Latest Updates
-
ಹುಷಾರ್.. ಈ ರಾಶಿಗಳಿಗೆ ಶನಿಯಿಂದ ಸಂಕಷ್ಟ ಶುರು! ಶನಿಯ ಕೆಂಗಣ್ಣಿನಿಂದ ತಪ್ಪಿಸಿಕೊಳ್ಳೋದು ಹೇಗೆ? -
ಕಡಲ ತೀರದಲ್ಲಿ ಮತ್ತೆ ಕಾಣಿಸಿಕೊಂಡ ಡೂಮ್ಸ್ಡೇ ಫಿಶ್: ಮತ್ತೇನು ದುರಂತ ಕಾದಿದೆ? -
ಮಾರ್ಚ್ 13ರಿಂದ ಶನಿ ಅಸ್ತಮ: 40 ದಿನಗಳ ಕಾಲ ಈ ರಾಶಿಯವರಿಗೆ ಶನಿ ಪ್ರಭಾವ ಇಳಿಕೆ! ಅದೃಷ್ಟದ ದಿನ! -
ದಪ್ಪ ಆಗಿದ್ದೀರಾ? ತೂಕ ಇಳಿಸಬೇಕಾ? ಈ ಗಂಜಿ 1 ಕಪ್ ಕುಡಿಯಿರಿ.. ಡಬಲ್ ಸ್ಪೀಡ್ನಲ್ಲಿ ಸಣ್ಣ ಆಗ್ತೀರಾ!! -
ಬೇಸಿಗೆಯಲ್ಲಿ ದೇಹ ತಂಪಾಗಿಟ್ಟು ದಣಿವು ನೀಗಿಸುವ ನವಣೆ ಮೊಸರನ್ನ: ಸುಲಭವಾಗಿ ಮಾಡುವ ವಿಧಾನವಿದು! -
ಫ್ರಿಜ್ನಲ್ಲಿ ಇಟ್ಟ ಆಹಾರ ಬೇಗ ಕೆಡುತ್ತಿದ್ಯಾ? ಈ 5 ಮ್ಯಾಜಿಕ್ ಟ್ರಿಕ್ಸ್ ಬಳಸಿ.. ಫ್ರೆಶ್ ಆಗಿಡಿ! -
ಸೋಲೋ ಡೇಟ್ ಟ್ರೆಂಡ್: ಒಂಟಿಯಾಗಿ ಸಮಯ ಕಳೆಯೋದು ಎಷ್ಟು ಉತ್ತಮ ಗೊತ್ತಾ? -
ಜಸ್ಟ್ ನೀರು ಸೇರಿಸಿ.. ಈ ಅದ್ಭುತ ರುಚಿಯ ಚಟ್ನಿ ರೆಡಿ! ಮಿಕ್ಸಿ ಬಳಸದೆ ಮಾಡೋದು ಹೇಗೆ? -
ಮಾರ್ಚ್ನಲ್ಲಿ ಬುಧ ಉದಯ: 4 ರಾಶಿಯವರಿಗೆ ಅಡ್ಡಿಗಳಿಂದ ವಿಮುಕ್ತಿ, ಅದೃಷ್ಟದ ಸಮಯ! -
ಶುಕ್ರ, ಶನಿ & ಸೂರ್ಯ ಸಂಗಮ: ಮೀನ ರಾಶಿಯಲ್ಲಿ ತ್ರಿಗ್ರಹ ಯೋಗ.. ಈ 5 ರಾಶಿಗಳಿಗೆ ಬಂಪರ್ ಲಾಟರಿ! ಯಾರಿಗೆ ಲಾಭ, ನಷ್ಟ?
ಪ್ರೇಮಿಗಳ ದಿನ: ರಾಶಿಚಕ್ರದ ಪ್ರಕಾರ, ನಿಮ್ಮ ಸಂಗಾತಿಗೆ ಏನು ಗಿಫ್ಟ್ ಕೊಟ್ಟರೆ ಇಷ್ಟವಾಗುತ್ತೆ!
ಸದ್ಯ ಪ್ರೇಮಿಗಳ ವಾರದ್ದೇ ದರ್ಬಾರು. ತನ್ನ ಸಂಗಾತಿಗೆ ಯಾವ ಉಡುಗೊರೆ ನೀಡುವುದು, ಯಾವ ಗಿಫ್ಟ್ ನೀಡಿ, ತನ್ನ ಪ್ರೀತಿಯನ್ನು ವ್ಯಕ್ತಪಡಿಸುವುದು ಎಂದೆಲ್ಲಾ ಚಿಂತಿಸುತ್ತಿರುತ್ತಾರೆ. ಈ ಗೊಂದಲ ನಿವಾರಣೆಗ ನಾವಿಂದು, ಯಾವ ರಾಶಿಯವರಿಗೆ ಯಾವ ಗಿಫ್ಟ್ ಕೊಟ್ಟರೆ ಇಷ್ಟವಾಗುತ್ತದೆ ಎಂಬುದನ್ನು ತಿಳಿಸಲಿದ್ದೇವೆ. ಇದು ಪ್ರತಿಯೊಂದು ರಾಶಿಚಕ್ರದ ವ್ಯಕ್ತಿತ್ವವನ್ನು ಗಮನದಲ್ಲಿಟ್ಟುಕೊಂಡು, ಅಂದಾಜು ಮಾಡಿರುವ ಉಡುಗೊರೆಗಳ ಪಟ್ಟಿಯಾಗಿದೆ. ನಿಮ್ಮ ಪ್ರೇಮಿ ಯಾವ ರಾಶಿಗೆ ಸೇರಿದ್ದಾರೆಂದು ಅರಿತು, ಅದಕ್ಕುನುಗುಣವಾದ ಉಡುಗೊರೆ ನೀಡಿ, ಪ್ರೀತಿ ಹೇಳಿಕೊಳ್ಳಿ.
ರಾಶಿಚಕ್ರದ ಪ್ರಕಾರ, ಯಾವ ರಾಶಿಗೆ ಏನು ಉಡುಗೊರೆ ನೀಡಬೇಕು ಎಂಬುದನ್ನು ಈ ಕೆಳಗೆ ನೀಡಲಾಗಿದೆ:

