Latest Updates
-
2026ರ ಸೂರ್ಯ ಗೋಚಾರ: ಇವರಿಗೆ ಸಿಗಲಿದೆ ಸರ್ಕಾರಿ ಉದ್ಯೋಗ! ಯಾರಿಗೆ ಮಾನಸಿಕ ಒತ್ತಡ? 12 ರಾಶಿಯವರಿಗೆ ರಾಶಿಫಲ ಇಲ್ಲಿದೆ -
ಹೋಟೆಲ್ ಶೈಲಿಯ ಆಲೂ ಮಸಾಲಾ ಪೂರಿ! ಈ ರೀತಿ ಮನೆಯಲ್ಲೇ ಮಾಡಿ, ಪರ್ಫೆಕ್ಟ್ ಆಗಿ ಉಬ್ಬಿ ಬರುತ್ತೆ -
ಇವರ ಜೀವನದಲ್ಲಿ ಹೊಸ ಕಿಡಿ ಹೊತ್ತಿಕೊಳ್ಳಲಿದೆ! ಹಠಮಾರಿ ಸ್ವಭಾವವನ್ನು ಬಿಡಿ -
March 12 Horoscope: ಹಣಕಾಸಿನ ಸವಾಲುಗಳು ದೊಡ್ಡದಾಗುವ ಸಂಭವ -
ಕೋಮಾದಲ್ಲಿದ್ದ ಹರೀಶ್ ರಾಣಾ ದಯಾಮರಣಕ್ಕೆ ಸುಪ್ರೀಂ ಒಪ್ಪಿಗೆ: ಈ ಕೇಸ್ ಬಗ್ಗೆ ನಿಮಗೆ ಗೊತ್ತಾ? -
ಪಂಜಾಬಿ ಸ್ಟೈಲ್ ಮಲೈ ಲಸ್ಸಿ! ಈ ರೀತಿ ಮಾಡಿ ಗಟ್ಟಿ ಕೆನೆಯ ಢಾಬಾ ಸ್ಟೈಲ್ ಲಸ್ಸಿ.. ಬಿಸಿಲ ತಾಪಕ್ಕೆ ಬೆಸ್ಟ್ ಕೂಲ್ ಡ್ರಿಂಕ್ -
ಮಾರ್ಚ್ ಅಂತ್ಯದಲ್ಲಿ ಗಜಕೇಸರಿ ಯೋಗ: ಈ ಮೂರು ರಾಶಿಯ ಜನರಿಗೆ ಒಲಿಯಲಿದೆ ಅದೃಷ್ಟ! -
ನಾಟಿ ಸ್ಟೈಲ್ನಲ್ಲಿ ಸೋಯಾ ಚಾಪ್ಸ್ ಮಾಡಿ: ಚಪಾತಿ, ಅನ್ನ, ಮುದ್ದೆ ಎಲ್ಲದ್ದಕ್ಕೂ ಬೆಸ್ಟ್! -
ತಣ್ಣೀರು ಬೇಕಾ? ಮಡಕೆ ಕೊಳ್ಳುವಾಗ ಈ ತಪ್ಪು ಮಾಡಬೇಡಿ.. ಸಮಸ್ಯೆ ಗ್ಯಾರಂಟಿ!! ಹೇಗೆ ಆಯ್ಕೆ ಮಾಡಬೇಕು? -
ನಿಮ್ಮ ಮನೆಯ ಗಡಿಯಾರ ತಪ್ಪಾದ ದಿಕ್ಕಿನಲ್ಲಿ ಇಡಲಾಗಿದ್ಯಾ? ಈ ಸಣ್ಣ ತಪ್ಪು ದೊಡ್ಡ ಸಮಸ್ಯೆ ತರಬಹುದು!
