Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ವೈವಾಹಿಕ ಜೀವನದ ಸುಖಕ್ಕೆ ಶಿವರಾತ್ರಿಯಲ್ಲಿ ಈ ಕೆಲಸ ಮಾಡಿ..! ಜ್ಯೋತಿಷ್ಯಶಾಸ್ತ್ರದಲ್ಲಿನ ಪರಿಹಾರವಿದು..!!
ಮಹಾಶಿವರಾತ್ರಿಯಂದು ನಾಡಿನಾದ್ಯಂತ ಶಿವನ ಆರಾಧನೆ, ಭಜನೆ, ಉಪವಾಸ ಮಾಡುವುದು ನೋಡಬಹುದು, ಈ ಶಿವರಾತ್ರಿಯು ಹಲವು ವಿಚಾರಗಳಿಂದ ವಿಶೇಷ ಎನಿಸಿದೆ. ಅದರಲ್ಲೂ ಜ್ಯೋತಿಷ್ಯ ಶಾಸ್ತ್ರದಲ್ಲಿ ಬಹಳ ಪ್ರಾಮುಖ್ಯತೆ ಪಡೆದುಕೊಂಡಿರುವ ಶಿವರಾತ್ರಿ ಇದಾಗಿದೆ. ಈ ಹಬ್ಬದ ಸಂದರ್ಭದಲ್ಲಿಯೇ ಹಲವು ಗ್ರಹಗಳು ತಮ್ಮ ದಿಕ್ಕು ಬದಲಿಸುವುದು ರಾಶಿಯಲ್ಲಿ ಬದಲಾವಣೆ ನೋಡಬಹುದು.
ಹಾಗೆ ಈ ಬದಲಾವಣೆಗಳು ನಿಮ್ಮ ಜೀವನದಲ್ಲೂ ಹಲವು ರೀತಿಯ ಬದಲಾವಣೆಗೆ ಕಾರಣವಾಗುತ್ತಿರುವುದು ಕೂಡ ನೋಡಬಹುದು. ಈಗ ಈ ಶಿವರಾತ್ರಿಯ ಸಂದರ್ಭದಲ್ಲಿ ಹಲವು ಗ್ರಹಗಳಲ್ಲಿನ ಬದಲಾವಣೆಯು ನಿಮ್ಮ ವೈಯಕ್ತಿಕ ಲಾಭಗಳಿಗೆ ಕಾರಣವಾಗುತ್ತಿರುವುದು ನೋಡಬಹುದು. ಹಾಗೆ ಈ ಸಂದರ್ಭದಲ್ಲಿ ನಿಮ್ಮ ಕೌಟುಂಬಿಕ ಹಾಗೂ ದಾಂಪತ್ಯ ಜೀವನದಲ್ಲಿನ ಸಮಸ್ಯೆಗಳನ್ನೂ ಕೂಡ ನಿವಾರಣೆ ಮಾಡಿಕೊಳ್ಳಬಹುದು.

ದಾಂಪತ್ಯ ಜೀವನದಲ್ಲಿನ ಅಡೆತಡೆಗಳು, ಮನಸ್ತಾಪಗಳು, ವೈಮನಸ್ಸುಗಳನ್ನು ಈ ಶಿವರಾತ್ರಿ ಹಬ್ಬದ ಸಂದರ್ಭದಲ್ಲಿ ಸಂಪೂರ್ಣವಾಗಿ ನೀವು ಕಡಿವಾಣ ಹಾಕಬಹುದು. ಏಕೆಂದರೆ ಶಿವರಾತ್ರಿಯಂದು ಶಿವ ಹಾಗೂ ಪಾರ್ವತಿಯ ವಿವಾಹ ನಡೆದಿತ್ತು ಎಂದು ನಂಬಲಾಗಿದೆ. ಹೀಗಾಗಿ ಜ್ಯೋತಿಷ್ಯದ ಪ್ರಕಾರ ಈ ದಿನ ಕೆಲವು ಆಚರಣೆಗಳು ನಿಮ್ಮ ದಾಂಪತ್ಯ ಜೀವನದಲ್ಲಿನ ತೊಡಕುಗಳನ್ನು ನಿವಾರಿಸಲಿದೆ.
