For Quick Alerts
ALLOW NOTIFICATIONS  
For Daily Alerts

ನಲವತ್ತರ ಹರೆಯದಲ್ಲಿ ಮಹಿಳೆ ಪುರುಷನಿಂದ ನಿಜವಾಗಿಯೂ ಬಯಸುವುದು ಇವುಗಳನ್ನಷ್ಟೇ..

|

ಪ್ರೀತಿ ಮಾಡಲು ಅಥವಾ ತನ್ನ ಪ್ರೀತಿಯ ವ್ಯಕ್ತಿಯನ್ನ ಹುಡುಕಲು ನಿರ್ದಿಷ್ಟವಾದ ವಯಸ್ಸೆಂಬುದೇನಿಲ್ಲ, ಯಾವ ಪ್ರಾಯದಲ್ಲಾದರೂ ತಮ್ಮ ಸಂಗಾತಿಯನ್ನು ಆಯ್ಕೆ ಮಾಡುವ ಸ್ವಾತಂತ್ರ್ಯ ಎಲ್ಲರಿಗಿದೆ. ಸಮಯ ಕಳೆದಂತೆ ತಾವು ಪ್ರೀತಿಯಿಂದ ಬಯಸುವ ವಿಚಾರಗಳು ಬದಲಾಗಬಹುದು ಆದರೆ ಅಂತಿಮ ಗುರಿ ಪ್ರೀತಿಯೊಂದೇ.
ಸೋ ನಾವಿಲ್ಲಿ ನಾನಾ ಕಾರಣಗಳಿಂದ ತಮ್ಮ ಸಂಗಾತಿಯನ್ನು ಹುಡುಕಲಾಗದೇ, ಸದ್ಯ ನಲವತ್ತರ ಹರೆಯದಲ್ಲಿ ಹುಡುಕಲಾರಂಭಿಸುವ ವ್ಯಕ್ತಿಗಳಿಗೆ ಅದೇ ವಯಸ್ಸಿನ ಮಹಿಳೆಯರು ತಮ್ಮ ಪಾಟ್ನರ್ ನಲ್ಲಿ ನಿಜವಾಗಿಯೂ ಬಯಸುವ ಕೆಲವು ವಿಷಯಗಳನ್ನು ತಿಳಿಸಿದ್ದೇವೆ.

ನಲವತ್ತರ ಹರೆಯದಲ್ಲಿ ಮಹಿಳೆ ಪ್ರೀತಿಯಲ್ಲಿ ನಿಜವಾಗಿಯೂ ಬಯಸುವ ವಿಷಯಗಳನ್ನು ಈ ಕೆಳಗೆ ನೀಡಲಾಗಿದೆ:

ಪ್ರಾಮಾಣಿಕತೆ:

ಪ್ರಾಮಾಣಿಕತೆ:

ಇದು ಸಾಮಾನ್ಯವಾಗಿ ಎಲ್ಲಾ ವಯಸ್ಸಿನ ಮಹಿಳೆಯರು ಇಷ್ಟಪಡುವ ಸಂಗತಿಯಾಗಿದೆ. ಪ್ರಾಮಾಣಿಕವಾಗಿ ಇರುವ ಮನುಷ್ಯ ಎಲ್ಲರಿಗೂ ಹತ್ತಿರವಾಗುತ್ತಾನೆ, ಅದರಲ್ಲೂ ಪ್ರಬುದ್ಧ ಮಹಿಳೆ ಆತನ ಪ್ರಾಮಾಣಿಕತೆಗೆ ಗೌರವ ತೋರುತ್ತಾಳೆ. ಪುರುಷ ಭಾವನಾತ್ಮಕವಾಗಿ ಪ್ರಾಮಾಣಿಕವಾಗಿರಬೇಕು. ತನ್ನ ಮನದಲ್ಲಿ ಯಾವ ಭಾವನೆಗಳಿವೆ ಎಂಬುದನ್ನು ಚಾಚು ತಪ್ಪದೇ, ಸುಳ್ಳಿನ ಪರದೇ ಕಟ್ಟದೇ ಹೇಳಬೇಕು ಎಂದು ಬಯಸುತ್ತಾಳೆ.