ಡಿಯರ್ ಲೇಡೀಸ್, ಪ್ರೀತಿಯಲ್ಲಿ ಬಿದ್ದಿದ್ರೆ ಈ ವಿಚಾರಗಳಲ್ಲಿ ನಿಮ್ಮತನ ಕಳೆದುಕೊಳ್ಳಬೇಡಿ
ಡಿಯರ್ ಲೇಡೀಸ್.. ಒಬ್ಬ ಹುಡುಗನನ್ನ ಪ್ರೀತಿಸೋದು, ಸಂಬಂಧದಲ್ಲಿದ್ದಾಗ ಆತನಿಗೆ ಎಲ್ಲವನ್ನೂ ಧಾರೆ ಎರೆಯುವುದು ನಿಜವಾದ ಪ್ರೀತಿಯ ಸಂಕೇತವೇ, ಆದರೆ ನಿಮ್ಮತನವನ್ನು, ನಿಮ್ಮನ್ನ ನೀವು ಕಳೆದುಕೊಳ್ಳುವುದು ಸರಿಯಲ್ಲ. ನಿಮ್ಮ ನಿಜವಾದ ಸಾಮರ್ಥ್ಯವನ್ನು ಅರಿತುಕೊಳ್ಳದೇ, ಆತನ ಹಿಂದೆ ಎಲ್ಲದಕ್ಕೂ ಓಡುವುದು ನಿಮ್ಮನ್ನು ದುರ್ಬಲ ಎಂದು ಬಿಂಬಿಸುತ್ತದೆ. ಪ್ರೀತಿಯಲ್ಲಿ ಬಿದ್ದ ತಕ್ಷಣ ಅವರನ್ನೇ ಸುತ್ತುವುದನ್ನು ಬಿಟ್ಟು, ಪರಸ್ಪರರ ಪ್ರತ್ಯೇಕತೆಯನ್ನು ಗೌರವಿಸಬೇಕು. ಆದ್ದರಿಂದ, ಪ್ರಬಲ ಮಹಿಳೆ ಒಬ್ಬ ಪುರುಷನಿಗೋಸ್ಕರ ಎಂದಿಗೂ ಮಾಡಬಾರದು ಎಂಬ ಪ್ರಮುಖ 5 ವಿಷಯಗಳನ್ನು ಇಲ್ಲಿ ನೀಡಲಾಗಿದೆ:
ಸ್ಟ್ರಾಂಗ್ ಮಹಿಳೆಯಾದವಳು ಒಬ್ಬ ಪುರುಷನಿಗಾಗಿ ಈ ವಿಚಾರಗಳಲ್ಲಿ ರಾಜಿಯಾಗುವುದಿಲ್ಲ, ಅವುಗಳಾವುದೆಂದರೆ:

ನಿಮ್ಮನ್ನು ಬದಲಾಯಿಸಿಕೊಳ್ಳುವುದು:
ನಿಮ್ಮ ಹುಡುಗನಿಗಾಗಿ ನಿಮ್ಮನ್ನು ಬದಲಾಯಿಸಿಕೊಳ್ಳಬಾರದು. ನಿಜವಾಗಿ ಆತ ನಿಮ್ಮನ್ನು ಪ್ರೀತಿಸುವವನಾದರೆ ನೀವು ಹೇಗಿದ್ದರೂ ಒಪ್ಪಿಕೊಳ್ಳುತ್ತಾನೆ. ಅದೇ ಗುಣಗಳನ್ನು ನೋಡಿ ತಾನೇ ಮೊದಲು ಪ್ರೀತಿ ಒಪ್ಪಿಕೊಂಡಿದ್ದು. ಹಾಗಾಗಿ ನಿಮ್ಮ ನಡವಳಿಕೆ ಮತ್ತು ವ್ಯಕ್ತಿತ್ವದಲ್ಲಿ ಕೆಲವು ಬದಲಾವಣೆಗಳನ್ನು ಮಾಡಿಕೊಳ್ಳಲು ಅವರು ಒತ್ತಾಯಿಸಿದರೆ, ಅದನ್ನು ಮಾಡಬೇಡಿ. ಆದರೆ ನಿಮ್ಮಲ್ಲಿರುವ ಕೆಲಕೆಟ್ಟ ಗುಣಗಳನ್ನು ಬದಲಾಯಿಸಿಕೊಳ್ಳಲು ನೀವು ಬಯಸಿದರೆ, ನಿಮ್ಮ ಬಗ್ಗೆ ಉತ್ತಮ ಭಾವನೆ ಮೂಡಿಸಲು ಪ್ರಯತ್ಸಿಸುತ್ತಿದ್ದರೆ ಆಗ ಬದಲಾಯಿಸಿಕೊಳ್ಳಿ. ಆದರೆ ಬದಲಾವಣೆಗೆ ಆತ ಕಾರಣವಾಗಿರಬಾರದಷ್ಟೇ.

