ಪುರುಷರೇ ಎಚ್ಚರಿಕೆ, ಸಂಬಂಧದಲ್ಲಿನ ಅಸುರಕ್ಷತೆ ಖಿನ್ನತೆಗೆ ಕಾರಣವಾಗಬಹುದು!

ಪ್ರತಿಯೊಬ್ಬ ಹೆಣ್ಣಿಗೂ ತಾಯ್ತನ ಎಷ್ಟು ಸಂತೋಷವನ್ನು ನೀಡುತ್ತೋ, ಅದೇ ರೀತಿ ಪ್ರತಿ ಪುರುಷನಿಗೂ ಸಹ ಪಿತೃತ್ವ ರೋಮಾಂಚನಕಾರಿ ಹಾಗೂ ಅದ್ಭುತ ಅನುಭವವನ್ನು ನೀಡುತ್ತದೆ. ಆದರೆ ಇದು ಕೆಲವೊಮ್ಮೆ ಎಲ್ಲದರಿಂದ ದೂರವಾಗಿದ್ದೀರಿ ಎಂಬ ಭಾವನೆ ಮುಡುವುದಕ್ಕೂ ಕಾರಣವಾಗುತ್ತದೆ. ಮಗುವನ್ನು ನೋಡಿಕೊಳ್ಳುವಾಗ ತನ್ನ ವೈವಾಹಿಕ ಜೀವನವನ್ನು ನಿಭಾಯಿಸುವುದು ಕಠಿಣವಾಗಬಹುದು. ಇದು ನಿಮ್ಮ ಮಾನಸಿಕ ಆರೋಗ್ಯಕ್ಕೆ ಹಾನಿಯಾಗುತ್ತದೆ. ಹೆರಿಗೆಯ ನಂತರದ ಖಿನ್ನತೆಯನ್ನು ಅನುಭವಿಸುವ ಮಹಿಳೆಯರ ಬಗ್ಗೆ ನೀವು ಸಾಕಷ್ಟು ಕಥೆಗಳನ್ನು ಕೇಳಿರುತ್ತೀರಿ. ಆದರೆ ಕೆಲವೊಮ್ಮೆ ಸನ್ನಿವೇಶ ಬದಲಾಗುತ್ತದೆ, ಪುರುಷರು ಸಹ ಈ ಖಿನ್ನತೆಯನ್ನು ಅನುಭವಿಸುತ್ತಾರೆ. ಹಾಗಾಗಿ ನಾವಿಲ್ಲಿ ಪುರುಷರು ಪ್ರಸವನಂತರ ಅಂದ್ರೆ ತಾವು ತಂದೆಯಾದ ಬಳಿಕ ಏಕೆ ಖಿನ್ನತೆಗೆ ಒಳಗಾಗುತ್ತಾರೆ ಎಂಬುದನ್ನು ಹೇಳಲಾಗಿದೆ.

ಪ್ರಸವಪೂರ್ವ ಖಿನ್ನತೆಗೆ ಪುರುಷರು ಏಕೆ ಒಳಗಾಗುತ್ತಾರೆ? :

ಪ್ರಸವಪೂರ್ವ ಖಿನ್ನತೆಗೆ ಪುರುಷರು ಏಕೆ ಒಳಗಾಗುತ್ತಾರೆ? :

ಎಪಿಎ ಸೈಕ್ ನೆಟ್ ಜರ್ನಲ್ನಲ್ಲಿ ಪ್ರಕಟವಾದ ಹೊಸ ಅಧ್ಯಯನವು ತಮ್ಮ ಸಂಗಾತಿಯೊಂದಿಗಿನ ಸಂಬಂಧದಲ್ಲಿ ಅಸುರಕ್ಷಿತೆ ಹೊಂದಿರುವ ಪುರುಷರಲ್ಲಿ ಪ್ರಸವನಂತರದ ಖಿನ್ನತೆ ಹೆಚ್ಚಾಗಿ ಕಂಡುಬರುತ್ತದೆ ಎಂದು ಕಂಡುಹಿಡಿದಿದೆ. ಸಂಬಂಧದಲ್ಲಿ ಅಸುರಕ್ಷಿತನಾಗಿರುವ ಹೊಸದಾಗಿ ತಂದೆಯಾದ ಪುರುಷ ಖಿನ್ನತೆಯಿಂದ ಬಳಲುತ್ತಿರುವ ಸಾಧ್ಯತೆಯಿದೆ ಎಂದು ಸಂಶೋಧನೆಗಳು ಸೂಚಿಸುತ್ತವೆ. ಇದರ ಹಿಂದಿನ ಮುಖ್ಯ ಕಾರಣವೆಂದರೆ ತಮ್ಮ ಸಂಬಂಧಗಳಲ್ಲಿ ಕಡಿಮೆ ಆತ್ಮವಿಶ್ವಾಸ, ಇದು ಪೋಷಕರ ಒತ್ತಡವನ್ನು ಪ್ರಚೋದಿಸುತ್ತದೆ, ಇದರಿಂದಾಗಿ ಖಿನ್ನತೆಗೆ ಕಾರಣವಾಗುತ್ತದೆ.

