ಪುರುಷರು ಈ 4 ವಿಚಾರಗಳನ್ನು ತಮ್ಮ ಸಂಗಾತಿಯಿಂದ ರಹಸ್ಯವಾಗಿಡಲು ಬಯಸುತ್ತಾರಂತೆ!

ಅನೇಕ ಹುಡುಗಿಯರು ತಮ್ಮ ಸಂಗಾತಿಯ ಬಗ್ಗೆ ತಮಗೆಲ್ಲಾ ತಿಳಿದಿದೆ ಎಂದು ಭಾವಿಸುತ್ತಾರೆ. ಆದರೆ ಈ ಭಾವನೆ ತಪ್ಪು, ಹುಡುಗಿಯರಿಗೆ ತಮ್ಮ ಸಂಗಾತಿಯ ಎಲ್ಲಾ ತಿಳಿದಿರುವುದು ಬಲು ಅಪರೂಪ. ಏಕೆಂದರೆ, ಹುಡುಗರು ಎಲ್ಲವನ್ನೂ ಹಂಚಿಕೊಳ್ಳುವುದಿಲ್ಲ. ತಮಗೆ ಸಂಬಂಧಿಸಿದ ಕೆಲವು ವಿಷಯಗಳನ್ನು ತಮ್ಮ ಸಂಗಾತಿಯಿಂದ ಮರೆಮಾಡುತ್ತಾರೆ. ಇವು ಪುರುಷರ ಜೀವನಕ್ಕೆ ಸಂಬಂಧಿಸಿದ ರಹಸ್ಯಗಳಾಗಿವೆ, ಅದು ನಿಮಗೆ ತಿಳಿದಿರುವುದಿಲ್ಲ. ಏಕೆಂದರೆ ಪುರುಷರು ಕೆಲವೊಂದು ವಿಷಯಗಳನ್ನು ಹಂಚಿಕೊಳ್ಳಲು ಇಷ್ಟಪಡುವುದಿಲ್ಲ. ಅಂತಹ ವಿಷಯಗಳಾವುವು ಎಂಬುದನ್ನು ಇಲ್ಲಿ ನೋಡೋಣ.

ಪುರುಷರು ತಮ್ಮ ಸಂಗಾತಿಯಿಂದ ಮರೆಮಾಚುವ ವಿಷಯಗಳಾವುವು ಎಂಬುದನ್ನು ಈ ಕೆಳಗೆ ನೀಡಲಾಗಿದೆ:

ಭಾವನಾತ್ಮಕ ಬೆಂಬಲದ ನಿರೀಕ್ಷೆ:

ಭಾವನಾತ್ಮಕ ಬೆಂಬಲದ ನಿರೀಕ್ಷೆ:

ನಿಮ್ಮ ಸಂಗಾತಿಯ ಸ್ವಭಾವ ಹೇಗೇ ಇರಲಿ, ಅವರು ಭಾವನಾತ್ಮಕ ಬೆಂಬಲವನ್ನು ನಿರೀಕ್ಷಿಸುತ್ತಾರೆ. ನಿಮ್ಮ ಸಂಗಾತಿಯು ಹೆಚ್ಚು ಭಾವನಾತ್ಮಕವಾಗಿರಬಹುದು ಅಥವಾ ಸಾಮಾನ್ಯವಾಗಿ ಕೇರ್ ಫ್ರೀ ಆಗಿರಬಹುದು, ಆದರೆ ಪ್ರತಿಯೊಬ್ಬ ಪುರುಷನು ತನ್ನ ಸಂಗಾತಿಯು ಅವನನ್ನು ಬೆಂಬಲಿಸಬೇಕೆಂದು ಬಯಸುತ್ತಾನೆ. ಆದರೆ ಅವರು ಇದನ್ನು ಎಲ್ಲರೆದುರು ಒಪ್ಪಿಕೊಳ್ಳುವುದಿಲ್ಲ. ಪುರುಷರು ಯಾವಾಗಲೂ ತಮ್ಮನ್ನು ತಾವು ಬಲಶಾಲಿಗಳೆಂದು ತೋರಿಸಲು ಪ್ರಯತ್ನಿಸುತ್ತಾರೆ ಆದರೆ ಅವರು ತಮ್ಮ ಸಂಗಾತಿಯಿಂದ ಪ್ರೀತಿ ಮತ್ತು ಬೆಂಬಲವನ್ನು ನಿರೀಕ್ಷಿಸುತ್ತಾರೆ. ಇದು ಅವನ ಒಂದು ರಹಸ್ಯವಾಗಿದ್ದು, ಅವನು ತನ್ನ ಸಂಗಾತಿಗೆ ಹೇಳಲು ಸಾಧ್ಯವಾಗುವುದಿಲ್ಲ.

