Latest Updates
-
ಹವಾಮಾನದಲ್ಲಿ ಭಾರಿ ಬದಲಾವಣೆ: ಮೇ 12-13 ರಂದು ಹೊರಗೆ ಹೋಗುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ದೆಹಲಿ ಮದುವೆ ಸೀಸನ್: ಮಳೆ ಮತ್ತು ಬಿರುಗಾಳಿಯಿಂದ ನಿಮ್ಮ ಸಂಭ್ರಮವನ್ನು ಕಾಪಾಡಿಕೊಳ್ಳುವುದು ಹೇಗೆ? -
ಬಿಸಿಗಾಳಿ-ಮಳೆ ಎಚ್ಚರಿಕೆ: ನಿಮ್ಮ ಮನೆ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ ಟಿಪ್ಸ್ ಫಾಲೋ ಮಾಡಿ! -
ಬಿಸಿಗಾಳಿಯ ಆರ್ಭಟಕ್ಕೆ ಸುಸ್ತಾಗಿದ್ದೀರಾ? ಈ ಆಹಾರ ಕ್ರಮ ಪಾಲಿಸಿದರೆ ಬಿಸಿಲು ನಿಮ್ಮನ್ನೇನೂ ಮಾಡಲ್ಲ! -
ಕಾನ್ 2026: ರೆಡ್ ಕಾರ್ಪೆಟ್ ಮೇಲೆ ಭಾರತೀಯರ ಅಬ್ಬರ, ಈ ಬಾರಿ ಫ್ಯಾಷನ್ ಲೋಕವೇ ದಂಗು! -
ಪ್ರಧಾನಿ ಮೋದಿ ಭೇಟಿಯ ನಂತರ ಟ್ರೆಂಡಿಂಗ್: ಕೇವಲ 15 ನಿಮಿಷದಲ್ಲಿ ನಿಮ್ಮ ದಿನವನ್ನು ಬದಲಾಯಿಸುವ ಮ್ಯಾಜಿಕ್ ಯೋಗ ಟಿಪ್ಸ್! -
ಮದರ್ಸ್ ಡೇ 2026: ಅಮ್ಮ ಮತ್ತು ಅತ್ತೆಯ ನಡುವೆ ಸಿಲುಕಿದ್ದೀರಾ? ಈ ಟ್ರಿಕ್ಸ್ ಫಾಲೋ ಮಾಡಿ! -
ಬಿರುಗಾಳಿ ಅಪ್ಪಳಿಸುವ ಮುನ್ನ ಎಚ್ಚರ: ನಿಮ್ಮ ಮನೆಯನ್ನು ಸುರಕ್ಷಿತವಾಗಿಡಲು ಈ ಕೆಲಸಗಳನ್ನು ಇಂದೇ ಮಾಡಿ! -
ಬಿಸಿಗಾಳಿಯ ಆರ್ಭಟಕ್ಕೆ ಸುಸ್ತಾಗಿದ್ದೀರಾ? ದೇಹವನ್ನು ತಂಪಾಗಿಡಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಮದರ್ಸ್ ಡೇ 2026: ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿರೋ ಈ ವಿಶೇಷ ಟ್ರೆಂಡ್ಸ್ ನೀವು ಮಿಸ್ ಮಾಡ್ಬೇಡಿ!
ಮದುವೆ ಬಂಧದಲ್ಲಿ ಪ್ರೀತಿಯೇ ಇಲ್ಲದಿದ್ದರೆ ಬಂಧನವಲ್ಲವೇ?
