Latest Updates
-
ಅಕ್ಟೋಬರ್ 2 ಡ್ರೈ ಡೇ: ಮದ್ಯ ಸಿಗಲ್ಲ, ಪಾರ್ಟಿ ಪ್ಲಾನ್ ಬದಲಿಸಿ! ಸುರಕ್ಷಿತವಾಗಿ ಸಂಭ್ರಮಿಸುವುದು ಹೇಗೆ? -
IMD ಅಲರ್ಟ್: ದಕ್ಷಿಣ ಭಾರತದಲ್ಲಿ ಭಾರಿ ಮಳೆ, ಬಿರುಗಾಳಿ - ನಿಮ್ಮ ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆಗಳನ್ನು ತಪ್ಪದೇ ಪಾಲಿಸಿ! -
ಕೇವಲ ₹100ರಲ್ಲಿ ದಿನಕ್ಕೆ 80 ಗ್ರಾಂ ಪ್ರೋಟೀನ್: ಸಸ್ಯಾಹಾರಿಗಳಿಗಾಗಿ ಇಲ್ಲಿದೆ ಪಕ್ಕಾ ದೇಸಿ ಡಯಟ್ ಪ್ಲಾನ್! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ನಥಿಂಗ್ ಮತ್ತು ಫೈರ್-ಬೋಲ್ಟ್ ಆಫರ್ಸ್ ರಿವೀಲ್, ಶಾಪಿಂಗ್ಗೆ ರೆಡಿಯಾಗಿ! -
ದೆಹಲಿ-ಎನ್ಸಿಆರ್ನಲ್ಲಿ ವಾಯು ಮಾಲಿನ್ಯದ ಆತಂಕ: ಇಂದಿನಿಂದ ಹೊರಾಂಗಣ ವ್ಯಾಯಾಮಕ್ಕೆ ಬ್ರೇಕ್ ಹಾಕಿ! -
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್!
ಹೆಂಡತಿ ನೋ ಎಂದಿದ್ದಕ್ಕೆ ತಾನೇ ಮೆಟರ್ನಿಟಿ ಫೋಟೋಶೂಟ್ ಮಾಡಿಸಿದ ಗಂಡ
ಪೋಷಕರಾಗುವುದು ಎನ್ನುವುದು ಒಂದು ಅದ್ಭುತವಾದ ಅನುಭವ, ಹೆಣ್ಣು ತಾನು ಗರ್ಭಿಣಿಯೆಂದು ತಿಳಿದ ತಕ್ಷಣ ತಾಯ್ತನದ ಖುಷಿ ಅನುಭವಿಸಿದರೆ ಗಂಡಿಗೆ ಆ ಸುದ್ದಿ ತಿಳಿದ ಕ್ಷಣದಿಂದ ತಾನು ತಂದೆಯಾಗುತ್ತಿದ್ದೇನೆ ಎಂದು ಪುಳುಕಗೊಂಡಿರುತ್ತಾನೆ.
ಆತ ಗರ್ಭವನ್ನು ತನ್ನ ಒಡಲಿನಲ್ಲಿ ಹೊರದಿದ್ದರೂ ತನ್ನ ಮಗುವಿನ ಬಗ್ಗೆ ಸಾಕಷ್ಟು ಕಲ್ಪನೆಗಳಿರುತ್ತದೆ. ಮಗು ಯಾವಾಗ 9 ತಿಂಗಳು ತುಂಬಿ ಈ ಜಗತ್ತಿಗೆ ಬರುತ್ತದೋ ಎಂದು ಕಾತುರದಿಂದ ಕಾಯುತ್ತಿರುತ್ತಾನೆ. ಇನ್ನು ಗರ್ಭಿಣಿಯಾಗಿದ್ದಾಗ ಹೆಚ್ಚಿನವರು ಮೆಟರ್ನಿಟಿ ಫೋಟೋ ಶೂಟ್ ಮಾಡಿಸಿ, ಆ ಸಂಭ್ರಮದ ದಿನಗಳನ್ನು ತಮ್ಮ ನೆನಪಿನಲ್ಲಿ ಭದ್ರವಾಗಿಡಲು ಬಯಸುತ್ತಾರೆ. ಹೆಂಡತಿ ತನ್ನ ಬೇಬಿ ಬಂಪ್ ಜೊತೆ ಫೋಟೋ ಶೂಟ್ ಮಾಡಿಸಿದರೆ ಗಂಡ ಆಕೆಯ ಜೊತೆಗೆ ನಿಂತು ಫೋಟೋಗಳನ್ನು ತೆಗೆಸಿಕೊಳ್ಳುವುದು ಸಹಜ.
ಆದರೆ ಮೆಟರ್ನಿಟಿ ಫೋಟೋ ಶೂಟ್ ಹೆಂಡತಿಯಿಲ್ಲದೆ ಗಂಡ ಮಾತ್ರ ಮಾಡಿಸಿಕೊಂಡ ಎಷ್ಟೋ ಉದಾಹರಣೆಗಳಿವೆ. ಅವುಗಳನ್ನು ನೋಡುವಾಗ ನಗು ಬಂದರೂ ಆ ಫೋಟೋಗಳ ಹಿಂದೆ ಭಾವನಾತ್ಮಕ ಕತೆಯಿರುತ್ತದೆ. ಬೆಡ್ ರೆಸ್ಟ್‌ನಲ್ಲಿರುವ ಹೆಂಡತಿಗಾಗಿ ತನ್ನ ಹುಬ್ಬಿದ ಹೊಟ್ಟೆಯನ್ನು ಹಿಡಿದು ಫೋಟೋ ಶೂಟ್ ಮಾಡಿಸಿರುವ ಗಂಡಂದಿರು ಇದ್ದಾರೆ. ಇದೀಗ ಅದೇ ಒಬ್ಬರ ಫೋಟೋವನ್ನು ಸಾಮಾಜಿಕ ತಾಣದಲ್ಲಿ ನೋಡಿದವರು ಆ ಫೋಟೋ ನೋಡಿದ ತಕ್ಷಣ ನಗುತ್ತಿದ್ದಾರೆ.

