ಪ್ರೀತಿ ವಿಶ್ವಾಸವೇ ಸುಖ ಸಂಸಾರದ ಕಣ್ಣು..!

ಮನುಷ್ಯನ ಜೀವನದಲ್ಲಿ ಸಂಬಂಧಗಳು ಹೆಚ್ಚು ಪರಿಣಾಮವನ್ನು ಬೀರುತ್ತವೆ. ಹೆತ್ತವರ ಮಕ್ಕಳ ಸಂಬಂಧ, ಒಡನಾಡಿಗಳ ಸ್ನೇಹವೆಂಬ ಪವಿತ್ರ ಸಂಬಂಧ, ಪ್ರೇಮಿಗಳ ಪ್ರೀತಿಯ ಸಂಬಂಧ, ಗಂಡ ಹೆಂಡತಿಯರ ನಡುವಿನ ಅನುಬಂಧ ಹೀಗೆ ನಮ್ಮ ಜೀವನದಲ್ಲಿ ಸಂಬಂಧಗಳು ಬಹು ಮುಖ್ಯ ಪಾತ್ರವನ್ನು ವಹಿಸುತ್ತವೆ. ಸಂಬಂಧವನ್ನು ಬೆಳೆಸುವುದಕ್ಕಿಂತ ಅದನ್ನು ಉಳಿಸುವಲ್ಲಿ ನಮ್ಮ ಲಕ್ಷ್ಯ ಇರಬೇಕು. ಹಲವಾರು ವರುಷ ಪ್ರೀತಿ ಮಾಡಿ ಮೆಚ್ಚಿ ವಿವಾಹವಾಗಿ ಕೊನೆಗೆ ವಿಚ್ಛೇದನವೆಂಬ ಅಂತಿಮ ಗೆರೆಯನ್ನು ದಾಟುವ ಸಂಬಂಧಗಳ ಬಗ್ಗೆ ನೀವು ನೋಡಿರುತ್ತೀರಿ ಅಥವಾ ಕೇಳಿರುತ್ತೀರಿ.

ಹೌದು, ದಾಂಪತ್ಯವೆನ್ನುವುದು ಸಾಧಾರಣವಾದ ವಿಷಯವಲ್ಲ. ದಾಂಪತ್ಯ ಜೀವನವು ಒಂದೇ, ಒಲಂಪಿಕ್ ಜ್ಯೋತಿಯನ್ನು ಹಿಡಿದು ದೇಶವನ್ನು ಪ್ರತಿನಿಧಿಸುವುದು ಒಂದೇ...! ಏಕೆಂದರೆ ಇವೆರಡಕ್ಕೂ ಬದ್ಧತೆ, ಕಠಿಣ ಪರಿಶ್ರಮ ಮತ್ತು ಭಾವನಾತ್ಮಕ ಸದೃಢತೆ ಬೇಕಾಗುತ್ತದೆ. ಆಗಲೇ ಪ್ರೀತಿ ಎಂಬ ಜ್ಯೋತಿಯನ್ನು ಸದಾ ಬೆಳಗಲು ಸಾಧ್ಯವಾಗುತ್ತದೆ. ಹಾಗಾಗಿ ವೈವಾಹಿಕ ಸಂಬಂಧವನ್ನು ಇಷ್ಟು ಸುಲಭವಾಗಿ ಕೊಂಡೊಯ್ಯಲು ಸಾಧ್ಯವಿಲ್ಲ. ಅಪನಂಬಿಕೆಗೆ ಟೂ ಬಿಡಿ, ಸುಖ ಸಂಸಾರಕ್ಕೆ ಜೈ ಅನ್ನಿ!

ಉತ್ತಮ ಬಾಂಧವ್ಯವೇ ಒಮ್ಮೊಮ್ಮೆ ಕಹಿಯಾದರೆ ಅದಕ್ಕಿಂತ ಹೆಚ್ಚಿನ ದುಃಖ ಬೇರೊಂದಿಲ್ಲ ಎಂದೇ ಹೇಳಬಹುದು. ಅದಕ್ಕಾಗಿ ನಾವಿಲ್ಲಿ ಒಂದು ಚೆಕ್‍ಲಿಸ್ಟ್ ನೀಡಿದ್ದೇವೆ. ಇದನ್ನು ಇಟ್ಟು ಕೊಂಡು ನಿಮ್ಮ ಪ್ರಸ್ತುತ ಜೀವನದ ಸ್ವಯಂ ಮೌಲ್ಯಮಾಪನವನ್ನು ಮಾಡಿಕೊಳ್ಳುವುದರ ಜೊತೆಗೆ, ಪ್ರೀತಿ ವಿಶ್ವಾಸವದ ಮೂಲಕ ನಿಮ್ಮ ಸಂಬಂಧವನ್ನು ಮತ್ತಷ್ಟು ಗಟ್ಟಿಯಾಗಿಸಿಕೊಳ್ಳಿ...