ಕಿರಿ ವಯಸ್ಸಿನ ಮಹಿಳೆಯೊಂದಿಗೆ ಹೋಲಿಕೆ ಮಾಡದಿರುವುದು:

ಕಿರಿ ವಯಸ್ಸಿನ ಮಹಿಳೆಯೊಂದಿಗೆ ಹೋಲಿಕೆ ಮಾಡದಿರುವುದು:

ಹೌದು, ಇದು ನಲವತ್ತು ಆದ್ಮೇಲೆ ಮಹಿಳೆ ಬಯಸುವ ವಿಚಾರವಾಗಿದೆ. ಇಬ್ಬರಿಗೂ ವಯಸ್ಸಾಗಿರುವ ವಿಚಾರವನ್ನು ಇಬ್ಬರೂ ಒಪ್ಪಿಕೊಳ್ಳಬೇಕು. ಅದಕ್ಕೆ ತಕ್ಕಂತೆ ಬದುಕಬೇಕು. ಅದು ಬಿಟ್ಟು ತನಗಿಂತ ಚಿಕ್ಕ ವಯಸ್ಸಿನ ಹುಡುಗಿಯನ್ನು ತನ್ನೊಂದಿಗೆ ಹೋಲಿಕೆ ಮಾಡಿ ಮಾತನಾಡುವುದು ಆಕೆಗೆ ಇಷ್ಟವಾಗುವುದಿಲ್ಲ. ಆಕೆ ಇರುವ ರೀತಿಯನ್ನು ಒಪ್ಪಿಕೊಂಡು ಆಕೆಯ ಸ್ನೇಹ ಸಂಬಂಧವನ್ನು ಬಯಸುವಂತನಾಗಬೇಕು.

ʼಐ ಲವ್ ಯೂʼದ ಮೌಲ್ಯ ತಿಳಿದಿರಬೇಕು:

ʼಐ ಲವ್ ಯೂʼದ ಮೌಲ್ಯ ತಿಳಿದಿರಬೇಕು:

ಒಬ್ಬ ಪ್ರಬುದ್ಧ ಮಹಿಳೆಗೆ "ಐ ಲವ್ ಯೂ" ದ ಮೌಲ್ಯ ಚೆನ್ನಾಗಿ ತಿಳಿದಿರುತ್ತದೆ. ಅವಳೇನಾದರೂ ಐ ಲವ್ ಯೂ ಅಂದರೆ ಅದನ್ನು ಅಪಹಾಸ್ಯ ಮಾಡದಿರುವ ವ್ಯಕ್ತಿ ಆಕೆಗೆ ಬೇಕು ಎಂದು ಬಯಸುತ್ತಾಳೆ. ಅವಳ ಆ ಮೂರು ಪದ ತುಂಬಾ ವಿಶೇಷವಾಗಿದ್ದು, ಪರಿಶುದ್ಧ ಮನಸ್ಸಿನಿಂದ ಹೇಳುತ್ತಾಳೆ. ಅದನ್ನು ಅನುಮಾನಿಸದೇ ಇರುವ ವ್ಯಕ್ತಿಯನ್ನು ಆಕೆ ಹುಡುಕುತ್ತಾಳೆ.

ಅವರಿಗೆ 24/7 ರೊಮ್ಯಾನ್ಸ್ ಬೇಡ:

ಅವರಿಗೆ 24/7 ರೊಮ್ಯಾನ್ಸ್ ಬೇಡ:

40 ರ ಹರೆಯದ ಮಹಿಳೆಗೆ ಗುಣಮಟ್ಟದ ಪ್ರಣಯ ಅಂದರೆ ಗಮನ ಮತ್ತು ಸಮಯ ನೀಡುವುದು. ಸದಾ ಆಕೆಯ ಜೊತೆಗೆ ಆಕೆಯ ಬೆಂಬಲವಾಗಿರುವದನ್ನು ಆಕೆ ಬಯಸುತ್ತಾಳೆ ವಿನಃ ರೊಮ್ಯಾನ್ಸ್ ಅಲ್ಲ. ಅವರಿಗೆ, ಹೂವುಗಳನ್ನು ನೀಡುವ ಬದಲು ಒಂದು ಕಪ್ ಕಾಫಿ ಮಾಡಿಕೊಂಡು ಹೋಗಿ ಅವಳ ಜೊತೆ ಸಮಯ ಕಳೆಯುದನ್ನು ಆಕೆ ಹೆಚ್ಚು ಇಷ್ಟಪಡುತ್ತಾಳೆ. ಅದೇ ಅವಳಿಗೆ ರೊಮ್ಯಾಂಟಿಕ್ ಅನುಭವ ನೀಡುವುದು.

