಮಾಡೋರು ಯಾರು? ಹೇಳಿ. ಹಾಗಾಗಿ ಅವರ ಜವಾಬ್ದಾರಿಗಳನ್ನು ಅರ್ಥ ಮಾಡಿಕೊಳ್ಳಿ. ಸಮಯಕ್ಕೆ ಸರಿಯಾಗಿ ರಿಪ್ಲೈ ಮಾಡ್ಲಿಲ್ಲಅಂತ ಮೇಲಿಂದ ಮೇಲೆ ಮೆಸೇಜ್ ಮಾಡಿ ಅವರಿಗೆ ಕಾಟ ಕೊಡುವುದು ಸರಿಯಲ್ಲ. ಇದರಿಂದ ನಿಮ್ಮ ಹುಡುಗನು ಕೋಪಗೊಳ್ಳುವ ಸಾಧ್ಯತೆ ಹೆಚ್ಚಾಗಿರುತ್ತದೆ.

ಹೊಟ್ಟೆಕಿಚ್ಚು ಪಡಬೇಡಿ:
ಇದು ಸಾಮಾನ್ಯವಾಗಿ ಮಹಿಳೆಯರಲ್ಲಿ ಸ್ವಲ್ಪ ಹೆಚ್ಚಾಗಿ ಕಂಡುಬರುತ್ತದೆ. ಒಂದು ವೇಳೆ ನಿಮಗಿಂತ ಜಾಸ್ತಿ ಬೇರೆಯವ್ರಿಗೆ ಸಮಯ ಕೊಟ್ಟರೆ ಸಾಕು, ಆಕೆಯಲ್ಲಿ ಹೊಟ್ಟೆಕಿಚ್ಚು ಬರುತ್ತದೆ. ಅದಕ್ಕಾಗಿ ನಿಮ್ಮ ಸಂಗಾತಿ ನಿಮ್ಮೊಡನೆ ಹೆಚ್ಚಿನ ಸಮಯ ಕಳೆಯದೆ, ಬೇರೆಯವರಿಗೆ ಸಮಯ ಕೊಡುತ್ತಿದ್ದರೆ ಹೊಟ್ಟೆಕಿಚ್ಚು ಪಡಬೇಡಿ. ಅದು ಅವರು ಅನಿವಾರ್ಯವಾಗಿ ಮಾಡುತ್ತಿರುವ ಅಗತ್ಯದ ಕೆಲಸ ಇರಬಹುದು. ನಿಮ್ಮ ಪ್ರೀತಿ ಅನಿವಾರ್ಯವಾಗೋದು ಬೇಡ. ಅವರಿಗೆ ಅವರದ್ದೇ ಆದಂಥ ಸ್ಪೇಸ್ ಕೊಡಿ. ಅಲ್ಲಿಸುಮ್ಮನೆ ಇಣುಕಿ ನೋಡುವ ಕುತೂಹಲ ಬೇಡ.

ಅಭದ್ರತೆ ಬೇಡ:
ನೀವು ಕಾಲ್ ಮಾಡಿದಾಗ, ಆತ ಮಾತಾನಾಡದಿದ್ರೆ ಅಥವಾ ನಿಮ್ಮ ಮೆಸೇಜ್ ಗೆ ರಿಪ್ಲೈ ಕೊಡದೇ ಇದ್ರೆ ಆತ ಬೇರೊಂದು ಹುಡುಗಿಯನ್ನು ಹುಡುಕುತ್ತಿದ್ದಾನೆ ಅಂತ ಅಂದುಕೊಳ್ಳುವುದು ನಿಮ್ಮ ತಪ್ಪು. ಇದು ಅಭದ್ರತೆಯ ಸಂಕೇತವಾಗಿದೆ. ಇದರಿಂದ ಆತನಿಗೆ ಉಸಿರುಕಟ್ಟುವ ಭಾವನೆ ಮೂಡುತ್ತದೆ. ಒಮ್ಮೆ ನಿಮ್ಮಿಂದ ತಪ್ಪಿಸಿಕೊಂಡರೆ ಸಾಕು ಅನ್ನುವ ಭಾವನೆ ಆತನಲ್ಲಿ ಮೂಡುವುದು ಸಹಜ. ನಿಮ್ಮನ್ನು ಪ್ರೀತಿಸಿದ್ದಾನೆ ಅಂದ್ರೆ ನೀವಿಷ್ಟ ಅಂತಲೇ. ಧೈರ್ಯವಾಗಿರಿ, ನಿಜವಾದ ಪ್ರೀತಿಯಾಗಿದ್ದರೆ ಆತ ನಿಮ್ಮನ್ನು ಬಿಟ್ಟು ಹೋಗೋಲ್ಲ. ಬರೀ ನಾಟಕವಾಗಿದ್ದರೆ ನೀವೆಷ್ಟು ಕಾಪಾಡಿದರೂ ಒಂದು ದಿನ ತೆರೆ ಬೀಳುವುದು ಖಂಡಿತ.

