Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಈ 6 ಸೂತ್ರ ದಂಪತಿ ಪಾಲಿಸಿದರೆ ಸಂಸಾರದಲ್ಲಿ ಸಮಸ್ಯೆಯೇ ಇರಲ್ಲ
ಅಹಂ ಎನ್ನುವುದು ಯಾರನ್ನೂ ಬಿಟ್ಟಿಲ್ಲ. ಮನುಷ್ಯನಲ್ಲಿ ಸಾಮಾನ್ಯವಾಗಿ ಇರಲೇಬೇಕಾದ ಗುಣ ಈ ಅಹಂ. ಹಾಗಂತ ನಾನೇ ಮೇಲು, ನನ್ನದೇ ಸರಿ, ನಾನೆಂದಿಗೂ ಬಾಗಲಾರೆ ಎಂಬ ಮನಸ್ಥಿತಿ ಯಾವ ವ್ಯಕ್ತಿಯನ್ನು ಮೇಲೆ ಬರಲು ಬಿಡುವುದಿಲ್ಲ. ವ್ಯಕ್ತಿಯಲ್ಲಿ ಒಳ್ಳೆಯ ಅಹಂ ಇರಬೇಕು. ತನ್ನ ಸ್ವಾಭಿಮಾನಕ್ಕೆ ಬಿಟ್ಟುಬೀಳುವಂತಿದ್ದರೆ, ಅಂತಹ ಜಾಗದಲ್ಲಿ, ಸನ್ನಿವೇಶದಲ್ಲಿ ಗರ್ವದಿಂದ ಇರುವುದು ಸರಿ. ಆದರೆ ಎಲ್ಲಾ ಸಮಯದಲ್ಲೂ ತನ್ನದೇ ಸರಿ ಎಂಬ ಭಾವನೆ ಎಂದಿಗೂ ತರವಲ್ಲ. ಅದರಲ್ಲೂ ಮುಖ್ಯವಾಗಿ ಸಂಬಂಧದಲ್ಲಿ.
ಸಂಬಂಧವೆಂದ ಮೇಲೆ ಅಲ್ಲಿ ಕೂಡ ಸಂಗಾತಿಗಳಲ್ಲಿ ಅವರವರ ಅಹಂ ಇದ್ದೇ ಇರುತ್ತದೆ. ಆದರೆ ಇಂತಹ ಅಹಂ, ಮುಂದೆ ಸಂಬಂಧಕ್ಕೆ ಮಾರಕವಾಗಬಹುದು. ಎಲ್ಲಿ ಭಾಗಬೇಕು ಅಲ್ಲಿ ಭಾಗಿ ಸಂಬಂಧವನ್ನು ಗಟ್ಟಿಯಾಗಿಸಿಕೊಳ್ಳಬೇಕು. ನಿಮ್ಮ ಸಂಗಾತಿಯ ಮುಂದೆ ಅಹಂ ಬಿಡುವುದರಿಂದ ನೀವ್ ಕಳೆದುಕೊಳ್ಳುವುದು ಏನೂ ಇಲ್ಲ. ಬದಲಾಗಿ ಗಳಿಸಿಕೊಳ್ಳುವುದೇ ಹೆಚ್ಚು. ಅದೇ ಪ್ರೀತಿ, ನಂಬಿಕೆ, ಭಾಂದವ್ಯ ಎಂಬ ಜೀವನಕ್ಕೆ ಅಗತ್ಯವಾದ ಅಂಶಗಳು. ಇದನ್ನು ತಿಳಿದುಕೊಂಡು ಸರಿಯಾಗಿ ರೀತಿಯಲ್ಲಿ ನಡೆದುಕೊಂಡರೆ ಆಗ ಖಂಡಿತವಾಗಿಯೂ ಸುಖ ಜೀವನ ಸಾಗಿಸಬಹುದು. ಸಂಬಂಧ ಒಳ್ಳೆಯ ರೀತಿ ಸಾಗಲು ಅಹಂನ್ನು ಹೇಗೆ ಬಿಡಬೇಕು ಎಂದು ಈ ಲೇಖನದಲ್ಲಿ ನಾವು ನಿಮಗೆ ತಿಳಿಸಿಕೊಡಲಿದ್ದೇವೆ.

ಕ್ಷಮಿಸಲು ಕಲಿಸಿ, ಬಿಟ್ಟುಬಿಡಿ :
ಇತರರನ್ನು ಹಾಗೂ ನಿಮ್ಮನ್ನು ಕ್ಷಮಿಸುವುದು ಹೇಗೆ ಎಂದು ಕಲಿತುಕೊಂಡರೆ ಆಗ ಖಂಡಿತವಾಗಿಯೂ ನೀವು ಪರಿಣಾಮಕಾರಿ ಆಗಿ ಅಹಂ ಕಡಿಮೆ ಮಾಡಬಹುದು. ಸಂಬಂಧದಲ್ಲಿ ಹಲವಾರು ಸಮಸ್ಯೆಗಳು ನಿಮ್ಮನ್ನು ಕಾಡಬಹುದು. ಇದರಿಂದಾಗಿ ನಿಮ್ಮನ್ನು ಕಡೆಗಣಿಸಿದಂತೆ, ಗಮನಿಸದಂತೆ ಹಾಗೂ ನೋಯಿಸಿದಂತೆ ಆಗಬಹುದು. ಆದರೆ ನೀವು ಇದರ ಬಗ್ಗೆ ಚಿಂತೆ ಮಾಡಬೇಡಿ. ಇದನ್ನು ಸ್ವೀಕರಿಸಿಕೊಂಡು ನೀವು ಮುಂದೆ ಸಾಗಿ. ಇದನ್ನು ಕಲಿತರೆ ಆಗ ನೀವು ತಮ್ಮಷ್ಟಕ್ಕೆ ಅಹಂನ್ನು ಕಡಿಮೆ ಮಾಡಬಹುದು.

