Latest Updates
-
ಮ್ಯಾಟ್ರಿಮೋನಿ ಆಪ್ಗಳಲ್ಲಿ ಆಧಾರ್ ಪರಿಶೀಲನೆ: ನಕಲಿ ಪ್ರೊಫೈಲ್ಗಳಿಗೆ ಇನ್ನು ಬ್ರೇಕ್? -
ಭಾರಿ ಮಳೆ ಎಚ್ಚರಿಕೆ: ನಿಮ್ಮ ಮನೆ ಮತ್ತು ಬಾಲ್ಕನಿ ಸುರಕ್ಷಿತವಾಗಿಡಲು ತಕ್ಷಣವೇ ಈ ಕೆಲಸ ಮಾಡಿ -
ಹಬ್ಬದ ಸೀಸನ್: ನಿಮ್ಮ ಅಡುಗೆಮನೆಯಲ್ಲಿ ವಿಷವಿದೆಯೇ? ಮಹಾರಾಷ್ಟ್ರ ಎಫ್ಡಿಎ ದಾಳಿಯ ನಂತರ ಎಚ್ಚರ! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ಆಫರ್ ಮಳೆಯಲ್ಲಿ ಸಿಲುಕುವ ಮುನ್ನ ಈ 5 ಟಿಪ್ಸ್ ಮಿಸ್ ಮಾಡ್ಬೇಡಿ! -
10 ನಿಮಿಷದ ದೇಸಿ ಬಾಡಿವೇಟ್ ಚಾಲೆಂಜ್: ಜಿಮ್ ಇಲ್ಲದೆ ಫಿಟ್ ಆಗಲು ಈ ವರ್ಕೌಟ್ ಟ್ರೈ ಮಾಡಿ! -
ಮದುವೆ ಅವಧಿ ಕಡಿಮೆಯಿದ್ದರೂ ₹50 ಲಕ್ಷ ಜೀವನಾಂಶ: ಹೈಕೋರ್ಟ್ ತೀರ್ಪಿನಿಂದ ಪತಿಗಳಿಗೆ ಎಚ್ಚರಿಕೆ! -
ಗಣೇಶ ವಿಸರ್ಜನೆಗೆ ರೆಡಿಯಾಗಿದ್ದೀರಾ? ಅಪಾರ್ಟ್ಮೆಂಟ್ ನಿವಾಸಿಗಳಿಗಾಗಿ ಇಲ್ಲಿದೆ ಸ್ಮಾರ್ಟ್ ಟಿಪ್ಸ್ ಮತ್ತು ಪಾಲಿಕೆ ಸಹಾಯವಾಣಿ! -
ಹಬ್ಬದ ಸೀಸನ್ನಲ್ಲಿ ಎಚ್ಚರ! ದೆಹಲಿಯಲ್ಲಿ ಕಲಬೆರಕೆ ಸ್ವೀಟ್ಸ್ ದಾಳಿ: 30 ಸೆಕೆಂಡ್ಗಳಲ್ಲಿ ಪರೀಕ್ಷಿಸುವುದು ಹೇಗೆ? -
ಸೆಪ್ಟೆಂಬರ್ 25 ಗಣೇಶ ವಿಸರ್ಜನೆ: ಮುಂಬೈ, ಪುಣೆ, ಹೈದರಾಬಾದ್ನಲ್ಲಿ ಟ್ರಾಫಿಕ್ ರೂಟ್ ಬದಲಾವಣೆ, ಪರ್ಯಾಯ ಮಾರ್ಗಗಳ ಮಾಹಿತಿ ಇಲ್ಲಿದೆ! -
ಗಣೇಶ ವಿಸರ್ಜನೆ ಮೆರವಣಿಗೆ: ಬೆನ್ನು, ಮೊಣಕಾಲು ನೋವು ತಡೆಯಲು 12 ನಿಮಿಷದ ಸ್ಮಾರ್ಟ್ ರೊಟೀನ್ ಇಲ್ಲಿದೆ!
