Latest Updates
-
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್
ನೀವು ತೋರುವ ಪ್ರೀತಿ-ಕಾಳಜಿ ಮರಳಿ ಸಿಗುತ್ತಿಲ್ಲ ಎಂಬ ಭಾವನೆಗೆ ಇವೇ ಕಾರಣಗಳಿರಬಹುದು
ಕೆಲವೊಮ್ಮೆ ಅನಿಸುವುದುಂಟು, ನಾವು ನೀಡುವ ಪ್ರೀತಿ ನಮಗೆ ಮರಳಿ ಸಿಗುತ್ತಿಲ್ಲ ಎಂದು. ಪ್ರೀತಿಯಲ್ಲಿ ನಿರೀಕ್ಷೆಗಳಿರಬಾರದು ಎನ್ನಲಾಗುತ್ತದೆ, ಆದರೆ ಕನಿಷ್ಟ ಪ್ರೀತಿಯನ್ನು ನಿರೀಕ್ಷಿಸುವುದರಲ್ಲಿ ಯಾವುದೇ ತಪ್ಪಿಲ್ಲ. ಆದರೆ, ಅದೆಷ್ಟೇ ಪ್ರಯತ್ನ ಪಟ್ಟರೂ, ಕೇವಲ ನೀವಷ್ಟೇ ಪ್ರೀತಿ ತೋರಿಸುತ್ತಿದ್ದೀರಿ, ಆ ವ್ಯಕ್ತಿಯಿಂದ ನಿಮಗೆ ಮರಳಿ ಸಿಗುತ್ತಿಲ್ಲ ಎಂಬ ಭಾವನೆ ಆಗಾಗ ಮೂಡುತ್ತಿದ್ದರೆ, ಅದಕ್ಕೆ ಕೆಲವು ಕಾರಣಗಳಿರಬಹುದು. ಏಕಪಕ್ಷೀಯ ಪ್ರೀತಿಯು ನಿಮಗೆ ದೀರ್ಘಕಾಲ ಶಕ್ತಿಯನ್ನು ನೀಡುವುದಿಲ್ಲ ಏಕೆಂದರೆ ನೀವು ಬದುಕಲು ಇತರರಿಂದ ಪ್ರೀತಿ ಬೇಕು. ಆದರೆ ಅದು ನಿಮಗೆ ಸಿಗುತ್ತಿಲ್ಲ ಎಂದಾದರೆ, ಅದು ಏಕೆ ಎಂಬುದನ್ನು ಇಲ್ಲಿ ನೋಡೋಣ.

ಕಂಫರ್ಟ್ ಝೋನ್:
ಹೊಸ ಜನರನ್ನು ಹುಡುಕಲು ಮತ್ತು ಅವರೊಂದಿಗೆ ಸಂಪರ್ಕಗಳನ್ನು ಬೆಳೆಸಲು ನಿಮ್ಮ ಆರಾಮ ವಲಯದಿಂದ ಹೊರಬರಲು ನೀವು ಭಯಪಡುತ್ತೀರಿ. ನೀವು ಪ್ರೀತಿಸುವ ವ್ಯಕ್ತಿಯೊಂದಿಗೆ ಉಳಿಯಲು ಬಯಸುತ್ತೀರಿ ಏಕೆಂದರೆ ಭಾವನೆಯು ಪರಿಚಿತ ಮತ್ತು ಆರಾಮದಾಯಕವಾಗಿರುತ್ತದೆ. ಇದು ನಿಮ್ಮ ನಿಜವಾದ ಸಂತೋಷವನ್ನು ಅನುಭವಿಸುವುದನ್ನು ತಡೆಯುತ್ತದೆ. ಆದ್ದರಿಂದ ನಿಮ್ಮ ಕಂಫರ್ಟ್ ಝೋನ್‌ನಿಂದ ಹೊರಬಂದು, ಹೊಸ ಜನರೊಂದಿಗೆ ಬೆರೆಯಲು ಪ್ರಾರಂಭಿಸಿ.