ಭಾವನೆಗಳೊಂದಿಗೆ ಆಡುವವರು ಬೇಕಿಲ್ಲ:

ಭಾವನೆಗಳೊಂದಿಗೆ ಆಡುವವರು ಬೇಕಿಲ್ಲ:

ಯುವಕರಿದ್ದಾ ಮನಸ್ಸಿನ ಭಾವನೆಗಳೊಂದಿಗೆ ಆಡೋದನ್ನು ಕೇಳಿರ್ತೀವಿ. ಆದರೆ ಅದನ್ನು ಈ ವಯಸ್ಸಿನ ಮಹಿಳೆ ಇಷ್ಟ ಪಡುವುದಿಲ್ಲ. ಆಕೆಗೆ ಸಮಯದ ಮಹತ್ವ ಗೊತ್ತು. ಆದ್ದರಿಂದ ಆ ಸಮಯಕ್ಕೆ ಬೆಲೆ ಕೊಟ್ಟು ಇರುವ ವ್ಯಕ್ತಿಯನ್ನು ಬಯಸುವವಳು ಹೊರತು ತನ್ನ ಭಾವನೆಗಳೊಂದಿಗೆ ಆಡುವ ವ್ಯಕ್ತಿಯನ್ನು ಆಕೆ ಎಂದಿಗೂ ಮೆಚ್ಚುವುದಿಲ್ಲ. ಅವರೊಂದಿಗೆ ಇರಲು ಸಹಿತ ಇಷ್ಟಪಡುವುದಿಲ್ಲ. ಇದನ್ನೇಲ್ಲಾ ದಾಟಿ ಬಂದಿರುವಂತಹ ವಯಸ್ಸು ಅವಳದಾಗಿರುತ್ತದೆ.

ಸೆಲ್ಫ್ ಅವೇರ್ ನೆಸ್ ಇರಬೇಕು:

ಸೆಲ್ಫ್ ಅವೇರ್ ನೆಸ್ ಇರಬೇಕು:

ಒಬ್ಬ ವ್ಯಕ್ತಿ ತನ್ನನ್ನು ತಾನು ಅರಿತಿದ್ದರೆ ಮಾತ್ರ ಇನ್ನೊಬ್ಬರ ನೋವು ಕಷ್ಟಗಳನ್ನು ಅರಿತುಕೊಳ್ಳಲು ಸಾಧ್ಯ. ಆದ್ದರಿಂದ ಸೆಲ್ಪ್ ಅಂಡರ್ ಸ್ಟಾಂಡಿಂಗ್ ಇರುವ ವ್ಯಕ್ತಿಯನ್ನು ಮಹಿಳೆ ಬಯಸುತ್ತಾಳೆ. ಹೀಗಿದ್ದ ವ್ಯಕ್ತಿ ಆಕೆಯ ಮನಸ್ಸನ್ನು ಚೆನ್ನಾಗಿ ಅರ್ಥ ಮಾಡಿಕೊಂಡು ಅದಕ್ಕೆ ಸ್ಪಂದಿಸುತ್ತಾನೆ ಎಂಬ ನಂಬಿಕೆ ಅವಳದ್ದು, ಇಂತಹ ವ್ಯಕ್ತಿ ತನ್ನೊಂದಿಗೆ ಹೆಜ್ಜೆ ಹಾಕಬೇಕು ಎಂಬ ಆಸೆ ಈಕೆಯದ್ದಾಗಿರುತ್ತದೆ. ಆದ್ದರಿಂದ ಮೊದಲು ನಿಮ್ಮನ್ನು ನೀವು ಅರ್ಥ ಮಾಡಿಕೊಳ್ಳಿ.

English summary

Things Women in Their 40s Really Want in a Man in Kannada

Here we talking about things women in their 40s really want in a man in kannada, read on
Story first published: Monday, May 24, 2021, 21:00 [IST]
X