Latest Updates
-
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ
ದಾಂಪತ್ಯದಲ್ಲಿ ರಕ್ಷಣೆ ನೀಡಬೇಕಿದ್ದವರೇ ಹಿಂಸೆಗೆ ನಿಂತರೆ?
ಇನ್ನೊಬ್ಬರಿಗೆ ಹಿಂಸೆ ನೀಡುವುದು ಸಲ್ಲದು ಎಂದು ಎಂದು ಎಲ್ಲಾ ಧರ್ಮಗಳೂ ಸಾರುತ್ತವೆ. ಆದರೆ ಹಿಂಸೆ ನೀಡುವವರು ನಮ್ಮ ಆಪ್ತರೇ ಆಗಿದ್ದರೆ, ಯಾರು ನಮಗೆ ರಕ್ಷಣೆ ನೀಡಬೇಕಿತ್ತೋ ಅವರೇ ಹಿಂಸೆಗೆ ನಿಂತರೆ? ಇದನ್ನೇ ಗೃಹ ಹಿಂಸಾಚಾರ ಎಂದು ಕರೆಯಬಹುದು. ನಾಲ್ಕು ಗೋಡೆಗಳ ನಡುವೆ ಒಬ್ಬರು ಇನ್ನೊಬ್ಬರಿಗೆ ನೀಡುವ ಹಿಂಸೆಯ ಈ ರೂಪದ ವ್ಯಾಪ್ತಿಯನ್ನು ಕೊಂಚ ಹೆಚ್ಚಿಸಿ ಮನೆಯೊಳಗೆ ಅಥವಾ ದೇಶದೊಳಗೆ ತಮ್ಮವರಿಗೇ ಹಿಂಸೆಯಾಗುವಂತೆ ಮಾಡಿದರೆ ಅದು ದೇಶೀಯ ಹಿಂಸಾಚಾರವಾಗುತ್ತದೆ.

ಗೃಹ ಹಿಂಸಾಚಾರ ದೈಹಿಕವಾಗಿ, ಲೈಂಗಿಕವಾಗಿ, ನೋವು ಕೊಟ್ಟು ಆನಂದ ಪಡುವ ವಿಕೃತ ರೂಪದಲ್ಲಿ, ಬೈಗುಳದ ಭಾಷೆ ಉಪಯೋಗಿಸುವ ಮೂಲಕ ಅಥವಾ ಇನ್ನೊಬ್ಬರ ಮನಸ್ಸು ನೋಯುವ ಇನ್ನಾವುದೇ ರೂಪದ ಹಿಂಸೆಯಾಗಿರಬಹುದು. ಕೆಲವೊಮ್ಮೆ ಈ ಹಿಂಸೆ ನಾಲ್ಕು ಗೋಡೆಗಳ ಹೊರಗೆ ಆಗುವುದಕ್ಕಿಂತ ಹೆಚ್ಚು ಭೀಕರವಾಗಿರುತ್ತದೆ.
ಗೃಹ ಹಿಂಸಾಚಾರಕ್ಕೆ ಕಾರಣವೇನು? ಒಂದು ಸಮೀಕ್ಷೆಯ ಪ್ರಕಾರ ಒಂದು ಮನೆಯ ಸದಸ್ಯರ ನಡುವೆ ಆಗುವ ಹಿಂಸಾಚಾರಕ್ಕೆ ಮುಖ್ಯವಾಗಿ ಮನೆಯ ಒಡೆತನ, ಹಣ ಅಥವಾ ಕೆಲವರಿಗೆ ಇನ್ನೊಬ್ಬರಿಗೆ ಸುಮ್ಮಸುಮ್ಮನೇ ನೋವು ಕೊಟ್ಟು ಆನಂದ ಪಡುವ ವಿಕೃತ ಮನೋಭಾವವೇ ಇರಬಹುದು. ಕೆಲವೊಮ್ಮೆ ಯಾವುದೋ ಹಳೆಯ ವಿಷಯದ ಸಿಟ್ಟಿನ ಸೇಡು ತೀರಿಸಿಕೊಳ್ಳುವ ಕ್ರಮವೂ ಆಗಿರುತ್ತದೆ. ಕೆಲವರಂತೂ ಸಮಾಜದಲ್ಲಿ ಗಣ್ಯರಂತೆ ಸೋಗು ಹಾಕುತ್ತಾ ಮನೆಯೊಳಗೆ ಬಂದೊಡನೆಯೇ ವ್ಯಾಘ್ರಗಳಾಗಿ ಪರಿವರ್ತಿತರಾಗುತ್ತಾರೆ.
