Latest Updates
-
ವಿಜಯದಶಮಿ ಹಬ್ಬದ ಗಡಿಬಿಡಿ ಬೇಡ: ನೆಮ್ಮದಿಯಿಂದ ಹಬ್ಬ ಆಚರಿಸಲು ದಂಪತಿಗಳಿಗೆ ಇಲ್ಲಿದೆ ಸೀಕ್ರೆಟ್ ಪ್ಲಾನ್ -
ಬೆಂಗಳೂರು ಮಳೆ ಅಲರ್ಟ್: ನಿಮ್ಮ ಅಪಾರ್ಟ್ಮೆಂಟ್ ಮತ್ತು ಬೇಸ್ಮೆಂಟ್ ಸುರಕ್ಷತೆಗೆ ಇಂದೇ ಈ ಕ್ರಮಗಳನ್ನು ಕೈಗೊಳ್ಳಿ! -
ವಿಜಯದಶಮಿ ಹಬ್ಬದೂಟ: ಬ್ಲಡ್ ಶುಗರ್ ಏರಿಕೆಯಾಗದಂತೆ ಹೋಳಿಗೆ-ಪಾಯಸ ಸವಿಯುವುದು ಹೇಗೆ? -
ದಸರಾ ಸಂಭ್ರಮ: ರಾವಣ ದಹನ, ಟ್ರಾಫಿಕ್ ನಿರ್ಬಂಧ ಮತ್ತು ಮಳೆ ಎಚ್ಚರಿಕೆ - ಹೊರಡುವ ಮುನ್ನ ಇದನ್ನು ಓದಿ! -
ದಸರಾ ಟ್ರಾವೆಲ್ ರಶ್: ಕುಳಿತ ಸೀಟಿನಲ್ಲೇ ಮಾಡಿ ಈ 9 ನಿಮಿಷಗಳ ಮ್ಯಾಜಿಕ್ ಸ್ಟ್ರೆಚಿಂಗ್! -
ಮದುವೆಗೂ ಮುನ್ನ ದಂಪತಿಗಳು ಪಾಲಿಸಬೇಕಾದ 6 ಗೋಲ್ಡನ್ ರೂಲ್ಸ್: ಸುಖೀ ದಾಂಪತ್ಯಕ್ಕೆ ಇಲ್ಲಿದೆ ಕಂಪ್ಲೀಟ್ ಗೈಡ್ -
ಹೊರಗೆ ಮಾಲಿನ್ಯ, ಮನೆಯೊಳಗೆ ಉಸಿರುಗಟ್ಟುವ ವಾತಾವರಣವೇ? ಗಾಳಿ ಶುದ್ಧೀಕರಿಸಲು ಇಲ್ಲಿದೆ ಸರಳ ಟಿಪ್ಸ್! -
ಹಬ್ಬದ ಅಡುಗೆಗೆ ನಕಲಿ ತುಪ್ಪದ ಆತಂಕ: ಶುದ್ಧ ತುಪ್ಪ ಖರೀದಿಸಲು ಈ ಸರಳ ಟಿಪ್ಸ್ ಪಾಲಿಸಿ -
ನವರಾತ್ರಿ ಅಷ್ಟಮಿ: ಕನ್ಯಾ ಪೂಜೆ ಮುಹೂರ್ತ, ಸುರಕ್ಷಿತ ದರ್ಶನ ಮತ್ತು ಆರೋಗ್ಯಕರ ಪ್ರಸಾದದ ಸಂಪೂರ್ಣ ಮಾಹಿತಿ -
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ!
ಸಂಬಂಧದಲ್ಲಿ ಈ ಸುಳ್ಳುಗಳನ್ನು ಎಂದಿಗೂ ಸಹಿಸಿಕೊಳ್ಳಬಾರದು
ಸಂಬಂಧದಲ್ಲಿ ಪ್ರೀತಿ, ನಂಬಿಕೆ ಎಷ್ಟು ಮುಖ್ಯವೋ, ಸತ್ಯ-ಪ್ರಾಮಾಣಿಕತೆಯೂ ಅಷ್ಟೇ ಮುಖ್ಯವಾಗಿರುತ್ತದೆ. ಸಂಗಾತಿಯ ಮೇಲೆ ನಂಬಿಕೆಯಿದೆ ಅಂದ ಮಾತ್ರಕ್ಕೆ ಅವರು ಹೇಳಿದ್ದೆಲ್ಲವನ್ನೂ ಕುರುಡಾಗಿ ನಂಬುವುದು ಸರಿಯಲ್ಲ. ಹಾಗಂತ ಎಲ್ಲದಕ್ಕೂ ಸಂಶಯ ಪಡುವುದೂ ತಪ್ಪಾಗುತ್ತದೆ. ಆದರೆ, ಕೆಲವು ವಿಚಾರಗಳಿಗೆ ಸಂಬಂಧಿಸಿದಂತೆ ನಿಮ್ಮ ಸಂಗಾತಿ ಸುಳ್ಳು ಹೇಳುತ್ತಿದ್ದಾರೆ ಎಂದು ನಿಮಗಿನಿಸದರೆ, ಆ ಸಂಬಂಧದಿಂದ ದೂರ ಹೋಗುವುದೇ ಒಳಿತು.
ಸುಳ್ಳು ದೊಡ್ಡದಿರಲಿ, ಸಣ್ಣದಿರಲಿ, ಅದು ಆರೋಗ್ಯಕರ ಮತ್ತು ವಿಶ್ವಾಸಾರ್ಹ ಸಂಬಂಧಕ್ಕೆ ಮಾಡುವಂತಹ ಹಾನಿ ದೊಡ್ಡದೇ. ಆದ್ದರಿಂದ, ನಿಮ್ಮ ಸಂಗಾತಿಯು ಈ 4 ವಿಷಯಗಳಿಗಾಗಿ ಸುಳ್ಳು ಹೇಳುವುದನ್ನು ನೀವು ಗಮನಿಸಿದರೆ, ಆ ಸಂಬಂಧದ ಬಗ್ಗೆ ಗಂಭೀರವಾಗಿ ಚಿಂತಿಸುವುದು ಉತ್ತಮ.
ಸಂಗಾತಿ ಈ ವಿಚಾರಗಳ ಬಗ್ಗೆ ಸುಳ್ಳಾಡುತ್ತಿದ್ದರೆ, ಎಚ್ಚರಗೊಳ್ಳುವುದು ಒಳ್ಳೆಯದು:

ಅವರು ಯಾರೊಂದಿಗೆ ಬೆರೆಯುತ್ತಿದ್ದಾರೆ ಎಂಬುದರ ಬಗ್ಗೆ ಸುಳ್ಳಾಡಿದರೆ:
ಪಾರದರ್ಶಕತೆ ಮತ್ತು ಸಂವಹನವು ಬಲವಾದ ಸಂಬಂಧದ ಅಡಿಪಾಯವಾಗಿದೆ. ಆದ್ದರಿಂದ, ನಿಮ್ಮ ಸಂಗಾತಿ ಯಾರೊಂದಿಗೆ ಹ್ಯಾಂಗ್ ಔಟ್ ಮಾಡುತ್ತಾರೆ ಅಥವಾ ಯಾರೊಂದಿಗೆ ಮಾತನಾಡುತ್ತಾರೆ ಎಂಬುದರ ಕುರಿತು ಸುಳ್ಳು ಹೇಳುತ್ತಿದ್ದರೆ ಏನೋ ತಪ್ಪಾಗುತ್ತಿರಬಹುದು. ಇದು ಅವರು ನಿಮಗೆ ಮೋಸ ಮಾಡುತ್ತಿದ್ದಾರೆ ಎಂದರ್ಥವಲ್ಲ ಆದರೆ, ಪದೇ ಪದೇ ಇದೇ ಆಗುತ್ತಿದ್ದರೆ, ಇದನ್ನು ನಿರ್ಲಕ್ಷಿಸುವಂತಲ್ಲ. ಆಗ, ಇದರ ಬಗ್ಗೆ ಅವರ ಬಳಿ ಮಾತನಾಡಿ, ಪ್ರಾಮಾಣಿಕ ಮತ್ತು ಸತ್ಯವಾದ ಉತ್ತರವನ್ನು ಪಡೆಯದಿದ್ದರೆ, ನಿಮ್ಮ ಸಂಬಂಧವು ಸುಳ್ಳು ಮತ್ತು ದ್ರೋಹಕ್ಕೆ ಬಲಿಯಾಗಿದೆ ಎಂದು ನೀವು ಅರ್ಥಮಾಡಿಕೊಳ್ಳುವ ಸಮಯ.

ತಮ್ಮ ಹಣಕಾಸಿನ ವಿಚಾರಗಳನ್ನು ಮರೆಮಾಚುತ್ತಿದ್ದರೆ:
ಒಬ್ಬರ ಹಣದ ವಿಷಯಗಳನ್ನು ಖಾಸಗಿಯಾಗಿ ಇಟ್ಟುಕೊಳ್ಳುವುದು ಒಳ್ಳೆಯದು. ಆದಾಗ್ಯೂ, ನಿಮ್ಮ ಪಾಲುದಾರರಿಂದ ಅದನ್ನು ಮರೆಮಾಡುವುದು ಸರಿಯಲ್ಲ. ಹಣಕಾಸಿನ ವಿಚಾರಗಳು ಇಬ್ಬರಿಗೂ ತಿಳಿದಿದ್ದರೆ ಉತ್ತಮ. ನಿಮ್ಮ ಸಂಗಾತಿಯು ನಿಮ್ಮೊಂದಿಗೆ ತನ್ನ ಹಣಕಾಸಿನ ವಿಷಯಗಳ ಬಗ್ಗೆ ಮುಕ್ತವಾಗಿಲ್ಲದಿದ್ದರೆ, ಅದರ ಹಿಂದಿನ ಕಾರಣವನ್ನು ಕೇಳಿ, ವಿಷಯಗಳನ್ನು ಮರೆಮಾಚುವುದು ನಿಮಗೆ ಅಥವಾ ನಿಮ್ಮ ಸಂಬಂಧಕ್ಕೆ ಒಳ್ಳೆಯದಲ್ಲ ಎಂದು ಹೇಳಿ. ಅದರಲ್ಲಿ ಸ್ಪಷ್ಟತೆ ಇಲ್ಲದಿದ್ದರೆ, ಅವರನ್ನು ಎದುರಿಸಿ ಮತ್ತು ನಿರ್ಧಾರ ತೆಗೆದುಕೊಳ್ಳಿ.