ಭಯ:

ಭಯ:

ಹುಡುಗರು ಬಾಲ್ಯದಿಂದಲೂ ಬಲಶಾಲಿ ಮತ್ತು ಧೈರ್ಯಶಾಲಿ ಎಂದು ತೋರಿಸಲು ಪ್ರಯತ್ನಿಸುತ್ತಲೇ ಇರುತ್ತಾರೆ. ಏಕೆಂದರೆ, ಹುಡುಗರು ಹೆದರಬಾರದು ಎಂದು ಅವರಿಗೆ ಕಲಿಸಲಾಗುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ಪುರುಷರು ಬೆಳೆದಾಗ ತಮ್ಮ ಭಯವನ್ನು ವ್ಯಕ್ತಪಡಿಸಲು ಸಾಧ್ಯವಾಗುವುದಿಲ್ಲ. ಅವರು ಭಯವನ್ನು ದೌರ್ಬಲ್ಯವೆಂದು ಪರಿಗಣಿಸುತ್ತಾರೆ, ಆದ್ದರಿಂದ ಅವರು ತಮ್ಮ ಸಂಗಾತಿಗೆ ಭಯವಾಗುತ್ತಿದೆ ಎಂದು ಹೇಳಲು ಸಾಧ್ಯವಿಲ್ಲ. ಅವನು ಯಾವಾಗಲೂ ಭಯಪಡುವುದನ್ನು ಮರೆಮಾಡಲು ಪ್ರಯತ್ನಿಸುತ್ತಾನೆ.

ನೋವು:

ನೋವು:

ಪುರುಷರು ಸಾಮಾನ್ಯವಾಗಿ ತಮ್ಮ ನೋವನ್ನು ಯಾರ ಮುಂದೆಯೂ ತೋರ್ಪಡಿಸಿಕೊಳ್ಳುವುದಿಲ್ಲ, ಯಾರ ಮುಂದೆಯೂ ಕಣ್ಣೀರು ಹಾಕುವುದಿಲ್ಲ, ಹಾಗಂತ ಅವರಿಗೆ ನೋವೇ ಇಲ್ಲ ಎಂಬದು ಅರ್ಥವಲ್ಲ, ಅವರು ಸಹ ಮುಷ್ಯೇ ಆಗಿರುವುದರಿಂದ ಅವರಲ್ಲೂ ನೋವು, ಕಷ್ಟ, ಸಂಕಟಗಳರುತ್ತವೆ. ಆದರೆ, ಅದನ್ನು ಯಾರ ಮುಂದೆಯೂ ತೋರಿಸಿಕೊಳ್ಳುವುದಿಲ್ಲ, ವಿಶೇಷವಾಗಿ ತನ್ನ ಸಂಗಾತಿ ಮುಂದೆ ಅದನ್ನು ಮರೆಮಾಚಲು ಪ್ರಯತ್ನ ಮಾಡುತ್ತಾರೆ. ಅದು ಮನಸ್ಸಿನ ದುಃಖವಾಗಿರಲಿ, ದೇಹದ ಗಾಯವಾಗಿರಲಿ, ಇತರರ ಜೊತೆ ಹೇಳಿಕೊಳ್ಳುವುದಿಲ್ಲ. ಹಂಚಿಕೊಂಡರೆ, ಸಂಗಾತಿಯ ಮುಂದೆ ವೀಕ್ ಆಗುತ್ತೇನೆಂಬ ಕಾರಣವೂ ಇರಬಹುದು.

ನೋಟ ಮತ್ತು ಅನಿಸಿಕೆ:

ನೋಟ ಮತ್ತು ಅನಿಸಿಕೆ:

ಮುಂದೆ ಸಾಗುವ ಪ್ರತಿಯೊಬ್ಬ ಹೆಣ್ಣೂ ತನ್ನನ್ನು ಒಮ್ಮೆ ಕಣ್ಣಾಡಿಸಿ ನೋಡಬೇಕು ಎಂಬ ಆಸೆ ಪ್ರತಿಯೊಬ್ಬ ಪುರುಷನಲ್ಲೂ ಇರುತ್ತದೆ. ಆದರೆ ಅವನು ಇದನ್ನು ಎಂದಿಗೂ ಒಪ್ಪಿಕೊಳ್ಳುವುದಿಲ್ಲ. ಹುಡುಗಿಯರು ಸುಂದರವಾಗಿ ಕಾಣಬೇಕೆಂದು ಬಯಸುತ್ತಾರೆ ಎಂದು ಹೇಳಲಾಗುತ್ತದೆ, ಆದರೆ ಹುಡುಗರಿಗೂ ಇದೇ ರೀತಿಯ ನೋಟದ ಆಸೆ ಇರುತ್ತದೆ, ಆದರೆ ಅವರು ಇದನ್ನು ವ್ಯಕ್ತಪಡಿಸುವುದಿಲ್ಲ. ಇದರ ಹೊರತಾಗಿ, ಆತ ನಿಮ್ಮನ್ನು, ಅಂದಕ್ಕಿಂತ ಮುಖ್ಯವಾಗಿ, ನಿಮ್ಮ ಮನಸ್ಸನ್ನು ಇಷ್ಟಪಟ್ಟು ಪ್ರೀತಿಸುತ್ತಿದ್ದರೂ ಸಹ, ಅವನು ಭೇಟಿಯಾಗುವ ಹುಡುಗಿಯರ ನೋಟವನ್ನು ಖಂಡಿತವಾಗಿ ಮೌಲ್ಯಮಾಪನ ಮಾಡುತ್ತಾನೆ. ಆದರೆ, ಇದನ್ನು ಎಂದಿಗೂ ಹೇಳಿಕೊಳ್ಳುವುದಿಲ್ಲ.

English summary

Men Hide these Things even From their Partner in Kannada

Here we talking about Men hide these things even from their partner in kannada, read on
Story first published: Friday, February 18, 2022, 16:30 [IST]
X
Desktop Bottom Promotion