ಮೇಷ:
ಮೇಷ ರಾಶಿಯು ಸಾಹಸಕ್ಕೆ ಹೆಸರುವಾಸಿಯಾಗಿದೆ, ಆದ್ದರಿಂದ ಅವರಿಗೆ ಥ್ರಿಲ್ ನೀಡುವಂತಹ ಉಡುಗೊರೆಯನ್ನು ನೀಡಬೇಕು. ಅದು ಉನ್ನತ-ಕಾರ್ಯಕ್ಷಮತೆಯ ಕಾರ್ ಡ್ರೈವಿಂಗ್ ಕೋರ್ಸ್ ಅಥವಾ ಅವರನ್ನು ಬೆರಗುಗೊಳಿಸುವಂತಹ ಜ್ಯುವೆಲ್ಲರಿಗೆ ಸೆಟ್‌ಗಳು ಆಗಬಹುದು. ನೀವು ಸಹ ಸಾಹಸಕ್ಕೆ ಸೇರಲು ಸಿದ್ಧರಿರುವಿರಿ ಎಂದು ತೋರಿಸಿದರೆ ಉತ್ತಮ.

ವೃಷಭ:
ವೃಷಭ ರಾಶಿಗೆ ಮನಸ್ಸು ಹಾಗೂ ಕಣ್ಣಿಗೆ ಖುಷಿ ನೀಡುವಂತಹ ಉಡುಗೊರೆ ಆಗಬೇಕು. ಏಕೆಂದರೆ ಅವರು ಅಸ್ತಿತ್ವದಲ್ಲಿರುವ ಭೌತಿಕತೆಯನ್ನು ಸವಿಯುವವರು. ಅದಕ್ಕಾಗಿ ಮೃದುವಾದ, ಐಷಾರಾಮಿ ನೈಸರ್ಗಿಕ ಬಟ್ಟೆಗಳಾದ ಕ್ಯಾಶ್ಮೀರ್ ಅಥವಾ ರೇಷ್ಮೆ ಸ್ವೆಟರ್, ಹಿತವಾದ ಸಂಗೀತ ಜೊತೆಗೆ ಸುವಾಸನೆಯ ಸ್ವೀಟ್ಸ್ ಮೂಲಕ ಅವರ ಇಂದ್ರಿಯಗಳನ್ನು ಆಕರ್ಷಿಸಿ. ನಿಮ್ಮ ಉಡುಗೊರೆ ಅವರು ಖರೀದಿಸಲು ಬಯಸುವದಕ್ಕಿಂತ ಹೆಚ್ಚು ಅತಿರಂಜಿತವಾಗಿದ್ದರೆ ಬೋನಸ್ ಅಂಕಗಳು. ಆದ್ದರಿಂದ ನಮ್ಮ ಸಲಹೆ ಚೆನ್ನಾಗಿರುವ, ವರ್ಣರಂಜಿತವಾಗಿರುವ ಸ್ಕಾರ್ಫ್‌ಗಳನ್ನು ನೀಡಿ.