ಆಕೆಯ ಕಣ್ಣುಗಳಲ್ಲಿ ಮದುವೆ ಕುರಿತು ನೂರಾರು ಕನಸ್ಸುಗಳಿದ್ದೆವು. ಮುಂದಿನ ಜೀವನ ಹೇಗಿರಬೇಕೆಂದು ಎಂದು ತನ್ನ ಗೆಳತಿಯರ ಜತೆ ಹಂಚಿಕೊಳ್ಳುತ್ತಿದ್ದಳು. ಮನೆಯವರು ನೋಡಿದ ಹುಡುಗ ತನಗೂ ಮೆಚ್ಚುಗೆಯಾದ ಕಾರಣ ಮದುವೆಗೆ ಒಕೆ ಹೇಳಿ ಸಡಗರದಿಂದಲೇ ಮದುವೆ ಸಿದ್ಧತೆಯಲ್ಲಿ ತೊಡಗಿದಳು. ಈ ನಡುವೆ ಅವ ಮನಸ್ಸಿನಲ್ಲಿ ಏನೋ ತಳಮಳ. ಕೆಲವೊಮ್ಮೆ ಅವನಿಗೆ ನನ್ನ ಮೇಲೆ ಪ್ರೀತಿ ಇದೆಯೇ ಎಂಬ ಅನುಮಾನ, ಹೇಳಿ ಕೇಳಿ ನನ್ನದು ಅರೇಂಜ್ ಮ್ಯಾರೇಜ್ ಅವನು ನಿಧಾನಕ್ಕೆ ಬದಲಾಗಬಹುದು ಎಂಬ ನಿರೀಕ್ಷೆಯಲ್ಲಿಯೇ ಆತನ ಕೈಹಿಡಿದಳು.
ತಾನು ವೈವಾಹಿಕ ಜೀವನದ ಬಗ್ಗೆ ಕಟ್ಟಿಕೊಂಡಿದ್ದ ಕನಸ್ಸು ನುಚ್ಚು ಚೂರಾಗಿದೆ ಎಂದು ತಿಳಿಯಲು ಹೆಚ್ಚು ದಿನ ಬೇಕಾಗಿಲ್ಲ. ಮದುವೆಯಾದ ದಿನದಿಂದಲೇ ತನ್ನ ಭಾವನೆಗಳಿಗೆ ಆತನ ತಣ್ಣನೆ ಪ್ರತಿಕ್ರಿಯೆಯೇ ಸಾಕಿತ್ತು ಮುಂದೆ ತನ್ನ ಬದುಕು ಹೇಗಿದೆ ಎಂದು ಊಹಿಸಲು. ತನ್ನ ಮುಂದಿನ ಬದುಕೇನು ಎಂದು ತಿಳಿಯದೆ ಕುಸಿದು ಹೋದಳು.

ಮನೆಗೆ ಹೋಗಿ ಹೇಳಿದರೆ ಸ್ವಲ್ಪ ದಿನವಾದ ಮೇಲೆ ಬದಲಾಗಬಹುದು, ಅನುಸರಿಸಿಕೊಂಡು ಹೋಗು ಎಂಬ ಕಿವಿ ಮಾತು. ಇನ್ನು ಕೆಲವರು ಮಗುವಾದ ಎಲ್ಲಾ ಸರಿಯಾಗುತ್ತೆ, ಮಗು ಮಾಡ್ಕೋ ಎಂಬ ಸಲಹೆ ನೀಡಿದರು. ಆದರೆ ಇಲ್ಲಾ... ಈತನ ಜೊತೆ ಬಾಳಲು ಸಾಧ್ಯವಿಲ್ಲ ಎಂದು ಕೂಗಿ ಹೇಳಬೇಕೆಂದು ಅನಿಸಿತ್ತು, ಆದರೆ ಮುಂದೇನು ಎಂಬ ಭಯ ಒಂದೆಡೆ. ಎಲ್ಲರೂ ಹೇಳಿದಂತೆ ತನ್ನ ತಲೆಬರಹ ಎಂದು ಬಾಳಬೇಕೆ? ಇಲ್ಲಾ ನನ್ನದೇ ಹೊಸ ಬದುಕನ್ನು ಕಟ್ಟಿಕೊಳ್ಳಬೇಕೆ? ಎಂಬ ಅವ್ಯಕ್ತ ಭಯ ಹಾಗೂ ಗೊಂದಲದಲ್ಲಿ ಒದ್ದಾಡುತ್ತಿದ್ದಾಳೆ.
