Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಹೆಂಡತಿಯೆಂದರೆ ಹೀಗಿರಬೇಕು! ನನ್ನ ಸುತ್ತಲೇ ಸುತ್ತುತ್ತಿರಬೇಕು!!
ನೀವು ಮದುವೆಯಾದ ನಂತರ ಗಂಡಸರು ತಮ್ಮ ಹೆಂಡತಿಯರ ಕುರಿತಾಗಿ ಅಸಡ್ಡೆ ಮತ್ತು ಅವಹೇಳನಗಳನ್ನು ಮಾಡುತ್ತಿರುತ್ತಾರೆ. ಇಲ್ಲವೇ ನೀವು ಮಾಡಿದ ಕೆಲಸಗಳಿಗೆ ಸರಿಯಾದ ಪ್ರೋತ್ಸಾಹವಿರಲಿ, ಒಂದು ಅಭಿನಂದನೆಯನ್ನು ಸಹ ಅವರು ಸಲ್ಲಿಸದೆ ಇರುವ ಸಂದರ್ಭಗಳು ಸಹ ಬರಬಹುದು. ಆದರೂ ಕೆಲವೊಂದು ಗಂಡಸರು ತಮ್ಮ ಹೆಂಡತಿಯರನ್ನು ಪ್ರೀತಿಸುತ್ತಾರೆ. ಅವರು ತಮ್ಮ ಹೆಂಡತಿಯರನ್ನು ಪ್ರೀತಿಸಲು ಇರುವ ಕಾರಣಗಳನ್ನು ನೀಡುತ್ತಾರೆ, ಅದು ಯಾವುವು ಎನ್ನುವ ಕುತೂಹಲ ನಿಮಗೂ ಇರುತ್ತದೆಯಲ್ಲವೇ?
ಈ ಲೇಖನದಲ್ಲಿ ನಾವು ಗಂಡಸರು ತಮ್ಮ ಹೆಂಡತಿಯರಲ್ಲಿ ಮೆಚ್ಚುವ ಗುಣಗಳನ್ನು ಮತ್ತು ಅದಕ್ಕೆ ಅವರು ಸೂಚಿಸುವ ಮೆಚ್ಚುಗೆಗಳನ್ನು ನಿಮಗೆ ಇಂದು ತಿಳಿಸುತ್ತೇವೆ. ಇದು ಕೇಳಲು ತಮಾಷೆಯಾಗಿರುತ್ತದೆಯಾದರೂ, ಗಂಡಸರು ತಮ್ಮ ಹೆಂಡತಿಯರಲ್ಲಿ ಬಯಸುವ ಗುಣಗಳನ್ನುಇದು ನಮಗೆ ತಿಳಿಸಿಕೊಡುತ್ತದೆ. ಗಂಡನಿಗೆ 'ಅನುರೂಪದ ಹೆಂಡತಿ' ಹೇಗಿರಬೇಕು?

ಸಾಮಾನ್ಯವಾಗಿ ಹೆಂಡತಿಗೆ ತನ್ನ ಗಂಡ ತನ್ನನ್ನು ಹೊಗಳಬೇಕು ಎಂಬ ಆಸೆ ಇರುತ್ತದೆ. ಇದು ಹೆಣ್ಣಿನ ಸಹಜ ಭಾವನೆಯಾಗಿರುತ್ತದೆ. ಗಂಡ ತನ್ನನ್ನು ಮೆಚ್ಚಿಕೊಂಡರೆ ಸಾಕು ಪ್ರಪಂಚವೇ ತಮ್ಮನ್ನು ಮೆಚ್ಚಿಕೊಂಡಂತೆ ಎಂದು ಸಂಭ್ರಮಿಸುವವರು ಇರುತ್ತಾರೆ. ಎಷ್ಟಾದರು ಹೆಣ್ಣಲ್ಲವೇ, ಹೊಗಳುವವರು ಯಾರಾದರು ತನಗೆ ಇರಬೇಕು ಎಂದು ಆಸೆಪಡುತ್ತಾಳೆ. ಬನ್ನಿ ಇನ್ನು ತಡ ಮಾಡದೆ ಆ ಅಂಶಗಳು ಯಾವುವು ಎಂದು ತಿಳಿದುಕೊಂಡು ಬರೋಣ...
ಹೆಂಡತಿ ಎಲ್ಲಾ ಕೆಲಸಗಳನ್ನು ಮಾಡಿ ಮುಗಿಸಿದಾಗ
ಕೆಲವು ಹೆಂಗಸರಿಗೆ ಅದು ಮಾಡು, ಇದು ಮಾಡು ಎಂದು ಹೇಳುವ ಅಗತ್ಯವಿರುವುದಿಲ್ಲ. ಅವರಿಗೆ ತಮ್ಮ ಜವಾಬ್ದಾರಿಯ ಅರಿವು ಇರುತ್ತದೆ. ಅವರು ಅದನ್ನು ಸಕ್ರಮವಾಗಿ ಮಾಡುತ್ತಿರುತ್ತಾರೆ. ನನ್ನ ಹೆಂಡತಿ ಎಲ್ಲರೂ ಏಳುವ ಮೊದಲು ಎದ್ದೇಳುತ್ತಾಳೆ. ಎಲ್ಲರೂ ಮಲಗಿದ ಮೇಲೆ ಮಲಗುತ್ತಾಳೆ. ಮನೆಯಲ್ಲಿ ಏನು ಮಾಡಬೇಕು ಎಂದು ನಾನು ಊಹಿಸುವ ಮುನ್ನ ಆಕೆ ಅದನ್ನು ಮಾಡಿ ಮುಗಿಸಿರುತ್ತಾಳೆ ಎಂದು ಗಂಡಸರು ಹೇಳುತ್ತಿರುತ್ತಾರೆ.