ಕೂಡು ಕುಟುಂಬಗಳು ಒಡೆದು ಒಂಟಿಮನೆಗಳೇ ಹೆಚ್ಚಾಗಿರುವ ಇಂದಿನ ದಿನಗಳಲ್ಲಿಯೂ ಗೃಹ ಹಿಂಸಾಚಾರದ ಪ್ರಕರಣಗಳು ಗಾಬರಿ ಪಡಿಸುವಂತಹದ್ದಾಗಿದೆ. ಇದಕ್ಕೆ ಸಂಬಂಧದಲ್ಲಿರುವ ಇಬ್ಬರ ನಡುವೆ ಇರುವ ಕೀಳರಿಮೆ ಅಥವಾ ಹಿರಿಮೆಯ ಮನೋಭಾವ ಇನ್ನೊಬ್ಬರನ್ನು ತೆಗಳುವ ಮಟ್ಟಕ್ಕಿಳಿಯುವುದೇ ಪ್ರಮುಖ ಕಾರಣ ಎಂದು ತಜ್ಞರು ಅಭಿಪ್ರಾಯಪಡುತ್ತಾರೆ. ಈ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಕೆಳಗೆ ನೀಡಲಾಗಿದೆ ಮುಂದೆ ಓದಿ..
ಗೃಹ ಹಿಂಸಾಚಾರದ ಪರಿಣಾಮಗಳು
ಸಾಮಾನ್ಯವಾಗಿ ಹಿಂಸಾಚಾರಕ್ಕಿಳಿದ ವ್ಯಕ್ತಿ ತನ್ನ ಬೈಗುಳ ಮತ್ತು ಕಟುಮಾತುಗಳೊಂದಿಗೇ ದೈಹಿಕ ಪ್ರಹಾರವನ್ನೂ ನೀಡುವ ಕಾರಣ ಮಾನಸಿಕ ನೋವಿನ ಜೊತೆಗೇ ಪ್ರಹಾರ ಪಡೆದಲ್ಲಿ ಅಪಾರ ನೋವು ಮತ್ತು ಕಲೆಗಳು ಉಂಟಾಗುತ್ತವೆ. ಕೊಂಚ ಸಮಯದ ಬಳಿಕ ನೋವು ಕಡಿಮೆಯಾದರೂ ಕಲೆಗಳು ಶಾಶ್ವತವಾಗಿ ಉಳಿದು ಅದನ್ನು ನೋಡಿದಾಗಲೆಲ್ಲಾ ಹಿಂಸೆಯ ಆ ಕ್ಷಣಗಳು ನೆನಪಿಗೆ ಬಂದು ಹಿಂಸೆ ಪಡೆದಾತನ ನೆಮ್ಮದಿ ಶಾಂತಿಯನ್ನೇ ಹಾಳುಮಾಡಿಬಿಡುತ್ತದೆ. ಅದರಲ್ಲೂ ಹಿಂಸೆ ಸತತವಾಗಿದ್ದರೆ ಇದನ್ನು ವರ್ಷಗಳ ಕಾಲಕ್ಕೂ ಮರೆಯಲು ಸಾಧ್ಯವಾಗದು.