ಅತಿ ಅವಲಂಬನೆ ಒಳ್ಳೆಯದಲ್ಲ:
ಯಾರ ಮೇಲಾದರೂ ಅತಿಯಾದ ಅವಲಂಬನೆ ಒಳ್ಳೆಯದಲ್ಲ. ಎಲ್ಲದಕ್ಕೂ ನಿಮ್ಮ ಸಂಗಾತಿಯೇ ಬೇಕು ಅನ್ನುವಷ್ಟು ಅವಲಂಬನೆ ಬೇಡ. ನಿಮ್ಮ ಕೆಲಸಗಳನ್ನು ನೀವೇ ಮಾಡಿಕೊಳ್ಳಿ. ಸಣ್ಣ ಪುಟ್ಟ ಶಾಪಿಂಗ್, ಪಾರ್ಲರ್ ಗೆ ಹೋಗೋದು, ಮನೆಯ ಸಣ್ಣ ಪುಟ್ಟ ರಿಪೇರಿಗಳನ್ನು ನೀವೇ ಮಾಡಿ ಅವರಿಗೆ ಸರ್‌ಪ್ರೈಸ್ ಕೊಡಬಹುದು. ನಿಮ್ಮ ಸ್ನೇಹಿತೆಯ ಮನೆಗೆ ಹೋಗಲೂ ನಿಮ್ಮ ಗಂಡ ಡ್ರಾಪ್ ಕೊಡಲಿ ಎಂಬ ನಿರೀಕ್ಷೆ ಮಾಡುವುದು ಒಳ್ಳೆಯದಲ್ಲ.

ಅತಿಯಾದ ಕೇರಿಂಗ್ ಬೇಡ:
ಇದು ಸಹ ಒಳ್ಳೆಯದಲ್ಲ. ನೀವು ಒಂದಿಷ್ಟು ಕಾಲ ನಿಮ್ಮ ಸ್ನೇಹಿತರ ಮನೆಗೋ ಅಥವಾ ಒಂದಿಷ್ಟು ದಿನಕ್ಕೆ ಎಂದು ಊರಿಗೋ ಹೋಗಿರುತ್ತೀರಿ ಎಂದಿಟ್ಟುಕೊಳ್ಳಿ. ಹಾಗಂತ ಅಲ್ಲಿಂದಲೇ ಅವರ ಊಟ, ತಿಂಡಿ, ಸ್ನಾನ, ನಿದ್ದೆ ಎಲ್ಲವನ್ನೂ ಕಂಟ್ರೋಲ್ ಮಾಡಬೇಡಿ. ನಿಮಗಿದು ಕಾಳಜಿ ಆದರೆ ಪುರುಷರಿಗೆ ಇದು ಅತಿಯಾದ ಕಂಟ್ರೋಲ್ ಅಂತಾನೆ ಅನಿಸುತ್ತದೆ. ಬೆಳಗ್ಗೆ ಆದ ಕೂಡಲೇ ಎದ್ರಾ? ಹಲ್ಲುಜ್ಜಿದ್ರಾ? ಅಂತ ಅವರ ಹಿಂದೆ ಬೀಳಬೇಡಿ. ಅವರ ಕೆಲಸ ಮಾಡಿಕೊಳ್ಳಲು ಅವರಿಗೆ ಗೊತ್ತು ತಾನೇ? ಅದನ್ನು ಸಹ ನೀವು ನೆನೆಪಿಸುವ ಅಗತ್ಯವಿಲ್ಲ.



Click it and Unblock the Notifications