ಹಾಗಾದ್ರೆ ಶಿವರಾತ್ರಿಯಂದು ಜ್ಯೋತಿಷ್ಯ ಪರಿಹಾರಗಳು ಏನು? ಯಾವ ಕಾರ್ಯಗಳನ್ನು ಮಾಡುವುದು ನಿಮ್ಮ ದಾಂಪತ್ಯ ಜೀವನವನ್ನು ಸುಖಮಯವಾಗಿಡಲು ಸಹಾಯ ಮಾಡಲಿದೆ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ನಿಮ್ಮ ವೈವಾಹಿಕ ಜೀವನದಲ್ಲಿ ನಿರಂತರ ಸಮಸ್ಯೆಗಳ ಎದುರಿಸಿದ್ದರೆ ಈ ಮಹಾಶಿವರಾತ್ರಿಯ ದಿನದಂದು ಶಿವಲಿಂಗಕ್ಕೆ ರುದ್ರಾಭಿಷೇಕ ಮಾಡುವುದು ಅತ್ಯಂತ ಪ್ರಯೋಜನಕಾರಿಯಾಗಿದೆ. ಹಾಗಾದ್ರೆ ಈ ರುದ್ರಾಭಿಷೇಕ ಮಾಡುವುದು ಹೇಗೆ? ಶಿವನ ಮೂರ್ತಿ ಮನೆಯಲ್ಲೇ ಇದ್ದರೆ ಮಾಡಬಹುದು, ಹಾಗೆ ಶಿವನ ದೇವಾಲದಲ್ಲೂ ರುದ್ರಾಭಿಷೇಕ ಮಾಡುವಾಗ ವಸ್ತುಗಳನ್ನು ನೀವೇ ನೀಡಬಹುದು.
ನೀರು, ಹಾಲು, ಮೊಸರು, ತುಪ್ಪ, ಜೇನುತುಪ್ಪ ಹಾಕಿ ಅಭಿಷೇಕ ಮಾಡಲಾಗುತ್ತದೆ. ಈ ರೀತಿಯ ಅಭಿಷೇಕದಿಂದ ನಿಮ್ಮ ದಾಂಪತ್ಯ ಜೀವನದಲ್ಲಿ ಉಂಟಾಗಿರುವ ಎಲ್ಲಾ ಬಗೆಯ ಸಮಸ್ಯೆಗಳಿಗೂ ಪರಿಹಾರ ನೀಡಲಿದೆ ಎಂದು ಜ್ಯೋತಿಷ್ಯಶಾಸ್ತ್ರವು ಹೇಳುತ್ತದೆ.
ಶಿವನ ಮಂತ್ರ ಪಠಿಸುವುದು
ದಾಂಪತ್ಯ ಜೀವನದಲ್ಲಿನ ಸಮಸ್ಯೆಯನ್ನು ಬಗೆಹರಿಸುವ ಮತ್ತೊಂದು ವಿಧಾನ ಎಂದರೆ ಅಂದು ಶೀವನ ಮಂತ್ರ ಮಠಿಸುವುದು. ಅದರಲ್ಲೂ ಪತಿ ಹಾಗೂ ಪತ್ನಿ ಶಿವಲಿಂಗ ಅಥವಾ ಶಿವನ ಮೂರ್ತಿ ಎದುರು ಕುಳಿತು ಶಿವನ ಮಂತ್ರ ಪಠಿಸುವುದು ಅವರ ಜೀವನದಲ್ಲಿ ಉಂಟಾಗಿರುವ ದಾಂಪತ್ಯ ಸಮಸ್ಯೆ ಬಗೆಹರಿಸಲಿದೆ. 'ಓಂ ನಮಃ ಶಿವಾಯ' ಮಂತ್ರವನ್ನು ಪಠಿಸುವುದು ಹೆಚ್ಚು ಪರಿಣಾಮಕಾರಿ ಎಂದು ಪರಿಗಣಿಸಲಾಗಿದೆ. ಈ ಮಂತ್ರವನ್ನು ಕನಿಷ್ಠ 108 ಬಾರಿ ಒಟ್ಟಿಗೆ ಪಠಿಸಬೇಕು. ಇದು ಅವರ ದಾಂಪತ್ಯದಲ್ಲಿ ಪ್ರೀತಿ, ಸಾಮರಸ್ಯ, ನೋವುಗಳನ್ನು ನಿವಾರಣೆ ಮಾಡಿ ಸುಖಮಯ ದಾಂಪತ್ಯ ನೀಡಲಿದೆ ಎಂದು ಹೇಳಲಾಗಿದೆ.
