Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಈ ರಾಶಿಯವರು ಪ್ರೀತಿ ವಿಚಾರದಲ್ಲಿ ಹೆಚ್ಚು ಜಾಗರೂಕರಾಗಿರುತ್ತಾರಂತೆ
ಬ್ರೇಕಪ್‌ಗಳು ಮತ್ತು ಪ್ಯಾಚಪ್‌ಗಳು ಪ್ರೀತಿಯಲ್ಲಿ ಸಹಜ. ಬಹುತೇಕ ಎಲ್ಲರೂ ಒಮ್ಮೆಯಾದರೂ, ಹಾರ್ಟ್ ಬ್ರೇಕ್ ಅನುಭವಿಸಿಯೇ ಇರುತ್ತಾರೆ. ಕೆಲವರು ಅದನ್ನೇ ಎಚ್ಚರಿಕೆಯಾಗಿ ತೆಗೆದುಕೊಂಡು ಮುಂದಿನ ಬಾರಿ ಬುದ್ಧಿವಂತಿಕೆಯಿಂದ ಯೋಚಿಸಿ, ಹೆಜ್ಜೆಯಿಟ್ಟರೆ, ಇನ್ನು ಕೆಲವರು ಅದೆಲ್ಲಾ ಸಹಜ ಎಂದುಕೊಂಡು, ಮುಂದೆ ಸಾಗುತ್ತಾರೆ.
ಆದರೆ ಕೆಲವರು ಬ್ರೇಕಪ್ ಅನ್ನು ಬಹಳ ಗಂಭೀರವಾಗಿ ಪರಿಗಣಿಸಿ, ಪ್ರೀತಿಯಲ್ಲಿ ಇನ್ನು ಹೆಚ್ಚು ಜಾಗರೂಕರಾಗುತ್ತಾರೆ. ಇವರು ತಮ್ಮ ಕ್ರಶ್‌ನೊಂದಿಗೆ ಮಾತನಾಡುವ ಮೊದಲು 10 ಬಾರಿ ಯೋಚಿಸುವುದು ಮಾತ್ರವಲ್ಲ, ಅವರೊಂದಿಗೆ ಬೆರೆಯುವ ಮೊದಲು ವ್ಯಕ್ತಿಯ ಹಿನ್ನೆಲೆ ಪರಿಶೀಲನೆಯನ್ನು ಮಾಡಲು ಬಯಸುತ್ತಾರೆ. ಇವರಿಗೆ ಪ್ರೀತಿಯ ಬಗ್ಗೆ ಭರವಸೆ ಬರುವವರೆಗೂ ಯಾರನ್ನೂ ಸುಲಭವಾಗಿ ನಂಬುವುದಿಲ್ಲ, ಏಕೆಂದರೆ, ಇವರಿಗೆ ಮತ್ತೆ ಹರದಯ ಚೂರಾಗುವ ಭಯ. ಹಾಗಾದರೆ, ರಾಶಿಚಕ್ರದ ಪ್ರಕಾರ, ಯಾವ ರಾಶಿಯವರು ಪ್ರೀತಿಯಲ್ಲಿ ಹೆಚ್ಚು ಜಾಗರೂಕರಾಗಿರುತ್ತಾರೆ ನೋಡೋಣ.
ಯಾವ ರಾಶಿಯವರು ಪ್ರೀತಿಯಲ್ಲಿ ಹೆಚ್ಚು ಜಾಗರೂಕರಾಗಿರುತ್ತಾರೆ ಎಂಬುದನ್ನು ಈ ಕೆಳಗೆ ನೀಡಲಾಗಿದೆ:

ವೃಷಭ ರಾಶಿ:
ಇವರು ತಮ್ಮ ಎಲ್ಲಾ ಕ್ರಷ್‌ಗಳ ಹಿನ್ನೆಲೆ ಪರಿಶೀಲನೆಯನ್ನು ಮಾಡುತ್ತಾರೆ. ಸಂಬಂಧದ ವಿಚಾರಕ್ಕೆ ಬಂದಾಗ ಇವರು ಯಾವಾಗಲೂ ಜಾಗರೂಕರಾಗಿರುತ್ತಾರೆ ಏಕೆಂದರೆ ಇವರು ಮುಂದೆ ಯಾವುದೇ ಕೆಟ್ಟ ಆಶ್ಚರ್ಯಗಳನ್ನು ಬಯಸುವುದಿಲ್ಲ. ಜನರು ನಿಜವಾಗಿಯೂ ಒಳ್ಳೆಯವರಾಗಿದ್ದರೂ ಸಹ, ವೃಷಭ ರಾಶಿಯವರು ಅವರನ್ನು ಇಷ್ಟಪಡುತ್ತಾರೆ ಎಂಬುದಕ್ಕೆ ಯಾವುದೇ ಗ್ಯಾರಂಟಿ ಇಲ್ಲ.

