Latest Updates
-
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ!
ಪ್ರೀತಿಯಲ್ಲಿ ರೂಪಕ್ಕಿಂತ ಗುಣಲಕ್ಷಣವು ತುಂಬಾ ಮುಖ್ಯ
ಕಣ್ಣುಗಳು ಬೆಸೆದಾಗ ಮೂಡುವ ಪ್ರೀತಿ ದೇಶ, ಭಾಷೆ, ವರ್ಣವನ್ನು ನೋಡುವುದಿಲ್ಲ. ಇದಕ್ಕೆ ಇರಬೇಕು ಪ್ರೀತಿ ಕುರುಡು ಎಂದು ಹೇಳಿರುವುದು. ದೇಹದ ಸೌಂದರ್ಯ ನೋಡಿ ಪ್ರೀತಿಸಿದರೆ ಅದು ಪ್ರೀತಿಯಾಗಲ್ಲ. ಕೇವಲ ಆಕರ್ಷಣೆಯಾಗಿ ಉಳಿಯುತ್ತದೆ. ಸೌಂದರ್ಯವನ್ನು ಹೊರಗಿಟ್ಟು ಮೂಡುವಂತಹ ಪ್ರೀತಿ ಯಾವಾಗಲೂ ಚಿರಾಯೂವಾಗಿರುತ್ತದೆ. ಕೆಲವರು ರೂಪಕ್ಕೆ ಮರಳಾಗದೆ ಪ್ರೀತಿಸುವ ವ್ಯಕ್ತಿಯ ಸರಳತೆ ಮತ್ತು ಅವರು ಪರಿಸ್ಥಿತಿಯನ್ನು ನಿಭಾಯಿಸುವ ರೀತಿಯನ್ನು ಕಂಡು ಪ್ರೀತಿಯ ಬಲೆಗೆ ಬೀಳುತ್ತಾರೆ. ಅಷ್ಟಕ್ಕೂ ಪ್ರೀತಿ ಎಂದರೇನು, ಇದರ ಹಿಂದಿರುವ ರಹಸ್ಯವೇನು?
ಇನ್ನು ಕೆಲವರು ಕೇವಲ ಮೈಬಣ್ಣ ನೋಡಿಕೊಂಡು ಪ್ರೀತಿಯಲ್ಲಿ ಸಿಲುಕಿ ಸಮಸ್ಯೆಯನ್ನು ಎದುರಿಸುತ್ತಾರೆ. ಪ್ರೀತಿಯಲ್ಲಿ ರೂಪಕ್ಕಿಂತ ಗುಣಲಕ್ಷಣವು ತುಂಬಾ ಮುಖ್ಯ ಎಂದು ಈ ಲೇಖನದಲ್ಲಿ ತಿಳಿದುಕೊಳ್ಳಬಹುದು. ನಮಗೆ ಆತ್ಮವಿಶ್ವಾಸ ಉಂಟುಮಾಡುವ ಮತ್ತು ಪ್ರೇರಣೆಯಾಗಬಲ್ಲ ವಿಷಯಗಳನ್ನು ನಾವು ತಿಳಿದುಕೊಳ್ಳಬೇಕು. ಆದರೆ ಕೆಲವೊಂದು ವಿಷಯಗಳನ್ನು ನಾವು ಬದಲಾಯಿಸಲು ಸಾಧ್ಯವಿಲ್ಲ. ಇಂತವುಗಳ ಬಗ್ಗೆ ನಾವಿಲ್ಲಿ ತಿಳಿದುಕೊಳ್ಳುವ.....

ವಾಸ್ತವಾಂಶ #1
ನೀವು ಎಷ್ಟೇ ಸಮಸ್ಯೆಗಳನ್ನು ಎದುರಿಸುತ್ತಾ ಇದ್ದರೂ ಬೆಳಿಗ್ಗೆ ಹಾಸಿಗೆಯಿಂದ ಏಳುವಾಗ ಪಡೆಯುವಂತಹ ಧೈರ್ಯವು ತುಂಬಾ ಮುಖ್ಯ.

ವಾಸ್ತವಾಂಶ #2
ನೀವು ಅತಿಯಾಗಿ ಪ್ರೀತಿಸುವಂತಹ ವಸ್ತುವಿನ ಬಗ್ಗೆ ಮಾತನಾಡುವಾಗ ತೋರಿಸುವಂತಹ ಉತ್ಸಾಹವು ನಿಮ್ಮನ್ನು ಪ್ರೀತಿಸುವಂತೆ ಮಾಡುತ್ತದೆ. ಪ್ರೀತಿಗೆ ಬೀಳುವ ಗುಣಲಕ್ಷಣಗಳಲ್ಲಿ ಇದು ಒಂದು.

ವಾಸ್ತವಾಂಶ #3
ಸಾಮಾನ್ಯವಾದ ಸೌಜನ್ಯ ತೋರಿಸುವ ವಿಧಾನವು ತುಂಬಾ ಪ್ರಾಮುಖ್ಯತೆ ಪಡೆದಿರುತ್ತದೆ. ಕೆಲವೊಮ್ಮೆ ಇದು ಸಾಮಾನ್ಯವೆಂದು ಇತರರಿಗೆ ಅನಿಸದೆ ಇರಬಹುದು.

ವಾಸ್ತವಾಂಶ #4
ಮೊದಲ ದಿನ ಕೆಲಸಕ್ಕೆ ಸೇರಿದ ಕ್ಯಾಶಿಯರ್ ಜತೆ ನೀವು ತಾಳ್ಮೆಯಿಂದ ವರ್ತಿಸುವ ರೀತಿ. ಇದನ್ನು ಪ್ರತಿಯೊಬ್ಬರು ಕಲಿತುಕೊಳ್ಳಬೇಕು.

ವಾಸ್ತವಾಂಶ #5
ಸ್ನೇಹಿತರ ಸಂಭ್ರಮದಲ್ಲಿ ನೀವು ಭಾಗಿಯಾಗಿ ಅವರೊಂದಿಗೆ ಸಮಯವನ್ನು ಕಳೆಯುವ ರೀತಿ ಮತ್ತು ಅದರನ್ನು ನೋಡಿಕೊಳ್ಳುವ ರೀತಿಯು ಈ ಗುಣಲಕ್ಷಣಗಳಲ್ಲಿ ಒಂದಾಗಿದೆ.

ವಾಸ್ತವಾಂಶ #6
ಹೊಸ ಸ್ನೇಹಿತರನ್ನು ಸಂಪಾದಿಸುವಾಗ ಅವರು ನಿಮಗೆ ವರ್ಷಗಳಿಂದಲೂ ಪರಿಚಯವಿದೆ ಎಂದು ಅನಿಸಿದರೆ ಆಗ ನಿಜವಾಗಿಯೂ ಆಕರ್ಷಣೀಯವಾಗಿರುತ್ತದೆ.



Click it and Unblock the Notifications