16 ಸೋಮವಾರ ವ್ರತ ಸಂಕಲ್ಪ
ಶಿವರಾತ್ರಿಯ ದಿನದಂದು ಮನೆಯಲ್ಲಿ ಪೂಜೆ ಸಲ್ಲಿಸಿದ ಬಳಿಕ ಪತ್ನಿ 16 ಸೋಮವಾರದಂದು ವ್ರತ ಆಚರಿಸುವ ಸಂಕಲ್ಪ ಮಾಡಬೇಕಂತೆ. 16 ಸೋಮವಾರವು ತಪ್ಪದೆ ಶಿವನ ಆರಾಧನೆ ಮಾಡುವುದು ಇದರಲ್ಲಿ ಸೇರಿದೆ. ಈ ವ್ರತದಲ್ಲಿ ಶಿವಲಿಂಗ ಪ್ರತಿಷ್ಠಾಪಿಸಿ ಹಾಲಿನ ಅಭಿಷೇಕ ಮಾಡುವುದು. ಶಿವನ ಮಂತ್ರ ಪಠಿಸುವುದು ಕೂಡ ಇದರ ಭಾಗವಾಗಿದೆ. ಈ ರೀತಿಯ ವ್ರತಾಚರಣೆಯು ನಿಮ್ಮ ವೈವಾಹಿಕ ಜೀವನದಲ್ಲಿ ಸುಖ ತರಲಿದೆ, ಪಾರ್ವತಿಯ ಆಶೀರ್ವಾದಕ್ಕೆ ಕಾರಣರಾಗುತ್ತಾರೆ ಎಂದು ಹೇಳಲಾಗಿದೆ.
ದಾನ ಮಾಡುವುದು
ಈ ದಿನದಂದು ಮುತೈದೆಯರಿಗೆ ದಾನ ಮಾಡುವ ಆಚರಣೆಗಿಂತಲೂ ಅವಿವಾಹಿತರಿಗೆ ದಾನ ನೀಡುವ ಶಾಸ್ತ್ರ ಜಾರಿಯಲ್ಲಿದೆ. ಈ ದಿನದಂದು ಅವಿವಾಹಿತ ಯುವತಿಗೆ ಮದುವೆಗೆ ಬೇಕಾಗುವ ವಸ್ತುಗಳ ದಾನ ನೀಡಲಾಗುತ್ತೆ. ಬಳೆ, ಬಿಂದಿ, ಕುಬ್ಜ, ಮೆಹಂದಿ, ಕುಂಕುಮ, ಅಕ್ಷತೆ, ಕನ್ನಡಿ ದಾನ ಮಾಡಲಾಗುತ್ತದೆ. ಇದು ನಿಮ್ಮ ವೈವಾಹಿಕ ಜೀವನವನ್ನು ಸುಖವಾಗಿಸುತ್ತೆ.
(ಹಕ್ಕುತ್ಯಾಗ: ಮೇಲೆ ನೀಡಲಾದ ಮಾಹಿತಿಯು ಅಂತರ್ಜಾಲದಲ್ಲಿ ಲಭ್ಯವಿರುವ ಊಹೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ ಮತ್ತು ನಿಖರವಾಗಿದೆ ಎಂದು ಖಾತರಿಪಡಿಸುವುದಿಲ್ಲ. ಈ ಲೇಖನಕ್ಕೆ ಸಂಬಂಧಿಸಿದ ಮಾಹಿತಿಯನ್ನು ಕನ್ನಡ ಬೋಲ್ಡ್ ಸ್ಕೈ ಪರಿಶೀಲಿಸಿಲ್ಲ. ಮತ್ತು ನಮ್ಮ ಏಕೈಕ ಉದ್ದೇಶ ಮಾಹಿತಿಯನ್ನು ಒದಗಿಸುವುದಾಗಿದೆ)



Click it and Unblock the Notifications