ಪ್ರತಿಯೊಬ್ಬರಿಗು ಕಷ್ಟ ಕಾಲಗಳು ಬರುತ್ತವೆ

ಪ್ರತಿಯೊಬ್ಬರಿಗು ಕಷ್ಟ ಕಾಲಗಳು ಬರುತ್ತವೆ

ನಿಮ್ಮ ಪ್ರಿಯಕರನ ಕೆಟ್ಟ ಮೂಡನ್ನು ನಿಮಗೆ ವಿರುದ್ಧವಾಗಿ ಬಳಸಿಕೊಳ್ಳುವುದು ಅಷ್ಟೇನು ಒಳ್ಳೆಯದಲ್ಲ, ಅದರ ಅವಶ್ಯಕತೆಯು ನಿಮಗಿರುವುದಿಲ್ಲ. ಅದಕ್ಕೂ ಮೇಲಾಗಿ ಪ್ರತಿಯೊಬ್ಬರ ಜೀವನದಲ್ಲಿ ಕಷ್ಟಕಾಲಗಳು ಬಂದೆ ಬರುತ್ತವೆ. ಅದು ಮುಂದೆ ಕೆಲವೊಂದು ಸಂಕೀರ್ಣ ಸನ್ನಿವೇಶಗಳಿಗೆ ಎಡೆಮಾಡಿಕೊಡುವುದು ಸಹಜ. ನಿಮ್ಮ ಜೀವನದ ಕೆಲವೊಂದು ಕಾಲ ಘಟ್ಟಗಳಲ್ಲಿ ನೀವೂ ಕೆಲವೊಂದು ಒತ್ತಡಗಳು ಕಂಡು ಬರುತ್ತವೆ. ನೀವು ನಿಮ್ಮ ಸಂಗಾತಿಯ ಎಲ್ಲಾ ಕಾರ್ಯಗಳಲ್ಲಿ ತೊಡಗಿಕೊಳ್ಳಲು ಸಾಧ್ಯವಿಲ್ಲ. ಏಕೆಂದರೆ ಅವರ ವಿಚಾರದಲ್ಲಿ ಅಲ್ಲಿ ಏನು ನಡೆದಿದೆಯೋ ನಿಮಗೆ ಗೊತ್ತಿರಬಹುದು ಅಥವಾ ಗೊತ್ತಿಲ್ಲದೆಯು ಇರಬಹುದು. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಪ್ರತಿಯೊಬ್ಬರಿಗು ಕಷ್ಟ ಕಾಲಗಳು ಬರುತ್ತವೆ

ಪ್ರತಿಯೊಬ್ಬರಿಗು ಕಷ್ಟ ಕಾಲಗಳು ಬರುತ್ತವೆ

ಅದಕ್ಕಾಗಿ ನಿಮ್ಮ ಸಂಗಾತಿಯೇ ಇದಕ್ಕೆ ವಿರುದ್ಧವಾಗಿ ಹೋರಾಡಲು ಬಿಟ್ಟು ಬಿಡಿ. ಇಡೀ ಸನ್ನಿವೇಶವನ್ನು ನೀವು ವೈಯುಕ್ತಿಕವಾಗಿ ಪರಿಗಣನೆಗೆ ತೆಗೆದುಕೊಳ್ಳಬೇಡಿ. ಆದರೆ ನೈತಿಕ ಬೆಂಬಲವೊ ಅಥವಾ ಸಲಹೆ ಸೂಚನೆಗಳು ಬೇಕಾಗಿದ್ದಲ್ಲಿ, ಧನಾತ್ಮಕ ನೆಲೆಗಟ್ಟಿನಲ್ಲಿ ಅಗತ್ಯವಾಗಿ ಒದಗಿಸಿ.

