Latest Updates
-
ಮದುವೆಗೂ ಮುನ್ನ ಈ 48 ಗಂಟೆಗಳ ಚೆಕ್ಲಿಸ್ಟ್ ಮರೆಯದಿರಿ -
ಬಿಸಿಲ ಬೇಗೆಯಿಂದ ಪಾರಾಗಲು ಮನೆಯನ್ನು ತಂಪಾಗಿರಿಸುವ ಅದ್ಭುತ ಟಿಪ್ಸ್ -
ಬಿಸಿಲ ಬೇಗೆಯಿಂದ ಪಾರಾಗಲು ಈ ಪಾನೀಯಗಳೇ ಮದ್ದು! -
ಬಿಸಿಲ ಬೇಗೆಯಿಂದ ಪಾರಾಗಲು ಈ ಟ್ರೆಂಡ್ಸ್ ಮಿಸ್ ಮಾಡ್ಬೇಡಿ -
ಬಿಸಿಲ ಬೇಗೆಯಿಂದ ಪಾರಾಗಲು ನಿಮ್ಮ ವ್ಯಾಯಾಮದ ಸಮಯ ಬದಲಾಯಿಸಿ -
ಅಕ್ಷಯ ತೃತೀಯ: ಮದುವೆ ಮತ್ತು ಚಿನ್ನದ ಖರೀದಿಗೆ ಹೀಗೆ ಪ್ಲಾನ್ ಮಾಡಿ -
ಮನೆಯನ್ನು ತಂಪಾಗಿಡಲು ಹೀಟ್ವೇವ್ ಸಮಯದಲ್ಲಿ ಈ ಟ್ರಿಕ್ಸ್ ಫಾಲೋ ಮಾಡಿ -
ಮಾವಿನ ಹಣ್ಣು ಖರೀದಿಸುವ ಮುನ್ನ ಈ ತಪ್ಪು ಮಾಡಬೇಡಿ! -
ಅಕ್ಷಯ ತೃತೀಯ ಚಿನ್ನದ ಖರೀದಿ: ಈ ಆಫರ್ ಮಿಸ್ ಮಾಡ್ಬೇಡಿ! -
ಬಿಸಿಲ ಧಗೆಯಲ್ಲೂ ಫಿಟ್ ಆಗಿರಲು ಈ ತಪ್ಪುಗಳನ್ನು ಮಾಡಬೇಡಿ!
ಹೆಣ್ಣಿನ ವಿವಿಧ ಕೈ ಸ್ಪರ್ಶಗಳು ಹಾಗೂ ಆ ಸ್ಪರ್ಶದ ಹಿಂದಿರುವ ಅರ್ಥವೇನು ಗೊತ್ತಾ?
ನಿಮ್ಮ ಡ್ರೀಮ್ ಗರ್ಲ್ ನಿಮಗೆ ಸಿಗುವುದು ಬಹಳ ಕಷ್ಟ, ಸಿಕ್ಕರಂತೂ ಆ ಖುಷಿಗೆ ಪಾರವೇ ಇಲ್ಲ. ನಿಮ್ಮ ಕನಸಿನ ಹುಡುಗಿಯನ್ನ ಹುಡುಕುವ ದಾರಿಯಲ್ಲಿ ಹಲವಾರು ಹುಡುಗಿಯರನ್ನ ಭೇಟಿ ಮಾಡಿರುತ್ತೀರಿ. ಅದು ಸ್ನೇಹತರ ರೂಪದಲ್ಲಿಯೂ ಇರಬಹುದು.
ಒಂದುವೇಳೆ ನಿಮ್ಮ ಬಳಿ ಕ್ಲೋಸ್ ಆಗಿರುವ ಮಹಿಳೆ, ನಿಮ್ಮ ಕೈಗಳನ್ನು ಯಾವ ರೀತಿ ಹಿಡಿದುಕೊಳ್ಳುತ್ತಾಳೆ, ಅದರ ಹಿಂದಿನ ಉದ್ದೇಶವೇನು ಎಂಬುದನ್ನು ಅರ್ಥಮಾಡಿಕೊಳ್ಳಲು ಎಂದಾದರೂ ಪ್ರಯತ್ನ ಮಾಡಿದ್ದೀರಾ? ಇಲ್ಲ ತಾನೇ, ಹಾಗಾದರೆ ಈ ಲೇಖನ ನಿಮಗಾಗಿ. ಒಂದು ಹೆಣ್ಣು ನಿಮ್ಮ ಕೈಯನ್ನು ಸ್ಪರ್ಶಿಸುವ ವಿಧಗಳು ಹಾಗೂ ಅದರ ಹಿಂದಿರುವ ಅರ್ಥಗಳ ಬಗ್ಗೆ ಇಲ್ಲಿ ವಿವರ ನೀಡಲಾಗಿದೆ.
ಮಹಿಳೆ ಒಬ್ಬ ಪುರುಷನ ಕೈಯನ್ನು ಸ್ಪರ್ಶಿಸುವ ವಿಧ ಹಾಗೂ ಅದರ ಅರ್ಥಗಳನ್ನು ಈ ಕೆಳಗೆ ನೀಡಲಾಗಿದೆ:

ವಾಕಿಂಗ್ ಮಾಡುವಾಗ ಮಹಿಳೆ ನಿಮ್ಮ ತೋಳನ್ನು ಹಿಡಿದಾಗ:
ಮೊದಲು, ನಿಮ್ಮ ಸುತ್ತಮುತ್ತಲಿನ ಪ್ರದೇಶವನ್ನು ನೋಡಿ. ಅವಳು ಹೆದರುತ್ತಿದ್ದಾಳೋ ಅಥವಾ ಸಂತೋಷವಾಗಿದ್ದಾಳೋ ತಿಳಿದುಕೊಳ್ಳಿ. ಆಕೆ ನಿಮ್ಮ ತೋಳಿಗೆ ಹೊಡೆಯುತ್ತಾ, ನಗುತ್ತಾ ಸಂತೋಷದಿಂದ ಇದ್ದರೆ, ಆಕೆ ನಿಮ್ಮ ಕಂಪನಿ ಅಥವಾ ಸಂಘವನ್ನು ಇಷ್ಟಪಡುತ್ತಿದ್ದಾಳೆ ಎಂದರ್ಥ. ನಿಮ್ಮೊಂದಿಗೆ ಫ್ಲರ್ಟ್ ಮಾಡಲು ಅವಳು ಆಸಕ್ತಿ ಹೊಂದಿದ್ದಾಳೆ ಎಂದು ನಿಮಗೆ ಅರ್ಥ ಮಾಡಿಸಲು, ಆಕೆಯ ತೋಳಿಗೆ ಹೊಡೆಯಬಹುದು. ಅವಳ ಕಣ್ಣೋಟವನ್ನೊಮ್ಮೆ ನೋಡಿ, ನಿಮ್ಮ ತೋಳನ್ನು ಹಿಡಿದುಕೊಂಡು, ಒಂದು ರೀತಿಯ ಹಂಬಲದಿಂದ ನೋಡಿದರೆ, ಅವಳು ನಿನ್ನೊಳ

ಒಬ್ಬ ಮಹಿಳೆ ನಿಮ್ಮ ತೋಳಿಗೆ ಹೊಡೆದಾಗ:
ಅವಳು ತಮಾಷೆಯಾಗಿ ನಿಮ್ಮ ತೋಳಿಗೆ ಹೊಡೆಯುತ್ತಿದ್ದಾಳೋ, ಇಲ್ಲವೋ ಎಂಬುದನ್ನು ಮೊದಲು ಅರ್ಥಮಾಡಿಕೊಳ್ಳಿ. ತಮಾಷೆಗೆ ಹೊಡೆದರೆ ಪರವಾಗಿಲ್ಲ, ಇಲ್ಲವಾದರೆ, ಆಕೆ ನಾಚಿಕೆ ಪಡುತ್ತಿದ್ದಾಳೋ, ಎಂಬುದನ್ನು ಗಮನಿಸಿ. ಹಾಗಿದ್ದರೆ, ಆಕೆಗೆ ನಿಮ್ಮ ಮೇಲೆ ಸಣ್ಣ ಪ್ರೀತಿ ಇದೆ ಎಂದರ್ಥ. ಇನ್ನೊಂದು ಬದಿಯಲ್ಲಿ, ನೀವು ಹೇಳಿದ್ದಕ್ಕೆ ಅವಳಿಗೆ ಕಿರಿಕಿರಿಯುಂಟಾಗಿರಬಹುದು. ಆದ್ದರಿಂದ ಈ ವಿಷಯದ ಮೇಲಿನ ತನ್ನ ಕೋಪವನ್ನು ಸೂಚಿಸಲು ಅವಳು ನಿನ್ನ ತೋಳಿನ ಮೇಲೆ ಹೊಡೆದಿರಬಹುದು.