ಹೆಂಡತಿ ಮೆಟರ್ನಿಟಿ ಫೋಟೋಶೂಟ್‌ಗೆ ನಿರಾಕರಿಸಿದ್ದಕ್ಕೆ ಗಂಡನ ಫೋಟೋ ಶೂಟ್
ಈತ ಈ ರೀತಿ ಏಕೆ ಮೆಟರ್ನಿಟಿ ಫೋಟೋ ಶೂಟ್ ಮಾಡಿಸಿದ್ದಾನೆ ಎಂಬುವುದರ ಹಿಂದಿನ ನಿಜವಾದ ಕಾರಣ ಗೊತ್ತಿಲ್ಲ, ಆದರೆ ಹೆಂಡತಿ ಫೋಟೋಶೂಟ್ ಮಾಡಲು ನಿರಾಕರಿಸಿದ್ದಕ್ಕೆ, ಆತ ಫೋಟೋ ಗ್ರಾಫರ್‌ಗೆ ಮೊದಲೇ ಹಣ ಕೊಟ್ಟಿರುವ ಕಾರಣಕ್ಕಾಗಿ ಹೀಗೆ ಫೋಟೋ ಶೂಟ್ ಮಾಡಿಸಿಕೊಂಡಿದ್ದಾರೆ ಎಂದು ತಮಾಷೆಯಾಗಿ ಬರೆದು ಸಾಮಾಜಿಕ ತಾಣದಲ್ಲಿ ಪೋಸ್ಟ್ ಮಾಡಲಾಗುತ್ತದೆ. ಆತನ ಹೆಂಡತಿ ನಿರಾಕರಿಸಿದಳೋ ಅಥವಾ ಆತನೇ ತಾನೂ ಮೆಟರ್ನಿಟಿ ಫೋಟೋ ಶೂಟ್ ಮಾಡಿಸುವ ಸಲುವಾಗಿ ಈ ರೀತಿ ಫೋಟೋ ತೆಗೆಸಿಕೊಂಡಿದ್ದಾರೋ ಗೊತ್ತಿಲ್ಲ, ಆದರೆ ಈ ಫೋಟೋ ನೆಟ್ಟಿಗರ ಗಮನ ಸೆಳೆದಿರುವುದಂತೂ ನಿಜ.