ಸರಿಹೊಂದದ ಸಂಬಂಧದಿಂದ ಹೊರಬರುವುದೇ ಲೇಸು!
ಹದಿಹರೆಯದ ಪ್ರೇಮಕ್ಕೂ ಪ್ರಬುದ್ಧ ಪ್ರೇಮಕ್ಕೂ ಬಹಳ ವ್ಯತ್ಯಾಸವಿದೆ. ಹದಿಹರೆಯದಲ್ಲಿ ದೈಹಿಕ ಆಕರ್ಷಣೆಗೇ ಹೆಚ್ಚಿನ ಮಹತ್ವವಿರುತ್ತದೆ. ಕಾಲಕಳೆದಂತೆ ಒಂದು ಸಂಬಂಧಕ್ಕೆ ಅಗತ್ಯವಿರುವ ನಿಜವಾದ ಗುಣಗಳು ಒರೆಹಚ್ಚಿದಂತೆ ಇದರಲ್ಲಿರುವ ಹುಳುಕುಗಳೂ ಕಾಣತೊಡಗುತ್ತವೆ. ಪರಿಣಾಮವಾಗಿ 'ಆಕರ್ಷಣೆ' ಕಳೆದುಕೊಳ್ಳುತ್ತದೆ.

ಭಾರತೀಯ ಸಂಸ್ಕೃತಿಯಲ್ಲಿ ಏಕಸಂಗಾತಿಗೆ ಹೆಚ್ಚಿನ ಮಹತ್ವ ನೀಡಲಾಗಿದೆ. ಆದ್ದರಿಂದ ಜೀವನಸಂಗಾತಿಯನ್ನು ಆರಿಸಿಕೊಳ್ಳುವಾಗ ಬಹಳಷ್ಟನ್ನು ಪರಿಗಣಿಸಬೇಕಾಗುತ್ತದೆ. ಪಾಶ್ಚಾತ್ಯರಲ್ಲಿದ್ದಂತೆ ವಿವಾಹಕ್ಕೂ ಮುನ್ನ ಹತ್ತು ಹಲವು ಸಂಬಂಧಗಳನ್ನು ಒರೆಹಚ್ಚಿ ಬಳಿಕ ವಿವಾಹವಾಗುವುದು ಸರಿಯಲ್ಲ. ನಿಮ್ಮ ಪತ್ನಿಗೂ ಆಸೆ ಆಕಾಂಕ್ಷೆಗಳಿರುತ್ತದೆ, ಅರ್ಥಮಾಡಿಕೊಳ್ಳಿ...
ಅಂತೆಯೇ ಯಾವುದೋ ಆಣೆ ಭಾಷೆಗಳಿಗೆ ಬಲಿಯಾಗಿ ಇಷ್ಟವಿಲ್ಲದವರನ್ನು ಮದುವೆಯಾಗಿ ಜೀವನವಿಡೀ ಕೊರಗುವುದೂ ತರವಲ್ಲ. ಸಂಬಂಧ ಸುಧಾರಿಸದು ಎಂದು ಗೊತ್ತಾಗುತ್ತಿದ್ದರೆ ಇದರಲ್ಲಿ ಮುಂದುವರೆಯುವುದರಲ್ಲಿ ಅರ್ಥವೂ ಇಲ್ಲ.