ಮಹಿಳೆ ನಿಮ್ಮ ತೋಳಿಗೆ ತಾಗಿಕೊಂಡು ನಡೆದಾಗ:
ನಡೆಯುವಾಗ ಅವಳು ನಿಮ್ಮ ಕೈಯನ್ನು ಹಿಡಿದಿದ್ದರೆ, ಅವಳು ನಿನ್ನನ್ನು ಇಷ್ಟಪಡುತ್ತಾಳೆ ಎಂದರ್ಥ ಅದೇ ರೀತಿ, ಸಾಮಾನ್ಯವಾಗಿ, ಒಬ್ಬ ಪುರುಷ ಮತ್ತು ಮಹಿಳೆ ವಾಕಿಂಗ್ ಮಾಡುವಾಗ ತಮ್ಮ ತೋಳುಗಳನ್ನು ಹತ್ತಿರ ಉಜ್ಜಿಕೊಳ್ಳುತ್ತಾ, ಅಂದರೆ ಒಬ್ಬರ ತೋಳು ಇನ್ನೊಬರಿಗೆ ತಾಗಿಕೊಂಡು ಹೋಗುತ್ತಿದ್ದರೆ, ಅವರು ಪ್ರಣಯ ಪಾಲುದಾರರು ಎಂದರ್ಥ. ಏಕೆಂದರೆ ಮಹಿಳೆ ಪುರುಷನನ್ನು ಇಷ್ಟಪಡದಿದ್ದರೆ, ಅವಳು ಯಾವುದೇ ರೀತಿಯಲ್ಲಿ ಅವನು ಮುಟ್ಟುವುದನ್ನು ತಪ್ಪಿಸುತ್ತಾಳೆ.

ಮಹಿಳೆ ತನ್ನ ತೋಳಿನಿಂದ ನಿಮ್ಮ ಸೊಂಟ ಸುತ್ತಿಕೊಂಡಾಗ:
ಇದು ಎರಡು ಅರ್ಥಗಳನ್ನು ಹೊಂದಬಹುದು: ಒಂದೋ ಅವಳು ನಿಮ್ಮ ಮೇಲೆ ಪ್ರಣಯದ ಆಸಕ್ತಿ ಹೊಂದಿದ್ದಾಳೆ ಅಥವಾ ನಿಮ್ಮನ್ನು ಸ್ನೇಹಿತನಂತೆ ನೋಡುತ್ತಾಳೆ. ಸ್ನೇಹಿತನಾಗಿ ನಿಮ್ಮ ಕಂಪನಿಯನ್ನು ಇಷ್ಟಪಡುತ್ತಾ, ನಿಮ್ಮೊಂದಿಗೆ ಹಾಯಾಗಿರುತ್ತಾಳೆ. ಆದರೆ ಮಹಿಳೆ ನಿಮ್ಮ ಮೇಲೆ ಒಲವು ತೋರುತ್ತಿದ್ದರೆ, ಸೊಂಟವನ್ನು ಬಿಗಿಯಾಗಿ ಹಿಡಿದಿದ್ದರೆ, ನಿಮ್ಮ ಬಗ್ಗೆ ಆಕರ್ಷಣೆ ಹೊಂದಿದ್ದಾಳೆ ಎಂದರ್ಥ.

ಮಹಿಳೆ ನಿಮ್ಮ ಬೆನ್ನನ್ನು ಉಜ್ಜಿದಾಗ:
ಬೆನ್ನನ್ನು ತಟ್ಟುವುದು ಅಥವಾ ಉಜ್ಜುವುದು ಸಹಾನುಭೂತಿ ಮತ್ತು ಬೆಂಬಲದ ಸಂಕೇತವಾಗಿದ್ದು, ಇದು ರೋಮ್ಯಾಂಟಿಕ್ ಆಗಿರಬಾರದು. ಒಂದು ವೇಳೆ ಮಹಿಳೆ ನಿಮ್ಮ ಬೆನ್ನನ್ನು ಉಜ್ಜಿಕೊಂಡು ಸ್ವಲ್ಪ ಅಂತರವನ್ನು ಕಾಯ್ದುಕೊಂಡರೆ, ಆಕೆ ಬೆಂಬಲಿಸಲು ಮತ್ತು ನಿಮ್ಮೊಂದಿಗೆ ಇರಲು ಪ್ರಯತ್ನಿಸುತ್ತಿದ್ದಾಳೆ ಎಂದರ್ಥ. ಒಂದು ವೇಳೆ ಅವಳು ತನ್ನ ಕೈಯನ್ನು ನಿಮ್ಮ ಬೆನ್ನಿನ ಕೆಳ ಭಾಗದ ಕಡೆಗೆ ಅಲೆದಾಡಲು ಬಿಟ್ಟರೆ ಅಥವಾ ನಿಜವಾಗಿಯೂ ನಿಮ್ಮ ಹತ್ತಿರ ಬಂದರೆ, ಅವಳು ನಿಮ್ಮ ಮೇಲೆ ಆಸೆ ಹೊಂದಿದ್ದಾಳೆ ಎಂದರ್ಥ.



Click it and Unblock the Notifications