ಹೆಣ್ಣು-ಗಂಡು ಇಬ್ಬರು ಖುಷಿ-ಖುಷಿಯಾಗಿ , ಹೊಂದಾಣಿಕೆಯಿಂದ ಜೀವನ ನಡೆಸಿದರೆ ಮಾತ್ರ ಮದುವೆ ಎನ್ನುವುದು ಸುಂದರ ಬಂಧವಾಗುವುದು, ಇಲ್ಲದಿದ್ದರೆ ಅದೊಂದು ಬಂಧನವಾಗುವುದು. ಬಂಧನ ಎಂದ ಮೇಲೆ ಉಸಿರುಕಟ್ಟಿದ ಅನುಭವ ಉಂಟಾಗುತ್ತಿರುತ್ತದೆ.
ಮದುವೆಯಾಗಿದೆ ಎಂಬ ಕಾರಣಕ್ಕೆ ಪ್ರೀತಿಯೇ ಇಲ್ಲದ ವ್ಯಕ್ತಿ ಜತೆ ಬದುಕಬೇಕೆ? ಸಂಗಾತಿಯಲ್ಲಿ ಈ ರೀತಿಯ ಲಕ್ಷಣಗಳು ಕಂಡು ಬಂದರೆ ಅವರ ಜತಗೆ ಬಾಳುವುದಕ್ಕಿಂತ ಬೇರೆಯಾಗುವುದೇ ಒಳ್ಳೆಯದು.

ಪ್ರೀತಿಯ ಸೆಲೆ ಮಾಯವಾಗಿದ್ದರೆ
ಪ್ರೀತಿ ಎನ್ನುವುದು ಒಂದು ಕಡೆ ಇದ್ದರೆ ಸಾಲದು ಅದು ಆಕಡೆಯಿಂದಲೂ ಸಿಗಬೇಕು. ಮುಂದೆ ಅವರು ನನ್ನನ್ನು ಪ್ರೀತಿಸಬಹುದು ಎಂದು ನಿರೀಕ್ಷೆಯಲ್ಲಿ ವರ್ಷಗಟ್ಟಲೆ ಕಳೆಯುವುದು ಸಿನಿಮಾದಲ್ಲಿ ಮಾತ್ರ ಚೆನ್ನಾಗಿರುತ್ತದೆ, ಆದರೆ ನಿಜ ಜೀವನದಲ್ಲಿ ಆ ರೀತಿ ಆಗುವುದು ತುಂಬಾ ವಿರಳ. ನಿರೀಕ್ಷೆಯಲ್ಲೇ ನಿಮ್ಮ ಬದುಕು ಹಾಳಾಗುವುದಕ್ಕಿಂತ ಎಚ್ಚೆತ್ತುಕೊಂಡು ಮುಂದೆ ಸಾಗುವುದೇ ಜಾಣತನ.

ದೈಹಿಕ ಹಾಗೂ ಮಾನಸಿಕ ಹಿಂಸೆ
ಸಂಗಾತಿಯಿಂದ ದೈಹಿಕ ಹಾಗೂ ಮಾನಸಿಕ ಹಿಂಸೆ ಅನುಭವಿಸುತ್ತಿದ್ದರೆ ಅವರ ವರ್ತನೆಯನ್ನು ಸಹಿಸಿಕೊಂಡು ನೋವು ಅನುಭವಿಸುವುದಕ್ಕಿಂತ ವಿರೋಧಿಸಿ. ಅವರ ಆ ರೀತಿ ವರ್ತಿಸಲು ಕಾರಣವೇನು ಎಂದು ತಿಳಿದುಕೊಳ್ಳಿ. ಅದಾದ ಬಳಿಕವೂ ಅವರ ವರ್ತನೆಯಲ್ಲಿ ಬದಲಾವಣೆ ಕಾಣಿಸದಿದ್ದರೆ ಅವರು ನಿಮ್ಮ ಜೊತೆಯೇ ಹಾಗೆಯೇ ಇರುತ್ತಾರೆ, ಅವರು ಬದಲಾಗುವ ಪ್ರಯತ್ನ ಮಾಡಲ್ಲ ಎಂದು ಹೇಳಬಹುದು. ದೈಹಿಕ ಹಾಗೂ ಮಾನಸಿಕ ಹಿಂಸೆ ಅನುಭವಿಸಿ ನೋವು ಅನುಭವಿಸುವುದಕ್ಕಿಂತ ದೂರ ಸರಿಯುವುದೇ ಒಳ್ಳೆಯದು.