ಸಾರ್ವಜನಿಕವಾಗಿ ಜಗಳವಾಡಬೇಡಿ

ಸಾರ್ವಜನಿಕವಾಗಿ ಜಗಳವಾಡಬೇಡಿ

ಎಲ್ಲರಿಗು ತಿಳಿದಿರುವ ಸತ್ಯವೆಂದರೆ ಸಂಬಂಧಗಳ ಒಂದಲ್ಲ ಒಂದು ಭಿನ್ನಾಭಿಪ್ರಾಯದ ಸಲುವಾಗಿ ಮುರಿದುಬೀಳುತ್ತದೆ ಎಂಬುದು. ಇದು ಒಂದೇ ಬಾರಿ ಉದ್ಭವಿಸುವ ಭಿನ್ನಾಭಿಪ್ರಾಯದ ಸಲುವಾಗಿರಬಹುದು ಅಥವಾ ಪದೇ ಪದೇ ಉದ್ಭವಿಸುವ ಭಿನ್ನಾಭಿಪ್ರಾಯದ ಸಲುವಾಗಿರಬಹುದು. ಎಲ್ಲಾ ದಂಪತಿಗಳ ಪ್ರಕಾರ ಇದು ದಾಂಪತ್ಯದ ಅವಿಭಾಜ್ಯ ಅಂಗವಂತೆ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ಸಾರ್ವಜನಿಕವಾಗಿ ಜಗಳವಾಡಬೇಡಿ

ಸಾರ್ವಜನಿಕವಾಗಿ ಜಗಳವಾಡಬೇಡಿ

ಹಾಗೆಂದು ಈ ಮನಸ್ತಾಪವನ್ನು ಸಾರ್ವಜನಿಕವಾಗಿ ಜಗಳವಾಡಲು ಬಳಸಿಕೊಳ್ಳಬೇಡಿ. ಜಗಳವಾಡಲು ನೂರೊಂದು ಕಾರಣಗಳು ಇದ್ದರೆ, ಕೂಡಿ ಬಾಳಲು ಕೋಟಿ ಕಾರಣಗಳು ಇರುತ್ತವೆ ಎಂಬುದನ್ನು ಮರೆಯಬೇಡಿ. ಯಾವುದೇ ಕಾರಣಕ್ಕು ನಿಮ್ಮ ನಡುವಿನ ಅಸಮಾಧಾನವನ್ನು ಬೀದಿಗೆ ತರಬೇಡಿ, ಯಾವುದೇ ಭಿನ್ನಾಭಿಪ್ರಾಯಗಳಿದ್ದರು ಅದನ್ನು ಕುಳಿತು ಮನೆಯಲ್ಲಿ ಚರ್ಚೆ ಮಾಡಿ ಬಗೆಹರಿಸಿಕೊಳ್ಳಿ

ಕ್ಷಮಿಸುವುದು ಅತ್ಯಂತ ದೊಡ್ಡ ವಿಚಾರ

ಕ್ಷಮಿಸುವುದು ಅತ್ಯಂತ ದೊಡ್ಡ ವಿಚಾರ

ಒಬ್ಬರ ತಪ್ಪನ್ನು ಮತ್ತೊಬ್ಬರು ಕ್ಷಮಿಸುವಂತಹ ದಂಪತಿಗಳು ತುಂಬಾ ದೀರ್ಘಕಾಲ ಜೊತೆಯಾಗಿರುತ್ತಾರೆ. ಪ್ರಪಂಚದಲ್ಲಿ ಹುಟ್ಟಿದ ಪ್ರತಿಯೊಬ್ಬನು ಪರಿಪೂರ್ಣನಲ್ಲ ಎಂಬುದನ್ನು ಮರೆಯಬಾರದು. ದಾಂಪತ್ಯದಲ್ಲಿ ಇಬ್ಬರು ತಪ್ಪುಗಳನ್ನು ಮಾಡುತ್ತೀರಿ, ಕ್ಷಮಿಸುವ ದೊಡ್ಡತನವನ್ನು ಮಾಡಿ. ಕಳೆದು ಹೋದದ್ದು, ಕಳೆದು ಹೋಯಿತು ಎಂಬುದನ್ನು ಮೊದಲು ಅರಿಯಿರಿ. ಒಬ್ಬರನ್ನೊಬ್ಬರು ವಿಶ್ವಾಸಕ್ಕೆ ತೆಗೆದುಕೊಳ್ಳಿ, ನಿಮ್ಮ ಸಂಗಾತಿಯ ಎಲ್ಲಾ ನ್ಯೂನತೆಗಳ ಜೊತೆಗೆ ಅವರನ್ನು ಒಪ್ಪಿಕೊಳ್ಳಿ. ಒಂದು ವೇಳೆ ನೀವು ಹಿಂದಿನ ಕೆಲವು ತಪ್ಪುಗಳನ್ನು ನಿಮ್ಮ ಆಯುಧಗಳಾಗಿ ಹಿಡಿದುಕೊಂಡರೆ, ನಿಮ್ಮ ಈಗಿನ ಪ್ರೀತಿಯು ಬೆಂದು ಹೋಗುತ್ತದೆ. ಅದಕ್ಕಾಗಿ ಪ್ರೀತಿಯನ್ನು ಅನುಭವಿಸಲು ಹಳೆಯ ತಪ್ಪುಗಳನ್ನು ಕ್ಷಮಿಸಿಬಿಡಿ. ಕ್ಷಮಿಸುವುದಕ್ಕಿಂತ ದೊಡ್ಡ ಶಿಕ್ಷೆಯಿಲ್ಲ.

