Latest Updates
-
ಶ್ರಾವಣ ಸೋಮವಾರದ ಉಪವಾಸ: ಆಫೀಸ್ ಕೆಲಸದ ನಡುವೆಯೂ ಆರೋಗ್ಯ ಕಾಪಾಡಿಕೊಳ್ಳಲು ಇಲ್ಲಿವೆ ಸರಳ ಟಿಪ್ಸ್! -
ಟಾಟಾ ಮುಂಬೈ ಮ್ಯಾರಥಾನ್ 2027: ನೋಂದಣಿಗೆ ಸಿದ್ಧರಾಗಿ, ಓಟಗಾರರಿಗೆ ಇಲ್ಲಿದೆ ಮಹತ್ವದ ಸಲಹೆಗಳು! -
ಆರ್ಬಿಐ ಸಭೆಗೂ ಮುನ್ನ ದಂಪತಿಗಳಿಗೆ ಎಚ್ಚರಿಕೆ: ಇಂದೇ ಈ 30 ನಿಮಿಷದ ಫೈನಾನ್ಶಿಯಲ್ ಟೆಸ್ಟ್ ಮಾಡಿ! -
ಹಾಲುಣಿಸುವ ತಾಯಂದಿರೇ ಗಮನಿಸಿ: ಬೆನ್ನು ಮತ್ತು ಕುತ್ತಿಗೆ ನೋವು ಮರೆಯಾಗಲು ಈ 8 ನಿಮಿಷದ ವ್ಯಾಯಾಮ ಸಾಕು! -
ಐಟಿಆರ್ ಗಡುವು ಮಿಸ್ ಆಯ್ತಾ? ದಂಡ ತಪ್ಪಿಸಲು ಈಗಲೇ ಈ ಕೆಲಸ ಮಾಡಿ, ಆರ್ಥಿಕ ನಷ್ಟದಿಂದ ಪಾರಾಗಿ! -
ಕರ್ನಾಟಕದಲ್ಲಿ ಭಾರಿ ಮಳೆ: ನಿಮ್ಮ ಮನೆ ಮತ್ತು ಕುಟುಂಬವನ್ನು ಸುರಕ್ಷಿತವಾಗಿಡಲು ಇಂದೇ ಈ ಕೆಲಸ ಮಾಡಿ! -
ಪೀನಟ್ ಬಟರ್ನಲ್ಲಿ ವಿಷಕಾರಿ ಶಿಲೀಂಧ್ರ? ನಿಮ್ಮ ಆರೋಗ್ಯ ಕಾಪಾಡಲು ಈ ವಿಷಯಗಳನ್ನು ಮರೆಯದಿರಿ -
ಫ್ರೆಂಡ್ಶಿಪ್ ಡೇ: ಕೊನೆಯ ನಿಮಿಷದಲ್ಲಿ ಸ್ನೇಹಿತರಿಗೆ ನೀಡಲು 499 ರೂ. ಒಳಗಿನ ಬೆಸ್ಟ್ ಗಿಫ್ಟ್ ಐಡಿಯಾಗಳು! -
CWG 2026: ಗಂಟೆಗಟ್ಟಲೆ ಟಿವಿ ಮುಂದೆ ಕುಳಿತು ಪಂದ್ಯ ನೋಡುವಿರಾ? ಈ 8 ನಿಮಿಷದ ವರ್ಕೌಟ್ ಮಿಸ್ ಮಾಡ್ಬೇಡಿ! -
ಶ್ರಾವಣ ಮಾಸದ ಉಪವಾಸ: ದಂಪತಿಗಳೇ, ಹಬ್ಬದ ಆಚರಣೆಯಲ್ಲಿ ಗೊಂದಲ ಬೇಡ, ಈ ಟಿಪ್ಸ್ ಫಾಲೋ ಮಾಡಿ!
