Latest Updates
-
ಉತ್ತರಾಖಂಡದಲ್ಲಿ ಆರೆಂಜ್ ಅಲರ್ಟ್: ಹೋಟೆಲ್ ರೂಮ್ನಲ್ಲೇ ಫಿಟ್ ಆಗಿರಲು ಈ ಸರಳ ವ್ಯಾಯಾಮಗಳನ್ನು ಮಾಡಿ! -
UGC-NET ಪರೀಕ್ಷೆಯ ಗೊಂದಲ: ವಿದ್ಯಾರ್ಥಿಗಳ ಆತಂಕ ದೂರ ಮಾಡಲು ಪೋಷಕರಿಗೆ ಇಲ್ಲಿದೆ 48 ಗಂಟೆಗಳ ಸ್ಟಡಿ-ರಿಸೆಟ್ ಪ್ಲಾನ್! -
ದೆಹಲಿ ಮಳೆ: ಗುಡುಗು-ಮಿಂಚಿನಿಂದ ನಿಮ್ಮ ಎಲೆಕ್ಟ್ರಾನಿಕ್ ವಸ್ತುಗಳನ್ನು ರಕ್ಷಿಸಲು ಈ 15 ನಿಮಿಷದ ಟಿಪ್ಸ್ ಪಾಲಿಸಿ! -
ಎನರ್ಜಿ ಡ್ರಿಂಕ್ಸ್ ಕುಡಿಯುವ ಮುನ್ನ ಎಚ್ಚರ! FSSAI ಹೊಸ ನಿಯಮ ಮತ್ತು ಆರೋಗ್ಯಕರ ಪರ್ಯಾಯಗಳು -
ಗುರುಗ್ರಾಮದಲ್ಲಿ ವರುಣನ ಆರ್ಭಟ: ಕಚೇರಿಗೆ ಹೋಗ್ಬೇಡಿ, ಮನೆಯಿಂದಲೇ ಕೆಲಸ ಮಾಡಿ - ಪೊಲೀಸರ ಮಹತ್ವದ ಸೂಚನೆ -
ಮಳೆಗಾಲದ ಜಡತ್ವಕ್ಕೆ ಗುಡ್ ಬೈ: ಮುಂಬೈ-ಪುಣೆ ಜನರಿಗಾಗಿ 10 ನಿಮಿಷದ ಸರಳ ವ್ಯಾಯಾಮಗಳು -
ಮುಂಬೈ ಮಳೆ ಆರ್ಭಟ: ಸಂಗಾತಿಯ ಸುರಕ್ಷತೆಗಾಗಿ ನೀವು ಮಾಡಬೇಕಾದ ಪ್ರಮುಖ ಕೆಲಸಗಳಿವು! -
ಭಾರಿ ಮಳೆ ಎಚ್ಚರಿಕೆ: ನಿಮ್ಮ ಮನೆಯ ಮಳೆನೀರು ಕೊಯ್ಲು ವ್ಯವಸ್ಥೆ ಹಾಳಾಗದಂತೆ ತಡೆಯುವುದು ಹೇಗೆ? -
ಮಳೆಗಾಲದಲ್ಲಿ ಮಕ್ಕಳ ಲಂಚ್ಬಾಕ್ಸ್ ಸುರಕ್ಷತೆ: ಆರೋಗ್ಯಕರ ಮತ್ತು ಹೈ-ಪ್ರೋಟೀನ್ ಆಹಾರದ ಟಿಪ್ಸ್ -
ಮುಂಬೈನಲ್ಲಿ ಭಾರೀ ಮಳೆ: ಇಂದು ಶಾಲೆ-ಕಾಲೇಜುಗಳಿಗೆ ರಜೆ ಘೋಷಣೆ, ಪೋಷಕರು ಗಮನಿಸಿ!
ಪುರುಷರು ತಮ್ಮ ಸಂಗಾತಿಯಿಂದ ಬಯಸೋದು ಈ ಮಾತುಗಳನ್ನೇ..
ಪ್ರೀತಿ-ಕಾಳಜಿಯಾಗಲೀ ಅಥವಾ ಹೊಗಳಿಕೆಯಾಗಲೀ ಕೇವಲ ಹುಡುಗಿಯರಷ್ಟೇ ಅಲ್ಲ, ಹುಡುಗರೂ ಬಯಸುವಂತಹ ಮೂಲಭೂತ ಭಾವನೆಗಳು. ಆದರೆ, ಇವುಗಳೆಲ್ಲ ಕೇವಲ ಮಹಿಳೆಯರಿಗಷ್ಟೇ ಸೀಮಿತ ಎಂಬ ಭಾವನೆ ಬೆಳೆಸಿಕೊಂಡಿದ್ದೇವೆ. ಇದು ತಪ್ಪು, ಇಂತಹ ಭಾವನೆಗಳ ಅವಶ್ಯಕತೆ ಪುರುಷರಿಗೂ ಇರುತ್ತದೆ. ಅವರು ತಮ್ಮ ಸಂಗಾತಿಯಿಂದ ಕೆಲವೊಂದು ಮಾತುಗಳನ್ನು ನಿರೀಕ್ಷೆ ಮಾಡುತ್ತಿರುತ್ತಾರೆ. ಇದು ಅವರ ಆತ್ಮವಿಶ್ವಾಸವನ್ನು ಹೆಚ್ಚಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಹಾಗಾದರೆ, ಅಂತಹ ಮಾತುಗಳಾವುವು ನೋಡೋಣ.
ಪುರುಷರು ತಮ್ಮ ಸಂಗಾತಿಯಿಂದ ನಿರೀಕ್ಷಿಸುವಂತಹ ಮಾತುಗಳ ಬಗ್ಗೆ ಈ ಕೆಳಗೆ ನೀಡಲಾಗಿದೆ:

ನಂಬಿಕೆಯಿದೆ ಎಂಬ ಮಾತು:
ಪ್ರತಿಯೊಬ್ಬ ಮನುಷ್ಯನಿಗೂ ತನ್ನ ಜೀವನದಲ್ಲಿ ತನ್ನನ್ನು ನಂಬುವ, ತನ್ನ ಮೇಲೆ ವಿಶ್ವಾಸ ಇಡುವ ವ್ಯಕ್ತಿಯಿರಬೇಕು ಎಂದು ಭಾವಿಸುತ್ತಾನೆ. ಅದರಲ್ಲೂ ಪುರುಷ ತನ್ನ ಗೆಳತಿಯಿಂದ ಈ ಮಾತನ್ನು ಸದಾ ಬಯಸುತ್ತಲೇ ಇರುತ್ತಾನೆ. ಏನೇ ಆಗಲಿ, ನಿಮ್ಮ ಮೇಲಿನ ನಂಬಿಕೆ ಎಂದಿಗೂ ಕಡಿಮೆಯಾಗುವುದಿಲ್ಲ ಎಂದು ಸಂಗಾತಿ ಹೇಳಿದಾಗ ಅವನು ಹೆಚ್ಚು ಸಂತೋಷಪಡುತ್ತಾನೆ. ತನ್ನ ಸಂಗಾತಿ ಹಿಂದೆಂದಿಗಿಂತಲೂ ಹೆಚ್ಚು ಸಂತೋಷದಿಂದ ಇದ್ದಾಳೆ ಎಂದು ಹೇಳುವುದನ್ನು ಪುರುಷರು ಇಷ್ಟಪಡುತ್ತಾರೆ. ನೀವು ಅವರೊಂದಿಗೆ ಕಳೆಯುವ ಪ್ರತಿ ಕ್ಷಣವೂ ಅವರಿಗೆ ಎಷ್ಟು ವಿಶೇಷ ಎಂದು ಹೇಳಿ.

ಅವನ ಬುದ್ಧಿವಂತಿಕೆಯನ್ನು ಪ್ರಶಂಸಿಸಿ:
ಇಂದಿನ ಕಾಲದಲ್ಲಿ, ಬಹುತೇಕ ಪ್ರತಿಯೊಬ್ಬ ಪುರುಷನು ತನ್ನ ಸ್ನೇಹಿತೆ ಅಥವಾ ಅವನ ಸಂಗಾತಿಯು ತನ್ನ ಬುದ್ಧಿವಂತಿಕೆಯನ್ನು ಪ್ರಶಂಸಿಸಲು ಮಾತ್ರವಲ್ಲದೇ ಕಾಲಕಾಲಕ್ಕೆ ಉತ್ತಮ ಸಲಹೆಯನ್ನು ಕೇಳಲು ಬಯಸುತ್ತಾನೆ. ಆದಾಗ್ಯೂ, ಅಂತಹ ಪಾಲುದಾರಿಕೆಗಳು ಕೆಲವೇ ಕೆಲವು ದಂಪತಿಗಳಲ್ಲಿ ಕಂಡುಬರುತ್ತವೆ. ಹುಡುಗಿಯರು ತಮ್ಮನ್ನು ತಾವು ಯಾರಿಗಿಂತ ಕಡಿಮೆ ಎಂದು ಪರಿಗಣಿಸುವುದಿಲ್ಲ ಎಂಬುದು ಇದಕ್ಕೆ ಕಾರಣ. ಸಂಗಾತಿಯಿಂದ ಸಲಹೆ ಪಡೆದರೆ ತಮ್ಮ ಇಮೇಜ್ ಹಾಳಾಗುತ್ತದೆ ಎಂಬ ಭಾವನೆ ಅವರದು. ಆದರೆ, ಆಕೆಗೆ ತಿಳಿದಿಲ್ಲದ ಸಂಗತಿಯೆಂದರೆ, ಈ ಸಣ್ಣ ವಿಷಯಗಳು ತನ್ನ ಸಂಗಾತಿಯನ್ನು ಸಂತೋಷಪಡಿಸುವುದಲ್ಲದೇ, ಪರಸ್ಪರ ಹತ್ತಿರವಾಗಲು ಅವಕಾಶವನ್ನು ನೀಡುತ್ತದೆ.