ಸುಮಾರು ಶೇಕಡಾ ೮ರಷ್ಟು ಹೊಸದಾಗಿ ತಂದೆಯಾದ ಪುರುಷರು ಖಿನ್ನತೆಯ ಲಕ್ಷಣಗಳನ್ನು ಅನುಭವಿಸುತ್ತಾರೆ ಎಂದು ಸಂಶೋಧಕರು ತೀರ್ಮಾನಿಸಿದ್ದಾರೆ. ಹೊಸ ತಾಯಂದಿರಲ್ಲಿ ಶೇಕಡಾ 10-12ರಷ್ಟು ಜನರು ಈ ರೋಗಲಕ್ಷಣಗಳನ್ನು ಅನುಭವಿಸುತ್ತಾರೆ.

ಪುರುಷರಲ್ಲಿ ಪ್ರಸವಪೂರ್ವ ಖಿನ್ನತೆಯನ್ನು ಪ್ರಚೋದಿಸುವ ಸಂಭಾವ್ಯ ಕಾರಣಗಳು:

ಪುರುಷರಲ್ಲಿ ಪ್ರಸವಪೂರ್ವ ಖಿನ್ನತೆಯನ್ನು ಪ್ರಚೋದಿಸುವ ಸಂಭಾವ್ಯ ಕಾರಣಗಳು:

ಜರ್ನಲ್ ಆಫ್ ದಿ ಅಮೆರಿಕನ್ ಮೆಡಿಕಲ್ ಅಸೋಸಿಯೇಷನ್‌ನ ವರದಿಯ ಪ್ರಕಾರ, ಶೇಕಡಾ 10 ರಷ್ಟು ಪುರುಷರು ಗರ್ಭಧಾರಣೆಯ ಮೊದಲ ತ್ರೈಮಾಸಿಕದಿಂದ ಹಿಡಿದು ಹೆರಿಗೆಯ 6 ತಿಂಗಳ ನಂತರದವರೆಗೂ ಖಿನ್ನತೆಯಿಂದ ಬಳಲುತ್ತಿದ್ದಾರೆ .

ತಂದೆಯ ಖಿನ್ನತೆಗೆ ಹಿಂದಿನ ಕಾರಣಗಳನ್ನು ಕಂಡುಹಿಡಿಯಲು, 530 ಹೊಸದಾಗಿ ತಂದೆಯಾದ ಪುರುಷರ ಡೇಟಾವನ್ನು ವಿಶ್ಲೇಷಿಸಿದೆ. ಸಂಶೋಧನೆಗಳ ಪ್ರಕಾರ, 143 ಜನರು ಖಿನ್ನತೆಯ ಲಕ್ಷಣಗಳನ್ನು ತೋರಿಸಿದ್ದಾರೆ. ಈ ಪೈಕಿ 43 ತಂದೆಯಂದಿರು ಬಹಳ ಸಾಧಾರಣ ಲಕ್ಷಣಗಳನ್ನು ಅನುಭವಿಸಿದ್ದು, 22 ಮಂದಿ ಗಂಭೀರ ಲಕ್ಷಣಗಳನ್ನು ತೋರಿಸಿದರು. ಈ ಪುರುಷರು ತಮ್ಮ ಬಗ್ಗೆ ನಕಾರಾತ್ಮಕ ದೃಷ್ಟಿಕೋನವನ್ನು ತೋರಿಸಿದ್ದು, ತಮ್ಮ ಸಂಬಂಧಗಳಲ್ಲಿ ಅಸಮರ್ಪಕವಾಗಿದ್ದಾರೆ ಎಂಬ ಆತಂಕವನ್ನೂ ವ್ಯಕ್ತ ಪಡಿಸಿದ್ದಾರೆ.