ದಾಂಪತ್ಯ ಜೀವನ ಸಿಹಿಯಾಗಿರಲು, ಈ ನಿಯಮಗಳನ್ನು ಪಾಲಿಸಿದರಷ್ಟೇ ಸಾಕು..
ದಾಂಪತ್ಯ ಜೀವನ ಸುಖವಾಗಿರಲು ಗಂಡ-ಹೆಂಡತಿಯ ಇಬ್ಬರ ಪಾಲು ಸಮಾನವಾಗಿರುತ್ತದೆ. ಕೇವಲ ಒಬ್ಬರಿಂದಲೇ ಸುಖಿ ದಾಂಪತ್ಯ ಅಸಾಧ್ಯ. ತಮ್ಮ ವೈವಾಹಿಕ ಜೀವನ ಸುಖ,-ಸಂತೋಷದಿಂದ ಕೂಡಿರಲು ದಂಪತಿಗಳ ಸಮಾನ ಶ್ರಮ ಅವಶ್ಯಕ.
ಕೆಲವೊಬ್ಬರು ಈ ಸುಖಿ ದಾಂಪತ್ಯಕ್ಕೆ ನಿಯಮಗಳಿವೆ ಎಂದು ನಂಬಿಕೊಂಡಿರುತ್ತಾರೆ. ಆದರೆ ಇದು ತಪ್ಪು, ಅಂತಹ ಯಾವುದೇ ಅಂಶಗಳು ದಂಪತಿಗಳನ್ನು ಸಂತೋಷವಾಗಿಡುವುದಿಲ್ಲ, ಆದರೆ ಸರಳ ತಿಳುವಳಿಕೆ, ಕಾಳಜಿ ಮತ್ತು ಪ್ರೀತಿಯು ಇಬ್ಬರನ್ನು ಪರಸ್ಪರ ಬೆಸೆಯುತ್ತದೆ. ಇಂತಹ ಸುಖಿ ದಾಂಪತ್ಯದಲ್ಲಿ ವಿಶೇಷ ಸ್ಥಾನ ವಹಿಸುವ ಕೆಲವು ವಿಷಯಗಳ ಬಗ್ಗೆ ಈ ಲೇಖನದಲ್ಲಿ ವಿವರಿಸಿದ್ದೇವೆ.
ಸಂತೋಷದ ದಾಂಪತ್ಯ ಜೀವನಕ್ಕಾಗಿ ಗೋಲ್ಡನ್ ರೂಲ್ಸ್ ಗಳನ್ನು ಈ ಕೆಳಗೆ ನೀಡಲಾಗಿದೆ:

ವಿಭಿನ್ನ ವ್ಯಕ್ತಿತ್ವಗಳಿಗೆ ಗೌರವ ನೀಡಿ:
ಇದನ್ನು ಬಹಳ ಹಿಂದಿನಿಂದಲೂ ಕೇಳಿಕೊಂಡು ಬಂದಿದ್ದೇವೆ. ಗಂಡ-ಹೆಂಡತಿಯ ದೃಷ್ಠಿಕೋನ ವಿಭಿನ್ನವಾಗಿದ್ದರೆ, ವೈವಾಹಿಕ ಜೀವನ ಸಂತೋಷವಾಗಿರುವುದಿಲ್ಲ, ಇಬ್ಬರಲ್ಲೂ ಮನಸ್ತಾಪಗಳು ಉಂಟಾಗುತ್ತವೆ ಎಂದು, ಆದರೆ ಇದು ಸರಿಯಲ್ಲ. ಜಗತ್ತಲ್ಲಿ ಹುಟ್ಟಿದ ಪ್ರತಿಯೊಬ್ಬರ ದೃಷ್ಠಿಕೋನ, ಇಷ್ಟ ಕಷ್ಟಗಳು ಭಿನ್ನವಾಗಿಯೇ ಇರುತ್ತವೆ, ಒಬ್ಬರಂತೆ ಇನ್ನೊಬ್ಬರು ಇರಲು ಸಾಧ್ಯವಿಲ್ಲ, ಯೋಚನೆಗಳು ಸ್ವಲ್ಪ ಸಾಮ್ಯವಾಗಿರಬಹುದಷ್ಟೇ. ಆದರೆ ಈ ಸಂದರ್ಭದಲ್ಲಿ ಅವಶ್ಯಕವಾಗಿರುವುದು ಗೌರವ. ಪ್ರತಿಯೊಬ್ಬರ ಆಲೋಚನೆ, ದೃಷ್ಟಿಕೋನಗಳಿಗೆ ಗೌರವಿಸುವವರೆಗೂ ಈ ವಿಚಾರ ಖಂಡಿತವಾಗಿಯೂ ಸಂಬಂಧದ ಮೇಲೆ ಪರಿಣಾಮ ಬೀರುವುದಿಲ್ಲ.