ಮೀನ ರಾಶಿ:
ಮೀನ ರಾಶಿಯವರು ನಿರಾಶಾವಾದಿಗಳಾಗಿರುತ್ತಾರೆ ಮತ್ತು ಯಾವಾಗಲೂ ವಸ್ತುಗಳ ಕರಾಳ ಭಾಗವನ್ನು ನೋಡುತ್ತಾರೆ. ಅವರು ಮೋಸಹೋಗುವುದಕ್ಕೆ ಹೆದರುತ್ತಾರೆ. ಇವರು ವ್ಯಕ್ತಿಯನ್ನು ಇಷ್ಟಪಟ್ಟರೂ ಸಹ, ಆ ವ್ಯಕ್ತಿಯ ಎಲ್ಲಾ ತಪ್ಪುಗಳನ್ನು ನೇರವಾಗಿ ಹೇಳುತ್ತಾರೆ.

ಮಕರ ರಾಶಿ:
ಈ ರಾಶಿಯವರು ಎಲ್ಲದರ ಬಗ್ಗೆ ಹೆಚ್ಚು ಜಾಗರೂಕರಾಗಿರುತ್ತಾರೆ. ಇವರು ಎಲ್ಲದಕ್ಕೂ ಸಿದ್ಧರಾಗಿದ್ದಾರೆ. ಯಾರೊಂದಿಗಾದರೂ ಸಂವಹನ ನಡೆಸುವ ಮೊದಲು ಅವರ ಬಗ್ಗೆ ಎಲ್ಲವನ್ನೂ ತಿಳಿದುಕೊಂಡಿರುತ್ತಾರೆ. ಇವರು ಸಾಕಷ್ಟು ತೃಪ್ತರಾಗಲು ಬಹಳ ಸಮಯ ತೆಗೆದುಕೊಳ್ಳಬಹುದು. ಏಕೆಂದರೆ ಇವರು ಎಚ್ಚರಿಕೆಯಿಂದ ನಿರ್ಧಾರ ತೆಗೆದುಕೊಳ್ಳುವವರು.

ಕನ್ಯಾರಾಶಿ:
ಕನ್ಯಾ ರಾಶಿಯವರು ಯಾವಾಗಲೂ ಜಾಗರೂಕರಾಗಿರುತ್ತಾರೆ. ಯಾವುದೇ ಹೆಜ್ಜೆ ಇಡುವ ಮೊದಲು ಎಚ್ಚರಿಕೆಯಿಂದ ಯೋಚಿಸುವುದು ಸೂಕ್ತವಾಗಿದೆ ಎಂದು ಅವರು ನಂಬುತ್ತಾರೆ. ಕನ್ಯಾ ರಾಶಿಯವರು ಸಂಪೂರ್ಣ ಪರಿಪೂರ್ಣತೆಯನ್ನು ನಿರೀಕ್ಷಿಸುವುದಿಲ್ಲ, ಆದರೆ ಸತ್ಯವು ಹೊರಬಂದಾಗ ಅದನ್ನು ಸಹಿಸಿಕೊಳ್ಳುವುದಿಲ್ಲ. ಇವರು ಸಂಬಂಧದ ಕಡೆಗೆ ಮೊದಲ ಹೆಜ್ಜೆ ಇಡುವವರಾಗಿದ್ದು, ತಮ್ಮ ಪಾಲುದಾರರ ದುಃಖದ ಇತಿಹಾಸವನ್ನು ತಿಳಿದುಕೊಳ್ಳಲು ಬಯಸುತ್ತಾರೆ.

ಕರ್ಕ ರಾಶಿ:
ಕರ್ಕಾಟಕ ರಾಶಿಯವರು ಎಲ್ಲವನ್ನೂ ಚೆನ್ನಾಗಿ ನೆನಪಿಟ್ಟುಕೊಂಡಿರುತ್ತಾರೆ. ಅದಕ್ಕಾಗಿ ಪದೇ ಪದೇ ನೋವಿನ ವಿಘಟನೆಗಳನ್ನು ಬಯಸುವುದಿಲ್ಲ. ಇವರು ಅತಿಯಾಗಿ ಜಾಗರೂಕರಾಗಿರುವಂತೆ ತೋರಬಹುದು, ಆದರೆ ಇವರು ಯಾವುದೇ ಅನಗತ್ಯ ಹಾರ್ಟ್ ಬ್ರೇಕ್ ಆಗುವುದನ್ನು ತಡೆಯುತ್ತಿರುತ್ತಾರೆ.



Click it and Unblock the Notifications