For Quick Alerts
ALLOW NOTIFICATIONS  
For Daily Alerts

ಚಾಣಕ್ಯನ ಈ ನೀತಿ ಸೂತ್ರ ತಿಳಿದರೆ ಗಂಡ-ಹೆಂಡತಿ ತುಂಬಾ ಅನ್ಯೂನ್ಯವಾಗಿರುತ್ತಾರೆ

|

ಚಾಣಕ್ಯ ಅರ್ಥಶಾಸ್ತ್ರ ತಜ್ಷರಾಗಿದ್ದರೂ ಬದುಕಿನ ಎಲ್ಲಾ ಸ್ಥರಗಳ ಬಗ್ಗೆ ಅವರು ಹೇಳಿರುವ ವಿಷಯ ಇದೆಯೆಲ್ಲಾ ಅದು ಪ್ರತಿಯೊಬ್ಬರ ಬದುಕಿಗೆ ಮಾರ್ಗದರ್ಶನ ನೀಡುತ್ತದೆ.. ಅವರು ಅಂದು ಹೇಳಿರುವ ವಿಷಯಗಳು ಈಗೀನ ಮಾಡರ್ನ್‌ ಫ್ಯಾಮಿಲಿಗೂ ಅನ್ವಯಿಸುವಂತಿದೆ.

ನಾವಿಲ್ಲಿ ಚಾಣಕ್ಯ ಫ್ಯಾಮಿಲಿ ಬಗ್ಗೆ ಏನು ಹೇಳಿದ್ದಾರೆ ಎಂದು ನೋಡೋಣ:

Chanakya Niti

ಕುಟುಂಬದಲ್ಲಿ ಸಕ್ಸಸ್‌ಫುಲ್ ವ್ಯಕ್ತಿಯಾಗುವುದು ಸುಲಭವಲ್ಲ
ನೀವು ನೋಡಿರಬಹುದು ಕೆಲವರು ಸಾಕಷ್ಟು ದುಡ್ಡು , ದೊಡ್ಡ ಹೆಸರು ಎಲ್ಲಾ ಮಾಡಿರುತ್ತಾರೆ, ಆದರೆ ಫ್ಯಾಮಿಲಿ ಲೈಫ್‌ನಲ್ಲಿ ಖುಷಿಯಾಗಿರಲ್ಲ. ಎಷ್ಟೋ ಸೆಲೆಬ್ರಿಟಿಗಳನ್ನೇ ನೋಡುತ್ತೇವೆ, ಹೆಸರು, ಖ್ಯಾತಿ, ಲಕ್ಷುರಿ ಬದುಕು ಎಲ್ಲಾ ಇರುತ್ತದೆ, ಇಷ್ಟೆಲ್ಲಾ ಇದ್ದ ಮೇಲೆ ಬದುಕಿನಲ್ಲಿ ಇನ್ನೇನು ಬೇಕು, ಖುಷಿಯಾಗಿರುತ್ತಾರೆ ಅಂದ್ಕೊಳ್ಳುತ್ತೇವೆ, ಆದರೆ ನಾವು ಅಂದ್ಕೊಂಡಂತೆ ಅವರ ಬದುಕು ಇರಲ್ಲ ಎಂಬುವುದಕ್ಕೆ ಹೈ ಪ್ರೊಫೈಲ್‌ ಡಿವೋರ್ಸ್‌ಗಳೇ ಸಾಕ್ಷಿ ಅಲ್ವಾ?