ಪ್ರಸವ ನಂತರದ ಖಿನ್ನತೆಯಿಂದ ಬಳಲುತ್ತಿರುವ ಸ್ತ್ರೀ ಪಾಲುದಾರರು ಹೆಚ್ಚಾಗಿದ್ದು, ಅವರಲ್ಲಿ ಕೆಲವೇ ಕೆಲವರು ಸಹಾಯ ಪಡೆಯಲು ವೃತ್ತಿಪರರೊಂದಿಗೆ ಸಂಪರ್ಕದಲ್ಲಿದ್ದಾರೆ ಎಂದು ಅಧ್ಯಯನವು ತಿಳಿಸಿದೆ.

ಖಿನ್ನತೆಯ ಲಕ್ಷಣಗಳು ಹೀಗಿವೆ:

ಖಿನ್ನತೆಯ ಲಕ್ಷಣಗಳು ಹೀಗಿವೆ:

ಪ್ರಸವಪೂರ್ವ ಖಿನ್ನತೆಯ ಚಿಹ್ನೆಗಳು ಮತ್ತು ರೋಗಲಕ್ಷಣಗಳನ್ನು ತಿಳಿದುಕೊಳ್ಳುವುದು ಬಹಳ ಮುಖ್ಯ, ಇದರಿಂದಾಗಿ ನಿಮ್ಮ ಪಿತೃತ್ವವನ್ನು ನೀವು ಪೂರ್ಣವಾಗಿ ಆನಂದಿಸಬಹುದು. ಪುರುಷರಲ್ಲಿ ಪ್ರಸವಪೂರ್ವ ಖಿನ್ನತೆಯ ಚಿಹ್ನೆಗಳು ಮತ್ತು ರೋಗಲಕ್ಷಣಗಳ ಬಗ್ಗೆ ತಿಳಿದಿರುವುದು ಅದರ ವಿರುದ್ಧ ಹೋರಾಡಲು ಸಹಾಯ ಮಾಡುತ್ತವೆ. ಆ ಲಕ್ಷಣಗಳು ಈ ಕೆಳಗಿನಂತಿವೆ.

  • ಹೆಚ್ಚಿನ ಸಮಯ ದುಃಖದಲ್ಲೇ ಇರುವುದು
  • ಸದಾ ಕಿರಿಕಿರಿ
  • ಕೇಂದ್ರೀಕರಣದ ತೊಂದರೆ
  • ನಿದ್ರೆ ಸರಿಯಾಗಿ ಬರದೇ ಇರುವುದು
  • ಗೊಂದಲದ ಆಲೋಚನೆಗಳು
  • ಒತ್ತಡ ಮತ್ತು ಬಳಲಿಕೆ
  • ನಿಷ್ಪ್ರಯೋಜಕತೆಯ ಭಾವನೆ
  • ಲೈಂಗಿಕತೆ ಅಥವಾ ಚಟುವಟಿಕೆಗಳಲ್ಲಿನ ಆಸಕ್ತಿ ಇಲ್ಲದೇ ಇರುವುದು
  • ಅಪಾಯಕಾರಿ ನಡವಳಿಕೆಯಲ್ಲಿ ತೊಡಗಿಸಿಕೊಳ್ಳುವುದು
  • ತೀವ್ರತರವಾದ ಪ್ರಕರಣಗಳಲ್ಲಿ, ಪುರುಷರು ಉಸಿರಾಟದ ತೊಂದರೆ ಮತ್ತು ಅತಿಯಾದ ಹೃದಯ ಬಡಿತವನ್ನು ಸಹ ಅನುಭವಿಸಬಹುದು. ಮೇಲಿನ ಯಾವುದೇ ರೋಗಲಕ್ಷಣಗಳನ್ನು ನೀವು ಅನುಭವಿಸಿದರೆ, ತೊಂದರೆಗಳನ್ನು ತಪ್ಪಿಸಲು ತಕ್ಷಣ ನಿಮ್ಮ ವೈದ್ಯರನ್ನು ಸಂಪರ್ಕಿಸಿ.

English summary

Relationship Insecurities May up Postnatal Depression in Men

New fathers should avoid feeling insecure in their relationship as it might lead to postnatal depression. have a look
X
Desktop Bottom Promotion