ಲೈಂಗಿಕ ತೃಪ್ತಿ ಇಲ್ಲದಿದ್ದರೆ
ವೈವಾಹಿಕ ಜೀವನದಲ್ಲಿ ಸಂಗಾತಿಯಿಂದ ಲೈಂಗಿಕ ತೃಪ್ತಿ ಬಯಸುವುದು ಸಹಜ. ನೀವು ಅವರ ಬಳಿ ರೊಮ್ಯಾಂಟಿಕ್ ಆಗಿ ಮಾತನಾಡುವಾಗ ಸಿಡುಕು ತೋರಿಸುವುದು, ಅವರ ಬಳಿ ಹೋಗುವಾಗ ದೂರ ಸರಿಯುವುದು ಮಾಡುತ್ತಿದ್ದರೆ ಒಂದೋ ಅವರಿಗೆ ಬೇರೆ ಏನೋ ಸಮಸ್ಯೆವಿದೆ, ಇಲ್ಲಾ ನಿಮ್ಮ ಜೊತೆ ಬಾಳುವುದು ಇಷ್ಟವಿಲ್ಲ ಎಂದು ಹೇಳುವ ಲಕ್ಷಣಗಳಾಗಿವೆ. ಅವರಿಂದ ದೂರವಾಗುವ ಪ್ರಯತ್ನ ಮಾಡುವ ಬದಲು ಈ ಕುರಿತು ಅವರಲ್ಲಿ ಮಾತನಾಡಿ, ಅದಾದ ಬಳಿಕವೂ ಅವರ ವರ್ತನೆಯಲ್ಲಿ ಏನೂ ಬದಲಾವಣೆ ಕಾಣದಿದ್ದರೆ ಆ ಸಂಬಂಧದಿಂದ ಹೊರಬಂದು ನಿಮ್ಮನ್ನು ಪ್ರೀತಿಸಯವ ವ್ಯಕ್ತಿಯನ್ನು ಹುಡುಕುವುದೇ ಜಾಣತನ.

ಆಗಾಗ ಜಗಳ
ಜಗಳವಾಡದ ಗಂಡ-ಹೆಂಡತಿ ಈ ಪ್ರಪಂಚದಲ್ಲಿಯೇ ಇರಲ್ಲ. ಸಂಸಾರ ಎಂದ ಮೇಲೆ ಸಣ್ಣಪುಟ್ಟ ಜಗಳ, ಮಾತುಗಳು ಬರುತ್ತವೆ, ಹೋಗುತ್ತವೆ. ಆದರೆ ಪ್ರತಿನಿತ್ಯ ಕಿತ್ತಾಟವೇ ಜೀವನವಾದರೆ ಆ ಸಂಸಾರದಲ್ಲಿ ಖುಷಿ, ನೆಮ್ಮದಿ ಎಲ್ಲಿರುತ್ತದೆ. ಜಗಳ ಮಾಡಿ ಮತ್ತೆ ಒಂದಾದರೆ ಸಂಬಂಧದಲ್ಲಿ ನಿರೀಕ್ಷೆ ಇಟ್ಟುಕೊಳ್ಳಬಹುದು. ಆದರೆ ಜಗಳ ಅಂತ್ಯನೇ ಆಗದಿದ್ದರೆ, ಒಬ್ಬರಿಗೊಬ್ಬರು ಮುಖ ನೋಡದೆ ಕಿತ್ತಾಡಿಕೊಂಡೆ ಇರುವುದಕ್ಕಿಂತ ಬೇರೆ-ಬೇರೆಯಾದರೆ ಇಬ್ಬರಿಗೂ ನೆಮ್ಮದಿ ಸಿಗುವುದು.



Click it and Unblock the Notifications