Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಗಂಡನಿಗೆ 'ಅನುರೂಪದ ಹೆಂಡತಿ' ಹೇಗಿರಬೇಕು?

ಗಂಡ-ಹೆಂಡತಿ ನಡುವಿನ ತಾಳ-ಮೇಳಗಳು ಮೇಲೆ ಕೆಳಗಾಗಿ ಸಂಸಾರವೇ ಡೋಲಾಯಮಾನವಾಗಿಬಿಡುತ್ತದೆ. ಸಂಸಾರವೆಂಬ ಸರಿಗಮದಲ್ಲಿ ಅಪಸ್ವರ ಮೂಡಿ ಕೆಲ ಮದುವೆಗಳು ವಿಚ್ಛೇದನದ ಹಂತಕ್ಕೂ ಬಂದು ನಿಂತುಬಿಡುತ್ತವೆ. ನಾ ಹೆಚ್ಚು, ನೀ ಕಡಿಮೆ ಎಂಬ ಅಹಂಕಾರ ಮೊಳಕೆಯೊಡೆದು ಸಂಸಾರ ಸರ್ವನಾಶದ ಹಾದಿಯಲ್ಲಿ ಬಂದುಬಿಟ್ಟಿರುತ್ತದೆ. ಮನೆಮಂದಿ ಬಂಧುಗಳು ಎಷ್ಟೇ ಪ್ರಯತ್ನಪಟ್ಟರೂ ದಂಪತಿಗಳ ಬಾಳಯಾನ ಡೆಡ್ ಎಂಡ್ ತಲುಪಿಬಿಡುತ್ತದೆ.
ಇಂದಿನ ಕಾಲದಲ್ಲಿ ಅತೀಹೆಚ್ಚು ಕಲಿತಿರುವ, ಗಂಡನಷ್ಟೇ ಗಳಿಸುತ್ತಿರುವ ಹೆಂಡತಿ 'ನೀನಿಲ್ಲದಿದ್ದರೆ ಇನ್ನೊಬ್ಬ, ತಗೋ ಡೈವೋರ್ಸ್' ಅನ್ನಲೂ ಹಿಂದೆ ಮುಂದೆ ನೋಡುವುದಿಲ್ಲ. ಹೆಂಡತಿ ವಿಪರೀತ ಡಾಮಿನೇಟಿಂಗ್ ಅಥವಾ ವಿಪರೀತ ಪೊಸೆಸಿವ್ ಆಗಿದ್ದರೂ ವಿರಸ ಮೂಡುವ ಸಂಭಾವ್ಯತೆ ಹೆಚ್ಚಾಗಿರುತ್ತದೆ. ಸಿಕ್ಕಾಪಟ್ಟೆ ಸಾಧು ಅಥವಾ ವಿಧೇಯಳಾಗಿದ್ದರೂ ಇಂದಿನ ಜಮಾನಾದಲ್ಲಿ ನಡೆಯುವುದಿಲ್ಲ.
ಗಂಡಿಗೆ ಸಂಗಾತಿಯನ್ನು ಹುಡುಕುವ ಹಂತದಲ್ಲಿ ಹಿರಿಯರು ಎಲ್ಲ ಎಚ್ಚರಿಕೆಗಳನ್ನು ತೆಗೆದುಕೊಂಡಿರುತ್ತಾರೆ. ಜಾತಕಗಳು ಕೂಡಿಬಂದಿರುತ್ತವೆ, ಕೌಟುಂಬಿಕ ಹಿನ್ನೆಲೆ ಚೆನ್ನಾಗಿರುತ್ತದೆ, ಹುಡುಗಿ ಗುಣಶೀಲಳಾಗಿರುತ್ತಾಳೆ. ಆದರೂ, ಕಾಲ ಸರಿದಂತೆ ಏನೇನೋ ಎಡವಟ್ಟುಗಳಾಗಿ ಸಂಸಾರದಲ್ಲಿ ಮುಚ್ಚಲಾಗದಂತಹ ಬಿರುಕುಗಳು ಬಿಡುತ್ತವೆ. ಮುರಿದ ಮನಸ್ಸುಗಳು ಎಂದೂ ಒಂದಾಗುವುದೇ ಇಲ್ಲ.