ಪ್ರಾಮಾಣಿಕ ಹಾಗೂ ಮುಕ್ತವಾಗಿರಿ:
ಅಹಂ ನಿವಾರಣೆ ಮಾಡಲು ನೀವು ಪ್ರಾಮಾಣಿಕವಾಗಿ ಇರಬೇಕು ಮತ್ತು ನಿಜವನ್ನು ಒಪ್ಪಿಕೊಂಡು ಮುನ್ನಡೆಯಬೇಕು. ಯಾಕೆಂದರೆ ಸತ್ಯ ಯಾವಾಗಲೂ ನಿಮ್ಮನ್ನು ಸಂಕೋಲೆಗಳಿಂದ ಮುಕ್ತವಾಗಿಸುವುದು ಮತ್ತು ಭಾವನೆಗಳಿಂದಾಗಿ ನೀವು ಖಿನ್ನತೆ ಹಾಗೂ ಆತಂಕಕ್ಕೆ ಒಳಗಾಗುವುದು ತಪ್ಪುವುದು. ಜೀವನಕ್ಕೆ ಯಾವುದೇ ಮೌಲ್ಯ ನೀಡದೆ ಇರುವ ವಿಚಾರಗಳನ್ನು ನೀವು ಕಡೆಗಣಿಸಿ ಮತ್ತು ಮೌಲ್ಯ ನೀಡುವಂತಹ ವಿಚಾರಗಳನ್ನು ಸ್ವಾಗತಿಸಿ.

ಜೀವನ ಹಾಗೂ ಸಂಬಂಧವನ್ನು ಅಹಂ ನಿಯಂತ್ರಿಸದಂತೆ ನೋಡಿ:
ನಿಮ್ಮ ಜೀವನ ಹಾಗೂ ಸಂಬಂಧವನ್ನು ಅಹಂ ನಿಯಂತ್ರಿಸುತ್ತಲಿದ್ದರೆ ಆಗ ಎಲ್ಲವೂ ಸರ್ವನಾಶವಾಗುವುದು ಖಚಿತ. ಯಾಕೆಂದರೆ ಸಂಬಂಧ ಹಾಗೂ ಜೀವನದಲ್ಲಿ ಅಹಂ ಮಧ್ಯೆ ಬಂದರೆ ಅದು ಎಲ್ಲವನ್ನು ಹಾಳು ಮಾಡುವುದು. ಉದ್ಯೋಗ, ಯಾವುದೇ ವಸ್ತು ಅಥವಾ ಸಾಧನೆಯಲ್ಲಿ ಅಹಂ ಮಧ್ಯೆ ಪ್ರವೇಶಿಸದಂತೆ ನೋಡಿ. ಅಹಂ ಜೀವನವನ್ನು ನಿಯಂತ್ರಿಸಲು ಆರಂಭಿಸಿದರೆ ಆಗ ಸಂತೋಷ ಹಾಗೂ ಆರಾಮದ ಜೀವನ ನಡೆಸಲು ಆಗದು. ನೀವು ಸಂಬಂಧದಲ್ಲಿ ಕೂಡ ಶಾಂತಿ ಕಳೆದುಕೊಳ್ಳುವಿರಿ.

ಸಂಭ್ರಮಿಸಿ:
ಸಂಬಂಧವೆಂದ ಕೂಡಲೇ ನೀವು ಅದರಲ್ಲೇ ಮುಳುಗಿ ಹೋಗಿ, ನಿಮ್ಮನ್ನು ನೀವು ಕಳೆದುಕೊಳ್ಳಬೇಕು ಎಂದೇನಿಲ್ಲ. ಆದರೆ ನೀವು ಇದರ ಬಗ್ಗೆ ತಿಳಿಯಬೇಕು. ನಿಮಗೋಸ್ಕರ ಕೂಡ ಬದುಕಿ ಮತ್ತು ಸಂಭ್ರಮಿಸಿ. ಸ್ವಾರ್ಥರಹಿತವಾಗಿ ಪ್ರೀತಿಸಿ ಮತ್ತು ಪ್ರತಿಯೊಂದು ಕ್ಷಣವನ್ನು ಆನಂದಿಸಲು ಪ್ರಯತ್ನಿಸಿ.

ಕೃತಜ್ಞತೆ ಅಭ್ಯಸಿಸಿ:
ಕೃತಜ್ಞರಾಗಿರಲು ಕಲಿಯಿರಿ ಮತ್ತು ಇದು ಅಹಂ ಕಡಿಮೆ ಮಾಡುವ ಒಳ್ಳೆಯ ವಿಧಾನ. ನಿಮಗೆ ನೆರವಾದ ಮತ್ತು ಯಾವುದೇ ರೀತಿಯಿಂದ ನೀವು ನೆರವು ಪಡೆದುಕೊಂಡವರಿಗೆ ಕೃತಜ್ಞತೆ ಹೇಳಿ. ಬೇರೆಯವರನ್ನು ಪ್ರಶಂಸೆ ಮಾಡಿ. ಇದೆಲ್ಲದರ ಮೂಲಕ ನೀವು ಸುಲಭವಾಗಿ ಅಹಂನ್ನು ಕಡಿಮೆ ಮಾಡಬಹುದು ಮತ್ತು ಜೀವನ ಹಾಗೂ ಸಂಬಂಧದಲ್ಲಿನ ನೈಜ ಸೌಂದರ್ಯವನ್ನು ಕಂಡುಕೊಳ್ಳಬಹುದು.



Click it and Unblock the Notifications