ಒಬ್ಬರನ್ನೊಬ್ಬರು ಬದಲಾಯಿಸಬೇಡಿ:
ನಿಮ್ಮ ಸಂಗಾತಿಯನ್ನು ಬದಲಾಗುವಂತೆ ಹೇಳುವುದು, ಸಂಬಂಧದಲ್ಲಿ ನೀವು ಮಾಡುವ ಅತ್ಯಂತ ಕೆಟ್ಟ ಕೆಲಸಗಳಲ್ಲಿ ಒಂದಾಗಿದೆ. ಮದುವೆ ಎಂದರೆ ನಿಮ್ಮಂತೆಯೇ ಯೋಚಿಸುವ ವ್ಯಕ್ತಿಯೇ ಸಿಗುತ್ತಾರೆ ಎಂದು ಹೇಳಲಾಗುವುದಿಲ್ಲ. ನಿಮ್ಮ ಅಭಿಪ್ರಾಯ ಹಾಗೂ ಆಲೋಚನೆಗಳು, ನಿಮ್ಮ ಸಂಗಾತಿಗಿಂತ ಭಿನ್ನವಾಗಿರಬಹುದು. ಹಾಗಂತ ಅದನ್ನು ಬದಲಾಯಿಸಲು ಹೋಗಬೇಡಿ. ಅವರಿಗೆ ಹೇಗಿರಬೇಕೋ ಹಾಗೇ ಇರಲು ಬಿಟ್ಟುಬಿಡಿ. ನಿಮಗೋಸ್ಕರ ಅವರನ್ನು ಬದಲಾಗುವಂತೆ ಕೇಳಬೇಡಿ, ಬದಲಾಯಿಸಲು ಹೋಗಬೇಡಿ.

ರಾಜಿ ಮಾಡಿಕೊಳ್ಳುವುದು ಬಿಡಿ:
ರಾಜಿ ಮಾಡಿಕೊಳ್ಳುವುದು ಮದುವೆಯ ಭಾಗವಾಗಿದೆ ಎಂದು ಹೆಚ್ಚಿನ ದಂಪತಿಗಳು ನಂಬಿರುತ್ತಾರೆ. ಆದರೆ, ಯಾವಾಗ ಇಬ್ಬರು ರಾಜಿಗಳನ್ನು ಅವಲಂಬಿಸದೇ ಒಬ್ಬರನ್ನೊಬ್ಬರು ಪ್ರೀತಿಸುತ್ತಾರೋ, ಆಗ ಆ ಮದುವೆ ಯಶಸ್ವಿಯಾಗುವುದು. ಹೇಗೆಂದರೆ ಇಬ್ಬರ ನಡುವೆ ಪ್ರೀತಿ ಗಟ್ಟಿಯಾಗಿದ್ದಾಗ, ಜಗಳ ಅಥವಾ ರಾಜಿಯ ಅವಶ್ಯಕತೆ ಬರುವುದಿಲ್ಲ. ಆದ್ದರಿಂದ, ಜೀವನದಲ್ಲಿ ಬರುವ ಅಡೆತಡೆಗಳನ್ನು ಲೆಕ್ಕಿಸದೆ ಒಬ್ಬರನ್ನೊಬ್ಬರು ಪೂರ್ಣವಾಗಿ ಪ್ರೀತಿಸಿದರೆ, ದಾಂಪತ್ಯ ಜೀವನ ಸುಂದರವಾಗಿರುತ್ತದೆ.