ಮಾನಸಿಕ ಆಘಾತ ಅಥವಾ ಕ್ಷೋಭೆ
ಮನೆಯಲ್ಲಿ ಹಿಂಸೆ ನೀಡುವ ವ್ಯಕ್ತಿ ನೀಡುವ ಹಿಂಸೆ ದೈಹಿಕಕ್ಕಿಂತ ಹೆಚ್ಚಾಗಿ ಮಾನಸಿಕವಾಗಿ ಘಾಸಿ ಮಾಡುತ್ತದೆ. 'ಈ ಬಗ್ಗೆ ಎಲ್ಲಾದರೂ ಬಾಯಿ ಬಿಟ್ಟರೆ ನೋಡು, ಕೊಂದೇ ಬಿಡುತ್ತೇನ' ಎಂಬ ರೀತಿಯಲ್ಲಿ ಹೆದರಿಸಿರುವ ಕಾರಣ ಹಿಂಸೆಗೊಳಗಾದ ವ್ಯಕ್ತಿ ಈ ಬಗ್ಗೆ ಯಾರಲ್ಲಿಯೂ ಏನೂ ಹೇಳಲಾರದೇ ಮಾನಸಿಕ ಆಘಾತ ಅಥವಾ ಕ್ಷೋಬೆಗೆ ಒಳಗಾಗುತ್ತಾನೆ/ಳೆ.
ವಿಪರೀತ ನೋವು
ಸಾಮಾನ್ಯವಾಗಿ ಹಿಂಸೆ ನೀಡುವಾತ ತನ್ನ ಸಿಟ್ಟನ್ನು ಪೆಟ್ಟುಗಳ ಮೂಲಕ ತೀರಿಸಿಕೊಳ್ಳುತ್ತಾನೆ. ಕೆಲವೊಮ್ಮೆ ಈ ಪೆಟ್ಟುಗಳು ದೇಹದ ಮರ್ಮಸ್ಥಾನಗಳಿಗೆ ತಾಕಿ ಎಷ್ಟೋ ಕಾಲದವರೆಗೆ ಅಲುಗಾಡಿಸಲೂ ಆಗದಷ್ಟು, ಮುಟ್ಟಿದರೂ ಸಾಯುವಂತಾಗುವಂತಹ ನೋವು ಉಂಟಾಗುತ್ತದೆ. ಅದರಲ್ಲೂ ಕೆಲವು ಗಾಯಗಳು ಅತಿ ಆಳವಾಗಿದ್ದು ಪ್ರಾಣಕ್ಕೇ ಸಂಚಕಾರ ತಂದೊಡ್ಡುವಂತಿರುತ್ತವೆ. ಆದ್ದರಿಂದ ನೋವು ನೀಡಿರುವವರು ಎಷ್ಟೇ ಬೆದರಿಕೆ ಒಡ್ಡಲಿ ಹೆದರದೇ ಹಿರಿಯರಲ್ಲಿ ಹೇಳುವುದು ಅಗತ್ಯ.
ಸಂಶಯಗ್ರಸ್ತ ಮನೋಭಾವ
ಇತ್ತೀಚಿನ ಸಂಶೋಧನೆಯಲ್ಲಿ ಕಂಡುಬಂದ ಪ್ರಕಾರ ಗೃಹ ಹಿಂಸೆಗೆ ಒಳಗಾದವರು ಮಾನಸಿಕವಾಗಿ ಜರ್ಝರಿತರಾಗಿದ್ದು ಸಂಶಯಗ್ರಸ್ತರಾಗುವ ಸಾಧ್ಯತೆ ಹೆಚ್ಚುತ್ತದೆ. ಹಿಂಸಾಚಾರ ಪಡೆಯುತ್ತಾ ಕ್ರಮೇಣ ಇವರ ಮನ ಯಾರನ್ನೂ ನಂಬದಿರುವ ಸ್ಥಿತಿಗೆ ಬಂದು ತಲುಪುತ್ತದೆ. ಇವರು ಯಾವುದೇ ಶಬ್ದಕ್ಕೂ ಅತೀವ ಹೆದರುವವರಾಗಿದ್ದು ಕ್ಲುಪ್ತಕಾಲದಲ್ಲಿ ಚಿಕಿತ್ಸೆ ಮತ್ತು ಮುಖ್ಯವಾಗಿ ಆತ್ಮೀಯತೆ, ಪ್ರೀತಿ, ವಿಶ್ವಾಸ ದೊರಕದೇ ಇದ್ದರೆ ಆತ್ಮಹತ್ಯೆಗೆ ಶರಣಾಗುವ ಸಾಧ್ಯತೆ ಹೆಚ್ಚುತ್ತದೆ.