ನಿಮ್ಮ ನೋಟವನ್ನು ಬದಲಾಯಿಸುವುದು:
ನಿಮಗೆ ನೀವು ದೇವತೆ ಮತ್ತು ನಿಮ್ಮ ದೇಹವು ದೇವಾಲಯವಾಗಿರಬೇಕು. ದೇಹದ ಆಕಾರ ಏನೇ ಇರಲಿ, ಅದು ನಿಮ್ಮದು ಮತ್ತು ಅದನ್ನು ಪ್ರೀತಿಸುವುದು ಮತ್ತು ಕಾಳಜಿ ವಹಿಸುವುದು ನಿಮ್ಮ ಜವಾಬ್ದಾರಿ. ನಿಮ್ಮ ದೇಹದ ಬಗ್ಗೆ ಇತರರ ಅಭಿಪ್ರಾಯಕ್ಕೆ ನೀವು ಸೊಪ್ಪು ಹಾಕಬಾರದು, ಅದಕ್ಕೆ ಚಿಂತಿಸಲೂ ಬಾರದು. ಒಂದು ವೇಳೆ ನಿಮ್ಮ ನೋಟವನ್ನು ಬದಲಾಯಿಸಲು ನಿಮ್ಮ ಹುಡುಗ ನಿಮ್ಮನ್ನು ಕೇಳಿದರೆ, ಒಂದು ಅರ್ಥ ಮಾಡಿಕೊಳ್ಳಿ, ಆತ ನಿಮ್ಮೊಂದಿಗಿರುವುದು ಪ್ರೀತಿಗಾಗಿ ಅಲ್ಲ, ಬೇರಾವುದೋ ತಪ್ಪು ಉದ್ದೇಶಗಳಿಗಾಗಿ ಎಂದು.

ಒಪ್ಪಿಗಾಗಿ ಕಾಯಬೇಡಿ:
ನಿಮಗೆ ಯಾರ ಅನುಮೋದನೆ ಅಥವಾ ಒಪ್ಪಿಗೆಯ ಅಗತ್ಯವಿಲ್ಲ. ನೀವು ಪ್ರಬುದ್ಧರಾಗಿರುವುದರಿಂದ ಯಾವ ಸಮಯಕ್ಕೆ ಯಾವ ನಿರ್ಧಾರಗಳನ್ನು ತಗೆದುಕೊಳ್ಳಬೇಕು ಎಂಬುದು ನಿಮಗೆ ಚೆನ್ನಾಗಿ ತಿಳಿದಿರುತ್ತದೆ. ಆದ್ದರಿಂದ ಯಾವುದಾದರೂ ಒಂದು ಸಣ್ಣಪುಟ್ಟ ನಿರ್ಧಾರಗಳನ್ನು ತೆಗೆದುಕೊಳ್ಳುವಾಗ ಯಾರದೋ ಒಪ್ಪಿಗೆ ಕೇಳುವ ಅಗತ್ಯವಿಲ್ಲ. ನಿಮಗೆ ಸಂಬಂಧಿಸಿದ ಸಣ್ಣಸಣ್ಣ ವಿಚಾರಗಳಿಗೂ ನಿಮ್ಮ ಹುಡುಗನ ಬಳಿ ಹೋಗಬೇಡಿ. ಈ ಅಭ್ಯಾಸವವನ್ನು ಎಂದಿಗೂ ಬೆಳೆಸಿಕೊಳ್ಳಬೇಡಿ. ನೀವು ಪ್ರೀತಿಸುವ ಮತ್ತು ಮಾಡಲು ಬಯಸುವ ಯಾವುದೇ ಕೆಲಸಕ್ಕೆ ನಿಮ್ಮ ಹುಡುಗನ ಅನುಮೋದನೆ ನೀಡುವವರೆಗೆ ನೀವು ಕಾಯಬಾರದು.

