Latest Updates
-
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ
ನಿಮ್ಮ ಸಂಗಾತಿಯೇ ನಿಮ್ಮ 'ಬೆಸ್ಟ್ ಫ್ರೆಂಡ್' ಎಂದು ಸೂಚಿಸುವ ಲಕ್ಷಣಗಳಿವು
ಸಂಗಾತಿಯಾದವರು, ಸ್ನೇಹಿತರಂತಿರಬೇಕು ಎಂಬ ಮಾತನ್ನ ಕೇಳಿರುತ್ತೀರಿ. ಪ್ರತಿಯೊಬ್ಬರು ತನ್ನ ಸಂಗಾತಿಯಲ್ಲಿ ಒಬ್ಬ ಒಳ್ಳೆ ಫ್ರೆಂಡ್ ನ್ನು ಹುಡುಕುತ್ತಿರುತ್ತಾರೆ. ಏಕೆಂದರೆ, ಸ್ನೇಹಿತರ ಬಳಿ ಇರುವಷ್ಟು ಸಲುಗೆ, ಸದರ ಬೇರೊಬ್ಬರೊಂದಿಗೆ ಬರಲು ಸಾಧ್ಯವಿಲ್ಲ. ಆದ್ದರಿಂದ ತನ್ನ ಜೀವನಸಂಗಾತಿ ಉತ್ತಮ ಗೆಳೆಯ ಅಥವಾ ಗೆಳತಿಯಂತಿರಬೇಕು ಎಂದು ಆಸೆ ಪಡುತ್ತಾರೆ.
ಆದರೆ ಅಂತಹವರು ಸಿಗುವುದು ತುಂಬಾ ಅಪರೂಪ. ಸಂಬಂಧಗಳ ಬಂಧಕ್ಕೆ ಸಿಲುಕಿದಾಗ ಹೆಚ್ಚಿನವರು ಬದಲಾಗುತ್ತಾರೆ. ಆದರೆ ಅದರಲ್ಲೂ ಕೆಲವರು ನಿಮ್ಮನ್ನು ಬೆಸ್ಟ್ ಫ್ರೆಂಡ್ ರೀತಿ ನೋಡಿಕೊಳ್ಳುವವರೂ ಇರುತ್ತಾರೆ. ಹಾಗಾದರೆ ಅವರು ನಿಮ್ಮ ಬೆಸ್ಟ್ ಫ್ರೆಂಡ್ ಫಾರೆವರ್ ಎಂದು ತಿಳಿಯುವುದು ಹೇಗೆ? ಇಲ್ಲದೆ ನೋಡಿ. ಈ ಲಕ್ಷಣಗಳನ್ನು ನಿಮ್ಮ ಸಂಗಾತಿಯೂ ಹೊಂದಿದ್ದರೆ, ಅವರು ನಿಮ್ಮ ಬೆಸ್ಟ್ ಫ್ರೆಂಡ್ ಫಾರೆವರ್..

ಯಾವುದೇ ಸಮಯದಲ್ಲಿ, ಯಾವುದರ ಬಗ್ಗೆಯೂ ಮಾತನಾಡುತ್ತೀರಿ:
ನೀವು ಯಾವುದೇ ವಿಚಾರವನ್ನ ಆದರೂ ಯಾವುದೇ ಭಯ, ಮುಜುಗರವಿಲ್ಲದೇ, ನಿಮ್ಮ ಸಂಗಾತಿಯ ಬಳಿ ಹೇಳಿಕೊಳ್ಳುತ್ತಿದ್ದೀರಿ ಎಂದರೆ, ಅವರೇ ನಿಮ್ಮ ಸಂಗಾತಿ ಕಮ್ ಬೆಸ್ಟ್ ಫ್ರೆಂಡ್. ಇಂತಹ ವ್ಯಕ್ತಿ ಸಿಕ್ಕಿರುವುದು ನಿಮ್ಮ ಅದೃಷ್ಟ ಏಕೆಂದರೆ, ಈ ರೀತಿ ಭಾವನೆಗಳನ್ನು ವ್ಯಕ್ತಪಡಿಸಲು, ಮೊದಲು ನಂಬಿಕೆ ಬರಬೇಕು. ಪ್ರತಿದಿನ ನಡೆಯುವ ಸಣ್ಣ ವಿಚಾರಗಳನ್ನು ಅವರ ಬಳಿ ಹೇಳಿಕೊಳ್ಳುತ್ತಿದ್ದರೆ ಅಥವಾ ಯಾವುದೋ ಕೆಟ್ಟ ವಿಚಾರ ನಿಮ್ಮ ಮನಸ್ಸು ಕೆಡಿಸಿದ್ದು, ಅದನ್ನು ಅವರ ಬಳಿ ಹೇಳಿಕೊಂಡರೆ ಮಾತ್ರ ಸಮಾಧಾನ ಸಿಗುತ್ತಿದ್ದರೆ, ನಿಮ್ಮ ಸಂಗಾತಿ ನಿಮ್ಮ ಬೆಸ್ಟ್ ಫ್ರೆಂಡ್ ಎಂದರ್ಥ.

