Latest Updates
-
ಮಳೆಗಾಲದಲ್ಲಿ ಹಿರಿಯರು ಜಾರಿ ಬೀಳುವ ಆತಂಕವೇ? ಸುರಕ್ಷಿತವಾಗಿರಲು ಈ 12 ನಿಮಿಷಗಳ ಚೇರ್-ಯೋಗ ಟ್ರೈ ಮಾಡಿ! -
ಹಿರಿಯರ ಆರೋಗ್ಯಕ್ಕೆ ದಿನಕ್ಕೆ 12 ನಿಮಿಷದ 'ಚೇರ್ ಯೋಗ': ಚೈತನ್ಯ ಮತ್ತು ಸಮತೋಲನಕ್ಕೆ ಇದುವೇ ಮಂತ್ರ! -
ಫ್ಯಾಮಿಲಿ ವಾಟ್ಸಾಪ್ ಗ್ರೂಪ್ನಲ್ಲಿ ರಾಜಕೀಯ ಜಗಳವೇ? ಈ ಟಿಪ್ಸ್ ಪಾಲಿಸಿ, ಸಂಬಂಧ ಉಳಿಸಿಕೊಳ್ಳಿ! -
ಓಣಂ ಹಬ್ಬದ ಸಂಭ್ರಮ: ಹೂವಿನ ಬೆಲೆ ಏರಿಕೆ ನಡುವೆ ಕಡಿಮೆ ದರದಲ್ಲಿ ಖರೀದಿಸಲು ಇಲ್ಲಿವೆ ಟಿಪ್ಸ್! -
ಸಸ್ಯಜನ್ಯ ಹಾಲು: ತೂಕ ಇಳಿಕೆ ಮತ್ತು ಮಧುಮೇಹ ನಿಯಂತ್ರಣಕ್ಕೆ ಇದುವೇ ಬೆಸ್ಟ್ ಪರ್ಯಾಯ! -
ಸಕ್ಕರೆ ಬೆಲೆ ಏರಿಕೆ ಬಿಸಿ: ಹಬ್ಬದ ಸಿಹಿ ಬಜೆಟ್ ಉಳಿಸಲು ಇಲ್ಲಿದೆ 300 ರೂಪಾಯಿಯ ಸ್ಮಾರ್ಟ್ ಟಿಪ್ಸ್ -
ವರಮಹಾಲಕ್ಷ್ಮೀ ವ್ರತದ ಶಾಸ್ತ್ರೋಕ್ತ ವಿಧಾನ ಮತ್ತು ಪೂಜಾ ನಿಯಮಗಳು -
ವರಮಹಾಲಕ್ಷ್ಮೀ ಹಬ್ಬದ ಸಂಭ್ರಮಕ್ಕೆ ಬೆಲೆ ಏರಿಕೆಯ ಬಿಸಿ: ಕೆ.ಆರ್. ಮಾರುಕಟ್ಟೆಯಲ್ಲಿ ಗಗನಕ್ಕೇರಿದ ಹೂವು-ಹಣ್ಣುಗಳ ದರ -
BWF ವಿಶ್ವ ಚಾಂಪಿಯನ್ಷಿಪ್: ದೆಹಲಿಯಲ್ಲಿ ಭಾರತೀಯ ಆಟಗಾರರ ಅಬ್ಬರ, ಅಭಿಮಾನಿಗಳಿಗೆ ಇಲ್ಲಿದೆ ವಿಶೇಷ ಗೇಮ್ ಪ್ಲಾನ್! -
ವರಮಹಾಲಕ್ಷ್ಮಿ ಹಬ್ಬದ ದಿನಾಂಕದ ಗೊಂದಲ: ಆಗಸ್ಟ್ 21 ಅಥವಾ 28? ಇಲ್ಲಿದೆ ಸ್ಪಷ್ಟ ಮಾಹಿತಿ!
ದಾಂಪತ್ಯದಲ್ಲಿ ನಂಬಿಕೆಗೆ ಏಟಾದರೆ ಸರಿಪಡಿಸಲಾದೀತೇ?
ನಂಬಿಕೆ ಇರುವ ಕಡೆ ಅನುಮಾನ ಇರುವುದಿಲ್ಲ, ಅನುಮಾನ ಇರುವ ಕಡೆ ನಂಬಿಕೆ ಇರುವುದಿಲ್ಲ- ಎಂಬ ನಾಣ್ಣುಡಿ ಚಾಲ್ತಿಯಲ್ಲಿದೆ. ಸಂಬಂಧದಲ್ಲಿ ಒಂದೊಮ್ಮೆ ಮೋಸ ಸಂಭವಿಸಿದಲ್ಲಿ, ಅದನ್ನು ನಿವಾರಿಸಿ ಹೇಗೆ ನಂಬಿಕೆಯನ್ನು ಮತ್ತೆ ತರಬೇಕು ಎಂಬುದು ಅತ್ಯಂತ ಕಷ್ಟದ ಕೆಲಸ. ಆದರೂ ಇದನ್ನು ಮತ್ತೆ ನಿರ್ಮಾಣ ಮಾಡಬಹುದು. ಆದರೆ ಅದು ಒಂದೇ ಕ್ಷಣದಲ್ಲಿ ನಡೆಯುವಂತದ್ದಲ್ಲ. ಅದಕ್ಕೆ ಸ್ವಲ್ಪ ಸಮಯ ತೆಗೆದುಕೊಳ್ಳುತ್ತದೆ.