ಮಾಜಿ ಸಂಗಾತಿಯ ಬಗ್ಗೆ ಸುಳ್ಳಾಡಿದ್ದರೆ:
ನಿಮ್ಮ ಸಂಗಾತಿಯು ತನ್ನ ಮಾಜಿ ಪ್ರೇಮಿಯನ್ನು ಮರೆತಿರುವ ಬಗ್ಗೆ ಸುಳ್ಳು ಹೇಳಿದರೆ ಅಥವಾ ಅವನೊಂದಿಗೆ ಅಥವಾ ಅವಳೊಂದಿಗೆ ಇನ್ನೂ ಸಂಪರ್ಕದಲ್ಲಿದ್ದರೆ ಅಥವಾ ಅವರ ಬಗ್ಗೆ ರಹಸ್ಯವಾಗಿ ಯೋಚಿಸುತ್ತಿದ್ದರೆ, ಇದು ಗಮನಹರಿಸಬೇಕಾದ ಮತ್ತೊಂದು ವಿಚಾರ. ಹೊಸ ಜೀವನ ಆರಂಭಿಸಲು ಹಿಂದಿನ ಸಂಬಂಧಗಳನ್ನು ಮರೆತುಬಿಡುವುದು ಉತ್ತಮ. ಆದರೆ ನಿಮ್ಮ ಸಂಗಾತಿಯು ಮಾಜಿ ಸಂಗಾತಿಯನ್ನು ಮರೆಯದಿದ್ದರೆ, ಅವರು ನಿಮ್ಮೊಂದಿಗೆ ಇರಲು ಉದ್ದೇಶಿಸಿಲ್ಲ ಎಂಬುದನ್ನು ಸೂಚಿಸುತ್ತದೆ. ಅವರೊಂದಿಗೆ ಈ ವಿಷಯವನ್ನು ಚರ್ಚಿಸಿ, ಅವರ ಉತ್ತರ ಸುಳ್ಳಾಗಿದ್ದರೆ, ನಿಮ್ಮ ಒಳಿತಿಗಾಗಿ ಹೊರಹೋಗುವುದು ಉತ್ತಮ.

ವೈಯಕ್ತಿಕ ಅಥವಾ ವೃತ್ತಿಪರ ಜೀವನದ ಬಗ್ಗೆ ಸುಳ್ಳು:
ನಿಮ್ಮ ಸಂಗಾತಿ ನಿಮ್ಮ ವೈಯಕ್ತಿಕ ಅಥವಾ ವೃತ್ತಿಪರ ಜೀವನದ ಬಗ್ಗೆ ಸುಳ್ಳು ಹೇಳುವುದು ನಿಮ್ಮ ಗೊತ್ತಾದರೆ, ಇದನ್ನು ಎಂದಿಗೂ ನಿರ್ಲಕ್ಷಿಸಬೇಡಿ. ಇದು ಗಂಭೀರವಾದದ್ದನ್ನು ಸೂಚಿಸಬಹುದು ಮತ್ತು ಭವಿಷ್ಯದಲ್ಲಿ ತೊಂದರೆಗೆ ಒಳಗಾಗಬಹುದು. ಆದ್ದರಿಂದ, ನಿಮ್ಮ ಸಂಗಾತಿಯು ನಿಮ್ಮೊಂದಿಗೆ ಅವರ ಜೀವನದ ಬಗ್ಗೆ ಸ್ಪಷ್ಟವಾಗಿದ್ದಾರೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಿ. ಅವರ ಕುಟುಂಬ, ವೃತ್ತಿ ಮತ್ತು ಆಕಾಂಕ್ಷೆಗಳ ಬಗ್ಗೆ ಕೇಳಿ. ನೆನಪಿಡಿ, ಅವರ ಜೀವನದ ಯಾವುದೇ ಅಂಶದ ಬಗ್ಗೆ ಸ್ವಲ್ಪ ಸುಳ್ಳು ನಿಮ್ಮನ್ನು ಗಂಭೀರ ತೊಂದರೆಗೆ ಸಿಲುಕಿಸಬಹುದು.



Click it and Unblock the Notifications