ಹಿಂದೆ ನಡೆದುಹೋದ ಸಂಗತಿಗಳನ್ನು ತರಬೇಡಿ

ಹಿಂದೆ ನಡೆದುಹೋದ ಸಂಗತಿಗಳನ್ನು ತರಬೇಡಿ

ಹಿಂದೆ ನಡೆದುಹೋದ ಸಂಗತಿಗಳನ್ನು ಮತ್ತೆ ಚರ್ಚಿಸಿದರೆ ಅನಗತ್ಯ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಬಹಳ ದಿನಗಳ ಅಥವ ವಾರಗಳ ಅಥವ ತಿಂಗಳಗಳ ಹಿಂದೆ ಜರುಗಿದ ಕಲಹಗಳ ಬಗ್ಗೆ ಹೊಡೆದಾಡುವುದು ಖಂಡಿತವಾಗಿಯೂ ಒಂದು ಅನಗತ್ಯ ಕಲ್ಪನೆ. ಹಾಗೆ ಮಾಡಿದಾಗ ಅದು ಸಂಬಂಧಗಳನ್ನು ನಾಶಮಾಡುತ್ತದೆ ಮತ್ತು ಒಳ್ಳೆಯ ಸಂಬಂಧಗಳನ್ನು ಮುಂದುವರಿಸಲು ಅಡ್ಡಬರುತ್ತದೆ.

ಕರುಣೆಯು ಪವಾಡಗಳನ್ನು ಮಾಡುತ್ತದೆ

ಕರುಣೆಯು ಪವಾಡಗಳನ್ನು ಮಾಡುತ್ತದೆ

'ಕರುಣೆಯೆ ಕುಟುಂಬದ ಕಣ್ಣು" ಎಂಬ ಸಿನಿಮಾ ಬಂದಿತ್ತು. ನಿಜ ಕರುಣೆ ಕುಟುಂಬದ ಕಣ್ಣಾಗಿದ್ದರೆ ಚೆನ್ನ. ಇತ್ತೀಚಿನ ದಿನಗಳಲ್ಲಿ ಕರುಣೆ ಎಂಬುದು ಕಣ್ಮರೆಯಾಗಿ ಬಿಟ್ಟಿದೆ. ಅದಕ್ಕೆ ಆಧುನಿಕ ಜೀವನದ ಒತ್ತಡವಿರಬಹುದು, ಅಥವಾ ವೈಯುಕ್ತಿಕ ಕಾರಣಗಳು ಇರಬಹುದು. ಕರುಣೆ ತೋರಿಸಲು ಕಾಸು ಚೆಲ್ಲಬೇಕಾಗಿಲ್ಲ. ಇದು ಉಚಿತ, ಉಚಿತ, ಈ ಮಾತು ಖಚಿತ. ಈ ಉಚಿತವಾಗಿ ದೊರೆಯುವ ಕರುಣೆಯನ್ನು ನಿಮ್ಮ ಕುಟುಂಬದ ಸದಸ್ಯರ ಮೇಲೆ ವಿಶೇಷವಾಗಿ ನಿಮ್ಮ ಸಂಗಾತಿಯ ಮೇಲೆ ತೋರಿಸಿ, ಆಗ ನೋಡಿ ನಿಮ್ಮ ಸಂಬಂಧ ಹೇಗೆ ಗಾಢವಾಗುತ್ತದೆಯೆಂದು. ಕರುಣೆಯು ಒಬ್ಬರ ಮೇಲಿನ ಕಾಳಜಿಯ ಪ್ರತೀಕ ನಿಮ್ಮ ಸಹೃದಯತೆಯು ನಿಮ್ಮ ಸಂಗಾತಿಯ ಹೃದಯವನ್ನು ಅನಾಯಾಸವಾಗಿ ಗೆಲ್ಲುತ್ತದೆ.

Story first published: Tuesday, October 13, 2015, 15:26 [IST]
X
Desktop Bottom Promotion