ದೃಷ್ಟಿಕೋನ ಭಿನ್ನವಾಗಿದ್ದರೂ, ಪರಸ್ಪರ ಗೌರವಿಸುತ್ತೀರಿ:
ಜಗಳದಲ್ಲಿ ನಿರತರಾಗಿರುವ ದಂಪತಿಗಳಿಗಿಂತ ಭಿನ್ನವಾಗಿ, ನೀವಿಬ್ಬರೂ ಒಟ್ಟಾಗಿ ನಿಮ್ಮ ಸಮಸ್ಯೆಗಳನ್ನು ಪರಿಹರಿಸಲು ಪ್ರಯತ್ನಿಸುತ್ತೀರಿ. ನೀವು ಜಗಳವಾಡಬಹುದು ಮತ್ತು ವಾದಿಸಬಹುದು, ಆದರೆ ಯಾವಾಗಲೂ ಪರಸ್ಪರರ ಭಾವನೆಗಳ ಬಗ್ಗೆ ಸಹಾನುಭೂತಿ ಹೊಂದಿರುತ್ತೀರಿ ಮತ್ತು ಪರಸ್ಪರರ ದೃಷ್ಟಿಕೋನವನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸುತ್ತೀರಿ. ನಿಮ್ಮ ಸಂಗಾತಿಯೊಂದಿಗೆ ಪ್ರಾಮಾಣಿಕವಾದ ನಿಜವಾದ ಸಂಭಾಷಣೆಯನ್ನು ನಡೆಸುತ್ತೀರಿ.

ನೀವು ಹೇಗಿದ್ದೋರೋ ಹಾಗೇ ಪ್ರೀತಿಸುತ್ತಾರೆ:
ಸಂಬಂಧದಲ್ಲಿ ಇದು ತುಂಬಾ ಮುಖ್ಯ. ಏಕೆಂದರೆ ಒಮ್ಮೆ ಪ್ರೀತಿಗೆ ಬಿದ್ದ ಮೇಲೆ ಸಂಗಾತಿಯನ್ನು ಬದಲಾಯಿಸುವವರೇ ಹೆಚ್ಚು. ತಮ್ಮ ಅಭಿರುಚಿಗೆ ತಕ್ಕಂತೆ ಸಂಗಾತಿಯನ್ನು ಬದಲಾಯಿಸುವುದು ಸರಿಯಲ್ಲ. ನೀವು ಹೇಗಿದ್ದೀರೋ ಹಾಗೇ ನಿಮ್ಮನ್ನು ಒಪ್ಪಿಕೊಳ್ಳಬೇಕು, ಅದರಲ್ಲಿ ಉತ್ತಮವಾದುದನ್ನು ಹೊರತೆಗೆಯಲು ಪ್ರಯತ್ನಿಸಬೇಕು. ಇಂತಹ ಕೆಲಸವನ್ನು ನಿಮ್ಮ ಸಂಗಾತಿ ಏನಾದರೂ ಮಾಡುತ್ತಿದ್ದರೆ, ನಿಮ್ಮ ಬೆಸ್ಟ್ ನ್ನು ಹೊರತೆಗೆಯಲು ಪ್ರೋತ್ಸಾಹ ನೀಡುತ್ತಿದ್ದರೆ, ಅವರೇ ನಿಮ್ಮ ಬೆಸ್ಟ್ ಫ್ರೆಂಡ್..

ಅವರೊಂದಿಗೆ ಜೀವನ ಎಂದಿಗೂ ನೀರಸವೆನಿಸುವುದಿಲ್ಲ:
ನೀವು ಕೆಲಸಗಳನ್ನು ಒಟ್ಟಿಗೆ ಮಾಡುವುದನ್ನು ಆನಂದಿಸುವುದಲ್ಲದೆ ಪರಸ್ಪರರ ಹಿತಾಸಕ್ತಿಗಳನ್ನು ಗೌರವಿಸುತ್ತೀರಿ. ಅವರೊಂದಿಗೆ ಜೀವನ ಎಂದಿಗೂ ಬೋರಾಗುವುದಿಲ್ಲ ಅಥವಾ ನೀರಸವೆನಿಸುವುದಿಲ್ಲ. ಮಾತನಾಡುತ್ತಾ, ಆಟವಾಡುತ್ತಾ ಕಾಲ ಕಳೆಯುತ್ತೀರಿ. ಫ್ರೀ ಟೈಮ್ ಇದ್ದಾಗ ಮೊದಲು ನೆನಪಾಗುವುದೇ ನಿಮ್ಮ ಸಂಗಾತಿ. ಅವರ ಒಟ್ಟಿಗೇ ಇರಲು ನಿಮಗಿಷ್ಟವಾಗುತ್ತದೆ.

ಒಬ್ಬರಿಗೊಬ್ಬರು ಅರ್ಥಮಾಡಿಕೊಂಡಿರುತ್ತೀರಿ:
ಜೀವನದಲ್ಲಿ ಎಲ್ಲಕ್ಕಿಂತ ಮುಖ್ಯ, ನಿಮ್ಮನ್ನು ಯಾರಾದರೂ ಅರ್ಥಮಾಡಿಕೊಳ್ಳುವವರು ಸಿಗುವುದು. ಒಬ್ಬರಿಗೊಬ್ಬರು ಚೆನ್ನಾಗಿ ಅರಿತು, ಅವರ ಕಷ್ಟ-ಸುಖಗಳಲ್ಲಿ ಭಾಗಿಯಾಗಿರುವುದೇ ನಿಜವಾದ ಸಂಬಂಧ. ನಿಮ್ಮನ್ನು ಯಾರೊಂದಿಗೂ ಹೋಲಿಸದೇ, ಯಾರ ಮುಂದೆಯೂ ಕೀಳು ಮಾಡದೇ ಇರುವವರಿದ್ದರೆ ಜೀವನ ಸುಂದರ. ನಿಮ್ಮ ಸಂಗಾತಿ ಹೀಗಿದ್ದರೆ, ನಿಮಗಿಂತ ಅದೃಷ್ಟವಂತರು ಮತ್ತೊಬ್ಬರಿಲ್ಲ.



Click it and Unblock the Notifications