ಗಂಡ ಮರೆತದ್ದನ್ನು ಹೆಂಡತಿ ಮರೆಯುವುದಿಲ್ಲ
ನನ್ನ ಹೆಂಡತಿಗೆ ನೆನಪಿನ ಶಕ್ತಿ ಹೆಚ್ಚಾಗಿದೆ. ನಾನು ಮರೆತರು ಆಕೆ ಮರೆಯುವುದಿಲ್ಲ. ಅದು ಒಳ್ಳೆಯದೋ, ಕೆಟ್ಟದ್ದೊ, ಒಟ್ಟಿನಲ್ಲಿ ಆಕೆ ನನ್ನ ನೆನಪಿನ ಗಣಿ. ನನ್ನ ಹೆಂಡತಿ ನನ್ನ ಪಕ್ಕದಲ್ಲಿದ್ದರೆ, ನಾನು ನಿರಾಳವಾಗಿರುತ್ತೇನೆ ಎಂದು ಹೊಗಳುವ ಗಂಡಸರು ಎಷ್ಟು ಜನ!
ಅವಳಂತ ತಾಯಿ ಇನ್ನೊಬ್ಬಳಿಲ್ಲ
ನನ್ನ ಹೆಂಡತಿ ನನ್ನ ಮಗುವನ್ನು ತುಂಬಾ ಚೆನ್ನಾಗಿ ನೋಡಿಕೊಳ್ಳುತ್ತಾಳೆ. ಅದಕ್ಕೆ ಏನು ಬೇಕು ಎಂದು ಕೇಳುವ ಮೊದಲೆ ಎಲ್ಲವನ್ನು ನೀಡುತ್ತಾಳೆ. ಆಕೆಗೆ ಕಲಿಸಬೇಕಾದ್ದನ್ನೆಲ್ಲಾ ಈಗಲೇ ಕಲಿಸಿದ್ದಾಳೆ. ಹೋಮ್‌ವರ್ಕ್ ಮಾಡಿಕೊಡುತ್ತಾಳೆ. ಆಟ ಆಡಿಸುತ್ತಾಳೆ, ನನಗೆ ಯಾವ ಕೆಲಸವನ್ನು ಬಿಡದೆ ತಾನೇ ಎಲ್ಲವನ್ನು ಮಾಡುತ್ತಾಳೆ, ಆಕೆ ನಿಜಕ್ಕೂ ಗ್ರೇಟ್!, ಎಂದಾಗ ಯಾರಿಗೆ ತಾನೇ ಸಂತೋಷವಾಗುವುದಿಲ್ಲ.
ಗಂಡ ಕಾಯಿಲೆಯಿಂದಿರುವಾಗ ಅಪ್ಪಿಕೊಂಡು ಸಾಂತ್ವನ ನೀಡುವ ಹೆಂಡತಿ
ನಾನು ಬೇಸರವಾಗಿದ್ದಾಗ, ಕಾಯಿಲೆ ಇರುವಾಗ ಬಂದು ನನ್ನನ್ನು ಅಪ್ಪಿಕೊಂಡು ಸಾಂತ್ವನ ನೀಡುತ್ತಾಳೆ ನನ್ನ ಹೆಂಡತಿ. ಆಕೆ ಅಪ್ಪಿಕೊಂಡರೆ ನನಗೆ ಚೈತನ್ಯ ಮತ್ತೆ ಬರುತ್ತದೆ. ಆಕೆ ಅಪ್ಪಿಕೊಳ್ಳದಿದ್ದಲ್ಲಿ ನನಗೆ ಪ್ರಪಂಚವೇ ಶೂನ್ಯ ಎನಿಸುತ್ತದೆ ಎಂಬ ಮಾತುಗಳು ಯಾರಿಗೆ ಮುದ ನೀಡುವುದಿಲ್ಲ.
ಹೆಂಡತಿಯ ಊಹೆ ತಪ್ಪಾಗುವುದಿಲ್ಲ
" ಹೆಂಡತಿಯರು ರೆಡಾರ್‌ಗಳಿದ್ದಂತೆ, ಅವರಿಗೆ ಮುಂದೆ ಬರುವ ಅಪಾಯ ಈಗಲೇ ಗೊತ್ತಾಗಿ ಬಿಡುತ್ತದೆ. ನನ್ನ ಹೆಂಡತಿ ನನಗೆ ಹಲವಾರು ಬಾರಿ ಅಪಾಯದ ಮುನ್ಸೂಚನೆಯನ್ನು ನೀಡಿದ್ದಾಳೆ. ಆ ಮುನ್ಸೂಚನೆಗಳು ನನ್ನನ್ನು ಹಲವಾರು ಬಾರಿ ಕಾಪಾಡಿವೆ ಎಂಬ ಮಾತುಗಳು ಹಲವರ ಬಾಯಲ್ಲಿ ನೀವು ಸಹ ಕೇಳಿರಬಹುದು.



Click it and Unblock the Notifications