ಫೋಟೋಗ್ರಾಫರ್ ಈ ಬಗ್ಗೆ ಏನು ಹೇಳಿದ್ದಾನೆ?
ಈ ಫೋಟೋಗನ್ನು ಮಾರ್ಟಿನ್ ವಿಲ್ಕೀಸ್ ಎಂಬುವವರು ಕ್ಲಿಕ್ಕಿಸಿದ್ದಾರೆ. ಅವರು ನಮ್ಮಿಂದ ಮತ್ತೊಂದು ಬದುಕು ನೀಡುವ ಈ ಪ್ರಕೃತ್ತಿಯ ಪ್ರಕ್ರಿಯೆ ಎಷ್ಟೊಂದು ಸುಂದರ, ಇದು ತಾಯಿ ನೀಡುವ ಅತ್ಯದ್ಭುತವಾದ ಕೊಡುಗೆಯಾಗಿದೆ, ಇನ್ನೇನು 5 ವಾರಗಳಲ್ಲಿ ಬರಲಿರುವ ತನ್ನ ಮಗಳು ನೊಯಿಲಿಯಾ ಕಾತರದಿಂದ ಕಾಯುತ್ತಿರುವ ತಂದೆ ಪ್ಯಾಕೋ ಎಂದು ಬರೆದಿದ್ದಾರೆ. ತಾನು ತಂದೆಯಾಗುತ್ತಿರುವ ಕನಸ್ಸು ಕೊನೆಗೂ ನಿಜವಾದ ಖುಷಿಯಲ್ಲಿದ್ದಾರೆ ಪ್ಯಾಕೋ ಎಂದಿದ್ದಾರೆ.

ಬಹು ದಿನಗಳಿಂದ ತಂದೆಯಾಗುವ ಕನಸ್ಸು ಈಡೇರಿದಾಗ
ಪ್ಯಾಕೋ ದಂಪತಿ ಬಹು ದಿನಗಳಿಂದ ಮಗುವಿಗಾಗಿ ಕಾಯುತ್ತಿದ್ದರು, ತಮ್ಮ ಕನಸ್ಸು ನೆರವೇರುವ ಸಮಯ ಬಂದಾಗ ಆ ಖುಷಿಯಲ್ಲಿ ತಂದೆ ತೆಗಿಸಿಕೊಂಡ ಸೂಪರ್ ಕ್ಲಿಕ್ಸ್.

ನೋಡುವಾಗಲೇ ನಗು ಬರಿಸುವ ಪೋಟೋಗಳು
ಈ ಫೋಟೋಗಳನ್ನು ನೋಡಿದ ತಕ್ಷಣ ಯಾರಿಗಾದರೂ ಸರಿ ತಕ್ಷಣ ನುಗು ಬರುತ್ತದೆ, ಅಷ್ಟೊಂದು ಫನ್ನಿಯಾಗಿದೆ. ಬಹುಶಃ ಪ್ಯಾಕೋ ಹೆಂಡತಿ ಫೋಟೋ ಶೂಟ್ ಮಾಡಿಸಿದ್ದರೂ ಇಷ್ಟೊಂದು ಫೀಲ್‌ನಿಂದ ಮಾಡಿಸುತ್ತಿದ್ದರೋ ಏನೋ...ಮುಂದೆ ಮಗಳಿಗೆ ತಂದೆಯ ಈ ಫೋಟೋ ನೋಡಿದಾಗ ನನ್ನಪ್ಪ ಎಷ್ಟೊಂದು ಕ್ರೇಝಿ ಅಂತ ಅನಿಸಿದಿರಲ್ಲ ಅಲ್ವಾ?



Click it and Unblock the Notifications