ಹಿಂದಿನ ಅನಾರೋಗ್ಯಕರ ಸಂಬಂಧ:
ಈ ಹಿಂದೆ ನಿಮ್ಮ ಜೀವನದ ಪ್ರಮುಖ ಭಾಗವಾಗಿದ್ದ ಅನಾರೋಗ್ಯಕರ ಸಂಬಂಧಗಳಿಂದ ನಿಮ್ಮನ್ನು ಬೇರ್ಪಡಿಸುವುದು ಕಷ್ಟ. ನಿಮ್ಮ ಬಾಲ್ಯದ ಸಂಬಂಧಗಳು, ವಿಶೇಷವಾಗಿ ನಿಮ್ಮ ಹೆತ್ತವರೊಂದಿಗಿನ ಸಂಬಂಧಗಳು ನಿಮ್ಮ ಜೀವನದ ಅವಿಭಾಜ್ಯ ಅಂಗವಾಗಿದೆ. ನಿಮ್ಮ ಪೋಷಕರು ನಿಮ್ಮ ಭಾವನೆಗಳನ್ನು ಸಾಕಷ್ಟು ಮೌಲ್ಯೀಕರಿಸದಿದ್ದರೆ, ನಿಮ್ಮನ್ನ ಪ್ರೀತಿಸದವರಿಂದ ನೀವು ಪ್ರೀತಿಯನ್ನು ಹುಡುಕುತ್ತಿರುವುದಕ್ಕೆ ಇದು ಒಂದು ಕಾರಣವಾಗಿರಬಹುದು.

ನೀವು ನಿಮ್ಮನ್ನು ಪ್ರೀತಿಸದಿರುವುದು:
ಇಂತಹ ಅನಾರೋಗ್ಯಕರ ಸಂಬಂಧಗಳಲ್ಲಿ ತೊಡಗಿಸಿಕೊಂಡವರು ಸಾಮಾನ್ಯವಾಗಿ ತಮ್ಮನ್ನು ತಾವು ಪ್ರೀತಿಸುವುದಿಲ್ಲ. ನೀವು ನಿಮ್ಮನ್ನು ದ್ವೇಷಿಸಬಹುದು ಮತ್ತು ನಿಮ್ಮ ಅಸ್ತಿತ್ವದ ತಿರುಳನ್ನು ತಿರಸ್ಕರಿಸಬಹುದು. ನೀವು ನಿಮ್ಮನ್ನು ಪ್ರೀತಿಸದಿದ್ದಾಗ ಇತರರಿಂದ ಆ ಪ್ರೀತಿಯನ್ನು ಹುಡುಕುತ್ತೀರಿ. ಈ ನಡವಳಿಕೆಯು ಸಂತೋಷವಾಗಿರುವ ಭವಿಷ್ಯದ ಅವಕಾಶಗಳನ್ನು ಹಾಳುಮಾಡಬಹುದು.

ನಿಮ್ಮ ಬಗ್ಗೆ ದುರ್ಬಲತೆ:
ನಿಮ್ಮ ಭಾವನೆಗಳ ಬಗ್ಗೆ ನೀವು ದುರ್ಬಲರಾಗಿರುವಾಗ, ನಿಮ್ಮ ಎಲ್ಲಾ ಭಾವನೆಗಳನ್ನು ತಪ್ಪು ವ್ಯಕ್ತಿಯ ಬಳಿ ಹೇಳಲು ಪ್ರಯತ್ನಿಸುತ್ತೀರಿ. ಅವರ ಬಳಿ ಎಲ್ಲವನ್ನು ಆತುರವಾಗಿ ಹೇಳಿಕೊಳ್ಳುತ್ತೀರಿ. ಅಂತಿಮವಾಗಿ, ನೀವು ಸರಿಯಾದ ವ್ಯಕ್ತಿಗಾಗಿ ಕಾಯುವ ತಾಳ್ಮೆಯನ್ನು ಕಳೆದುಕೊಳ್ಳುತ್ತೀರಿ ಮತ್ತು ಆಗ ವಿಷಯಗಳು ತಪ್ಪಾಗಲು ಪ್ರಾರಂಭಿಸುತ್ತವೆ.



Click it and Unblock the Notifications