ಪ್ಲಾನ್ ಚೇಂಜ್ ಮಾಡಿಕೊಳ್ಳಬೇಡಿ:
ನಿಮ್ಮ ಹುಡುಗ ನಿಮ್ಮ ಸ್ನೇಹಿತರು ಹಾಗೂ ಕುಟುಂಬದೊಂದಿಗೆ ಸಮಯ ಕಳೆಯುವುದನ್ನು ನಿರಂತರವಾಗಿ ಮುಂದೆ ತಳ್ಳುತ್ತಿದ್ದಾನೆ ಎಂದರೆ ಆತ ನಿಮಗೆ ಯೋಗ್ಯನಲ್ಲ ಎಂದರ್ಥ. ಒಬ್ಬರಿಗೊಬ್ಬರು ಸಮಯ ಕಳೆಯುವುದು ಅಗತ್ಯವಿದ್ದರೂ, ನಿಮ್ಮ ಹತ್ತಿರದವರೊಂದಿಗೆ ಹೆಚ್ಚಿನ ಸಮಯವನ್ನು ಕಳೆಯುವುದು ಅವಶ್ಯಕವಾಗಿದೆ. ನಿಮ್ಮ ಹುಡುಗ ಇದನ್ನು ಮಾಡಲು ಹಿಂಜರಿಯುತ್ತಿದ್ದಾನೆ ಎಂದರೆ ನೀವು ಆ ಪ್ಲಾನ್ ಬದಲಾವಣೆ ಮಾಡಿಕೊಳ್ಳಬೇಡಿ.

ರಾಜಿ:
ನಿಮ್ಮ ಗುರಿ, ಮಹತ್ವಾಕಾಂಕ್ಷೆ, ಕನಸಿನ ಕೆಲಸವು ನಿಮ್ಮ ಕಠಿಣ ಪರಿಶ್ರಮ, ದೃಢ ನಿಶ್ಚಯ ಮತ್ತು ತಾಳ್ಮೆಯ ಫಲ. ಆತನಿಗಾಗಿ ಇವುಗಳ ಜೊತೆ ರಾಜಿ ಮಾಡಿಕೊಳ್ಳಬೇಡಿ. ಕೇವಲ ಆತನನ್ನು ಮೆಚ್ಚಿಸಲು ನಿಮ್ಮ ಕನಸುಗಳನ್ನು ಮರೆಯಬೇಡಿ. ಒಬ್ಬ ಸ್ಟ್ರಾಂಗ್ ಮಹಿಳೆ ತನ್ನ ಕನಸುಗಳಿಗೆ ಹಸ್ತಕ್ಷೇಪ ಮಾಡುವುದನ್ನು ಎಂದಿಗೂ ಒಪ್ಪಿಕೊಳ್ಳುವುದಿಲ್ಲ, ಅಂತಹರನ್ನು ತನ್ನ ಜೀವನದಲ್ಲಿ ಹತ್ತಿರವೂ ಸೇರಿಸುವುದಿಲ್ಲ. ನಿಮ್ಮ ಹುಡುಗ ನಿಮ್ಮ ಗುರಿಗಳಿಗೆ ಪ್ರೋತ್ಸಾಹ ನೀಡುವವನಾಗಿದ್ದರೆ, ಅದನ್ನ ಮುಟ್ಟಲು ಉತ್ತಮವಾಗಿ ಸಲಹೆ ನೀಡುತ್ತಾರೆ.



Click it and Unblock the Notifications