ಮಿಥುನ:
ಇವರ ತ್ವರಿತ ಮನಸ್ಸಿಗೆ ವೈವಿಧ್ಯತೆ ಮತ್ತು ಪ್ರಚೋದನೆಯ ಅಗತ್ಯವಿರುತ್ತದೆ. ಏಕೆಂದರೆ, ಇವರಿಗೆ ಯಾವುದೇ ವಿಷಯ ಬೇಗನೇ ಹಳೆಯದಾಗುತ್ತದೆ. ಆದ್ದರಿಂದ ಯಾವುದಾದರೂ ಹೊಸ ಗ್ಯಾಜೆಟ್‌ಗಳು, ಆಟಿಕೆಗಳು ಮತ್ತು ಇತರ ಸಣ್ಣ ವಸ್ತುಗಳನ್ನು ನೀಡಬಹುದು. ಅಷ್ಟೇ ಅಲ್ಲ, ಸ್ಮಾರ್ಟ್ ವಾಚ್ ಸಹ ಉತ್ತಮವಾಗಿ ಕೆಲಸ ಮಾಡುವುದು.

ಕರ್ಕ:
ಈ ರಾಶಿಯವರು ಮನೆಯ ಸೌಕರ್ಯ ಹಾಗೂ ಸುರಕ್ಷಿತ ಭಾವನೆಗೆ ಹೆಚ್ಚು ಒತ್ತು ನೀಡುತ್ತಾರೆ. ಅದಕ್ಕಾಗಿ ಅವರ ಮನೆಯ ಅಲಂಕಾರ-ಸಂಬಂಧಿತ ಉಡುಗೊರೆಗಳನ್ನು ನೀಡಿ. ಅಥವಾ, ನಿಮ್ಮಿಂದ ಸಾಧ್ಯವಿದ್ದರೆ ವಜ್ರಗಳು ಅಥವಾ ಮುತ್ತುಗಳು ಅಥವಾ ಉನ್ನತ-ಮಟ್ಟದ ಉಡುಗೊರೆ ನೀಡಿ, ಪ್ರೀತಿ ಮನವಿ ಮಾಡಿ. ಉತ್ತಮ ಪರಿಣಾಮಕ್ಕಾಗಿ ಗುಲಾಬಿಗಳು ಮತ್ತು ಚಾಕೊಲೇಟ್‌ಗಳನ್ನು ಸೇರಿಸಿ.

ಸಿಂಹ:
ಪ್ರತಿಯೊಂದು ರಾಶಿಗೂ ವಿಶೇಷವಾಗಿ ಕಾಣಬೇಕು ಎಂಬ ಆಸೆಯಿರುತ್ತದೆ, ಆದರೆ ಸಿಂಹ ರಾಶಿಯವರಷ್ಟು ಯಾರೂ ಅದನ್ನು ಪಾಲಿಸುವುದಿಲ್ಲ. ಅವರನ್ನು ಒಂದು ಸ್ಟಾರ್ ನಂತೆ ಬಿಂಬಿಸಲು, ಅವರಿಗೆ, ಚಲನಚಿತ್ರ ತಾರೆಯರ ಸನ್‌ಗ್ಲಾಸ್‌ಗಳು ಅಥವಾ ಸ್ಟೇಟ್‌ಮೆಂಟ್ ಆಭರಣಗಳನ್ನು ನೀಡಿ. ಇವುಗಳು ಅವರನ್ನು ಬೆರಗುಗೊಳಿಸುವುದರಲ್ಲಿ ಯಾವುದೇ ಸಂದೇಹವಿಲ್ಲ.

ಕನ್ಯಾ:
ಕನ್ಯಾರಾಶಿ ಆರೋಗ್ಯ ಮತ್ತು ಸ್ವ-ಸುಧಾರಣೆಯ ಕಡೆಗೆ ಹೆಚ್ಚು ಒಲವು ಹೊಂದಿದೆ. ಆದ್ದರಿಂದ ಅವರ ಸ್ವ ಆರೈಕೆಗೆ ಸಂಬಂಧಿಸಿದಂತಹ ಉಡುಗೊರೆ ಕೊಟ್ಟರೆ ಅವರೆಂದಿಗೂ ಬೇಡ ಎನ್ನುವುದಿಲ್ಲ. ಅದಕ್ಕಾಗಿ ಆರ್ಗ್ಯಾನಿಕ್ ಸೋಪ್ ಅಥವಾ ಇತರ ವಸ್ತುಗಳನ್ನು ನೀಡಿ.

ತುಲಾ:
ಇವರು ಹಿಂದಿನಕಾಲದ ಪ್ರಣಯಕ್ಕೆ ಹೆಸರುವಾಸಿ. ಆದ್ದರಿಂದ ಇವರಿಗೆ ಹಳೆಯ ಕಾಲದ ಉಡುಗೊರೆ ಐಡಿಯಾಗಳೇ ಹೆಚ್ಚು ಸೂಕ್ತವಾಗುತ್ತದೆ. ಅದಕ್ಕಾಗಿ ಶುಭಾಶಯ ಪತ್ರ, ಹೂವಿನ ಪುಷ್ಪಗುಚ್ಛ, ವಿಶೇಷ ಹಾಡುಗಳ ಪ್ಲೇಪಟ್ಟಿ, ಸೊಗಸಾದ ರೆಸ್ಟೋರೆಂಟ್‌ನಲ್ಲಿ ಆತ್ಮೀಯ ಊಟ ಕೊಟ್ಟರೆ ಸಾಕು, ಫುಲ್ ಖುಷ್.