ಆದ್ದರಿಂದಲೇ ಹೇಳುವುದು ಕುಟುಂಬದಲ್ಲಿ ಒಬ್ಬ ಸಕ್ಸಸ್‌ ವ್ಯಕ್ತಿಯಾಗುವುದು ಅಷ್ಟು ಸುಲಭವಲ್ಲ, ಇದನ್ನೇ ಚಾಣಕ್ಯ ಕೂಡ ಹೇಳಿದ್ದಾರೆ. ಕುಟುಂಬದಲ್ಲಿ ಒಬ್ಬ ವ್ಯಕ್ತಿ ಯಶಸ್ವಿಯಾಗಬೇಕಾದರೆ ಕುಟುಂಬ ಆಗೂ ವೃತ್ತಿ ಬದುಕು ನಿಭಾಯಿಸಿಕೊಮಡು ಹೋಗುವುದು ಗೊತ್ತಿರಬೇಕು. ಕುಟುಂಬ ಎಂದ ಮೇಲೆ ಅಲ್ಲಿ ಪ್ರೀತಿ ತುಂಬಾನೇ ಮುಖ್ಯ. ದಾಂಪತ್ಯದಲ್ಲಿ ಹೊಂದಾನಿಕೆ ಇರಬೇಕಾಗುತ್ತದೆ. ಸ್ವಧರ್ಮ ಮುಖ್ಯವಾಗುತ್ತದೆ, ಸ್ವಗೌರವ ಮುಖ್ಯವಾಗುತ್ತದೆ.

ಚಾಣಕ್ಯ ಅರ್ಥಶಾಸ್ತ್ರದಲ್ಲಿ ಮದುವೆ, ಮಕ್ಕಳು, ಕುಟುಂಬದಲ್ಲಿ ಸ್ತ್ರೀ-ಪುರುಷನ ಜವಾಬ್ದಾರಿ ಹೀಗೆ ಎಲ್ಲಾ ವಿಷಯಗಳ ಬಗ್ಗೆ ವಿವರಣೆಯಿದೆ ಗೊತ್ತಾ?

ಚಾಣಕ್ಯ ಪ್ರಕಾರ ಮದುವೆ ಜೀವನ ಹೇಗಿರಬೇಕು?

ಚಾಣಕ್ಯ ಆ ಕಾಲದಲ್ಲಿಯೇ ಮದುವೆ ಬಗ್ಗೆ ತುಂಬಾ ಅರ್ಥಪೂರ್ಣವಾಗಿ ಹೇಳಿದ್ದಾರೆ. ನಾವು ಮದುವೆಯಾಗುವಾಗ ಯಾರನ್ನು ಮದುವೆಯಾಗುತ್ತಿದ್ದೇವೆ ಎಂಬ ಸ್ಪಷ್ಟ ಕಲ್ಪನೆ ನಮ್ಮಲ್ಲಿರಬೇಕು. ಅಂಥ ವ್ಯಕ್ತಿಯನ್ನೇ ಮದುವೆಯಾಗಬೇಕು, ಇಲ್ಲದಿದ್ದರೆ ವೈವಾಹಿಕ ಬದುಕಿನಲ್ಲಿ ಅನೇಕ ಸವಾಲುಗಳು ಎದುರಾಗುವುದು. ಮದುವೆ ಜೀವನ ಹೇಗಿರುತ್ತದೆ ಎಂಬುವುದು ನಮ್ಮ ಕೈಯಲ್ಲಿದೆ. ಮದುವೆ ಜೀವನ ಚೆನ್ನಾಗಿರಬೇಕೆಂದರೆ ಹೆಣ್ಣು-ಗಂಡು ಇಬ್ಬರೂ ಹೊಂದಿಕೊಂಡು ಹೋಗಬೇಕು.