ಹಾಗಿದ್ದಮೇಲೆ, ಅತ್ಯಂತ ಪರ್ಫೆಕ್ಟ್ ವೈಫ್ ಳನ್ನು ಹುಡುಕುವುದು ಹೇಗೆ? ಇತ್ತೀಚಿಗೆ ನಡೆಸಲಾಗಿರುವ ಒಂದು ಅಧ್ಯಯನ ಕೆಲ ಅಂಶಗಳನ್ನು ಮಂಡಿಸಿದೆ. ಅವನ್ನು ಪರಿಶೀಲಿಸಿ ಅವುಗಳಂತೆಯೇ ನಡೆದುಕೊಂಡರೆ ಗಂಡನಿಗೆ ಪರ್ಫೆಕ್ಟ್ ಮಡದಿ ಸಿಕ್ಕಂತೆಯೆ. ಇಂದಿನ ಆಧುನಿಕ ಯುಗದಲ್ಲಿ ಮದುವೆಗಳು ಎಷ್ಟೇ ಬದಲಾವಣೆ ಹೊಂದಿದ್ದರೂ ಹಿರಿಯರು ಹಾಕಿಕೊಟ್ಟ ದಾರಿ ಸರಿಯಾದದ್ದೆ ಎಂಬುದು ಮತ್ತೆ ಸಾಬೀತಾಗಿದೆ.
ಆ ಅಂಶಗಳು ಕೆಳಗಿನಂತಿವೆ
* ಹುಡುಗ ಮತ್ತು ಹುಡುಗಿಯ ನಡುವೆ ಕನಿಷ್ಠ 5 ವರ್ಷ ಅಂತರವಿರಬೇಕು.
* ಇಬ್ಬರ ಸಾಂಸ್ಕೃತಿಕ ಹಿನ್ನೆಲೆಗಳು ಒಂದೇ ಆಗಿರಬೇಕು.
* ಹುಡುಗಿ ಓದಿನಲ್ಲಿ ಮುಂದಿರಬೇಕು, ಕನಿಷ್ಠ ಡಿಗ್ರಿ ಸಂಪಾದಿಸಿರಬೇಕು.
* ಹುಡುಗನಿಗಿಂತ ಹುಡುಗಿ ಜಾಣೆಯಾಗಿರಬೇಕು (ಅಲ್ವೆ ಮತ್ತೆ?)
* ಹುಡುಗಿ ಹುಡುಗನಿಂದ ಹೆಚ್ಚು ಭಾವನಾತ್ಮಕವಾಗಿ ಗಟ್ಟಿಯಾಗಿರಬೇಕು.
* ಕಾಫಿ, ಟೀ ಮಾಡಲು ಬರದಿದ್ದರೂ ಚಿಂತೆಯಿಲ್ಲ ಅಡುಗೆ ಮಾಡಿ ಬಡಿಸುವ ನೈಪುಣ್ಯತೆ ಹೊಂದಿರಬೇಕು.
ಇಂದಿನ ಕಾಲದಲ್ಲಿ ಪ್ರೇಮ ವಿವಾಹಗಳು ಹೆಚ್ಚು ವಿಚ್ಛೇದನದ ಹಾದಿ ಹಿಡಿಯುತ್ತಿರುವುದು ಗಂಡು ಮತ್ತು ಹೆಣ್ಣಿನ ನಡುವೆ ಕಡಿಮೆ ವಯಸ್ಸಿನ ಅಂತರವಿರುವುದು. ಹುಡುಗಿ ಕಲಿತಿದ್ದರೂ ಕೆಲಸಕ್ಕೆ ಹೋಗಬಾರದಂತಲ್ಲ, ಆದರೆ ಗಂಡನಿಗೆ ತಾನೇ ಸ್ವತಃ ಅಡುಗೆ ಮಾಡಿ ಬಡಿಸುವ ವ್ಯವಧಾನ ಹೊಂದಿರಬೇಕು. ಗುರುಹಿರಿಯರ ಆಶೀರ್ವಾದವಿದ್ದರೆ ಸಂಸಾರದಲ್ಲಿ ತೊಡಕುಗಳು ತುಸುವಾದರೂ ಕಡಿಮೆಯಾಗುತ್ತದೆ ಎನ್ನುವುದು ಇದೇ ಕಾರಣಕ್ಕೆ. ಎಷ್ಟೇ ತೊಂದರೆಗಳು ಬಂದರೂ ಎಲ್ಲವನ್ನು ಎದುರಿಸಿ ಸಂಸಾರ ಹೆಚ್ಚು ವರ್ಷ ಬಾಳುತ್ತದೆ.



Click it and Unblock the Notifications