ವೃಶ್ಚಿಕ:
ಇವರಿಗೆ ತಮ್ಮ ಸಂಬಂಧಗಳನ್ನು ಖಾಸಗಿಯಾಗಿ ಇಡುವುದೇ ಇಷ್ಟ. ಆದ್ದರಿಂದ ಅವರಿಗೆ ಇತರ ಉಡುಗೊರೆಗಿಂತ ನಿಮ್ಮಿಬ್ಬರ ಫೋಟೋಗೆ ಫ್ರೇಂ ಹಾಕಿ ನೀಡಿದರೆ, ಸಾಕಷ್ಟು ಖುಷಿ ಪಡಬಹುದು, ಅಥವಾ ಅವರ ನೆಚ್ಚಿನ ವ್ಯಕ್ತಿಯ ಫೋಟೋ ಕೂಡ ನೀಡಬಹುದು.

ಧನು:
ಧನು ರಾಶಿಯವರಿಗೆ ಜೀವನವು ಒಂದು ಸಾಹಸವಾಗಿದೆ, ಆದ್ದರಿಂದ ಬಿಲ್ಲುಗಾರಿಕೆ, ಟ್ರೆಪೆಜ್ ಅಥವಾ ಕುದುರೆ ಸವಾರಿ ತರಗತಿ ಅಥವಾ ಪ್ರಕೃತಿಯಲ್ಲಿ ವಾರಾಂತ್ಯದ ವಿಹಾರದಂತಹ ವಿನೋದಮಯ ಉಡುಗೊರೆಯನ್ನು ಆರಿಸಿ.

ಮಕರ:
ಇವರಿಗೆ ಫ್ರೀತಿ ದೀರ್ಘಕಾಲ ಇರಬೇಕೆಂಬ ಆಸೆ. ಅದಕ್ಕೆ ತಕ್ಕಂತಹ ಉಡುಗೊರೆ ನೀಡಬೇಕು. ಅದಕ್ಕಾಗಿ ಪ್ರಸಿದ್ಧ ವಿನ್ಯಾಸಕಾರರಿಂದ ತಯಾರಿಸಿದ, ಲೆದರ್ ಬ್ಯಾಗ್ ನೀಡಬಹುದು. ಜೊತೆಗೆ ಒಂದೊಳ್ಳೆಯ ರೆಸ್ಟೋರೆಂಟ್ ನಲ್ಲಿ ಡಿನ್ನರ್ ಪ್ಲಾನ್ ಮಾಡಿದರೆ, ಈ ರಾಶಿಯವರು ಖುಷಿಯಾಗಬಹುದು.

ಕುಂಭ:
ಇವರ ಹೃದಯಕ್ಕೆ ಎರಡು ಖಚಿತವಾದ ಮಾರ್ಗಗಳಿವೆ. ಅದರಲ್ಲಿ ಒಂದು, ಅವರ ನೆಚ್ಚಿನ ಇತ್ತೀಚಿನ ಪುಸ್ತಕ, ಇನ್ನೊಂದು ಅವರ ಚಮತ್ಕಾರಿ ಆಸಕ್ತಿಗಳು ನಿಮಗೂ ಇದೆ ಎಂಬುದನ್ನು ಮನವರಿಕೆ ಮಾಡಿಸಿ. ಇವು ವಿಫಲವಾದರೆ, ತಾರಾಲಯಕ್ಕೆ ಭೇಟಿ ನೀಡಿ ಅಥವಾ ಅವರ ಹೆಸರಿನಲ್ಲಿ ನಕ್ಷತ್ರವನ್ನು ನೋಂದಾಯಿಸಿ ಬಾಹ್ಯಾಕಾಶಕ್ಕೆ ಹೋಗಿ.

ಮೀನ:
ಇವರು ಕವಿಯ ಆತ್ಮವನ್ನು ಹೊಂದಿದ್ದು, ಸಂಗೀತ ಅಥವಾ ಅಚ್ಚುಮೆಚ್ಚಿನ ಪ್ರದರ್ಶಕರ ಸಂಗೀತ ಕಚೇರಿಗೆ ಟಿಕೆಟ್‌ಗಳನ್ನು ಖರೀದಿಸಿ, ಕರೆದುಕೊಂಡು ಹೋಗಿ.



Click it and Unblock the Notifications