ಇನ್ನು ನಾವು ಮದುವೆಯಾದ ಮೇಲೆ ಆ ವ್ಯಕ್ತಿ ಜೊತೆ ಮಾತ್ರ ನಾವು ಜೀವಿಸುವುದಿಲ್ಲ, ಒಂದು ಕುಟುಂಬದೊಂದಿಗೆ ಜೀವಿಸುತ್ತೇವೆ. ಅಲ್ಲಿ ಅಪ್ಪ-ಅಮ್ಮ, ಅಣ್ಣ-ತಂಗಿ ಹೀಗೆ ಎಲ್ಲರೂ ಇರುತ್ತಾರೆ. ಅವರೆಲ್ಲರ ಜೊತೆ ಹೊಂದಿಕೊಂಡು ಹೋಗಬೇಕಾಗುತ್ತದೆ. ಕೆಲವರು ಮದುವೆಯಾದ ಗಂಡ-ಹೆಂಡತಿ ಮಾತ್ರ ಜೊತೆಗಿರಬೇಕೆಂದು ಬಯಸಿ ಬೇರೆ ಮನೆ ಹೋಗುತ್ತಾರೆ, ಆದರೆ ಅವರಿಬ್ಬರೇ ಇಬ್ಬರೇ ಇದ್ದರೆ ಅದು ಕುಟುಂಬವಾಗಲ್ಲ, ಅಲ್ಲದೆ ಪ್ರತ್ಯೇಕವಾಗಿ ನೆಲೆಸಿದ ಮೇಲೆ ಕುಟುಂಬದಿಂದ ಬಂಧ ಸಂಪೂರ್ಣ ಕಳಚುವುದಿಲ್ಲ, ವಿವಾಹವಾದ ನಾವು ಹೊಸ ಕುಟುಂಬದೊಂದಿಗೆ ಹೋಗುವ ಗುಣ ಕಲಿತರೆ ಎಷ್ಟೋ ಸಮಸ್ಯೆಗಳು ಬಗೆಹರಿಯುವುದು.

ಲವ್‌ ಮ್ಯಾರೇಜ್‌ VS ಅರೇಂಜ್‌ ಮ್ಯಾರೇಜ್‌
ವೈವಾಹಿಕ ಜೀವನ ಚೆನ್ನಾಗಿರಲು ಪ್ರೀತಿಸಿ ಮದುವೆಯಾಗುವುದು ಒಳ್ಳೆಯದಾ, ಮನೆಯವರು ನಿಶ್ಚಯಿಸಿದವರು ಜೊತೆ ಮದುವೆಯಾಗುವುದು ಒಳ್ಳೆಯದಾ ಈ ಪ್ರಶ್ನೆ ಹಲವರಲ್ಲಿದೆ. ಅರೇಂಜ್‌ ಮದುವೆಯಾಗಿ ಚೆನ್ನಾಗಿ ಜೀವನ ಮಾಡುತ್ತಿರುವವರೂ ಇದ್ದಾರೆ, ಹೊಂದಾಣಿಕೆಯಾಗದೆ ಬೇರೆ-ಬೇರೆಯಾದವರೂ ಇದ್ದಾರೆ. ಇನ್ನು ಒಂದು ಕ್ಷಣ ಬಿಟ್ಟಿರಲಾರದೆ ಪ್ರೀತಿಸಿ ಮದುವೆಯಾಗಿ ನಂತರ ಕೆಲವು ವರ್ಷಗಳಲ್ಲಿ ಪರಸ್ಪರ ಮುಖ ನೋಡಲು ಇಷ್ಟಪಡದೆ ದೂರವಾಗುವವರನ್ನೂ ನೋಡುತ್ತೇವೆ. ಆದ್ದರಿಂದ ಲವ್‌ ಮ್ಯಾರೇಜ್‌ ಒಳ್ಳೆಯದು ಅಥವಾ ಅರೇಂಜ್‌ ಮ್ಯಾರೇಜ್ ಒಳ್ಳೆಯದು ಎಂದು ಹೇಳಲು ಸಾಧ್ಯವಿಲ್ಲ.

ವೈವಾಹಿಕ ಜೀವನ ಚೆನ್ನಾಗಿರಬೇಕೆಂದರೆ ಚಾಣಕ್ಯ ಹೇಳಿರುವ ಪ್ರಕಾರ ಹೊಂದಾಣಿಕೆ ಮುಖ್ಯ.

ವೈವಾಹಿಕ ಜೀವನದಲ್ಲಿ ಲೈಂಗಿಕ ತೃಪ್ತಿ ಕೂಡ ಮುಖ್ಯ
ಇದರ ಬಗ್ಗೆ ಚಾಣಕ್ಯ ತಮ್ಮ ಅರ್ಥಶಾಸ್ತ್ರದಲ್ಲಿ ' ಪತ್ನಿಯನ್ನು ಹಗಲಿನಲ್ಲಿ ಸಮೀಸುವುದೇ ಗೃಹಸ್ಥನ ಕರ್ತವ್ಯ' ಎಂಬುವುದಾಗಿ ಹೇಳಿದ್ದಾರೆ.