ತಪ್ಪುಗಳನ್ನು ಅರಿತು ಕೆಲಸ ಮಾಡಿ:
ತಪ್ಪುಗಳನ್ನು ಒಪ್ಪಿಕೊಳ್ಳುವುದು ಮತ್ತು ಕ್ಷಮೆ ಕೇಳುವುದು ವೈವಾಹಿಕ ಜೀವನದಲ್ಲಿ ದೊಡ್ಡ ಸವಾಲು. ಏಕೆಂದರೆ ,ಒಂದು ನಿರ್ದಿಷ್ಟ ಸಮಯದ ನಂತರ, ಯಾರೂ ತಮ್ಮ ತಪ್ಪುಗಳನ್ನು ಒಪ್ಪಿಕೊಳ್ಳಲು ಬಯಸುವುದಿಲ್ಲ, ವಾದ ಮಾಡುವುದನ್ನೇ ಮೈಗೂಡಿಸಿಕೊಂಡಿರುತ್ತಾರೆ. ದಂಪತಿಗಳು ಅಹಂಕಾರ ಅಥವಾ ಈಗೋ ಬಿಟ್ಟು ಜೀವನ ನಡೆಸಿದರೆ, ಸುಖಿ ದಾಂಪತ್ಯಕ್ಕೆ ಇದಕ್ಕಿಂತ ಉತ್ತಮ ಬೇರೆ ನಿಯಮವಿಲ್ಲ. ದಂಪತಿಗಳ ನಡುವೆ ಅಹಂಕಾರ ಎನ್ನುವುದು ಬರಲೇಬಾರದು, ತಾವು ಮಾಡಿದ ತಪ್ಪನ್ನು ಒಪ್ಪಿಕೊಂಡು, ಮುಂದೆ ಸಾಗಬೇಕು.

ವೈಯಕ್ತಿಕ ಜೀವನ ಮುಖ್ಯ:
ಪ್ರತಿಯೊಬ್ಬರಿಗೂ ವೈಯಕ್ತಿಕ ಜೀವನ ತುಂಬಾ ಮುಖ್ಯ. ವಿವಾಹವಾದವರು ಕೂಡ ತಮ್ಮದೇ ಆದ ವೈಯಕ್ತಿಕ ಜೀವನವನ್ನು ಆನಂದಿಸುವ ಹಕ್ಕು ಹೊಂದಿರುತ್ತಾರೆ. ದಂಪತಿಗಳು ಮದುವೆಗೆ ಅನುಗುಣವಾಗಿ ತಮ್ಮ ಸಂಪೂರ್ಣ ಜೀವನ ಮತ್ತು ವ್ಯಕ್ತಿತ್ವವನ್ನು ಬದಲಾಯಿಸಿಕೊಳ್ಳಬೇಕಾಗಿಲ್ಲ. ಈ ಪವಿತ್ರ ಬಂಧವು ಅವರ ಪ್ರೀತಿಯ ವಿಸ್ತರಣೆಯಾಗಿದೆ. ಇಬ್ಬರೂ ತಮ್ಮ ನಿಯಮಗಳ ಪ್ರಕಾರ ಜೀವನ ನಡೆಸಬಹುದು, ತಮ್ಮ ಹಿತಾಸಕ್ತಿಗಳನ್ನು ಅನುಸರಿಸಬಹುದು. ಒಬ್ಬರು ಇನ್ನೊಬ್ಬರ ವೈಯಕ್ತಿಕ ಜೀವನದಲ್ಲಿ ಅಡ್ಡಿ ಮಾಡಬಾರದಷ್ಟೇ..



Click it and Unblock the Notifications