ಒಂದು ವೇಳೆ ಗೃಹ ಹಿಂಸಾಚಾರಕ್ಕೆ ಒಳಗಾಗಿದ್ದರೆ
* ಹಿಂಸೆಯನ್ನು ಮಾಡುವುದು ಎಷ್ಟು ತಪ್ಪೋ, ಸಹಿಸುವುದೂ ಅದಕ್ಕಿಂತ ಹೆಚ್ಚಿನ ತಪ್ಪು. ಎಷ್ಟೇ ಹತ್ತಿರದ ವ್ಯಕ್ತಿಯಾಗಿರಲಿ, ಯಾವುದೇ ಸಂಕೋಚವಿಟ್ಟುಕೊಳ್ಳದೇ ನೀವು ನಂಬುವ ಹಿರಿಯರಲ್ಲಿ ವಿಷಯ ತಿಳಿಸಿ ಅಥವಾ ನೇರವಾಗಿ ಪೋಲೀಸ್ ಠಾಣೆಯಲ್ಲಿ ಹೋಗಿ ರಕ್ಷಣೆ ಕೋರಿ.
* ಒಂದು ಬಾರಿ ಪೋಲೀಸರ ಎಚ್ಚರಿಕೆ ಸಿಕ್ಕ ಬಳಿಕ ಎಷ್ಟೋ ಹಿಂಸೆ ನೀಡುವ ವ್ಯಕ್ತಿಗಳು ಬಾಲ ಮುದುರಿ ಬುದ್ಧಿ ಕಲಿತುಕೊಂಡಿರುವುದು ಒಂದು ಸತ್ಯವಾಗಿದೆ. ಇದನ್ನು ಹಲವಾರು ದಕ್ಷ ಪೋಲೀಸ್ ಅಧಿಕಾರಿಗಳೇ ದೃಢಪಡಿಸಿದ್ದಾರೆ.
* ಹಿಂಸೆಯನ್ನು ಸಹಿಸಿ ಒಂದು ಸಂಬಂಧದಲ್ಲಿರುವುದಕ್ಕಿಂತಲೂ ಇದರಿಂದ ಹೊರನಡೆಯಿರಿ. ಸಮಾಜ ಸ್ವೀಕರಿಸುತ್ತದೆಯೋ ಇಲ್ಲವೋ ಎಂಬ ಕಾಳಜಿ ನಿಮಗೆ ಬೇಡ. ನಿಜಾಂಶ ತಿಳಿದ ಸಮಾಜ ನಿಮ್ಮನ್ನು ಖಂಡಿತಾ ಸ್ವೀಕರಿಸುತ್ತದೆ ಹಾಗೂ ಈ ಪರಿಯಾಗಿ ಹೊರಬಂದ ವ್ಯಕ್ತಿಗಳು ಇಂದು ಬಂಗಾರದ ಬಾಳ್ವೆ ನಡೆಸುತ್ತಿದ್ದಾರೆ.
* ಶ್ರೀಮಂತಿಕೆಯ ಹಮ್ಮಿನಲ್ಲಿ ಹಿಂಸೆ ನೀಡುವುದು ಹೆಚ್ಚು ಸಾಮಾನ್ಯವಾಗಿದೆ. ಶ್ರೀಮಂತಿಕೆ ಹೋಗುತ್ತದೆ ಎಂಬ ಕಾರಣಕ್ಕೆ ಹಿಂಸೆಯನ್ನು ಸಹಿಸಿಕೊಂಡಿರಬೇಡಿ, ನೆನಪಿನಲ್ಲಿರಲಿ, ಪ್ರೀತಿ, ಅನುಕಂಪ, ವಿಶ್ವಾಸ, ದಯೆ, ಕರುಣೆ ಮೊದಲಾದ ಮಾನವೀಯ ಸಂಬಂಧಗಳೇ ಹಣಕ್ಕೂ ಮಿಗಿಲಾದ ಐಶ್ವರ್ಯಗಳಾಗಿವೆ.



Click it and Unblock the Notifications