ನೀವು ಚೆನ್ನಾಗಿ ಕಾಣುತ್ತಿರುವಿರಿ:
ಪುರುಷರಿಗಿಂತ ಮಹಿಳೆಯರು ಹೆಚ್ಚು ಬಾಡಿ ಶೇಮಿಂಗ್ ಎದುರಿಸಬೇಕಾಗುತ್ತದೆ ಎಂಬುದರಲ್ಲಿ ಸಂದೇಹವಿಲ್ಲ. ಆದರೆ, ಪುರುಷರು ಇದರಿಂದ ಹೊರತಾಗಿಲ್ಲ ಎಂಬುದನ್ನು ಅಲ್ಲಗಳೆಯುವಂತಿಲ್ಲ. ಹುಡುಗಿಯರಂತೆ, ಹುಡುಗರು ತಮ್ಮ ದೈಹಿಕ ನೋಟದ ಕೆಲವು ಅಂಶಗಳ ಬಗ್ಗೆ ಹೆಚ್ಚಾಗಿ ಅಸುರಕ್ಷಿತರಾಗುತ್ತಾರೆ. ಅವರು ತಮ್ಮ ಸಂಗಾತಿಯು ಅವರನ್ನು ಹೇಗೆ ಇಷ್ಟಪಡುತ್ತಾರೆ ಎಂಬುದನ್ನು ತಿಳಿದುಕೊಳ್ಳಲು ಇಷ್ಟಪಡುತ್ತಾರೆ. ಅವನು ತನ್ನ ಸಂಗಾತಿಯ ದೃಷ್ಟಿಕೋನದಿಂದ ತನ್ನನ್ನು ತಾನು ಉತ್ತಮವಾಗಿ ಕಾಣುವಂತೆ ಮಾಡಲು ಪ್ರಯತ್ನಿಸುತ್ತಾನೆ. ಆದ್ದರಿಂದ ಅವರು ಯಾವ್ಯಾವ ಉಡುಪಿನಲ್ಲಿ ಚೆನ್ನಾಗಿ ಕಾಣುತ್ತಾರೋ, ಅದನ್ನು ಅವರಿಗೆ ತಿಳಿಸಿ.

ಗೌರವ ನೀಡುವುದು:
ಹುಡುಗಿಯಾಗಲಿ, ಹುಡುಗನ ಮೇಲಾಗಲಿ ಗೌರವ ಎಲ್ಲರಿಗೂ ಇಷ್ಟವಾಗುವುದನ್ನು ಅಲ್ಲಗಳೆಯುವಂತಿಲ್ಲ. ಪ್ರತಿಯೊಬ್ಬರೂ ತನ್ನ ಸಂಗಾತಿಯನ್ನು ಗೌರವಿಸಬೇಕೆಂದು ಬಯಸುತ್ತಾರೆ. ಹುಡುಗರಲ್ಲಿ ಈ ಭಾವನೆ ಹೆಚ್ಚು ಗೋಚರಿಸುತ್ತದೆ. ನಾಲ್ಕು ಜನರ ನಡುವೆ ತನ್ನ ಸಂಗಾತಿ ಗೌರವದಿಂದ ಕರೆಯುವುದು ಮಾತ್ರವಲ್ಲದೇ ಪೂರ್ಣ ಗೌರವವನ್ನು ನೀಡಬೇಕು ಎಂಬುದು ಪ್ರತಿಯೊಬ್ಬ ಮನುಷ್ಯನ ಬಯಕೆಯಾಗಿದೆ.



Click it and Unblock the Notifications