Latest Updates
-
ಕೋಮಾದಲ್ಲಿದ್ದ ಹರೀಶ್ ರಾಣಾ ದಯಾಮರಣಕ್ಕೆ ಸುಪ್ರೀಂ ಒಪ್ಪಿಗೆ: ಈ ಕೇಸ್ ಬಗ್ಗೆ ನಿಮಗೆ ಗೊತ್ತಾ? -
ಪಂಜಾಬಿ ಸ್ಟೈಲ್ ಮಲೈ ಲಸ್ಸಿ! ಈ ರೀತಿ ಮಾಡಿ ಗಟ್ಟಿ ಕೆನೆಯ ಢಾಬಾ ಸ್ಟೈಲ್ ಲಸ್ಸಿ.. ಬಿಸಿಲ ತಾಪಕ್ಕೆ ಬೆಸ್ಟ್ ಕೂಲ್ ಡ್ರಿಂಕ್ -
ಮಾರ್ಚ್ ಅಂತ್ಯದಲ್ಲಿ ಗಜಕೇಸರಿ ಯೋಗ: ಈ ಮೂರು ರಾಶಿಯ ಜನರಿಗೆ ಒಲಿಯಲಿದೆ ಅದೃಷ್ಟ! -
ನಾಟಿ ಸ್ಟೈಲ್ನಲ್ಲಿ ಸೋಯಾ ಚಾಪ್ಸ್ ಮಾಡಿ: ಚಪಾತಿ, ಅನ್ನ, ಮುದ್ದೆ ಎಲ್ಲದ್ದಕ್ಕೂ ಬೆಸ್ಟ್! -
ತಣ್ಣೀರು ಬೇಕಾ? ಮಡಕೆ ಕೊಳ್ಳುವಾಗ ಈ ತಪ್ಪು ಮಾಡಬೇಡಿ.. ಸಮಸ್ಯೆ ಗ್ಯಾರಂಟಿ!! ಹೇಗೆ ಆಯ್ಕೆ ಮಾಡಬೇಕು? -
ನಿಮ್ಮ ಮನೆಯ ಗಡಿಯಾರ ತಪ್ಪಾದ ದಿಕ್ಕಿನಲ್ಲಿ ಇಡಲಾಗಿದ್ಯಾ? ಈ ಸಣ್ಣ ತಪ್ಪು ದೊಡ್ಡ ಸಮಸ್ಯೆ ತರಬಹುದು! -
ಶುಗರ್ ಇದ್ದರೂ ಯುಗಾದಿಗೆ ಗುಜಿಯಾ ತಿನ್ನಬಹುದು! ಸಕ್ಕರೆ ಬೇಡ.. ರುಚಿ ಅದ್ಭುತ.. ಹೆಲ್ತ್ 100ಕ್ಕೆ 100 ಸೇಫ್! -
ದೇಹ ತಂಪಾಗಿಸಲು, ತೂಕ ಇಳಿಸಲು ಈ ಬಾರ್ಲಿ ಜ್ಯೂಸ್ ಮಾಡಿ! 5 ನಿಮಿಷದೊಳಗೆ ಸಿದ್ದ! -
ರಾಹು-ಕೇತು ಸಂಯೋಗದಿಂದ ಕಾಳಸರ್ಪ ಯೋಗ: ಈ ಎಲ್ಲಾ ರಾಶಿಯವರಿಗೆ ಅದೃಷ್ಟದ ಸಮಯ! -
ಸಂಕಷ್ಟಗಳು ದೂರ, ಐಶ್ವರ್ಯ ಹತ್ತಿರ! ಕೇತು ಸಂಚಾರದಿಂದ ಇವರ ಜೀವನವೇ ಬಂಗಾರ.. ಯಾರಿಗೆ ರಾಜಯೋಗ?
ಈ ರಾಶಿಯವರು ಮದುವೆ ಎಂದರೆ ಮಾರುದ್ದ ಓಡುವವರಂತೆ!
ಪ್ರತಿಯೊಬ್ಬರ ಜೀವನದಲ್ಲೂ ಮದುವೆ ಎಂಬ ಘಟ್ಟ ಬಂದೇ ಬರುತ್ತದೆ. ಆದರೆ, ಕೆಲವರಿಗೆ ಮದುವೆ ಎಂದರೆ ಇಷ್ಟವಾಗುವುದಿಲ್ಲ. ಒಂದೇ ವ್ಯಕ್ತಿಯೊಂದಿಗೆ ಜೀವನವಿಡೀ ಬದಕುವುದು ಬೇಸರ ಎಂಬ ಭಾವನೆ ಸಹಿತ ಅದಕ್ಕೆ ಕಾರಣಗಳು ಹಲವಾರಿರಬಹುದು. ಅಂತಹವರನ್ನು ಮದುವೆಗೆ ಒತ್ತಾಯಿಸುವುದು ಸರಿಯಲ್ಲ. ಕೆಲವರು ವರ್ಷಗಳ ಕಾಲ ಅದೇ ಅಭಿಪ್ರಾಯವನ್ನು ಇಟ್ಟುಕೊಳ್ಳುತ್ತಾರೆ.
ಜ್ಯೋತಿಷ್ಯದ ಪ್ರಕಾರ, ಈ ರೀತಿಯ ಜನರನ್ನು ಗುರುತಿಸುವುದು ಪರಿಣಾಮಕಾರಿಯಾಗಿದೆ. ಆದ್ದರಿಂದ, ತಮ್ಮ ಜೀವನದಲ್ಲಿ ಮದುವೆಯಾಗುವ ಸಾಧ್ಯತೆ ಕಡಿಮೆ ಇರುವ ರಾಶಿಗಳ ಬಗ್ಗೆ ಈ ಕೆಳಗೆ ನೀಡಲಾಗಿದೆ.
ಮದುವೆಯನ್ನು ಇಷ್ಟಪಡದ ರಾಶಿಚಕ್ರಗಳಾವುವು ಎಂಬುದನ್ನು ಈ ಕೆಳಗೆ ನೀಡಲಾಗಿದೆ:

ಮಿಥುನ ರಾಶಿ:
ಈ ರಾಶಿಯವರು ಚಂಚಲ ಮನಸ್ಸಿನವರು. ತಮ್ಮ ನಿರ್ಧಾರವನ್ನು ಬಹಳ ಬೇಗನೆ ಬದಲಾಯಿಸುತ್ತಾರೆ ಆದ್ದರಿಂದ ಅವರ ಜೀವನದುದ್ದಕ್ಕೂ ಒಬ್ಬ ವ್ಯಕ್ತಿಯೊಂದಿಗೆ ಇರುವುದು ಅವರಿಂದಾಗದ ಮಾತು. ಯಾರಾದರೂ ಅವರ ಹಿಂದೆ ಬಿದ್ದರೆ, ಅದನ್ನು ಇಷ್ಟಪಡುತ್ತಾರೆ ಏಕೆಂದರೆ ಅವರು ಅದರಿಂದ ರೋಮಾಂಚನಗೊಳ್ಳುತ್ತಾರೆ. ಆದರೆ ಬೇಗನೇ ಅವರಿಗೆ ಬೇಸರ ಅಥವಾ ಬೋರ್ ಎನಿಸಿ ಬಿಡುತ್ತಾರೆ.

ಸಿಂಹ ರಾಶಿ:
ಸಿಂಹ ರಾಶಿಯವರಿಗೆ ಮದುವೆ ಮತ್ತು ಸಂಬಂಧಗಳಲ್ಲಿ ಥ್ರಿಲ್ ಬೇಗನೆ ಕಡಿಮೆಯಾಗುತ್ತದೆ. ವಿಷಯಗಳು ಬೋರ್ ಆಗಲು ಶುರುವಾದಾಗ ಅವರು ಅದನ್ನು ಇಷ್ಟಪಡುವುದಿಲ್ಲ. ಏಕೆಂದರೆ ಇವರಿಗೆ ವಿನೋದ, ಉತ್ಸಾಹ ಮತ್ತು ಪ್ರೀತಿ ಅಂದರೆ ಇಷ್ಟವೇ, ಆದರೆ ಜಗಳಗಳು, ಸಮಸ್ಯೆಗಳು ದಾಂಪತ್ಯವನ್ನು ಪ್ರವೇಶಿಸಿದಾಗ ಅವರು ಹಿಂದೆ ಸರಿಯುತ್ತಾರೆ.