ಯಾವುದೇ ಸಂಬಂಧದಲ್ಲಿ ಮುಖ್ಯವಾಗಿ ಬೇಕಾಗಿರುವುದು ಪರಸ್ಪರ ಪ್ರೀತಿ, ಬದ್ಧತೆ, ವಿಶ್ವಾಸ ಮತ್ತು ತಮ್ಮ ಸಂಗಾತಿಯನ್ನು ಹೇಗಿದ್ದಾರೋ ಹಾಗೇ ಸ್ವೀಕರಿಸುವ ಮನೋಭಾವ. ಯಾವಾಗ ಇಬ್ಬರ ನಡುವೆ ಇದರಲ್ಲಿ ಯಾವುದಾದರೊಂದು ಗುಣದಲ್ಲಿ ಕಡಿಮೆಯಾಗತೊಡಗುತ್ತದೆಯೋ ಆಗ ಸಂಬಂಧ ಹಳಸಲು ಪ್ರಾರಂಭವಾಗುತ್ತದೆ. ಮಧುರ ಸಂಬಂಧಕ್ಕಾಗಿ ಇಡಬೇಕಾದ ಪುಟ್ಟ ಹೆಜ್ಜೆಗಳು
ಇದನ್ನು ಸರಿಪಡಿಸಲು ಇಬ್ಬರಿಗೂ ಕೊಂಚ ಬಗ್ಗುವುದು ಅನಿವಾರ್ಯವಾಗಿದೆ. ಆದರೆ ಹೆಚ್ಚಾಗಿ ಇಂದಿನ ದಿನಗಳಲ್ಲಿ ಇಬ್ಬರೂ ಬಗ್ಗಲು ತಯಾರಿರದೇ ಅಹಮ್ಮಿಕೆ ತೋರುವ ಮೂಲಕ ಈ ಸಂಬಂಧ ಇನ್ನಷ್ಟು ಹಳಸತೊಡಗುತ್ತದೆ. ಹೀಗಿರುವಾಗ ಈ ಸಂಬಂಧದಿಂದ ಕಳಚಿಕೊಂಡು ಒಂಟಿಯಾಗುವುದೇ ಉತ್ತಮ ಎಂದು ತಜ್ಞರು ಅಭಿಪ್ರಾಯಪಡುತ್ತಾರೆ.
ಸಂಬಂಧದಲ್ಲಿ ಬೈಗಳು ನೀಡುವುದೂ ಪಡೆಯುವುದೂ ಅತ್ಯಂತ ಅನಾರೋಗ್ಯಕರ ನಡವಳಿಕೆಯಾಗಿದ್ದು ಇದರಿಂದ ಇಬ್ಬರ ಮನಃಸ್ಥಿತಿಯೂ ಬದಲಾಗುತ್ತಾ ಹೋಗುತ್ತದೆ ಹಾಗೂ ಇದು ಮಾನಸಿಕ ತೊಂದರೆಗಳಿಗೆ ನಾಂದಿಯಾಗುತ್ತದೆ. ಈ ಮಾನಸಿಕ ತೊಂದರೆಗಳು ಉದ್ವಿಗ್ನತೆ, ಖಿನ್ನತೆ, ಮದ್ಯವ್ಯಸನ ಮೊದಲಾದವುಗಳಿಗೆ ಕಾರಣವಾಗುತ್ತವೆ. ಅಲ್ಲದೇ ಇತ್ತೀಚಿನ ದಿನಗಳಲ್ಲಿ ಈ ತೊಂದರೆಗಳು ಹೆಚ್ಚುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ. ಅನೈತಿಕ ಸಂಬಂಧ ಹಿಂದಿರುವ ಸತ್ಯಾಸತ್ಯತೆ...
ಆದ್ದರಿಂದ ಒಂದು ವೇಳೆ ಸರಿಪಡಿಸಲಾಗದಷ್ಟು ಸಂಬಂಧ ಹಳಸಿದ್ದರೆ ಇದನ್ನು ಮುಂದುವರೆಸಿಕೊಂಡು ಹೋಗುವ ಬದಲು ಇದರಿಂದ ಹೊರಬರುವುದೇ ಉತ್ತಮ ಎಂದು ಮನಃಶಾಸ್ತ್ರಜ್ಞರು ಮತ್ತು ಮಾನವಸಂಬಂಧ ಪರಿಣಿತರು ಅಭಿಪ್ರಾಯಪಡುತ್ತಾರೆ.



Click it and Unblock the Notifications