ಅದನ್ನು ಅತ್ಯಂತ ನಾಜೂಕಿನಿಂದ ಮಾಡಬೇಕಾಗುತ್ತದೆ. ಏಕೆಂದರೆ ಸಂಬಂಧವು ಒಂದು ರಹಸ್ಯವಾದ ಅನೈತಿಕ ಸಂಬಂಧದಿಂದ, ನಿಂದನೆಯಿಂದ ಅಥವಾ ಯಾವುದಾದರೂ ಒಂದು ಅಚಾತುರ್ಯವಾದ ಘಟನೆಯಿಂದ ನಂಬಿಕೆಯನ್ನು ಕಳೆದುಕೊಳ್ಳುತ್ತದೆ. ಕೆಲವೊಮ್ಮೆ ಸಂಬಂಧವು ಈ ನೋವಿನ ಘಟನೆಯ ನಂತರ ಮತ್ತಷ್ಟು ಗಟ್ಟಿಗೊಳ್ಳುತ್ತದೆ. ಆದರೆ ಕೆಲವೊಮ್ಮೆ ಇದಕ್ಕಾಗಿ ಸಿಕ್ಕಾಪಟ್ಟೆ ಕಷ್ಟ ಮತ್ತು ಕ್ಷಮೆಯನ್ನು ನಿಮ್ಮ ಸಂಗಾತಿ ತೋರಬೇಕಾಗುತ್ತದೆ. ಪ್ರಿಯತಮನ ಮಾತಿನ ಮೇಲೆ ನಂಬಿಕೆ ಬರುತ್ತಿಲ್ಲವೇ?

ಒಂದು ವೇಳೆ ನೀವು ತಪ್ಪು ಮಾಡಿದ್ದಲ್ಲಿ, ಅದನ್ನು ಮೊದಲು ನೀವು ಒಪ್ಪಿಕೊಳ್ಳಿ. ಪರಿಸ್ಥಿತಿ ತಿಳಿಗೊಳ್ಳಲು ಬಿಡಿ, ಅನುಕಂಪವನ್ನು ಅಪೇಕ್ಷಿಸುವ ನೀವು, ಮುಕ್ತವಾಗಿ, ತೆರೆದ ಮನಸ್ಸಿನಿಂದ ನಿಮ್ಮ ಜೀವನದಲ್ಲಿ ನಡೆದ ಈ ಘಟನೆಗೆ ಕಾರಣವನ್ನು ತಿಳಿಸಿ. ಅದು ನಂಬುವಂತ ಕಾರಣಗಳಾಗಿರಲಿ, ನಾಟಕೀಯ ನಡೆಗಳನ್ನು ಮಾಡಬೇಡಿ. ಪ್ರಾಮಾಣಿಕವಾಗಿ ಇದ್ದು ಕ್ಷಮಿಸು ಎಂದು ಹೇಳುವುದು ಒಳ್ಳೆಯದು. ಆದರೆ ಇದರಿಂದ ನಿಮ್ಮ ಮೇಲಿನ ನಂಬಿಕೆ ಮತ್ತೆ ಬರಲು ತುಂಬಾ ಕಾಲ ತೆಗೆದುಕೊಳ್ಳುತ್ತದೆ. ನಿಮ್ಮ ನಡುವೆ ಮಾತು ಕತೆ ನಡೆಯುತ್ತಿದ್ದಲ್ಲಿ, ಮುಕ್ತವಾಗಿ ಮಾತನಾಡಿ ಕಾರಣಗಳನ್ನು ಹೇಳಿ.
ಪರಿಸ್ಥಿತಿ ಹೇಗಾದರೂ ಮಾಡಿ ಮತ್ತೆ ಯಥಾಸ್ಥಿತಿಗೆ ಬರುವಂತೆ ಮಾಡಿ. ಕೆಲವೊಮ್ಮೆ ನಿಮ್ಮ ಸಂಗಾತಿಯು ನಿಮ್ಮ ಮಾತುಗಳನ್ನು ಕೇಳದೆ ಇರಬಹುದು. ಇಂತಹ ಪರಿಸ್ಥಿತಿಯಲ್ಲಿ ನಿಮ್ಮ ನೆರವಿಗೆ ಬರಲು ಯಾವುದೇ ಸೂತ್ರವು ಇಲ್ಲ ಎಂಬುದು ದುಃಖಕರವಾದ ವಿಚಾರ. ಆದರೂ ಈ ಕೆಳಗಿನ ಅಂಶಗಳನ್ನು ಪಾಲಿಸಿ. ಅವು ಏನು ಎಂದು ತಿಳಿಯಲು ಮುಂದೆ ಓದಿ...