ಧನು ರಾಶಿ:
ಈ ರಾಶಿಯವರು ತಮ್ಮನ್ನು ಇನ್ನೊಬ್ಬರಿಗೆ ಒಪ್ಪಿಸಿಕೊಳ್ಳಲು ತುಂಬಾ ಹೆದರುತ್ತಾರೆ. ಮುಂದೆ ಆಗುವ ನೋವನ್ನು ತಪ್ಪಿಸಲು ಯಾವುದೇ ಸಂಬಂಧವನ್ನು ಒಪ್ಪಿಕೊಳ್ಳುವುದರಿಂದ ಹಿಂದೆ ಸರಿಯುತ್ತಾರೆ. ಇವರು ಏಕಾಂಗಿಯಾಗಿರಲು ಇಷ್ಟಪಡುತ್ತಾರೆ ಏಕೆಂದರೆ ಅದು ಅವರ ಮುಕ್ತ ವ್ಯಕ್ತಿತ್ವಕ್ಕೆ ಅತ್ಯುತ್ತಮವಾಗಿರುತ್ತದೆ. ಇವರು ಬಹುಶಃ ಮದುವೆಯಾಗುವ ಸಾಧ್ಯತೆ ಕಡಿಮೆ.

ಕುಂಭ ರಾಶಿ:
ಇವರು ಒಟ್ಟಿಗೆ ಇರುವುದನ್ನು ಎಷ್ಟು ಪ್ರೀತಿಸುತ್ತಾರೋ, ಅಷ್ಟೇ ಏಕಾಂತವನ್ನೂ ಪ್ರೀತಿಸುತ್ತಾರೆ. ಇವರು ಯಾರೊಂದಿಗೂ ಬೇಗನೆ ನೆಲೆಸುವವರಲ್ಲ. ಇವರಿಗೆ ಪ್ರೀತಿ-ಪ್ರೇಮ ಎಂದರೆ ಇಷ್ಟ, ಆದರೆ ಮದುವೆಯಾಗುವುದು ಎಂದರೆ ಬಹಳಷ್ಟು ಜವಾಬ್ದಾರಿಗಳ ಬಂಧವಾಗಿರುವುದರಿಂದ, ಕುಂಭ ರಾಶಿಯವರು ಮದುವೆಗೆ ಹೆದರುತ್ತಾರೆ.

ಮೀನ ರಾಶಿ:
ಇವರಿಗೆ ಬದ್ಧತೆ ಅಥವಾ ಕಮಿಂಟ್ ಮೆಂಟ್ ಅಂದರೆ ಭಯ, ಏಕೆಂದರೆ ಇವರು ತಮ್ಮ ನಿರೀಕ್ಷೆಗಳಿಂದ ತಮಗೇ ನೋವಾಗುವುದು ಎಂಬ ನಂಬಿಕೆಯಿಟ್ಟವರು. ಮೀನ ರಾಶಿಯವರು ಅಂದುಕೊಂಡಂತೆ ಯಾರಾದರೂ ಇರದಿದ್ದರೆ, ಅವರಿಂದ ದೂರ ಹೋಗಿಬಿಡುತ್ತಾತೆ. ಆದರೆ ಹೆಚ್ಚಿನ ಖಚಿತತೆಯಿಲ್ಲದೆ ಅವರು ಎಂದಿಗೂ ಮದುವೆಯ ಬಗ್ಗೆ ಯೋಚಿಸುವುದಿಲ್ಲ.



Click it and Unblock the Notifications