ವೈವಾಹಿಕ ಬದುಕಿನಲ್ಲಿ ಲೈಂಗಿಕ ತೃಪ್ತಿ ತುಂಬಾನೇ ಮುಖ್ಯ. ಎಷ್ಟೋ ದಾಂಪತ್ಯದಲ್ಲಿ ಅನೈತಿಕ ಸಂಬಂಧದ ಕರಿ ನೆರಳು ಸುಳಿಯಲು ಕಾರಣವೇ ಲೈಂಗಿಕ ಅತೃಪ್ತಿ. ಲೈಂಗಿಕ ವಿಷಯ ಅಂತ ಬಂದಾಗ ಈ ಕುರಿತು ಮಾತನಾಡಲು ಮುಜುಗರ ಪಡುತ್ತಾರೆ. ಆದರೆ ಈ ವಿಷಯದಲ್ಲಿ ಗಂಡ ಹೆಂಡತಿ ನಡುವೆ ಯಾವ ಮುಚ್ಚು ಮರೆಯೂ ಇರಬಾರದು ಎಂದು ' ಪತ್ನಿಯನ್ನು ಹಗಲಿನಲ್ಲಿ ಸಮೀಸುವುದೇ ಗೃಹಸ್ಥನ ಕರ್ತವ್ಯ' ಎಂದು ಚಾಣಕ್ಯ ಹೇಳಿರುವ ಮಾತಿನ ಅರ್ಥವಾಗಿದೆ.

ಮಕ್ಕಳನ್ನೂ ಹೊಂದುವುದು ಕೂಡ ಗೃಹಸ್ಥನ ಕರ್ತವ್ಯವಾಗಿರುತ್ತೆ
ಮನುಷ್ಯ ಲೈಂಗಿಕ ಚಟುವಟಿಕೆಯಲ್ಲಿ ತೊಡಗಿಕೊಳ್ಳುವುದರ ಹಿಂದೆ ಲೈಂಗಿಕ ತೃಪ್ತಿ ಮಾತ್ರವಲ್ಲ, ಮಕ್ಕಳನ್ನು ಪಡೆಯುವ ಉದ್ದೇಶವೂ ಹೊಂದಿದೆ. ಅಲ್ಲದೆ ಉತ್ತಮ ಮಕ್ಕಳನ್ನು ಪಡೆಯುವುದು ದಂಪತಿಗಳ ಆಸೆಯಾಗಿರುತ್ತದೆ. ಉತ್ತಮ ಗುಣದ ಮಕ್ಕಳನ್ನು ಪಡೆಯಲು ಕೆಲವೊಂದು ಸಂದರ್ಭಗಳಲ್ಲಿ ಹೆಣ್ಣು-ಗಂಡಿ ಸೇರಬಾರದು ಎಂದು ಹೇಳಲಾಗುವುದು.

ಶಾಸ್ತ್ರದ ಪ್ರಕಾರ ಸೋಮವಾರ, ಬುಧವಾರ, ಗುರುವಾರ, ಶುಕ್ರವಾರ ಸಂತಾನೋತ್ಪತ್ತಿ ಬಯಸಿ ಸೇರಿಸಿದರೆ ಒಳ್ಳೆಯದು ಎಂದು ಹೇಳಲಾಗುವುದು.
* ಭಾನುವಾರ, ಶನಿವಾರ, ಮಂಗಳವಾರ ಸಂತಾನೋತ್ಪತ್ತಿಗಾಗಿ ಸೇರಬಾರದು ಎಂದು ಹೇಳಲಾಗುವುದು.
* ಗ್ರಹಣ, ಅಮವಾಸ್ಯೆ ಕೆಲ ಕೆಟ್ಟ ಘಳಿಗೆಯಲ್ಲಿ ಕೂಡ ಸೇರಬಾರದು ಎಂದು ಹೇಳಲಾಗುವುದು.

English summary

Chanakya Niti: Tips for successful marriage in Kannada

Chanakya Niti: Chanakya explained what are the secret of successful marriage read on...
X
Desktop Bottom Promotion