ಮೊದಲು ನಿಮ್ಮನ್ನು ನೀವು ಅರ್ಥ ಮಾಡಿಕೊಳ್ಳಿ
ನಿಮ್ಮನ್ನು ನೀವು ಅರ್ಥ ಮಾಡಿಕೊಳ್ಳಲಿಲ್ಲವಾದಲ್ಲಿ, ನಿಮ್ಮ ಸಂಗಾತಿಯನ್ನು ಹೇಗೆ ಅರ್ಥ ಮಾಡಿಕೊಳ್ಳುತ್ತೀರಾ? ಆದ್ದರಿಂದ ನಿಮ್ಮ ವರ್ತನೆಗಳನ್ನು ಚೆನ್ನಾಗಿ ಅರ್ಥ ಮಾಡಿಕೊಳ್ಳಿ. ನಿಮ್ಮ ಈ ತಪ್ಪಿನಿಂದ ನೀವು ಕಲಿತ ಪಾಠಕ್ಕೆ ಧನ್ಯವಾದ ಹೇಳಿ. ಇದನ್ನು ಬಗೆಹರಿಸುವ ಮತ್ತು ಮುಂದೆ ಈ ತಪ್ಪು ಮರುಕಳಿಸದಂತೆ ತಡೆಯುವ ಕುರಿತು ಆಲೋಚನೆ ಮಾಡಿ.
ಆಪ್ತ ಸಲಹೆಯ ಬೆಂಬಲವನ್ನು ಪಡೆಯಿರಿ
ನಿಮ್ಮ ಮಟ್ಟಿಗೆ ನೀವೇ ಈ ಪರಿಸ್ಥಿತಿಯನ್ನು ನಿಭಾಯಿಸಲು ಹೋಗುವ ಮುನ್ನ, ಹಿರಿಯರಿಂದ ಅಥವಾ ಸ್ನೇಹಿತರಿಂದ ಅಥವಾ ಆಪ್ತ ಸಲಹಾಗಾರರಿಂದ ನೆರವನ್ನು ಪಡೆಯಿರಿ. ಇಲ್ಲಿ ನಮ್ಮ ಬುದ್ಧಿಗಿಂತ ಇತರರ ಕಿವಿಮಾತು ಹೆಚ್ಚು ಕೆಲಸ ಮಾಡುತ್ತದೆ. ಜೊತೆಗೆ ಇಬ್ಬರ ನಡುವಿನ ಅರ್ಥ ಮಾಡಿಕೊಳ್ಳುವ ಪ್ರಕ್ರಿಯೆಗೆ ಮತ್ತೆ ಚಾಲನೆ ಸಿಕ್ಕುತ್ತದೆ. ಏಕೆ ಹೀಗೆ ಆಯಿತು ಎನ್ನುವುದಕ್ಕಿಂತ, ಮುಂದೆ ಹೇಗಿರಬೇಕು ಎಂಬುದಕ್ಕೆ ಆದ್ಯತೆ ನೀಡಿ.
ಜೀವನದಲ್ಲಿ ಏರು ಪೇರುಗಳು ಇರುವುದು ಸಹಜ ಎಂದು ಪರಿಗಣಿಸಿ
ಎಲ್ಲರ ಜೀವನವು ಸುಗಮವಾಗಿರುವುದಿಲ್ಲ. ಆಗುವ ಅಚಾತುರ್ಯಗಳನ್ನು ತಪ್ಪಿಸಲು ಸಾಧ್ಯವಿಲ್ಲ. ತಪ್ಪನ್ನು ಕ್ಷಮಿಸಿ, ಮುಂದೆ ಚೆನ್ನಾಗಿ ಬಾಳಲು ಅವಕಾಶ ಇರುತ್ತದೆ ಎಂದು ಮನಗಾಣಿರಿ. ಸಂಬಂಧದಲ್ಲಿ ಮತ್ತೆ ಮೋಸ ಮಾಡದೆ ಜವಾಬ್ದಾರಿಯಿಂದ ನಡೆದುಕೊಳ್ಳಿ.
ಬದಲಾವಣೆಗೆ ಸಿದ್ಧರಾಗಿ
ನಿಮ್ಮ ಸಂಗಾತಿ ನಿಮ್ಮಿಂದ ಏನು ಬಯಸುತ್ತಾರೆ ಎಂದು ತಿಳಿದುಕೊಳ್ಳಲು ಪ್ರಯತ್ನಿಸಿ. ಅದನ್ನು ನೀಡಿ, ಅವರಿಗೆ ಮತ್ತಷ್ಟು ಸುರಕ್ಷಿತವಾದ ಭಾವನೆಯನ್ನು ನೀಡಿ. ಅವರಿಗೆ ನಿಮ್ಮ ಮೇಲೆ ನಂಬಿಕೆ ಮತ್ತೆ ಬರುವಂತೆ ಮಾಡಿ. ಒಳ್ಳೆಯದಾಗಲಿ...



Click it and Unblock the Notifications
